ಭಾರತವನ್ನು ಹೊಗಳಿ, ಪಾಕ್ಗೆ ಉಗಿದ ತಾಲಿಬಾನಿಗಳು : ಸದಾ ಭಾರತದ (India) ವಿರುದ್ಧ ಕತ್ತಿ ಮಸೆಯುವ ಪಾಕಿಸ್ತಾನ (Pakistan) ಅಕ್ಕಪಕ್ಕದ ಯಾವ ದೇಶಗಳೊಂದಿಗೂ ಉತ್ತಮ ಸಂಬಂಧ ಹೊಂದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಚೀನಾ (China) ಬಿಟ್ಟರೆ ಬೇರೆ ಎಲ್ಲಾ ದೇಶಗಳೊಂದಿಗೆ ಪಾಕ್ ಸಂಬಂಧ (Relationship) ಅಷ್ಟಕ್ಕಷ್ಟೇ. ಪಕ್ಕದಲ್ಲೇ ಇರುವ ಅಫ್ಘಾನಿಸ್ತಾನವನ್ನು (Afghanistan) ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅಂತ ಪಾಕಿಸ್ತಾನ ಪ್ರಯತ್ನ ಪಡುತ್ತಲೇ ಇದೆ. ಇದೇ ವೇಳೆ ಖುದ್ದು ತಾಲಿಬಾನ್ (Taliban) ನಾಯಕರೇ (Leaders) ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಇದೇ ಸಂದರ್ಭದಲ್ಲಿ ಭಾರತದ ಪರ ಮಾತನಾಡಿದ್ದು, ಭಾರತವನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಅಪ್ಘಾನಿಸ್ತಾನದಲ್ಲಿ ಆಡಳಿತ ನಡುಸುತ್ತಿರುವ ತಾಲಿಬಾನ್ ನಾಯಕರು ಪಾಕಿಸ್ತಾನದ ವಿರುದ್ಧ ಗುಡುಗಿದ್ದಾರೆ. ಭಾರತ ಹಾಗೂ ಪಾಕಿಸ್ತಾನವನ್ನು ಹೋಲಿಕೆ ಮಾಡಿ, ಪಾಕಿಸ್ತಾನಕ್ಕೆ ಮಹಾ ಮಂಗಳಾರತಿ ಮಾಡಿದ್ದಾರೆ.
ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Taliban: ಭಾರತವನ್ನು ಹೊಗಳಿ, ಪಾಕ್ಗೆ ಉಗಿದು ಉಪ್ಪಿನಕಾಯಿ ಹಾಕಿದ ತಾಲಿಬಾನ್ ನಾಯಕರು! ಅಸಲಿಗೆ ಅಲ್ಲಿ ಆಗಿದ್ದೇನು?
ನವೀನ್ ಕುಟುಂಬಕ್ಕೆ ಸರ್ಕಾರದಿಂದ ₹25 ಲಕ್ಷ
ರಷ್ಯಾ (Russia) ಹಾಗೂ ಉಕ್ರೇನ್ (Ukrain) ನಡುವೆ ನಡೆಯುತ್ತಿರೋ ಯುದ್ಧದ ವೇಳೆ ಉಕ್ರೇನ್ನಲ್ಲಿ ಸಾವನ್ನಪ್ಪಿದ MBBS ವಿದ್ಯಾರ್ಥಿ ನವೀನ್ (Naveen) ಮನೆಗೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai)ಭೇಟಿ ನೀಡಿದ್ದಾರೆ. ಹಾವೇರಿ (Haveri) ಜಿಲ್ಲೆ ಚಳಗೇರುಗೆಯಲ್ಲಿರೋ ನವೀನ್ ಪೋಷಕರನ್ನು ಭೇಟಿಯಾದ ಸಿಎಂ ಬೊಮ್ಮಾಯಿ ಅವರಿಗೆ ಸಾಂತ್ವನ ಹೇಳಿದ್ರು. ಇದೇ ವೇಳೆ ಮೃತ ನವೀನ್ ಭಾವಚಿತ್ರಕ್ಕೆ ಪುಪ್ಪಾರ್ಪಣೆ ಮಾಡಿದ್ರು. ಇದೇ ವೇಳೆ ಸರ್ಕಾರದಿಂದ ಪರಿಹಾರ ಘೋಷಿಸಿದ್ದಾರೆ. ನವೀನ್ ತಂದೆ ಗ್ಯಾನಗೌಡರ್ಗೆ 25 ಲಕ್ಷದ ಪರಿಹಾರದ ಚೆಕ್ ನೀಡಿದ್ದಾರೆ. ಮಗ ನವೀನ್ನನ್ನು ಕಳೆದುಕೊಂಡ ಪೋಷಕರು ಸಿಎಂ ಬಳಿ ತಮ್ಮ ಮಗನ ಶವವನ್ನು ತರಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಸಚಿವ ಬಿ.ಸಿ.ಪಾಟೀಲ, ಸಂಸದ ಶಿವಕುಮಾರ್ ಉದಾಸಿ, ಮಾಜಿ ಸಂಸದ ಐ.ಜಿ.ಸನದಿ ಮತ್ತಿತರರ ಉಪಸ್ಥಿತರಿದ್ರು.
ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ರಾ ರಷ್ಯಾ ಸೈನಿಕರು?
ಉಕ್ರೇನ್ ನಲ್ಲಿ ಇರುವಂತಹ ಮಹಿಳೆಯರ ಮೇಲೆ ರಷ್ಯಾದ ಸೇನಾ ಸಿಬ್ಬಂದಿಗಳು ಅತ್ಯಾಚಾರ ಮಾಡಿದ್ದಾರೆ ಎಂದು ವಿದೇಶಾಂಗ ಸಚಿವ ಡಿಮಿಟ್ರೊ ಕುಲೆಬಾ ಅವರು ಶುಕ್ರವಾರ ಆರೋಪಿಸಿದ್ದಾರೆ. ಈ ಅಪರಾಧಗಳು ಶಿಕ್ಷೆಯನ್ನು ಅನುಭವಿಸದೆ ಇರದು ಎಂದು ಸಹ ಇವರು ಹೇಳಿದರು. ಉಕ್ರೇನ್ ನಲ್ಲಿ ಮಾಸ್ಕೋದ ಆಕ್ರಮಣದ ಬಗ್ಗೆ ನ್ಯಾಯ ತೀರ್ಮಾನ ಮಾಡಲು ವಿಶೇಷ ನ್ಯಾಯಾಧಿಕರಣವನ್ನು ರಚಿಸಬೇಕೆಂದು ಉಕ್ರೇನ್ ನ ವಿದೇಶಾಂಗ ಸಚಿವರಾದ ಕುಲೆಬಾ ಅವರು ಕರೆ ನೀಡಿದರು. ಲಂಡನ್ನಿನಲ್ಲಿ ನಡೆದ ಸಂಕ್ಷಿಪ್ತ ವಿವರಣೆಯ ಸಂದರ್ಭದಲ್ಲಿ ಅವರು "ದುರದೃಷ್ಟವಶಾತ್, ರಷ್ಯಾದ ಸೈನಿಕರು ಉಕ್ರೇನ್ ನಗರಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ ಹಲವಾರು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ" ಎಂದು ಆರೋಪಿಸಿದರು.
ಮದುವೆಯಲ್ಲಿ ಊಟ ಮಾಡಿದ 1,200 ಮಂದಿ ಪಾಡು ಯಾರಿಗೂ ಬೇಡ!
ಗುಜರಾತ್ನ ಮೆಹ್ಸಾನಾ ಜಿಲ್ಲೆಯಲ್ಲಿ (Mehsana district of Gujarat) ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ (Congress leader) ಪುತ್ರನ ಮದುವೆಯಲ್ಲಿ (Wedding) ಆಹಾರ (Food) ಸೇವಿಸಿದ 1,200 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಸ್ನಗರ ತಾಲೂಕಿನ ಸವಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ವಿಸ್ನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ. ಮದುವೆಯಲ್ಲಿ ಆಹಾರ ಸೇವಿಸಿದ ನಂತರ 1,200 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು, ಅವರನ್ನು ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥರಾಜ್ಸಿನ್ಹ್ ಗೋಹಿಲ್ ಹೇಳಿದ್ದಾರೆ. ಮದುವೆಯಲ್ಲಿ ಊಟ ಮಾಡಿದೊಡನೆ ಅತಿಥಿಗಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ವಿಸ್ನಗರ, ಮೆಹ್ಸಾನಾ ಮತ್ತು ವಡ್ನಗರದ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಮತ್ತೆ ಒಂದಾಗ್ತಿದ್ದಾರೆ ಪ್ರಭಾಸ್-ರಾಜಮೌಳಿ!
ಪ್ರಭಾಸ್ ಹಾಗೂ ನಿರ್ದೇಶಕ ರಾಜಮೌಳಿ ಕಾಂಬಿನೇಷನ್ನಲ್ಲಿ ಸಿನಿಮಾ ಬರುತ್ತಾ ಅಂತ ಅಭಿಮಾನಿಗಳು ಕಾದು ಕೂತಿದ್ದರು. ಇದೀಗ ಅದಕ್ಕೆಲ್ಲಾ ಉತ್ತರ ಸಿಕ್ಕಿದೆ. ಡಾರ್ಲಿಂಗ್ ಪ್ರಭಾಸ್ ಹಾಗೂ ರಾಜಮೌಳಿ ಮತ್ತೊಂದು ಸಿನಿಮಾ ಮಾಡಲಿದ್ದಾರೆ. ಪ್ರಭಾಸ್ ಸದ್ಯಕ್ಕೆ ತಮ್ಮ ಹೊಸ ಸಿನಿಮಾ 'ರಾಧೆ-ಶ್ಯಾಮ್' ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಮಾರ್ಚ್ 11 ರಂದು ರಾಧೆ ಶ್ಯಾಮ್ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯದಲ್ಲಿ ಪ್ರಭಾಸ್ ಪ್ರಸ್ತುತ ನಿರತರಾಗಿದ್ದಾರೆ. ರಾಧೆ-ಶ್ಯಾಮ್ ಸಿನಿಮಾದ ಪ್ರಚಾರದ ವೇಳೆ ಪ್ರಭಾಸ್ ಅವರಿಗೆ ಪ್ರಶ್ನೆಯೊಂದನ್ನು ಕೇಳಲಾಯ್ತು. ನೀವು ಮತ್ತೆ ರಾಜಮೌಳಿ ಕಾಂಬಿನೇಷನ್ ಒಂದಾಗುತ್ತಾ? ಮತ್ತೆ ಅವರ ಜೊತೆ ಯಾವಾಗ ಸಿನಿಮಾ ಮಾಡುತ್ತೀರಾ ಅಂತ ಪ್ರಭಾಸ್ಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಪ್ರಭಾಸ್ ನಾನು ರಾಜಮೌಳಿ ಅವರ ಜೊತೆ ಕೆಲಸ ಮಾಡಲು ಇಷ್ಟ ಪಡುತ್ತೇನೆ. ಶೀಘ್ರದಲ್ಲೇ ರಾಜಮೌಳಿ ಜೊತೆ ಕೆಲಸ ಮಾಡುತ್ತೇನೆ ಎಂದು ಪ್ರಭಾಸ್ ಹೇಳಿದ್ದಾರೆ. ಈ ವಿಷಯ ತಿಳಿದ ಪ್ರಭಾಸ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ