Evening Digest: ಕಲಬುರಗಿಯಲ್ಲಿ ಹಾಲು ಕುಡಿದ ಕಲ್ಲಿನ ಬಸವ: ತಂಗಿಯನ್ನೇ Love ಮಾಡಿದನಾ ಈ ಅಣ್ಣ? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕಲಬುರಗಿಯಲ್ಲಿ ಹಾಲು ಕುಡಿದ ಕಲ್ಲಿನ ಬಸವ: ನಮ್ಮ ಪ್ರಪಂಚದಲ್ಲಿ ಹಲವು ವಿಸ್ಮಯಗಳು ನಡೀತಾನೆ ಇರುತ್ತೆ. ಕೆಲವು ವಿಸ್ಮಯಗಳು ಜನರಲ್ಲಿ ಭಕ್ತಿ ಹೆಚ್ಚಿಸುತ್ತೆ. ಬಾಬಾ ಕಣ್ಣು ಬಿಟ್ಟಿದ್ದು, ಕಲ್ಲಿನ ದೇವಿ ಕಣ್ಣಲ್ಲಿ ರಕ್ತ ಹೀಗೆ ಹಲವು ದೈವಿ ಪವಾಡಗಳು ಜನರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ. ಇದೀಗ ಕಲಬುರ್ಗಿಯಲ್ಲಿ ಕಲ್ಲಿನ ಬಸವ ಮೂರ್ತಿ (Nandi Statue) ಹಾಲು ಕುಡಿದ ಪವಾಡವೊಂದು ನಡೆದಿದೆ. ಕಲ್ಲಿನ ಬಸವ ಹಾಲು ಕುಡಿದ (Drink Milk,) ದೃಶ್ಯವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಈ ಪವಾಡ ನಡೆದಿರೋದು ಕಲಬುರ್ಗಿಯ (Kalaburagi) ಬ್ಯಾಂಕ್ ಕಾಲೋನಿಯ ಈಶ್ವರ ದೇವಾಸ್ಥಾನದಲ್ಲಿ. ಇದೀಗ ದೇವಸ್ಥಾನಕ್ಕೆ (Temple) ಜನ ಮರಳೋ ಜಾತ್ರೆ ಮರಳೋ ಎಂಬಂತೆ ಜನ ಸಾಗರವೇ ಹರಿದು ಬರ್ತಿದೆ. ಕಲ್ಲಿನ ಬಸವ ಹಾಲು ಕುಡಿಯುತ್ತಿದೆ ಎಂದು ತಿಳಿಯುತ್ತಿದ್ದಂತೆ ಜನರು ನಾವು ಕಣ್ಣಾರೆ ನೋಡಿ ಹಾಲು ಕುಡಿಸೋದಾಗಿ ದೇವಾಲಯಕ್ಕೆ ಬರ್ತಿದ್ದಾರೆ.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ: Kalaburagi: ಹಾಲು ಕುಡಿದ ಕಲ್ಲಿನ ಬಸವ, ನಂದಿ ವಿಗ್ರಹದ ಪವಾಡ ನೋಡಲು ಹರಿದು ಬರ್ತಿದೆ ಜನ ಸಾಗರ

ತಂಗಿಯನ್ನೇ Love ಮಾಡಿದನಾ ಈ ಅಣ್ಣ?
ಅಣ್ಣ (Brother) ತಂಗಿ (Sister) ಅಂದರೆ ಅದೊಂತರಾ ಮಧುರ ಬಾಂಧವ್ಯ. ಅಣ್ಣನ ಒಳಿತಿಗಾಗಿ ಎಂತಾ ತ್ಯಾಗಕ್ಕೂ (Sacrifice) ತಂಗಿ ಸಿದ್ಧಳಾಗ್ತಾಳೆ. ತಂಗಿಯ ರಕ್ಷಣೆಗಾಗಿ (Protection) ಅಣ್ಣ ಎಂತದ್ದೇ ರಿಸ್ಕ್ (Risk) ತೆಗೆದುಕೊಳ್ಳಲು ರೆಡಿ (Ready) ಇರ್ತಾನೆ. ಆದರೆ ಇಲ್ಲಿ ಅಣ್ಣನೊಬ್ಬ ತಂಗಿ ವಿಚಾರಕ್ಕೆ ಜೀವಕ್ಕೆ ರಿಸ್ಕ್ ತಂದು ಕೊಂಡಿದ್ದಾನೆ. ಅದು ತಂಗಿಯನ್ನೇ ಪ್ರೀತಿಸಿದ (Love) ಕಾರಣಕ್ಕೆ. ಹೌದು ಇದು ಆಘಾತಕಾರಿ ವಿಚಾರ ಆಗಿದ್ದರೂ ನಿಜವಾಗಿ ನಡೆದಿರುವಂತದ್ದು. ಇಲ್ಲಿ ಅಣ್ಣನೆ ತನ್ನ ತಂಗಿಯನ್ನು ಪ್ರೀತಿಸಿದ್ದಾನೆ. ಬಳಿಕ ಮದುವೆವರೆಗೂ (Marriage) ಅವರ ಸಂಬಂಧ (Relationship) ಹೋಗಿದೆ. ಆಗ ಮನೆಯವರಿಗೆಲ್ಲ (Family) ಗೊತ್ತಾಗಿ ಬುದ್ಧಿ ಹೇಳಿದ್ದಾರೆ. ಆದರೆ ಆ ಅಣ್ಣ ತಂಗಿ ಯಾರ ಮಾತನ್ನೂ ಕೇಳಿಲ್ಲ. ಕೊನೆಗೆ ಅವರಿಬ್ಬರ ಹಠ, ಮನೆಯವರ ವಿರೋಧದಿಂದ ನಡೆಯಬಾರದ್ದು ನಡೆದು ಹೋಗೇ ಬಿಟ್ಟಿದೆ.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ:Murder: ತಂಗಿಯನ್ನೇ Love ಮಾಡಿದನಾ ಈ ಅಣ್ಣ? ಪ್ರೀತಿ ವಿಷಯ ಗೊತ್ತಾಗಿ ಮನೆಯವರು ಮಾಡಿದ್ದೇನು?

ಕರ್ನಾಟಕದ BSF ಸೈನಿಕನಿಂದ 4 ಸಹೋದ್ಯೋಗಿಗಳಿಗೆ ಗುಂಡು
ಪಂಜಾಬ್ನ ಅಮೃತಸರ ಜಿಲ್ಲೆಯ ಖಾಸಾದಲ್ಲಿರುವ ಬಿಎಸ್ಎಫ್ ಪಡೆಯ ಪ್ರಧಾನ ಕಚೇರಿಯೊಳಗೆ ಇಂದು (ಭಾನುವಾರ ಫೆಬ್ರುವರಿ 6) ಬೆಳಗ್ಗೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್- BSF) ಸೈನಿಕನೋರ್ವ ತನ್ನ ಕರ್ತವ್ಯದ ಗನ್ನಿಂದ ನಾಲ್ವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಆನಂತರ ತನ್ನ ಮೇಲೂ ಗುಂಡು ಹಾರಿಸಿಕೊಂಡಿದ್ದಾರೆ. ಬಿಎಸ್ಎಫ್ ಸೈನಿಕ (BSF Jawan Fires) ಹಾರಿಸಿದ ಗುಂಡಿನಿಂದ ಆತನ ನಾಲ್ವರು ಸಹೋದ್ಯೋಗಿಗಳು ಮೃತಪಟ್ಟಿದ್ದು ಗುಂಡು ಹಾರಿಸಿದ ಸೈನಿಕ ಸಹ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಅಮೃತಸರ (Amritsar) ಗ್ರಾಮಾಂತರ ಪೊಲೀಸ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ದೀಪಕ್ ಹಿಲೋರಿ ಅವರು ಗುಂಡು ಹಾರಿಸಿದ ಸೈನಿಕ ಸೇರಿದಂತೆ ಐವರ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

ನಾಳೆಯಿಂದ 3 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ
ರಾಜ್ಯದಲ್ಲಿ ಇಷ್ಟುದಿನ ಚಳಿ ವಾತಾವರಣವಿತ್ತು. ಆದ್ರೆ ಮಾರ್ಚ್ (March) ತಿಂಗಳ ಆರಂಭದಲ್ಲೇ ಬಿಸಿಲು ಜೋರಾಗಿದ್ದು, ಒಣ ಹವೆ ಶುರುವಾಗಿದೆ. ಆದ್ರೆ ರಾಜ್ಯದ ಹಲವು ಕಡೆ ಮಾರ್ಚ್ 7ರ ಬಳಿಕ ಗುಡುಗ ಸಹಿತ ಭಾರೀ ಮಳೆಯಾಗೋ (Rain) ಸಾಧ್ಯತೆ ಇದೆ. ಬಂಗಾಳ ಕೊಲ್ಲಿ (Bangala kolli) ಭಾಗದಲ್ಲಿ ವಾಯುಭಾರ ಕುಸಿತದ ವಾತಾವರಣ ಉಂಟಾಗಿದೆ. ಇದರಿಂದ ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಎರಡು ದಿನ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿಯೂ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಮಾರ್ಚ್ 7ರಂದು ದಕ್ಷಿಣ ಒಳನಾಡಿನ ಕೋಲಾರ (Kolara), ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಾಗೂ ಪಶ್ಚಿಮ ಘಟ್ಟದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸುರಿಯುವ ನಿರೀಕ್ಷೆ ಇದೆ. ಮಾರ್ಚ್ 9ರವರೆಗೂ ಪಶ್ಚಿಮ ಘಟ್ಟ ಭಾಗಗಳಲ್ಲಿ ಮಳೆಯಾಗಲಿದೆ.

ಅರೆಸ್ಟ್ ಆಗ್ತಾರಾ ಸೋನಾಕ್ಷಿ ಸಿನ್ಹಾ?
ಸಲ್ಮಾನ್ ಖಾನ್(Salman Khan) ಅಭಿನಯದ ದಬಾಂಗ್(Dabang) ಸಿನಿಮಾದ ಮೂಲಕ ನಟಿ ಸೋನಾಕ್ಷಿ ಸಿನ್ಹಾ( ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದರು. ಈ ಸಿನಿಮಾ ಸೀಕ್ವೆಲ್ಗಳಲ್ಲಿ ಸೋನಾಕ್ಷಿ ಸಿನ್ಹಾ(Sonakshi Sinha) ಕಾಣಿಸಿಕೊಂಡಿದ್ದಾರೆ. ಹಲವಾರು ಸಿನಿಮಾ ಮಾಡಿದರೂ ಸೋನಾಕ್ಷಿ ಸಿನ್ಹಾಗೆ ಸ್ಟಾರ್(Star) ಪಟ್ಟ ಗಳಿಸಿಲು ಸಾಧ್ಯವಾಗಿಲ್ಲ. ಆದರೂ ಸದ್ಯಕ್ಕೆ ಬಾಲಿವುಡ್(Bollywood) ನಟಿ ಸೋನಾಕ್ಷಿ ಸಿನ್ಹಾ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಐಟಂ ಸಾಂಗ್(Item Song) ಸೇರಿದಂತೆ ಸಾಕಷ್ಟು ಬಾಲಿವುಡ್ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಇದೀಗ ಅವರಿಗೆ ಸಂಕಷ್ಟ ಎದುರಾಗಿದೆ. ಅರೆಸ್ಟ್(Arrest) ಆಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ. ಅಷ್ಟಕ್ಕೂ ನಟಿ ಸೋನಾಕ್ಷಿ ಸಿನ್ಹಾ ಜಾಮೀನು ರಹಿತ ವಾರೆಂಟ್(Non-Bailable Warrant) ಜಾರಿಯಾಗುವಂತದ್ಧು ಏನು ಮಾಡಿದ್ದಾರೆ ಗೊತ್ತಾ?ವಂಚನೆ ಪ್ರಕರಣದಡಿಯಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ ಮಾಡಲಾಗಿದೆ. ನಟಿ ಸೋನಾಕ್ಷಿ ಸಿನ್ಹಾಗೆ ಬಂಧನದ ಭೀತಿ ಎದುರಾಗಿದೆ.
Published by:Kavya V
First published: