Evening Digest: ಪೊಲೀಸರ ಮೇಲೆಯೇ ಕಾರು ಚಲಾಯಿಸಿದ ಆಪ್ ಮುಖಂಡ: ನನಸಾಗ್ತಿದೆ ಪುನೀತ್ ಕನಸು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಪೊಲೀಸರ ಮೇಲೆಯೇ ಕಾರು ಚಲಾಯಿಸಿದ ಆಪ್ ಮುಖಂಡ:  ಭಾರತದಲ್ಲಿ ಸದ್ಯ ಆಪ್ ಪಕ್ಷದ ಅಲೆ ಹೆಚ್ಚಾಗಿದೆ. ಮುಂಬರುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಟಕ್ಕರ್ ಕೊಡಲು ಆಪ್ ಸಿದ್ಧತೆ ನಡೆಸುತ್ತಿದೆ. ಆದರೆ ಆಮ್ ಆದ್ಮಿ ಪಾರ್ಟಿಯ ಯುವ ಮುಖಂಡ ಪೊಲೀಸರ ಮೇಲೆ ದಬ್ಬಾಳಿಕೆ ನಡೆಸಿ ಪಕ್ಷಕ್ಕೆ ಅಪಕೀರ್ತಿ ತಂದಿದ್ದಾರೆ. ಗುಜರಾತ್ ಎಎಪಿಯ ಯುವ ಘಟಕದ ನಾಯಕ ಯುವರಾಜ್ ಸಿನ್ಹ ಜಡೇಜಾ ಅವರು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿ, ಕಾನ್ಸ್ಟೇಬಲ್ನನ್ನು ಕಾರಿನ ಬಾನೆಟ್ ಮೇಲೆ ಎಳೆದೊಯ್ದ ಘಟನೆ ನಡೆದಿದೆ. ಯುವರಾಜ್ ಸಿನ್ಹ ಜಡೇಜಾ ಅವರನ್ನು ಗಾಂಧಿನಗರ ಪೊಲೀಸರು ಬಂಧಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Shocking: ಪೊಲೀಸರ ಮೇಲೆಯೇ ಕಾರು ಚಲಾಯಿಸಿದ ಆಪ್ ಮುಖಂಡ.. ಬಾನೆಟ್ ಮೇಲೆ ಪೇದೆ ಪರದಾಟ

ನನಸಾಗ್ತಿದೆ ಪುನೀತ್ ಕನಸು
ಮೈಸೂರಿನ ಶಕ್ತಿಧಾಮದಲ್ಲಿ(Shakthidhama) ಇಂದು ಶಕ್ತಿಧಾಮ ವಿದ್ಯಾ ಶಾಲೆಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraja Bommai ) ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸಮಾರಂಭಕ್ಕೆ ಪತ್ನಿ, ಮಗಳ ಜೊತೆ ಆಗಮಿಸಿದ ನಟ ಡಾ. ಶಿವರಾಜ್ ಕುಮಾರ್ (Shivaraj kumar) ಈ ವೇಳೆ ಸುತ್ತೂರು ಶ್ರೀಗಳ ಭೇಟಿ ಮಾಡಿದ ಶಿವರಾಜ್ ಕುಮಾರ್ ದಂಪತಿಗಳು. ಮೈಸೂರಿನ (Mysore) ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮ. ಶಾಲೆ ಆರಂಭಿಸುವ ಕನಸು ಕಂಡಿದ್ದ ಪುನೀತ್ ರಾಜ್ಕುಮಾರ್. ಪುನೀತ್ ಕನಸು ನನಸು ಮಾಡಲು ಕುಟುಂಬಸ್ಥರು ಮುಂದಾಗಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Mysore: ನನಸಾಗ್ತಿದೆ ಪುನೀತ್ ಕನಸು; ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ

ಅತಿಯಾದ ಓಲೈಕೆ ಒಳ್ಳೆದಲ್ಲ.. ಸಿದ್ದರಾಮಯ್ಯ ವಿರುದ್ಧ ಕಿಡಿ
ಕಾಮಾಲೆ ಕಣ್ಣಿಗೆ ಕಾಣುವುದೆಲ್ಲವೂ ಹಳದಿ ಎಂಬಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಆಲ್ ಖೈದಾ ಉಗ್ರಗಾಮಿ ಸಂಘಟನೆ ಹಾಗೂ ಮುಖ್ಯಸ್ಥ ಆಯ್ಯನ್ ಜವಾಹಾರಿ ಮುಂದೊಂದು ದಿನ ವೀರ ಸ್ವತಂತ್ರ ಹೋರಾಟಗಾರರಾಗಿ ಕಂಡರೂ ಅಚ್ಚರಿಯಿಲ್ಲ ಎಂದು ಹರಿಹಾಯ್ದಿದ್ದಾರೆ. ಮುಸ್ಕಾನ್ ಹೊಗಳಿ ಅಲ್ಖೈದಾ ಉಗ್ರನ ಕುರಿತು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇಂತಹದ್ದನ್ನೆಲ್ಲಾ ಬಿಜೆಪಿಯವರೇ ಹುಟ್ಟುಹಾಕುವುದು. ಎಲ್ರೀ ಉಗ್ರ? ಆರ್ಎಸ್ಎಸ್ನವರೇ ಇಂತಹ ವಿಡಿಯೋಗಳನ್ನುಕಳುಹಿಸುವುದು. ಈ ಬಗ್ಗೆ ತನಿಖೆ ಆಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ ಎಂದು ಆಗ್ರಹಿಸಿದ್ದರು.

ಸಂಗಾತಿಯನ್ನು ಅಪ್ಪಿಕೊಳ್ಳದಂತೆ, ಮುತ್ತಿಡದಂತೆ ಮನವಿ
ಚೀನಾದಲ್ಲಿ ಕೋವಿಡ್ (Covid in China) ಪರಿಸ್ಥಿತಿ ಹದಗೆಡುತ್ತಿದೆ. ಅದರಲ್ಲೂ ಶಾಂಘೈನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಶಾಂಘೈನಲ್ಲಿ (Shanghai) ಒಂದು ದಿನದಲ್ಲಿ 8 ಸಾವಿರದ ದಾಖಲೆಗಳು ಏರಿಕೆ ಕಂಡಿದೆ. ಅಪಾಯಕಾರಿ ಓಮಿಕ್ರಾನ್ (Omicron) ರೂಪಾಂತರವು ದೇಶದ ಹಲವು ಪ್ರಾಂತ್ಯಗಳಲ್ಲಿ ಹರಡಿದೆ. ಇದರಿಂದಾಗಿ ಜನರಲ್ಲಿ ಭಯದ ವಾತಾವರಣ ಮೂಡಿದೆ. ಪರಿಸ್ಥಿತಿ ಗಂಭೀರವಾದ ಹಿನ್ನಲೆ ಚೀನಾದ ಆಡಳಿತವು ದೇಶದ ಆರ್ಥಿಕ ರಾಜಧಾನಿ ಶಾಂಘೈನಲ್ಲಿ ಲಾಕ್ಡೌನ್ ಘೋಷಿಸಿದೆ. ಅಲ್ಲದೇ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಇಲ್ಲಿ ಯಾವುದೇ ಕಾರಣವಿಲ್ಲದೆ ಜನರು ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ಸೂಚಿಸಿದೆ.

ಸೀರಿಯಲ್ ಗೂ ನಿಜ ಜೀವನಕ್ಕೂ ಕನೆಕ್ಟ್ ಮಾಡಬೇಡಿ
ಕನ್ನಡತಿಯ ಧಾರವಾಹಿಯಲ್ಲಿ ನಟ ಕಿರಣ್ ರಾಜ್ ಹರ್ಷ ಆಗಿ ಕಾಣಿಸಿಕೊಂಡಿದ್ದರೆ, ಭುವಿ ಪಾತ್ರದಲ್ಲಿ ರಂಜನಿ ರಾಘವನ್ ನಟಿಸುತ್ತಿದ್ದಾರೆ. ತೆರೆಮೇಲೆ ಇವರಿಬ್ಬರ ಕೆಮೇಸ್ಟ್ರಿ ಚನ್ನಾಗಿದ್ದು, ಸೀರಿಯಲ್ ಸಹ ಉತ್ತಮ ಜನಮನ್ನಣೆ ಪಡೆದುಕೊಳ್ಳುತ್ತಿದೆ. ಇದರ ನಡುವೆ ಅನೇಕ ಅಭಿಮಾನಿಗಳು ನಿಜ ಜೀವನದಲ್ಲಿಯೂ ಕಿರಣ್ ಹಾಗೂ ರಂಜನಿ ಅವರು ವಿವಾಹವಾಗಬೇಕು ಎಂದು ಬಯಸುತ್ತಿದ್ದಾರೆ. ಜೊತೆಗೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡಿದ್ದಾರೆ. ಆದರೆ ಕೆಲವರು ಈ ವಿಚಾರದಲ್ಲಿ ಅನೇಕ ರೀತಿಯ ಸುಳ್ಳು ಸುದ್ದಿಗಳನ್ನೂ ಹಬ್ಬಿಸುತ್ತಿದ್ದಾರೆ. ಈ ವಿಚಾರವಾಗಿಯೇ ಇದೀಗ ಇಬ್ಬರೂ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ರಣ್ ರಾಜ್ ಹಾಗೂ ರಂಜನಿ ರಾಘವನ್ ಮಾಡುತ್ತಿರುವುದು ತೆರೆಯ ಮೇಲೆ ಕೇಔಲ ಪಾತ್ರವಾಗಿದೆ. ಆದರೆ ಈ ಜೋಡಿ ನಿಜ ಜೀವನದಲ್ಲಿಯೂ ಒಂದಾಗಬೇಕು ಎಂದು ಹಲವರು ಬಯಸಿದರೆ, ಇನ್ನೂ ಕೆಲವರು ಇದರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುಯದಕ್ಕೆ ನಟ ಕಿರಣ್ ರಾಜ್ ಅಸಮಾಧಾನಗೊಂಡಿದ್ದಾರೆ. ಈ ರೀತಿ ಮಾಡದಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
Published by:Kavya V
First published: