Evening Digest: ಬಿಗ್​ಬಾಸ್​ ಸೀಸನ್​ 9, 5 ದಿನ ಭಾರೀ ಮಳೆಯ ಎಚ್ಚರಿಕೆ, ಜನೋತ್ಸವ ಮುಂದೂಡಿಕೆ, ಈ ಸಂಜೆಯ ಟಾಪ್-5 ನ್ಯೂಸ್ ಇಲ್ಲಿವೆ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಶೀಘ್ರದಲ್ಲಿ ಶುರುವಾಗ್ತಿದೆ ಬಿಗ್​ಬಾಸ್​​  ಸೀಸನ್- 9

ಬಿಗ್​ಬಾಸ್​​ ಸೀಸನ್​​ 9ನೇ ಸೀಸನ್ ನೋಡಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಓಟಿಟಿಯಲ್ಲಿ ಭಾರೀ ಜನಪ್ರಿಯರಾಗಿರೋ ಬಿಗ್​ ಬಾಸ್​ ಮುಕ್ತಾಯಗೊಳ್ಳಲು ಇನ್ನೂ ಎರಡು ವಾರ ಬಾಕಿ ಇದೆ.​ ಕಲರ್ಸ್​ ಕನ್ನಡ ವಾಹಿನಿ (Colours Kannada) ಪ್ರೇಕ್ಷಕರಿಗೆ ಗುಡ್​ ನ್ಯೂಸ್​ ಕೊಟ್ಟಿದೆ. ಅತಿ ಶೀಘ್ರದಲ್ಲೇ ನಿಮ್ಮ ಟಿವಿ ಪರದೆ ಮೇಲೆ ಪ್ರೇಕ್ಷಕರು ಬಿಗ್ ಬಾಸ್​ ಹೊಸ ಸೀಸನ್ ನೋಡಬಹುದಾಗಿದೆ. ಇದೀಗ  ನಿಮ್ಮ ಮನೆಯ ಟಿವಿ ಪರದೆ ಮೇಲೆಯೇ ಸಖತ್ ಮನರಂಜನೆ (Entertainment) ಸಿಗಲಿದೆ. ಸೆಪ್ಟೆಂಬರ್​ ಎರಡು ಹಾಗೂ 3ನೇ ವಾರದಲ್ಲಿ ಬಿಗ್​ ಬಾಸ್​ ಶುರುವಾಗೋ ಸಾಧ್ಯತೆ ಇದೆ.

ಇದನ್ನೂ ಓದಿ: ಬರ್ತಿದೆ ಬಿಗ್​ ಬಾಸ್​ ಸೀಸನ್​​ 9; ಟಿವಿ ಪರದೆ ಮೇಲೆ ಮಸ್ತ್​ ಮನರಂಜನೆ

ರಾಜ್ಯದಲ್ಲಿ ಮುಂದಿನ 5 ದಿನ ಭಾರೀ ಮಳೆಯ ಎಚ್ಚರಿಕೆ

ಕರ್ನಾಟಕದಲ್ಲಿ ಕಳೆದ ಎರಡು ವಾರದಿಂದ ಭಾರೀ ಮಳೆಯಾಗ್ತಿದೆ. ನಿರಂತರ ಮಳೆಗೆ ಜನಜೀವನ ಇನ್ನೂ ಸಹಜಸ್ಥಿತಿಗೆ ಮರಳಿಲ್ಲ. ಬೆಂಗಳೂರಿನ ಹಲವು ಏರಿಯಾಗಳು ಇನ್ನೂ ಸಹಜಸ್ಥಿತಿಗೆ ಬಂದಿಲ್ಲ. ಹಲವೆಡೆ ಇನ್ನೂ ನೀರು ನಿಂತಿದೆ. ಓಡಾಡೋಕೆ ಪರದಾಡುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿ ಇನ್ನೂ ಐದು ದಿನ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಅಂತಾ ಅಲರ್ಟ್ ಕೊಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ, ರಾಜ್ಯದಲ್ಲಿ ಇನ್ನೂ ಐದು ದಿನ ಭಾರೀ ಮಳೆಯ ಅಲರ್ಟ್​

ಉಮೇಶ್ ಕತ್ತಿ ನಿಧನ ಹಿನ್ನೆಲೆ ಜನೋತ್ಸವ ಮುಂದೂಡಿಕೆ

ಉಮೇಶ್ ಕತ್ತಿ ನಿಧನ ಹಿನ್ನೆಲೆ ಸರ್ಕಾರದ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಭಾನುವಾರ ಜನೋತ್ಸವ ನಡೆಸಲು ಸರ್ಕಾರ ನಿರ್ಧರಿಸಿದೆ. ರಾಜ್ಯ ನಾಯಕರ ಸಲಹೆ ಮೇರೆಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಮನಸ್ಸು ಬದಲಿಸಿದರು. ಮಾತ್ರವಲ್ಲದೇ ಬಿಜೆಪಿ ವರಿಷ್ಠರಿಂದಲೂ ಸಿಎಂ ಬೊಮ್ಮಾಯಿಗೆ ಸಂದೇಶ ಬಂದಿದ್ದು ಬಳಿಕ ಜನೋ ತ್ಸವವನ್ನು ಭಾನುವಾರಕ್ಕೆ ಮುಂದೂಡಲಾಯ್ತು. ನಾಳೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವಕ್ಕೆ ನಿರ್ಧರಿಸಲಾಗಿತ್ತು. ಉಮೇಶ್ ಕತ್ತಿ ನಿಧನದ ಹಿನ್ನೆಲೆ ಶಾಸಕರು, ಸಚಿವರಿಂದಲೂ ಜನೋತ್ಸವ ಮುಂದೂಡಿಕೆಗೆ ಅಭಿಪ್ರಾಯ ಮೂಡಿಬಂದಿತ್ತು.

ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ಕರ್ನಾಟಕದ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಹಠಾತ್ ನಿಧನ ಇಡೀ ರಾಜಕೀಯ ವಲಯದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ. ಕತ್ತಿ ಅಗಲಿಕೆಗೆ ರಾಜಕೀಯ ನಾಯಕರು, ಗಣ್ಯರು ಸೇರಿದಂತೆ ರಾಜ್ಯಾದ್ಯಂತ ಜನ ಕಂಬನಿ ಮಿಡಿಯುತ್ತಿದ್ದಾರೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಕೂಡಾ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಉಮೇಶ್ ಕತ್ತಿ ಅವರು ಕರ್ನಾಟಕದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದರು ಎಂದು ಪ್ರಧಾನಿ ಸ್ಮರಿಸಿದ್ದಾರೆ.

ಬಿಎಸ್​ವೈಗೆ ಶಾಕ್, ಭ್ರಷ್ಟಾಚಾರ ಕೇಸ್​ನ ಮರು ವಿಚಾರಣೆಗೆ ಹೈಕೋರ್ಟ್​ ಆದೇಶ

ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಬಿ. ಎಸ್​ ಯಡಿಯೂರಪ್ಪಗೆ (Former Chief Minister BS Yediyurappa) ಮತ್ತೊಂದು ಸಂಕಷ್ಟ ಬಂದೊದಗಿದೆ. ಹೌದು ಭ್ರಷ್ಟಾಚಾರ ಆರೋಪ ಪ್ರಕರಣ (Corruption Case) ಸಂಬಂಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕುಟುಂಬದ ವಿರುದ್ಧ ಮರು ವಿಚಾರಣೆಗೆ ಹೈಕೋರ್ಟ್ (Karnataka High Court) ಆದೇಶ ನೀಡಿದೆ. ಈ ಹಿಂದೆ ಪ್ರಾಸಿಕ್ಯೂಷನ್​​ಗೆ ಪೂರ್ವಾನುಮತಿ ಸಿಗದ ಕಾರಣ ಈ ಕೇಸ್ ವಜಾಗೊಂಡಿದ್ದು, ಮಾಜಿ ಸಿಎಂಗೆ ಕೊಂಚ ನೆಮ್ಮದಿ ಕೊಟ್ಟಿತ್ತು. ಆದರೀಗ ಹೈಕೋರ್ಟ್ ವಿಚಾರಣಾ ಕೋರ್ಟ್​​​ ಹಿಂದಿನ ವಜಾ ಆದೇಶ ರದ್ದುಪಡಿಸಿ, ಪ್ರಕರಣ ಮರು ವಿಚಾರಣೆಗೆ ಆದೇಶಿಸಿದೆ.
Published by:Thara Kemmara
First published: