Evening Digest: ರಾಜ್ಯದ ಬಾರ್ & ರೆಸ್ಟೋರೆಂಟ್​​ಗಳಲ್ಲಿ ಮದ್ಯ ಖಾಲಿ: ಭಯಾನಕ ಭವಿಷ್ಯ ನುಡಿದ ಕೋಡಿಶ್ರೀ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಜ್ಯದ ಬಾರ್ & ರೆಸ್ಟೋರೆಂಟ್ಗಳಲ್ಲಿ ಮದ್ಯಪಾನ ಖಾಲಿ : ನೂತನ ಸಾಫ್ಟ್ವೇರ್ (Software) ಅಪ್ ಡೇಟ್ ಆಗಿರುವ ಹಿನ್ನೆಲೆ ಬಿಲ್ ಮಾಡಲು ಆಗದೆ ಮದ್ಯ ಪೂರೈಕೆ ಆಗುತ್ತಿಲ್ಲ KSBCLನಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಬಾರ್ ಗ ಳಿಗೆ ಮದ್ಯ (Liquor) ಪೂರೈಕೆಯಾಗುತ್ತಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆಯಿಂದ ರಾಜ್ಯದ ಎಣ್ಣೆ ಅಂಗಡಿಗಳಲ್ಲಿ ಸ್ಟಾಕ್ ಖಾಲಿಯಾಗಿದೆ. ಮದ್ಯಪಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ ರಾಜ್ಯದ ಬಾರ್ ಹಾಗೂ ರೆಸ್ಟೋರೆಂಟ್ಗಳಲ್ಲಿ ಖಾಲಿಯಾಗಿವೆ ಮದ್ಯಪಾನ. ರಾಜ್ಯದ ಬಹುತೇಕ ಅಂಗಡಿಗೆ ಮದ್ಯ ಪೂರೈಕೆ ಆಗ್ತಿಲ್ಲ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Liquor Empty: ರಾಜ್ಯದ ಬಾರ್ & ರೆಸ್ಟೋರೆಂಟ್​ಗಳಲ್ಲಿ ಮದ್ಯಪಾನ ಖಾಲಿ! ಇಂದು ಸಂಜೆಯಿಂದಲೇ ಎಲ್ಲೂ ಸಿಗಲ್ಲ ಎಣ್ಣೆ

ಭಯಾನಕ ಭವಿಷ್ಯ ನುಡಿದ ಕೋಡಿಶ್ರೀಗಳು
ಯುಗಾದಿಯ ಹೊಸ ಸಂವತ್ಸರದಲ್ಲಿ ಜಗತ್ತಿನ ಆಗು ಹೋಗುಗಳ ಕುರಿತು ಕೋಡಿಮಠದ ಕೋಡಿ ಶ್ರೀಗಳು (Kodimutt seer) ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಕಳೆದೆರಡು ವರ್ಷಗಳಿಂದ ಕೋವಿಡ್ನಿಂದ ಬಳಲಿದ್ದು, ಜಗತ್ತು ಇನ್ನಷ್ಟು ತಲ್ಲಣಕ್ಕೆ ಒಳಗಾಗಲಿದೆ ಎಂದು ಅರಸೀಕೆರೆ ಹಾರನಹಳ್ಳಿಯ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ. ಯುಗಾದಿಯ ಹೊಸ ವರ್ಷದ ಸಂದರ್ಭದಲ್ಲಿ ಮುಂದಿನ ವರ್ಷ ಹೇಗೆ ಇರಲಿದೆ. ಮಳೆ- ಬೆಳೆ ಹೇಗೆ ಆಗಲಿದೆ ಎಂಬುದರ ಕುರಿತು ಹಲವಾರು ವರ್ಷಗಳಿಂದ ಕೋಡಿ ಮಠ ಭವಿಷ್ಯ ನುಡಿದಿದೆ. ಈ ಭವಿಷ್ಯವಾಣಿಗಳ ಬಗ್ಗೆ ಅನೇಕರಲ್ಲಿ ಇನ್ನಿಲ್ಲದ ನಂಬಿಕೆ ಕೂಡ ಇದೆ. ಈ ಬಾರಿ ಕೂಡ ಕೋಡಿ ಮಠ ಭವಿಷ್ಯ ನುಡಿದಿದ್ದು, ಇದು ಭವಿಷ್ಯದ ಸೂಚನೆ ತಿಳಿಸಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Kodi Mutt: ಮತೀಯ ಗಲಭೆ, ಅಶಾಂತಿ ಹೆಚ್ಚಲಿದೆ; ಜಗತ್ತು ಇನ್ನಷ್ಟು ತಲ್ಲಣಕ್ಕೆ ಒಳಗಾಗಲಿದೆ; ಭಯಾನಕ ಭವಿಷ್ಯ ನುಡಿದ ಕೋಡಿಶ್ರೀಗಳು

ನಾರಾಯಣ ಮೂರ್ತಿ ಅಳಿಯನ ವಿರುದ್ಧ ಆರೋಪಗಳ ಸುರಿಮಳೆ..!
ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ (Infosys Narayana Murthy) ಅವರ ಅಳಿಯ, ಬ್ರಿಟನ್ನ ಭಾವಿ ಪ್ರಧಾನಿ ಎಂದೇ ಗುರುತಿಸಲ್ಪಡುವ, ಯುಕೆಯ ಹಣಕಾಸು ಸಚಿವ ರಿಷಿ ಸುನಕ್ (Rishi Sunak) ಅವರು ಇನ್ಫೋಸಿಸ್ನ ರಷ್ಯಾದ ಉಪಸ್ಥಿತಿಗಾಗಿ ಟೀಕೆಗೆ ಗುರಿಯಾಗಿದ್ದಾರೆ. ರಷ್ಯಾದಲ್ಲಿನ (Russia) ವ್ಲಾಡಿಮಿರ್ ಪುಟಿನ್ ಅವರ ಆಡಳಿತದಿಂದ ಇನ್ಫೋಸಿಸ್ನ ಕುಟುಂಬವು ಲಾಭಾಂಶವನ್ನು ಸಂಗ್ರಹಿಸುತ್ತಿದೆ ಎಂದು ಬ್ರಿಟಿಷ್ ಮಾಧ್ಯಮಗಳು ಆರೋಪಿಸಿವೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಲು ಸುನಕ್ನ ಮೇಲೆ ಒತ್ತಡ ಹೇರಿದ್ದರಿಂದ ಕಂಪನಿಯ ನಿರ್ಗಮನದ ಸುದ್ದಿಯು ಸಹ ಕೇಳಿ ಬಂದಿದೆ. ಇದರಿಂದಾಗಿ ಇನ್ಫೋಸಿಸ್ ರಷ್ಯಾದಿಂದ ಹೊರಬರಲಿದೆ ಎಂದು ಬಹು ಮಾಧ್ಯಮ ವರದಿಗಳು ಹೇಳುತ್ತಿವೆ.

ಲೋಕಸಭೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಬಿಲ್ ಪಾಸ್..!
ಕ್ರಿಮಿನಲ್ ಪ್ರೊಸೀಜರ್ ಮಸೂದೆಯ (Criminal Procedure Bill) ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಯಾವುದೇ ಉದ್ದೇಶವಿಲ್ಲ. ಇದು ಪೊಲೀಸರು (Police) ಮತ್ತು ತನಿಖಾಧಿಕಾರಿಗಳು ಅಪರಾಧಿಗಳಿಗಿಂತ ಎರಡು ಹೆಜ್ಜೆ ಮುಂದಿದ್ದಾರೆ ಎಂದು ಖಚಿತಪಡಿಸಿಕೊಳ್ಳು ಉದ್ದೇಶವನ್ನು ಹೊಂದಿದೆ ಎಂದು ಗೃಹ ಸಚಿವ ಅಮಿತ್ ಶಾ (Amit Shah) ಸೋಮವಾರ ಕರಡು ಶಾಸನವನ್ನು ಅಂಗೀಕರಿಸಿದ ಲೋಕಸಭೆಗೆ ತಿಳಿಸಿದ್ದಾರೆ. ಪ್ರತಿಪಕ್ಷಗಳು ಹೆಚ್ಚಿನ ಪರಿಶೀಲನೆಗಾಗಿ ಸ್ಥಾಯಿ ಸಮಿತಿಗೆ ಕಳುಹಿಸಬೇಕೆಂದು ಒತ್ತಾಯಿಸಿದ ಮಸೂದೆಯ ಕುರಿತ ಚರ್ಚೆಗೆ ಉತ್ತರಿಸಿದ ಶಾ, ಇದು ಅಪರಾಧ ಸಂತ್ರಸ್ತರ ಮಾನವ ಹಕ್ಕುಗಳನ್ನು (Human Rights) ರಕ್ಷಿಸುವ ಬಗ್ಗೆ ಇರುವ ಮಸೂದೆಯಾಗಿದೆ. ಅಪರಾಧಿಗಳಿಗಾಗಿ ಇರುವದ್ದಲ್ಲ ಎಂದು ಅವರು ಹೇಳಿದರು.

ಹುಟ್ಟು ಹಬ್ಬದ ಸಂಭ್ರಮದಲ್ಲಿ National Crush ರಶ್ಮಿಕಾ ಮಂದಣ್ಣ
‘ಕೊಡಗಿನ ಬೆಡಗಿ’, ‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ‘ಕಿರಿಕ್ ಪಾರ್ಟಿ’ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ, ಈಗ ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರು. ಕನ್ನಡಕ್ಕಿಂತ ಜಾಸ್ತಿ ತೆಲುಗು, ತಮಿಳಿನಲ್ಲಿ ಸದ್ದು ಮಾಡುತ್ತಿರುವ ರಶ್ಮಿಕಾ ಶೀಘ್ರವೇ ಬಾಲಿವುಡ್ಗೆ ಎಂಟ್ರಿ ಕೊಡಲಿದ್ದಾರೆ. 25ನೇ ವಸಂತಕ್ಕೆ ಕಾಲಿಟ್ಟ ರಶ್ಮಿಕಾಗೆ ಕನ್ನಡ, ತೆಲುಗು ಸೇರಿದಂತೆ ವಿವಿಧ ಚಿತ್ರರಂಗದ ಗಣ್ಯರು, ಅಭಿಮಾನಿಗಳು ವಿಶ್ ಮಾಡಿದ್ದಾರೆ. ನ್ನಡಕ್ಕಿಂತಲೂ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ರಶ್ಮಿಕಾಗೆ ಭಾರಿ ಹವಾ ಇದೆ. ನಿರ್ಮಾಪಕರು ಕಾಲ್ಶೀಟ್ಗಾಗಿ ಕಾದು ಕುಳಿತಿದ್ದಾರೆ. ಒಂದಾದ ಮೇಲೊಂದು ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ, ಸ್ಟಾರ್ ನಟರ ಜೊತೆಗೆ ಸ್ಕ್ರೀನ್ ಶೇರ್ ಮಾಡುತ್ತ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.
Published by:Kavya V
First published: