Evening Digest: ರಾಜ್ಯದಲ್ಲಿರೋದು ಡಬ್ಬಾ ಸರ್ಕಾರ ಎಂದ ಸಿದ್ದು: ಮೋದಿ ಒತ್ತಾಯಕ್ಕೆ ಮಣಿಯುತ್ತಾರಾ ಪುಟಿನ್? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಜ್ಯದಲ್ಲಿರೋದು ಡಬ್ಬಾ ಸರ್ಕಾರ ಎಂದ ಸಿದ್ದು: 2022-23ನೇ ಸಾಲಿನ ರಾಜ್ಯ ಬಜೆಟ್ (State Budget) ಮೇಲಿನ ಚರ್ಚೆ ವೇಳೆ ಬಿಜೆಪಿ ವಿರುದ್ಧ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದ್ದಾರೆ. ಇದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಡಬ್ಬಾ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ (Speaker) ಪ್ರಶ್ನೋತ್ತರಕ್ಕೆ (Questionnaire) ಅವಕಾಶ ನೀಡಿದರು. ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಇದು ಡಬಲ್ ಎಂಜಿನ್ ಸರ್ಕಾರ ಎಂದು ಬಿಜೆಪಿಯವರು ಹೇಳುತ್ತಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರ ಇದ್ದರೆ ಸ್ವರ್ಗವೇ ನಿರ್ಮಾಣ ಆಗುತ್ತದೆ ಎಂದು ಇವರು ಹೇಳುತ್ತಿದ್ದರು. ಆದರೆ ಎಂಜಿನ್ ಕೆಟ್ಟಿರುವುದರಿಂದ ಇದು ಡಬ್ಬಾ ಸರ್ಕಾರ ಆಗಿದೆ ಎಂದು ಟೀಕಿಸಿದರು.

ನಡು ರಸ್ತೆಯಲ್ಲೇ ರಾಮನಗರ ಎಸ್ಪಿ ಬಗ್ಗೆ HDK ಕೆಂಡಾಮಂಡಲ
ರಾಮನಗರ (Ramanagara) ಜಿಲ್ಲೆಯಾದ್ಯಂತ ಪೊಲೀಸರ (Police) ವಸೂಲಿ ಕಾಟ ಹೆಚ್ಚಾಗಿದೆ ಅಂತ ಕುಮಾರಸ್ವಾಮಿ ಆರೋಪಿಸಿದ್ದಾರೆ. ಬೈಕ್, ಕಾರುಗಳನ್ನು ಎಲ್ಲೆಂದರಲ್ಲಿ ಅಡ್ಡ ಹಾಕಿ ಪೊಲೀಸರು ಹಣ ಕೀಳ್ತಿದ್ದಾರೆ. ಎಲ್ಲ ದಾಖಲೆ ಇದ್ರೂ ದಂಡ (Fine) ಹಾಕ್ತಾರೆ. ರೈತರು (Farmer) ಎಲ್ಲಿಂದ ತರಬೇಕು ಅಷ್ಟು ದುಡ್ದು ಅಂತ ನಡುರಸ್ತೆಯಲ್ಲಿ ಎಸ್ಪಿ ಬಗ್ಗೆ ಮಾತಾಡಿ ಅಧಿಕಾರಿಗಳನ್ನ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ ವಸೂಲಿ ಬಗ್ಗೆ ನನಗೆ ಹಲವು ದೂರುಗಳು ಬಂದಿವೆ. ಪೊಲೀಸರಿಗೆ 500 ರೂಪಾಯಿ ವ್ಯಾಲ್ಯೂ ಗೊತ್ತಿರುವುದಿಲ್ಲ. ಆದರೆ ರೈತನಿಗೆ ಪ್ರತಿ ರೂಪಾಯಿಯೂ ಮುಖ್ಯವಾಗಿರುತ್ತೆ. ಇದೇ ರೀತಿ ದಂಡ ವಿಧಿಸುತ್ತಿದ್ದರೆ ಪ್ರತಿಭಟನೆ ಮಾಡುತ್ತೇನೆ. ಎಸ್ಪಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D Kumaraswamy) ಎಚ್ಚರಿಕೆ ಕೊಟ್ಟಿದ್ದಾರೆ. ಅವನು ಇಲ್ಲಿಗೆ ಏಕೆ ಬಂದಿದ್ದಾನೆಂದು ನನಗೆ ಗೊತ್ತಿದೆ ಎಂದು ರಾಮನಗರ ಎಸ್.ಪಿ ಸಂತೋಷ್ (Sp Santhosh) ಬಾಬು ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

PM Modi ಒತ್ತಾಯಕ್ಕೆ ಮಣಿಯುತ್ತಾರಾ ಪುಟಿನ್?
ಉಕ್ರೇನ್ ಅಧ್ಯಕ್ಷರ (Ukraine President) ಜೊತೆ ಮಾತನಾಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Vladimir Putin) ಅವರೊಂದಿಗೆ ಮಾತನಾಡಿದ್ದಾರೆ. ಉಕ್ರೇನ್ನ ಸುಮಿ ನಗರದಿಂದ ಭಾರತೀಯ ನಾಗರಿಕರನ್ನು ಶೀಘ್ರವಾಗಿ ಸ್ಥಳಾಂತರಿಸುವ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉಭಯ ದೇಶಗಳ ನಡುವಿನ ಸಂಘರ್ಷ ಸಂಬಂಧ ಉಕ್ರೇನ್ನ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ನೇರ ಮಾತುಕತೆ ನಡೆಸುವಂತೆ ಮೋದಿ ಅವರು ಪುಟೀನ್ ಅವರನ್ನು ಒತ್ತಾಯಿಸಿದರು ಎಂದು ತಿಳಿದು ಬಂದಿದೆ. ಉಕ್ರೇನ್ನಲ್ಲಿನ ಪರಿಸ್ಥಿತಿಯ ಕುರಿತು ಉಭಯ ನಾಯಕರು ಸುಮಾರು 50 ನಿಮಿಷಗಳ ಕಾಲ ದೂರವಾಣಿ ಕರೆಯಲ್ಲಿ ಚರ್ಚಿಸಿದರು ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಯುದ್ಧ ಪೀಡಿತ ದೇಶದಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಾಧ್ಯವಿರುವ ಎಲ್ಲ ಸಹಕಾರ ನೀಡುವುದಾಗಿ ಅಧ್ಯಕ್ಷ ಪುಟಿನ್, ಪ್ರಧಾನಿ ಮೋದಿಗೆ ಭರವಸೆ ನೀಡಿದ್ದಾರೆ ಎಂದು ವರದಿಯಾಗಿದೆ.

ಡಾಲರ್ ಎದುರು ಸರ್ವಕಾಲಿಕ ಕನಿಷ್ಠ ಮಟ್ಟಕ್ಕಿಳಿದ ರೂಪಾಯಿ ಮೌಲ್ಯ
ಭಾರತೀಯರ (India) ಪಾಲಿಗೆ ಇಂದು ಅಶುಭ ದಿನ ಅಂತಲೇ ಹೇಳಬೇಕು. ರೂಪಾಯಿ (Rupee) ಮೌಲ್ಯ ಪಾತಾಳಕ್ಕೆ ಇಳಿಯುವ ಮೂಲಕ (Rupee Hits Lifetime Low) ಸರ್ವಕಾಲಿಕ ದಾಖಲೆ ಬರೆದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು (Oil Prices) ಗಗನಮುಖಿ ಆದ ಹಿನ್ನೆಲೆಯಲ್ಲಿ ಭಾರತದ ರೂಪಾಯಿ ಮೌಲ್ಯ ತೀವ್ರ ಕುಸಿತ ಕಂಡಿದೆ. ಒಂದು ಡಾಲರ್ಗೆ 76.96 ರೂ. ಆಗಿದ್ದು, ಭಾರತದ ಆರ್ಥಿಕ ವಲಯಕ್ಕೆ ದೊಡ್ಡ ಆಘಾತ ನೀಡಿದೆ. ಜಾಗತಿಕ ಕಚ್ಚಾ ತೈಲ ಬೆಲೆಗಳು $ 130 ಅನ್ನು ದಾಟಿ ನಿರಂತರವಾಗಿ ಏರುತ್ತಲೇ ಇದೆ. ತೀವ್ರ ಏರಿಕೆಯಿಂದಾಗಿ ಆಮದು ಮಾಡಿದ ಹಣದುಬ್ಬರವನ್ನು ಹೆಚ್ಚಿಸಲು, ದೇಶದ ವ್ಯಾಪಾರ ಮತ್ತು ಚಾಲ್ತಿ ಖಾತೆ ಕೊರತೆಯನ್ನು ನಿಭಾಹಿಸುವಲ್ಲಿ ಇಂಧನ ಸಂವೇದನಾಶೀಲ ರೂಪಾಯಿ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಜೀವಮಾನದ ಕನಿಷ್ಠ ಮಟ್ಟವನ್ನು ತಲುಪಿತು.

ಬರ್ತಿದೆ ಎದ್ದೇಳು ಮಂಜುನಾಥ ಪಾರ್ಟ್ 2
ಎದ್ದೇಳು ಮಂಜುನಾಥ ಚಿತ್ರದ ಯಶಸ್ಸಿನ ಮುಖ್ಯ ರೂವಾರಿ ನಿರ್ದೇಶಕ ಗುರುಪ್ರಸಾದ್ ಎಂದರೆ ತಪ್ಪಾಗಲಾರದು. ಇದೀಗ ಸ್ವತಃ ಗುರುಪ್ರಸಾದ್ ಅವರ ನಿರ್ದೇಶನದಲ್ಲೇ ಎದ್ದೇಳು ಮಂಜುನಾಥ 2 ಸಿನಿಮಾ ರೆಡಿಯಾಗಿದೆ. ಆದರೆ, ಈ ಸಿನಿಮಾದಲ್ಲಿ ಜಗ್ಗೇಶ್ ನಟಿಸಿಲ್ಲ. ಹಾಗಂತ ಇದು ಎದ್ದೇಳು ಮಂಜುನಾಥ ಸಿನಿಮಾದ ಮುಂದಿನ ಭಾಗವೂ ಅಲ್ಲ. ಮೊದಲ ಭಾಗಕ್ಕೆ ಹೋಲಿಸಿದರೆ, ಭಾಗ ಎರಡರಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ನಿರ್ದೇಶಕ ಗುರುಪ್ರಸಾದ್ ಮಠ ಸಿನಿಮಾದಿಂದ ಇಲ್ಲಿಯವರೆಗೂ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ. ಇತ್ತೀಚೆಗೆ ತೆರೆಕಂಡು ಯಶಸ್ವಿಯಾದ ಬಡವ ರಾಸ್ಕೆಲ್ ಸಿನಿಮಾದಲ್ಲೂ ಗುರುಪ್ರಸಾದ್ ನಟಿಸಿದ್ದರು. ಈಗ ಎದ್ದೇಳು ಮಂಜುನಾಥ ಸಿನಿಮಾದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಗುರು ಪ್ರಸಾದ್ ಹೊಸ ಚಿತ್ರ, ಹೊಸ ಕಥೆ ಹೇಳುವ ಪ್ರಯತ್ನ ಮಾಡಿದ್ದಾರೆ.ಮೊದಲ ಭಾಗದಲ್ಲಿ ನಟ ಜಗ್ಗೇಶ್ ಅವರು ಕಮಾಲ್ ಮಾಡಿದ್ದರು. ಆದರೆ ಈ ಚಿತ್ರದಲ್ಲಿ ಗುರು ಪ್ರಸಾದ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರ ಹೇಗೆ ಇರಲಿದೆ ಎನ್ನುವ ಕುತೂಹಲ ಮೂಡಿದೆ.
Published by:Kavya V
First published: