Evening Digest: ಈ ಭಾನುವಾರ ಬೆಂಗಳೂರಲ್ಲಿ ಮಾಂಸ ಸಿಗಲ್ಲ: ವಯಸ್ಕರೆಲ್ಲರೂ 3ನೇ ಡೋಸ್ ಹಾಕಿಸಿಕೊಳ್ಳಬಹುದು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಈ ಭಾನುವಾರ ಬೆಂಗಳೂರಲ್ಲಿ ಮಾಂಸ ಸಿಗಲ್ಲ: ರಾಮನವಮಿ ಏ. 10ರಂದು ಬಂದಿದೆ, ಭಾನುವಾರ ರಾಮನವಮಿ ಹಬ್ಬದ ಆಚರಣೆ ಹಿನ್ನಲೆ ಈ ಆದೇಶವನ್ನು ಬಿಬಿಎಂಪಿ ಜಾರಿಗೆ ತಂದಿದೆ. ಇದೇ ಭಾನುವಾರ ಅಂದರೆ ಏಪ್ರಿಲ್ 10ರಂದು ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಹಿಂದೂ ಧಾರ್ಮಿಕ ಹಬ್ಬ ರಾಮನವಮಿ ಏ. 10ರಂದು ಬಂದಿದೆ, ಭಾನುವಾರ ರಾಮನವಮಿ ಹಬ್ಬದ ಆಚರಣೆ ಹಿನ್ನಲೆ ಈ ಆದೇಶವನ್ನು ಬಿಬಿಎಂಪಿ ಜಾರಿಗೆ ತಂದಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: ಭಾನುವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ; ನಿಯಮ ಮೀರಿದ್ರೆ ಕ್ರಮ: BBMP

ವಯಸ್ಕರೆಲ್ಲರೂ 3ನೇ ಡೋಸ್ ಹಾಕಿಸಿಕೊಳ್ಳಬಹುದು
ಬೂಸ್ಟರ್ ಡೋಸ್ ಅನ್ನು ಈಗ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ನೀಡಬಹುದು ಎಂದು ಕೇಂದ್ರವು ಶುಕ್ರವಾರ ಪ್ರಕಟಿಸಿದೆ. ಖಾಸಗಿ ಕೇಂದ್ರಗಳಲ್ಲಿ ಏಪ್ರಿಲ್ 10 ರಿಂದ ಬೂಸ್ಟರ್ ಡೋಸ್ ಪ್ರಾರಂಭವಾಗುತ್ತದೆ. ಈ ಹಿಂದೆ, ಸರ್ಕಾರವು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸನ್ನು ನೀಡಲಾಗಿತ್ತು. ಈಗ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಪಡೆಯಬಹುದು. ದೇಶದ ಎಲ್ಲಾ 15+ ಜನಸಂಖ್ಯೆಯಲ್ಲಿ ಸುಮಾರು 96% ಜನರು ಕನಿಷ್ಠ ಒಂದು ಕೋವಿಡ್-19 ಲಸಿಕೆ ಡೋಸ್ ಅನ್ನು ಪಡೆದಿದ್ದಾರೆ. 15+ ಜನಸಂಖ್ಯೆಯ ಸುಮಾರು 83% ಜನರು ಎರಡೂ ಡೋಸ್ಗಳನ್ನು ಸ್ವೀಕರಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Booster Dose: ಏ.10ರಿಂದ ಖಾಸಗಿ ಆಸ್ಪತ್ರೆಗಳಲ್ಲಿ 3ನೇ ಡೋಸ್ ಲಭ್ಯ.. 2ನೇ ಡೋಸ್ ಪಡೆದು ಎಷ್ಟು ತಿಂಗಳಾಗಿರಬೇಕು?

ಸಿಎಂ ಬೊಮ್ಮಾಯಿ ಕೆಲಸ ಮಾಡುವ ಬಸವಣ್ಣ
ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಮೌನ ಬಸವಣ್ಣ ಎಂಬ ಪ್ರತಿಪಕ್ಷಗಳ ಟೀಕೆಗೆ ಸಂಸದ ಪ್ರತಾಪ್ ಸಿಂಹ (MP Pratap Simha) ತಿರುಗೇಟು ನೀಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ಮಾತನಾಡುವ ಬಸವಣ್ಣ ಅಲ್ಲ.ಅವರು ದುಡಿಯುವ ಬಸವಣ್ಣ. ದುಡಿಮೆಯಿಂದ ರಾಜ್ಯದ ಅಭಿವೃದ್ಧಿ(Karnataka Development)ಗೆ ಶ್ರಮಿಸುತ್ತಿರುವ ಬಸವಣ್ಣ. ಅವರ ದುಡಿಮೆ ಫಲವಾಗಿ ಮೈಸೂರಿನ ಏರ್ಪೋರ್ಟ್ ವಿಸ್ತರಣೆಗೆ ಅನುದಾನ (Fund Release) ಕೊಟ್ಟಿದ್ದಾರೆ. ಕೆಆರ್ ಆಸ್ಪತ್ರೆ ಗೆ ಅನುದಾನ ಕೊಟ್ಟಿದ್ದಾರೆ, ಶಕ್ತಿಧಾಮಕ್ಕೆ ಅನುದಾನ ಕೊಟ್ಟಿದ್ದಾರೆ. ಇಂತಹ ದುಡಿಮೆಯ ಬಸವಣ್ಣನ ಬಗ್ಗೆ ಪ್ರತಿನಿತ್ಯ ಕರ್ಕಸ ಧ್ವನಿಯಲ್ಲಿ ಕಾಕಾ ಎನ್ನುವವರಿಗೆ ಅರ್ಥವಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಸಭೆ, ಲೋಕಸಭೆ ಏತಕ್ಕೆ..?: ಮುಖ್ಯ ನ್ಯಾಯಮೂರ್ತಿ
ಕೆಲವು ರಾಜಕೀಯವಾಗಿ ಸೂಕ್ಷ್ಮವಾದ (Politically Sensitive) ವಿಷಯಗಳ ಬಗ್ಗೆ ಚುನಾಯಿತ ಸರ್ಕಾರವು (Govt) ಕರೆ ತೆಗೆದುಕೊಂಡು ನಿರ್ಧರಿಸುವ ಜವಾಬ್ದಾರಿಯನ್ನು ಮಾಡದೆ ಇರುತ್ತಿರುವುದರಿಂದ ಸುಪ್ರೀಂಕೋರ್ಟ್ ಮೇಲೆ ಹೆಚ್ಚಿನ ಹೊರೆಯಾಗುತ್ತಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ( Chief Justice of India N V Ramana) ಗುರುವಾರ ಖೇದ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಅವರು"ನಿಮ್ಮ ಎಲ್ಲಾ ವಿಷಯಗಳನ್ನು ಕೈಗೆತ್ತಿಕೊಳ್ಳಲು ನಾನು ಒಪ್ಪಿಕೊಂಡರೆ ಮತ್ತು ಕೋರಿರುವ ಆದೇಶಗಳನ್ನು ಅಂಗೀಕರಿಸಬೇಕಾದರೆ, ರಾಜಕೀಯ ಪ್ರತಿನಿಧಿಗಳನ್ನು ಯಾವ ಉದ್ದೇಶಕ್ಕಾಗಿ ಆಯ್ಕೆ ಮಾಡಲಾಗುತ್ತದೆ..? ಲೋಕಸಭೆ ಏತಕ್ಕೆ.. ರಾಜ್ಯಸಭೆ ಏತಕ್ಕೆ..?", ಎಂದು ಸಿಜೆಐ ಖಾರವಾಗಿ ಕೇಳಿದ್ದಲ್ಲದೆ, ನ್ಯಾಯಾಲಯಗಳೇ ಬಿಲ್ಗಳನ್ನು ಪಾಸ್ ಮಾಡಬೇಕೇ ಎಂದು ಪ್ರಶ್ನಿಸಿದರು.

KGF Chapter 2 ಜೊತೆಗೆ ಚಿತ್ರತಂಡದಿಂದ ಬಿಗ್ ಸರ್ಪ್ರೈಸ್!
ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಭಾಸ್ ಅಭಿಮಾನಿಗಳು ಖುಷಿ ಪಡುವ ವಿಚಾರ. ಕೆಜಿಎಫ್ 2 ಸಿನಿಮಾದ ಜೊತೆ ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ‘ಸಲಾರ್’ ಸಿನಿಮಾ ಟೀಸರ್ ದರ್ಶನವಾಗಲಿದೆ ಎಂದು ಹೇಳುತ್ತಿದ್ದಾರೆ. ಈ ಹಿಂದೆಯೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಕೊನೆ ಸಿನಿಮಾ ಜೇಮ್ಸ್ ಜೊತೆ ಶಿವರಾಜ್ಕುಮಾರ್ ಅಭಿನಯದ ‘ಬೈರಾಗಿ’ ಸಿನಿಮಾ ಟೀಸರ್ ರಿಲೀಸ್ ಆಗಿತ್ತು. ಇತ್ತೀಚೆಗೆ ಸಲಾರ್ ಸಿನಿಮಾದಿಂದ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಹೀಗಾಗಿ ಕೆಜಿಎಫ್ 2 ಸಿನಿಮಾದಲ್ಲಿ ಟೀಸರ್ ಬರುತ್ತೆ ಅಂತ ಹೇಳಲಾಗುತ್ತಿದೆ.
Published by:Kavya V
First published: