Evening Digest: ಮೋದಿ ಮೇಲೆ ವಿಶ್ವಾಸ ಇಟ್ಟು ಬಿಜೆಪಿ ಸೇರಿದೆ ಎಂದ ಮಧ್ವರಾಜ್: 79 ದಿನ ಕೂಡಿಟ್ಟು ಅತ್ಯಾಚಾರಗೈದ ಮಂತ್ರವಾದಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮೋದಿ ಮೇಲೆ ವಿಶ್ವಾಸ ಇಟ್ಟು ಬಿಜೆಪಿ ಸೇರಿದೆ ಎಂದ ಮಧ್ವರಾಜ್ : ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ರಾಜಕೀಯ ನಾಯಕರು ಸಕ್ರಿಯರಾಗಿದ್ದು, ಪಕ್ಷಾಂತರ ಪರ್ವ ಆರಂಭವಾಗಿದೆ. ಈ ನಡುವೆ ಅನೇಕ ಕಾಂಗ್ರೆಸ್  ಸೇರಿದಂತೆ ವಿವಿಧ ಪಕ್ಷದ ​ ನಾಯಕರು ಬಿಜೆಪಿ (BJP) ಸೇರುವ ಮೂಲಕ ಆಡಳಿತ ಪಕ್ಷಕ್ಕೆ ಬಲ ತುಂಬಲು ಮುಂದಾಗಿದ್ದಾರೆ. ಬಿಜೆಪಿ ನಾಯಕರು ಈ ಮೊದಲೇ ತಿಳಿಸಿದಂತೆ ಕೋಲಾರ, ಮಂಡ್ಯ ಭಾಗದ ನಾಯಕರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದಾರೆ. ಇದರಲ್ಲಿ ಕಾಂಗ್ರೆಸ್​​ ನಾಯಕರಿಗೆ ಶಾಕ್​ ನೀಡಿದವರು ಎಂದು ಪ್ರಮೋದ್​ ಮಧ್ವರಾಜ್​. ಮಾಜಿ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ (Pramodh Madhwaraj)​ ಬಿಜೆಪಿ ಸೇರ್ಪಡೆಗೂ ಎರಡು ಗಂಟೆ ಮುನ್ನ ಕಾಂಗ್ರೆಸ್ ಅಧ್ಯಕ್ಷರಿಗೆ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಪತ್ರ ರವಾನಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Modi ಮೇಲೆ ವಿಶ್ವಾಸ ಇಟ್ಟು ಬಿಜೆಪಿ ಸೇರಿದೆ ಎಂದ ಮಧ್ವರಾಜ್; ಇದು ಮೊದಲ ಪಟ್ಟಿ ಎಂದ ಆರ್​ ಅಶೋಕ್​​

ಮಂತ್ರವಾದಿಯಿಂದ 79 ದಿನ ಅತ್ಯಾಚಾರ!

ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಮಧ್ಯವಯಸ್ಕ ವಿವಾಹಿತ ಮಹಿಳೆಯನ್ನು ಆಕೆ ಎರಡೂವರೆ ವರ್ಷದ ಮಗನ ಎದುರೇ 79 ದಿನಗಳ ಕಾಲ ಅತ್ಯಾಚಾರ ಮಾಡಿರುವ ಘಟನೆ ನಡೆದಿದೆ. ಮಂತ್ರವಾದಿ ಸಮಸ್ಯೆಯನ್ನು ಬಗೆ ಹರಿಸುವುದಾಗಿ ತಾಯಿ-ಮಗನನ್ನು ಕೋಣೆವೊಂದರಲ್ಲಿ ಕೂಡಿ ಹಾಕಿ, ನಿರಂತರ ಅತ್ಯಾಚಾರ ನಡೆಸಿರುವುದು ಬಯಲಾಗಿದೆ. ಮಹಿಳೆ ಮತ್ತು ಮಗುವನ್ನು ರಕ್ಷಿಸಿದ್ದು, ಆರೋಪಿ ಪರಾರಿಯಾಗಿದ್ದಾರೆ. ಮಹಿಳೆ ಮತ್ತು ಆಕೆಯ ಅತ್ತೆಯ ನಡುವಿನ ಭಿನ್ನಾಭಿಪ್ರಾಯವನ್ನು ಪರಿಹರಿಸಲು "ತಾಂತ್ರಿಕ" ನೊಂದಿಗೆ ಇರುವಂತೆ ತನ್ನ ಪತಿ ಮತ್ತು ಅತ್ತೆಯಂದಿರು ಒತ್ತಾಯಿಸಿದರು ಎಂದು ಮಹಿಳೆ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Rape: ಅತ್ತೆ-ಸೊಸೆ ಜಗಳ ಸರಿಹೋಗಲಿ ಎಂದು ಮಂತ್ರವಾದಿ ಮೊರೆ ಹೋದ್ರು, ಆತ 79 ದಿನ ಅತ್ಯಾಚಾರ ಮಾಡಿದ!

ಸಿಎಂ ಸ್ಥಾನಕ್ಕೆ 2500 ಕೋಟಿ ಹೇಳಿಕೆ; ಯು ಟರ್ನ್ ಹೊಡೆದ ಶಾಸಕ ಯತ್ನಾಳ್

ಸಿಎಂ ಸ್ಥಾನಕ್ಕೆ 2500 ಕೋಟಿ ಹೇಳಿಕೆ ಬಗ್ಗೆ ಯು ಟರ್ನ್ (U Turn) ಹೊಡೆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, (BasanaGowda Patila Yatnal) ಹಣ ಪಡೆದು ಸಿಎಂ ಸ್ಥಾನ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ. ಹಣ ಪಡೆದು ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್‌ ಪಕ್ಷದಲ್ಲಿದೆ (Congress Party) ಎಂದು ಹೇಳುವ ಮೂಲಕ ಶಾಸಕ ಯತ್ನಾಳ್ ಯುಟರ್ನ್ ಹೊಡೆದಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿಯಲ್ಲಿ ಅರ್ಹತೆ (Qualification) ಮೇಲೆಯೇ ಸ್ಥಾನಮಾನವನ್ನು ನೀಡುತ್ತಾರೆ.  1-2 ಘಟನೆ ಬಿಟ್ಟರೆ ನೂರಕ್ಕೆ ನೂರರಷ್ಟು ಅರ್ಹರಿಗೆ ಸ್ಥಾನ ನೀಡಲಾಗಿದೆ. ವರಿಷ್ಠರ ನಿರ್ಧಾರದ ಮೇಲೆಯೇ ಬಸವರಾಜ ಬೊಮ್ಮಾಯಿ (Basavaraj Bommai) ಸಿಎಂ ಆಗಿದ್ದು ಎಂದು ಹೇಳಿದ್ದಾರೆ.

ಇಂದಿನಿಂದ ಹೆಚ್ಚಾಯ್ತು ಸಿಲಿಂಡರ್ ಬೆಲೆ

ದುನಿಯಾ (Duniya) ಬಹಳ ದುಬಾರಿಯಾಗ್ತಿದೆ. ಅಡುಗೆ ವಸ್ತುಗಳು, ತರಕಾರಿ (Vegetables), ಪೆಟ್ರೋಲ್ (Petrol), ಡೀಸೆಲ್ (Diesel), ಅಡುಗೆ ಎಣ್ಣೆ (Cooking Oil), ಚಿನ್ನ (Gold), ಬೆಳ್ಳಿ (Silver) ಜೊತೆಗೆ ಕರ್ಮರ್ಷಿಯಲ್ ಗ್ಯಾಸ್ ಸಿಲಿಂಡರ್ (Commercial Gas Cylinder) ಬೆಲೆ ಕೂಡ ಜಾಸ್ತಿಯಾಗಿತ್ತು. ಇದೀಗ ಪ್ರತಿಯೊಬ್ಬರಿಗೂ ದಿನನಿತ್ಯ ಬೇಕಾದ ತೀರ ಅಗತ್ಯವಸ್ತುವಾಗಿದ್ದ ಅಡುಗೆ ಅನಿಲದ ಬೆಲೆ ಜಾಸ್ತಿಯಾಗಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ (LPG Cylinder) ಬೆಲೆ 50 ರೂಪಾಯಿ ಹೆಚ್ಚಳವಾಗಿದೆ. ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದ್ದು, ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ (Delhi) 14.2 ಕೆಜಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ಸಿಲಿಂಡರ್‌ಗೆ 999.50 ರೂ.ಗೆ ಏರಿಕೆಯಾಗಿದೆ.

ಅದೊಂದು ಕಾರಣಕ್ಕೆ 'ಹೆಡ್ ​ಬುಷ್​' ವಿರುದ್ಧ ಹೋರಾಟ!

ಆರಂಭದಲ್ಲಿ ಹೆಡ್​​ಬುಷ್​ ಸಿನಿಮಾಕ್ಕೆ ಶುಭ ಹಾರೈಸಿದ್ದ ಅಜಿತ್ ಜಯರಾಜ್ ಈಗ ಏಕಾ-ಏಕಿ ಸಿನಿಮಾದ ವಿರುದ್ಧ ಮಾತನಾಡುತ್ತಿರುವುದು ಅವರ ಉದ್ದೇಶದ ಬಗ್ಗೆ ಹಲವರಿಗೆ ಅನುಮಾನ ಮೂಡಿಸಿದೆ. ಸಿನಿಮಾದ ವಿರುದ್ಧ ಹೋರಾಟ ಮಾಡುತ್ತಿರುವ ಕಾರಣವನ್ನು ಅಜಿತ್ ಇದೀಗ ಬಾಯ್ಬಿಟ್ಟಿದ್ದಾರೆ. 'ನನ್ನ ತಾಯಿಗಾಗಿ ಈ ಹೋರಾಟವನ್ನು ಮಾಡುತ್ತಿದ್ದೇನೆ' ಎಂದು ಅಜಿತ್​ ಜಯರಾಜ್​ ಹೇಳಿದ್ದಾರೆ. 'ನಾನು ಯಾರೋ ಹೇಳಿದ್ದನ್ನು ಕೇಳಿ ಹೋರಾಟ ಮಾಡುತ್ತಿಲ್ಲ . ನನ್ನ ತಾಯಿ ಮಾತನ್ನು ಕೇಳುತ್ತಿದ್ದೇನೆ. ನನ್ನ ಹೋರಾಟ ನನ್ನ ತಾಯಿಗಾಗಿ' ಎಂದು ಅಜಿತ್​ ಹೇಳಿದ್ದಾರೆ.
Published by:Kavya V
First published: