Evening Digest: ಸಿದ್ದರಾಮಯ್ಯ ಕಾಲೆಳೆದ ಕುಮಾರಸ್ವಾಮಿ: ಶ್ರೀಲಂಕಾ ಪ್ರಧಾನಿ ರಾಜಪಕ್ಸೆ ರಾಜೀನಾಮೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸಿದ್ದರಾಮಯ್ಯ ಕಾಲೆಳೆದ ಕುಮಾರಸ್ವಾಮಿ : ಮುಂದಿನ ಚುನಾವಣೆಯಲ್ಲಿ (Election) ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಬಾದಾಮಿಯಲ್ಲೇ ಸ್ಪರ್ಧೆ ಮಾಡೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ (H.D Kumaraswamy), ಅವರು ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಹಲವಾರು ಕ್ಷೇತ್ರಗಳಲ್ಲಿ ಉತ್ತಮವಾದ ಅಭಿವೃದ್ಧಿ   ಮಾಡಿದ್ದೀನಿ ಅಂತ ಭಾವನೆ ಇಟ್ಟುಕೊಂಡಿದ್ದಾರೆ. ಅವರ ಕಾರ್ಯಕರ್ತರು ಅವರನ್ನ ಕರೀತಾರೆ. 8 ರಿಂದ 10 ಕ್ಷೇತ್ರಗಳು ಅವರನ್ನ ಕರೀತಿರ್ತಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಇಷ್ಟು ವರ್ಷ ಸುದೀರ್ಘ ರಾಜಕೀಯ ಮಾಡಿದವರು. ಅವರು ನಿಲ್ಲಬಹುದು ಗೆಲ್ಲಬಹುದು ಇಲ್ಲ ಅಂತ ನಾನು ಹೇಳಲ್ಲ. ನಮ್ಮ ಅಭ್ಯರ್ಥಿಯನ್ನು ಘೋಷಣೆ ಮಾಡೋದಾಗಿ ಹೇಳಿದ್ರು. ಬಾದಾಮಿಯಲ್ಲಿ ಜೆಡಿಎಸ್​ ಅಭ್ಯರ್ಥಿಯಾಗಿ ಹನುಮಂತ ಮಾವಿನ ಮರದ್​ ಅವರ ಹೆಸರನ್ನು ಘೋಷಣೆ ಮಾಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: H.D Kumaraswamy: ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ; ಸಿದ್ದು ಕಾಲೆಳೆದ ಕುಮಾರಸ್ವಾಮಿ

ಜಿಲ್ಲಾ ಪಂಚಾಯತ್ CEOಗಳಿಗೆ CM Bommai ಎಚ್ಚರಿಕೆ

ಇಂದು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಅವರು ಜಿಲ್ಲಾ ಪಂಚಾಯತ್ ಸಿಇಓಗಳ (Zilla Panchayat CEO) ಜತೆ ಸಭೆ ನಡೆಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪಂಚಾಯತ್ ಸಿಇಓಗಳೇ ಗ್ರಾಮಕ್ಕೆ (Villages) ಭೇಟಿ ನೀಡುತ್ತಿಲ್ಲ. ಮೊದಲು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಲ್ಲಾವಾದ್ರೆ ಪಿಡಿಓಗಳೇ(PDO Panchayat Development Officer) ಹೆದರಲ್ಲ. ಕೆಳ ಹಂತದ ಅಧಿಕಾರಿಗಳ (Officers) ಮೇಲೆ ನಿಯಂತ್ರಣ ಇಟ್ಟುಕೊಳ್ಳಿ ಮತ್ತು ಅಧಿಕಾರದ ವಿಕೇಂದ್ರಿಕರಣ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಇದರಲ್ಲಿ ಎಷ್ಟು ಜನ ಗ್ರಾಮಗಳಿಗೆ ಭೇಟಿ ನೀಡಿದ್ದೀರಿ? ಎಷ್ಟು ಜನ ಫಲಾನುಭವಿಗಳ ಪಟ್ಟಿ ಆಯ್ಕೆ ಮಾಡಿದ್ದೀರಿ  ಎಂದು ಸಾಲು ಸಾಲು ಪ್ರಶ್ನೆ ಮಾಡಿದರು.

ಶ್ರೀಲಂಕಾ ಪ್ರಧಾನಿ ರಾಜಪಕ್ಸೆ ರಾಜೀನಾಮೆ

ರಾಷ್ಟ್ರವ್ಯಾಪಿ ಪ್ರತಿಭಟನೆಯು (Protest) ತೀವ್ರಗೊಳ್ಳುತ್ತಿದ್ದಂತೆ, ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ  (Sri Lankan Prime Minister Mahinda Rajapaksa) ಸೋಮವಾರ ರಾಜೀನಾಮೆ (Resigns) ನೀಡಿದ್ದಾರೆ. ಹೊಸ ಕ್ಯಾಬಿನೆಟ್‌ಗೆ ದಾರಿ ಮಾಡಿಕೊಡುವ ಸಾಧ್ಯತೆಯಿದೆ. ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷ ಗೊಟ್ಬಯಾ ರಾಜಪಕ್ಸೆ ಅವರು ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೆ ಪರಿಹಾರವಾಗಿ ರಾಜೀನಾಮೆ ನೀಡುವಂತೆ ಪ್ರಧಾನಿಗೆ ವಿನಂತಿಸಿದ ಕೆಲವು ದಿನಗಳ ನಂತರ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ.  ಪ್ರಧಾನಿ ರಾಜೀನಾಮೆ ನೀಡಿದ್ದು, ಸಂಸತ್ತಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳನ್ನು ಸರ್ವಪಕ್ಷಗಳ ಸಂಪುಟ ರಚನೆಗೆ ಆಹ್ವಾನಿಸುವ ನಿರೀಕ್ಷೆಯಿದೆ. ಈ ಹಿಂದೆ, ವಿರೋಧ ಪಕ್ಷ ಸಮಗಿ ಜನ ಬಲವೇಗಯ (ಎಸ್‌ಜೆಬಿ) ತನ್ನ ನಾಯಕ ಸಜಿತ್ ಪ್ರೇಮದಾಸ ಅವರು ಮಧ್ಯಂತರ ಸರ್ಕಾರದಲ್ಲಿ ಪ್ರಧಾನಿ ಹುದ್ದೆಯನ್ನು ಸ್ವೀಕರಿಸುವುದಿಲ್ಲ ಎಂದು ದೃಢಪಡಿಸಿದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Sri Lankan PM Resigns: ಶ್ರೀಲಂಕಾದಲ್ಲಿ ತೀವ್ರಗೊಂಡ ಪ್ರತಿಭಟನೆಗಳು, ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ

ಮದುವೆಯಾದ 36 ದಿನಕ್ಕೆ ಗಂಡನ ಕೊಂದ ಹೆಂಡತಿ

ಮದುವೆಯಾಗಿ 36 ದಿನಕ್ಕೆ ಗಂಡನನ್ನು ಹೃದಯಾಘಾತದಿಂದ (Heart Attack) ಕಳೆದುಕೊಂಡ ಆ ಯುವತಿ ಬಗ್ಗೆ ಎಲ್ಲರಿಗೂ ಕನಿಕರ ಮೂಡಿತ್ತು. ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು ಎಂದು ಮರುಗಿದ್ದರು. ಆದರೆ, ಆಕೆಯ ಅತ್ತೆಗೆ ಮಾತ್ರ ಮಗನ ಸಾವು ಸಹಜ ಸಾವು (Natural Death) ಎಂಬ ವಿಷಯ ಮನದಟ್ಟು ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣ ತನಿಖೆ ನಡೆಸಿದ ಪೊಲೀಸರಿಗೆ ತನಿಖೆ ವೇಳೆ  ಬಯಲಾಗಿದ್ದು ಶಾಕಿಂಗ್​ ಘಟನೆ. ಮದುವೆಯಾದ ತಿಂಗಳಿಗೆ ಗಂಡ ತೀರಿ ಹೋದ ಎಂದು ಎಲ್ಲರ ಎದುರು ದುಃಖದ ತೋಡಿಕೊಂಡ ಮಧುಮಗಳೇ ಪ್ರಿಯಕರ ಮತ್ತು ಆತನ ಸ್ನೇಹಿತನ ಜೊತೆ ಆತನ ಕೊಲೆ ಮಾಡಿದ್ದಳು ಎಂಬ ಸತ್ಯ ಕೊನೆಗೂ ಬಹಿರಂಗವಾಗಿದೆ.  ಗಂಡನ ಸಾವನ್ನು ಸಹಜ ಸಾವು ಎಂದು ಬಿಂಬಿಸಿ ಪ್ರಿಯಕರನೊಟ್ಟಿಗೆ ಜೀವನ ನಡೆಸುವ ಆಕೆ ಕನಸು ಮುರಟಿದ್ದು, ಇದೀಗ ಆತನ ಜೊತೆ ಜೈಲು ಸೇರುವಂತೆ ಆಗಿದೆ.

ಮೋಹಕ ತಾರೆ ರಮ್ಯಾ ಜೊತೆ ಪೋಸ್ ಕೊಟ್ಟ ಯುವಕನ್ಯಾರು?

ಸದ್ಯಕ್ಕೆ ರಮ್ಯಾ ಬಿಸಿ ಬಿಸಿ ಚರ್ಚೆಯಾಗುತ್ತಿದ್ದಾರೆ.ಈ ಬಾರಿ ರಮ್ಯಾ ಇಷ್ಟೊಂದು ಚರ್ಚೆಯಾಗಲು ಒಂದು ಫೋಟೋ ಕಾರಣ. ಹೌದು, ಯುವಕನೊಬ್ಬ ರಮ್ಯಾ ಜೊತೆ ಪೋಸ್​ ಕೊಟ್ಟಿದ್ದಾರೆ. ಇಷ್ಟೇ ಆಗಿದ್ದರೇ ರಮ್ಯಾ ಅವರ ವಿಚಾರ ಸುದ್ದಿಯಾಗುತ್ತಿರಲಿಲ್ಲ. ರಮ್ಯಾ ಅವರನ್ನು ಈ ಯುವಕ ತಬ್ಬಿಕೊಂಡು ಫೋಟೋಗೆ ಪೋಸ್​ ಕೊಟ್ಟಿದ್ದಾರೆ. ಇದು ರಮ್ಯಾ ಅವರ ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. ಸೋಷಿಯಲ್​ ಮೀಡಿಯಾದಲ್ಲಿ ಈ ಹುಡುಗನ ಬಗ್ಗೆ ಸರ್ಚ್ ಮಾಡ್ತಿದ್ದಾರಂತೆ. ಕರಣ್​ ಜೋಶಿ ಎಂಬ ಯುವಕನ ಜೊತೆ ರಮ್ಯಾ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ. ಈ ಯುವಕನ ಜೊತೆಎ ಆತ್ಮೀಯಾವಾಗಿ ಫೋಟೋ ತೆಗಿಸಿಕೊಂಡಿದ್ದಾರೆ. ತಬ್ಬಿಕೊಂಡು ರಮ್ಯಾ ಫೋಟೋ ತೆಗೆಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ.  ಅಮೂಲ್ಯ ಅವರ ಸೀಮಂತದಲ್ಲಿ ಸ್ಯಾಂಡಲ್‌ವುಡ್ ತಾರೆಯರ ದಂಡೇ ನೆರೆದಿತ್ತು. ಅಲ್ಲಿ ನಟಿ ರಮ್ಯಾ ಕೂಡ ಬಂದಿದ್ದರು. ಈ ವೇಳೆ ತಾವು ಚಿತ್ರರಂಗಕ್ಕೆ ವಾಪಸ್ಸಾಗುವ ಬಗ್ಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.
Published by:Kavya V
First published: