Evening Digest: ಕನ್ನಡ ಭಾಷೆ ಕಲಿಕೆ ಕಡ್ಡಾಯವಲ್ಲ ಎಂದ ಕೇಂದ್ರ: ಕಾಂಗ್ರೆಸ್ ಕಾರ್ಯಕರ್ತರಿಗೆ ಭರ್ಜರಿ ಆಫರ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕನ್ನಡ ಭಾಷೆ ಕಲಿಕೆ ಕಡ್ಡಾಯವಲ್ಲ ಎಂದ ಕೇಂದ್ರ : ಪದವಿ ಹಂತದಲ್ಲಿ ಕನ್ನಡ ಭಾಷೆ (Kannada Language) ಕಡ್ಡಾಯ ವಿಚಾರದ ಚರ್ಚೆ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ವಾದ-ವಿವಾದ, ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ನೂತನ ಶಿಕ್ಷಣ ನೀತಿಯ ಅನ್ವಯ ಶಿಕ್ಷಣದಲ್ಲಿ ಕೆಲವು ಬದಲಾವಣೆ ತರಲು ಸರ್ಕಾರ ಮುಂದಾಗಿತ್ತು. ತನ್ನ ನಿಲುವನ್ನು ಸಹ ತಿಳಿಸಿತ್ತು. ಇದೀಗ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (NEP) -2020 ಹಾಗೂ ಅದರ ನಿಯಮಗಳಲ್ಲಿ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಕೇಂದ್ರ ಸರಕಾರವು (Central Government), ಹೈಕೋರ್ಟ್ನಲ್ಲಿ (High Court) ಸ್ಪಷ್ಟಪಡಿಸಿದೆ. ಇದರಿಂದಾಗಿ ಪದವಿ ಹಂತದಲ್ಲಿ ಒಂದು ಭಾಷೆಯಾಗಿ ಕನ್ನಡ ಕಲಿಕೆ ಕಡ್ಡಾಯಗೊಳಿಸುವ ರಾಜ್ಯ ಸರಕಾರದ ಆಶಯಕ್ಕೆ ಹಿನ್ನಡೆಯಾಗಿದೆ. ಅಷ್ಟೇ ಅಲ್ಲದೆ, ಕನ್ನಡ ಕಲಿಕೆ ಕಡ್ಡಾಯಗೊಳಿಸುವ ನಿಲುವನ್ನು ಮರು ಪರಿಶೀಲಿಸಲು ರಾಜ್ಯ ಸರಕಾರಕ್ಕೆ ಮತ್ತೆ ನಿರ್ದೇಶನ ನೀಡಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ:NEP 2020ರ ಅಡಿಯಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯವಲ್ಲ, ಹೈಕೋರ್ಟ್​ಗೆ​ ಕೇಂದ್ರದ ಸ್ಪಷ್ಟನೆ

ಇನ್ಮುಂದೆ ವರ್ಷದಲ್ಲಿ 2 ಬಾರಿ ನಡೆಯಲಿದೆ K-TET ಪರೀಕ್ಷೆ
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(KAR-TET) ಯನ್ನು 2023ನೇ ಸಾಲಿನಿಂದ ಎರಡು ಬಾರಿ (Two Time) ಅಂದರೆ, ಜನವರಿ ಹಾಗೂ ಜೂನ್ ತಿಂಗಳಲ್ಲಿ ನಡೆಸಲು ಸೂಚಿಸಲಾಗಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಶಿವಕುಮಾರ್ (Shivakumar) ಆದೇಶ ಹೊರಡಿಸಿದ್ದು, ವರ್ಷಕ್ಕೆ ಎರಡು ಸಲ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ (Education Department) ಆಯುಕ್ತರಿಗೆ ನಿರ್ದೇಶಿಸಿದ್ದಾರೆ. ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಮಾದರಿಯಲ್ಲೇ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಹಲವು ಕಾರಣದಿಂದಾಗಿ ಪ್ರತಿ ವರ್ಷವೂ ಟಿಇಟಿ ಪರೀಕ್ಷೆಯು (Exam) ವಿಳಂಬವಾಗುತ್ತಿದೆ.

ಕಾಂಗ್ರೆಸ್ ಕಾರ್ಯಕರ್ತರಿಗೆ ಭರ್ಜರಿ ಆಫರ್
ಕಳೆದ ಕೆಲ ಸಮಯದಿಂದ ಸೂಕ್ಷ್ಮವಾಗಿ ಗಮನಿಸಿದರೆ ಹಿಂದೊಮ್ಮೆ ಏಕ ಅಧಿಪತ್ಯದಂತಿದ್ದ ರಾಷ್ಟ್ರಮಟ್ಟದ ಕಾಂಗ್ರೆಸ್ (Congress) ಪಕ್ಷವು ತನ್ನ ವರ್ಚಸ್ಸನ್ನು ಗಮನಾರ್ಹವಾದ ಪ್ರಮಾಣದಲ್ಲಿ ತಗ್ಗಿಸಿಕೊಂಡಿರುವುದು ನಿಸ್ಸಂದೇಹವಾಗಿ ತಿಳಿದುಬರುತ್ತದೆ. ದೇಶದ ಕೆಲವೇ ಕೆಲವು ಬೆರಳಣಿಕೆಯಷ್ಟು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್, ಇತರ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಆಡಳಿತದಲ್ಲಿರುವುದನ್ನು ಕಾಣಬಹುದು. ಅದರಂತೆ ಕರ್ನಾಟಕದಲ್ಲಿ ಹಿಂದಿನ ಸರ್ಕಾರ ರಚಿಸಿದ್ದ ಕಾಂಗ್ರೆಸ್ ಈ ಬಾರಿಯೂ ಮತ್ತೆ ಕರ್ನಾಟಕದಲ್ಲಿ (Karnataka) ಬರಲೇಬೇಕೆಂಬ ಆಸೆಯನ್ನು ಹೊತ್ತಿದೆ. ಹಾಗಾಗಿ, ಸದ್ಯ ಕಾಂಗ್ರೆಸ್ ತನ್ನ ಪಕ್ಷದ ವರ್ಚಸ್ಸನ್ನು ಪುನರ್ಸ್ಥಾಪಿಸಲು ಮುಂದಾಗಿದ್ದು ಅದಕ್ಕಾಗಿ ಹಲವಾರು ಬಗೆಯ ತಂತ್ರ-ರಣತಂತ್ರಗಳನ್ನು ರೂಪಿಸುವಲ್ಲಿ ನಿರತವಾಗಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್(DK Shivakumar) ಸ್ವತಃ ಈ ನಿಟ್ಟಿನಲ್ಲಿ ಪ್ರಕ್ರಿಯೆಗಳ ಮೇಲ್ವಿಚಾರಣೆಯಲ್ಲಿ ತೊಡಗಿಕೊಂಡಿದ್ದು, ಬ್ಲಾಕ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದಾರೆ.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ: Congress: 'ಕೈ' ಕಾರ್ಯಕರ್ತರಿಗೆ ಭಾರಿ ಆಫರ್... ಫ್ರಿಡ್ಜ್, ಟಿವಿ, ಮೊಬೈಲ್, ಕಂಡೀಷನ್ ಹೀಗಿದೆ

ರಷ್ಯಾದ ತೈಲ, ಇಂಧನದ ಮೇಲೆ ಅಮೆರಿಕ ನಿರ್ಬಂಧ..
ಷ್ಯಾ, ಉಕ್ರೇನ್ (Russia and Ukraine) ಮೇಲೆ ದಾಳಿ ಮಾಡಿದ ನಂತರ ವ್ಲಾಡಿಮಿರ್ ಪುಟಿನ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಅಮೆರಿಕ (America) ಮತ್ತು ಪಾಶ್ಚಿಮಾತ್ಯ ದೇಶಗಳು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ನಿಷೇಧಿಸಿವೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಅಮೆರಿಕ ಸರ್ಕಾರ ರಷ್ಯಾದಿಂದ ಕಚ್ಚಾ ತೈಲ (Crude Oil), ನೈಸರ್ಗಿಕ ಅನಿಲ (Natural Gas) ಮತ್ತು ಇಂಧನ ಆಮದಿನ (Import) ಮೇಲೆ ನಿರ್ಬಂಧ (Banned) ಹೇರಿದೆ. ಇದು ರಷ್ಯಾದ ಮುಖ್ಯ ಆದಾಯದ (Income) ಮೂಲವಾಗಿದೆ. ಅಮೆರಿಕದ ಈ ನಡೆ ರಷ್ಯಾ ಸರ್ಕಾರದ ಮೇಲೆ ಸ್ವಲ್ಪ ಒತ್ತಡ ಹೇರಬಹುದು. ತೈಲ, ಅನಿಲ ಮತ್ತು ಶಕ್ತಿಯ ಮೇಲೆ ಅಮೆರಿಕ ಅಧ್ಯಕ್ಷ ಬಿಡೆನ್ ಅವರು ಹೇರಿರುವ ನಿರ್ಬಂಧಗಳು ಭಾರತವನ್ನು ಒಳಗೊಂಡಂತೆ ಪ್ರಪಂಚದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಮಹೇಶ್ ಬಾಬು ಜೊತೆ ಆಲಿಯಾ ಭಟ್ ನಟನೆ
ಇದೇ ಮಾರ್ಚ್ 25ಕ್ಕೆ RRR ರಿಲೀಸ್ ಆಗುತ್ತಿದೆ. ರಾಜಮೌಳಿ ಚಿತ್ರದಲ್ಲಿ ಆಲಿಯಾ ಅಭಿನಯ ಹೇಗಿರಲಿದೆ ಎನ್ನುವ ಸಾಕಷ್ಟು ಕುತೂಹಲ ಮೂಡಿದೆ. ಈ ಚಿತ್ರದಲ್ಲಿ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಇದ್ದಾರೆ. ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಜೊತೆಗೆ ಆಲಿಯಾ ಭಟ್ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರಕ್ಕೆ ನಿರ್ದೇಶಕ ರಾಜಮೌಳಿ ನಿರ್ದೇಶನ ಇರಲಿದೆ.ನಿರ್ದೇಶಕ ರಾಜಮೌಳಿ RRR ಚಿತ್ರದ ಬಳಿಕ ಮಹೇಶ್ ಬಾಬುಗೆ ಸಿನಿಮಾ ಮಾಡಲಿದ್ದಾರೆ. ಮಹೇಶ್ ಬಾಬು ಜೊತೆ ಅದ್ಧೂರಿ ವೆಚ್ಚದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಖ್ಯಾತ ನಿರ್ಮಾಪಕರೊಬ್ಬರು ಬಂಡವಾಳ ಹೂಡಲಿದ್ದಾರಂತೆ. ‘ಆರ್ಆರ್ಆರ್’ ಸಿನಿಮಾ ರಿಲೀಸ್ ಆದ ಬಳಿಕ ಮಹೇಶ್ ಬಾಬು ಅವರ ಸಿನಿಮಾವನ್ನು ಕೈಗೆತ್ತಿಗೊಳ್ಳಲಿದ್ದಾರಂತೆ.ಆದರೆ ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಸುದ್ದಿ ಈಗ ಮುನ್ನೆಲೆಗೆ ಬಂದಿದೆ. ನಟಿ ಆಲಿಯಾ ಭಟ್ ಮಹೇಶ್ ಬಾಬು ಜೊತೆಗೆ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಆದರೆ, ಈ ಸುದ್ದಿ ಅಧಿಕೃತವಾಗಿಲ್ಲ. ಚಿತ್ರತಂಡದಿಂದ ಯಾವುದೇ ಮಾಹಿತಿ ಬಂದಿಲ್ಲ.
Published by:Kavya V
First published: