Evening Digest: ಹಿಜಾಬ್ ತೆಗೆದರೆ ಥಳಿಸಲಾಗುವುದು ಎಂದು ಬೆದರಿಕೆ: ರಾಹುಲ್ ಗಾಂಧಿ ಜೊತೆ ಇದ್ದ ಯುವತಿ ಯಾರು? ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಹಿಜಾಬ್​​ ತೆಗೆದರೆ ಥಳಿಸಲಾಗುವುದು ಎಂದು ಬೆದರಿಕೆ: ರಾಜ್ಯದಲ್ಲಿ ತಲೆ ಎತ್ತಿದ ಹಿಜಾಬ್​​ ವಿವಾದ ವಿಶ್ವ ಮಟ್ಟದಲ್ಲಿ ಸುದ್ದಿಯಾಗಿದ್ದು, ನಮಗೆಲ್ಲಾ ತಿಳಿದೇ ಇದೆ. ಈಗ ಮಂಗಳೂರಿನಲ್ಲಿ ಹೊಸ ವಿವಾದವೊಂದು ಸದ್ದು ಮಾಡುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ, ಹಿಜಾಬ್​​ ತೆಗೆಯುವ ಮುಸ್ಲಿಂ ಯುವತಿಯರಿಗೆ ಬೆದರಿಕೆ ಹಾಕಲಾಗಿದೆ. ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನ ವಾಟ್ಸಾಪ್ ಗ್ರೂಪ್‌ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಖಾ ಮತ್ತು ಹಿಜಾಬ್ ತೆಗೆದಿರುವ ಮುಸ್ಲಿಂ ಹುಡುಗಿಯರ ವಿರುದ್ಧ ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಲಾಗಿದೆ. ಕನ್ನಡದಲ್ಲಿ ಮೆಸೇಜ್​ ಮಾಡಲಾಗಿದೆ. ಮಾಲ್ ನೆಲಮಾಳಿಗೆಯಲ್ಲಿ ಅನೇಕರು ಬುರ್ಖಾ ಧರಿಸಿ ಅನುಚಿತವಾಗಿ ವರ್ತಿಸುವುದನ್ನು ನೋಡಿದ್ದೇವೆ. ನಮ್ಮ ಕಾರ್ಯಕರ್ತರು ಈಗಾಗಲೇ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಇದನ್ನು ಮತ್ತೆ ನೋಡಿದರೆ, ನಿಮ್ಮ ಮೇಲೆ ಹಲ್ಲೆ ಮಾಡಬೇಕಾಗುತ್ತೆ ಎಂದು ಬೆದರಿಸಲಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: WhatsApp Group Warns: ಹಿಜಾಬ್, ಬುರ್ಕಾ ತೆಗೆದರೆ ಥಳಿಸಲಾಗುವುದು: ಮಂಗಳೂರಿನ ವಾಟ್ಸಾಪ್ ಗ್ರೂಪ್​​ನಲ್ಲಿ ಬೆದರಿಕೆ

ರಾಹುಲ್ ಗಾಂಧಿ ಜೊತೆ ಇದ್ದ ಯುವತಿ ಯಾರು?

ಕಳೆದ 2-3 ದಿನಗಳಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ನೇಪಾಳ ಭೇಟಿ ( Nepal visit) ವಿಷಯವೇ ಸಾಮಾಜಿಕ ಮಾಧ್ಯಮಗಳಲ್ಲೆಲ್ಲ ಬಿಸಿಬಿಸಿಯಾಗಿ ಚರ್ಚೆಯಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಮಧ್ಯೆ ಭಾರತೀಯ ಜನತಾ ಪಕ್ಷವು ರಾಹುಲ್ ಗಾಂಧಿ ಅವರ ಈ ಭೇಟಿ ಬಗ್ಗೆ ತನ್ನ ಅಪಸ್ವರ ಎತ್ತಿದ್ದರೆ ಅದೇ ಕಾಂಗ್ರೆಸ್ (Congress) ಪಕ್ಷವು ತಮ್ಮ ನಾಯಕನ ಭೇಟಿಯನ್ನು ಸಮರ್ಥಿಸಿಕೊಂಡಿತ್ತು. ಅಸಲಿಗೆ, ಈ ವಿಷಯಕ್ಕೆ ಸಂಬಂಧಿಸಿದಂತೆ ವಿಡಿಯೋ ಒಂದು ವೈರಲ್ ಆಗಿರುವುದೇ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ವೈರಲ್ ಆಗಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ನೈಟ್ ಕ್ಲಬ್ (Nightclub) ಒಂದರಲ್ಲಿ ಕುಳಿತು ಪಾರ್ಟಿಯಲ್ಲಿ ಭಾಗಿಯಾಗಿದ್ದನ್ನು ಕಾಣಬಹುದಾಗಿದೆ. ಈ ವಿಡಿಯೋದಲ್ಲಿ ಅವರ ಜೊತೆ ಕಂಡುಬಂದಿದ್ದ ಮಹಿಳೆಯೋರ್ವರ ಬಗ್ಗೆಯೂ ಹಲವು ಅನುಮಾನಗಳೆದ್ದಿದ್ದವು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Rahul Gandhi: ನೈಟ್​​ಕ್ಲಬ್​​ನಲ್ಲಿ ರಾಹುಲ್ ಗಾಂಧಿ ಜೊತೆ ಇದ್ದ ಯುವತಿ ಯಾರು? ಆಕೆಯ ಹಿನ್ನೆಲೆ ಇಲ್ಲಿದೆ

ಜಿಗ್ನೇಶ್​ ಮೇವಾನಿಗೆ ಮೂರು ತಿಂಗಳ ಜೈಲು ಶಿಕ್ಷೆ

ಕಳೆದೆರಡು ದಿನಗಳ ಹಿಂದಷ್ಟೇ ಮಹಿಳಾ ಪೊಲೀಸ್​ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಗುಜರಾತ್​​ನ ವಡ್ಗಾಮ್ ​ಶಾಸಕ ಜಿಗ್ನೇಶ್​ ಮೇವಾನಿ (Jignesh Mevani) ಜೈಲಿನಿಂದ ಜಾಮೀನು ಪಡೆದು ಹೊರ ಬಂದಿದ್ದರು. ಈ ನಡುವೆ ಇದೀಗ ಮತ್ತೊಂದು ಪ್ರಕರಣದಲ್ಲಿ ನ್ಯಾಯಾಲಯ ಅವರಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಐದು ವರ್ಷಗಳ ಹಿಂದೆ ಅನುಮತಿಯಿಲ್ಲದೆ 'ಆಜಾದಿ ಮೆರವಣಿಗೆ' ನಡೆಸಿದ ಆರೋಪದ ಮೇಲೆ ಅವರಿಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗುರುವಾರ ದೋಷಿ ಎಂದು ಘೋಷಿಸಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಶಾಸಕರ ಜೊತೆಗೆ ಇತರೆ ಒಂಬತ್ತು ಮಂದಿಗೂ ಕೂಡ ಶಿಕ್ಷೆ ಪ್ರಕಟಿಸಲಾಗಿದೆ. ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಜೆಎ ಪರ್ಮಾರ್ ಅವರು ಜಿಗ್ನೇಶ್ ಮೇವಾನಿ ಮತ್ತು ಎನ್‌ಸಿಪಿ ಕಾರ್ಯಾಧ್ಯಕ್ಷೆ ರೇಷ್ಮಾ ಪಟೇಲ್ ಹಾಗೂ ಮೇವಾನಿಯ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್‌ನ ಕೆಲವು ಸದಸ್ಯರು ಸೇರಿದಂತೆ ಒಂಬತ್ತು ಮಂದಿಯನ್ನು ಕಾನೂನುಬಾಹಿರ ಸಭೆಯ ಭಾಗವಹಿಸಿದ್ದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143 ರ ಅಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದ್ದು, ಎಲ್ಲಾ ಅಪರಾಧಿಗಳಿಗೆ ತಲಾ 1000 ದಂಡ ವಿಧಿಸಿದೆ

ಗೌರವ್ ಗುಪ್ತಾ ವರ್ಗಾವಣೆ; BBMP ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ನೇಮಕ

ಬಿಬಿಎಂಪಿಯಲ್ಲಿ 40 ಪರ್ಸೆಂಟ್​ ಕಮಿಷನ್​ ದಂಧೆ ವಿಚಾರ ಭಾರೀ ಸುದ್ದಿಯಾಗಿತ್ತು ಇದರ ಬೆನ್ನಲ್ಲೇ ರಾಜ್ಯದಲ್ಲಿ ಪಿಎಸ್​ಐ ನೇಮಕಾತಿ ಹಗರಣದ ವಿಚಾರ ಕೂಡ ಭಾರೀ ಸದ್ದು ಮಾಡಿತ್ತು. ಈ ಮಧ್ಯೆ ಸರ್ಕಾರ 16 ಐಎಎಸ್​ ಅಧಿಕಾರಿಗಳ ವರ್ಗಾವಣೆ (Transfer) ಮಾಡಿ ಆದೇಶ ಹೊರಡಿಸಿದೆ.  ಬಿಬಿಎಂಪಿ (BBMP) ಮುಖ್ಯ ಆಯುಕ್ತ ಗೌರವ ಗುಪ್ತ (Gaurav Gupta) ಅವರನ್ನ ವರ್ಗಾವಣೆ ಮಾಡಲಾಗಿದ್ದು, ಓರ್ವ ಐಎಎಸ್ ಅಧಿಕಾರಿಗೆ (IAS Officer) ಹೆಚ್ಚುವರಿ ಹೊಣೆಗಾರಿಕೆಗೆ ನೀಡಿದೆ. ದೆಹಲಿ ಕರ್ನಾಟಕ ಭವನದ ಉಪಸ್ಥಾನೀಯ ಆಯುಕ್ತರಾಗಿ ಖುಷ್ಬೂ ಚೌಧರಿ ನೇಮಕಗೊಂಡಿದ್ದಾರೆ.

'ವಿಕ್ರಾಂತ್​ ರೋಣ' ವಿರುದ್ಧ ತೊಡೆತಟ್ಟಿದ ಅಜಯ್​ ದೇವಗನ್​

ಹಲವು ತಿಂಗಳ ಹಿಂದಿಯೇ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ರಿಲೀಸ್ ಡೇಟ್ ಬಹಿರಂಗವಾಗಿತ್ತು. ಜುಲೈ 28 ರಂದು ಈ ಸಿನಿಮಾವನ್ನು 3ಡಿಯಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದರು. ಕಿಚ್ಚ ಸುದೀಪ್​ ಅವರ ವಿಕ್ರಾಂತ್​ ರೋಣ ಅವತಾರ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. 10ಕ್ಕೂ ಹೆಚ್ಚು ಭಾಷೆಯಲ್ಲಿ ವಿಕ್ರಾಂತ್​ ರೋಣ ಸಿನಿಮಾ ರಿಲೀಸ್ ಆಗಲಿದೆ. ಈಗ ಅದೇ ತಿಂಗಳು, ಅದೇ ವಾರದಲ್ಲೇ ಅಜಯ್ ದೇವಗನ್ ನಟನೆಯ ಥ್ಯಾಂಕ್ ಗಾಡ್ ಚಿತ್ರವೂ ಕೂಡ ರಿಲೀಸ್ ಆಗುತ್ತಿದೆ. ಜುಲೈ 29 ರಂದು ಥ್ಯಾಂಕ್ ಗಾಡ್ ಸಿನಿಮಾ ರಿಲೀಸ್ ಮಾಡುವುದಾಗಿ ನಿರ್ಮಾಪಕರು ಘೋಷಿಸಿದ್ದಾರೆ.
Published by:Kavya V
First published: