Evening Digest: ಪ್ರೀತಿಸಿದಾಕೆಯನ್ನು ಮದ್ವೆಯಾದ ಗೆಳೆಯನ ಮರ್ಡರ್, ನೂಪುರ್ ಶರ್ಮಾ ಫ್ಲೆಕ್ಸ್, ಸೈರಸ್ ಮಿಸ್ತ್ರಿ ದುರ್ಮರಣ- ಇಂದಿನ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
bangaಪ್ರೀತಿಸಿದ ಯುವತಿಯನ್ನ ಮದ್ವೆಯಾದ ಗೆಳೆಯನ ಮರ್ಡರ್!
ಅವರಿಬ್ಬರು ಒಳ್ಳೆಯ ಗೆಳೆಯರು. ಇಬ್ಬರು ಒಂದೇ ಕಡೆ ಕೆಲಸ ಮಾಡ್ಕೊಂಡಿದ್ರು. ಆದ್ರೆ ಇಬ್ಬರು ಒಂದೇ ಹುಡುಗಿಯನ್ನ ಲವ್ ಮಾಡ್ತಿದ್ದರು. ಕೊನೆ ಆಕೆ ಒಬ್ಬನನ್ನು ಮದುವೆಯಾಗಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಗೆಳೆಯ ಮತ್ತೊಬ್ಬನನ್ನು ಚಾಕು ಇರಿದು ಕೊಲೆಗೈದಿದ್ದಾನೆ. ಬೆಂಗಳೂರಿನ ಹಳೆ ಬೈಯಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಸತೀಶ್ ತನ್ನ ಸ್ನೇಹಿತ ರಾಕೇಶ್ನಿಂದ ಕೊಲೆಯಾಗಿದ್ದಾನೆ. ರಾಕೇಶ್ ಗೆಳೆಯನನ್ನ ಚಾಕುವಿನಿಂದ ಚುಚ್ಚಿ ಕೊಂದ ಆರೋಪಿ. ಈ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಣೇಶ ಮೆರವಣಿಗೆಯಲ್ಲಿ ನೂಪುರ್ ಶರ್ಮಾ ಫ್ಲೆಕ್ಸ್!
ಇಂದು ರಾಜ್ಯದ ಮೂಲೆ ಮೂಲೆಯಲ್ಲಿ ಗಣೇಶ ವಿಸರ್ಜನೆ ಅದ್ಧೂರಿಯಿಂದ ನಡೆಯುತ್ತಿದೆ. ಗಣೇಶನ ವಿಗ್ರಹದ ಜೊತೆಗೆ ಬೇರೆ ಬೇರೆ ಫ್ಲೆಕ್ಸ್ (Flex) ಹಾಕಲಾಗಿದೆ. ಈಗ ಮೈಸೂರಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ನೂಪುರ್ ಶರ್ಮಾ (Nupur Sharma) ಅವರ ಫ್ಲೆಕ್ಸ್ ಕೂಡ ರಾರಾಜಿಸಿದೆ. ಗಣಪತಿ ವಿಸರ್ಜನಾ ಮೆರವಣಿಗೆ ವಾಹನಗಳ ಮೇಲೆ ರಾಷ್ಟ್ರ ನಾಯಕರ (BJP Leaders)ಫ್ಲೆಕ್ಸ್ಗಳ ಜೊತೆ ನೂಪುರ್ ಶರ್ಮಾ ಫ್ಲೆಕ್ಸ್ ಕಾಣಿಸಿಕೊಂಡಿದೆ.

ಇದನ್ನೂ ಓದಿ: ಮೈಸೂರಲ್ಲಿ ಗಣೇಶ ಮೆರವಣಿಗೆ ವೇಳೆ ನೂಪುರ್ ಶರ್ಮಾ ಫ್ಲೆಕ್ಸ್ ಹಾರಾಟ!

ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ದುರ್ಮರಣ
ಮುಂಬೈ: ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ (Tata Group former chairman Cyrus Mistry) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸೈರಸ್ ಮಿಸ್ತ್ರಿ ಅವರ ಮರ್ಸಿಡಿಸ್ ಕಾರು ಅಹಮದಾಬಾದ್ನಿಂದ ಮುಂಬೈಗೆ ಹಿಂದಿರುಗುತ್ತಿದ್ದಾಗ ಪಾಲ್ಘರ್ನ ಚರೋತಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಾರು ಚಾಲಕ ಸೇರಿದಂತೆ ಪ್ರಯಾಣಿಸುತ್ತಿದ್ದ ಇನ್ನಿಬ್ಬರು ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಗುಜರಾತ್ನ ಆಸ್ಪತ್ರೆಗೆ ರವಾನಿಸಲಾಗಿದೆ. ಸೈರಸ್ ಮಿಸ್ತ್ರಿ ನಿಧನಕ್ಕೆ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಜೀ5 ಓಟಿಟಿಯಲ್ಲಿ ವಿಕ್ರಾಂತ್ ರೋಣಗೆ ಬಹುಪರಾಕ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣವು ಜೀ5 ಓಟಿಟಿಯಲ್ಲಿ ಅವರ ಜನ್ಮ ದಿನದಂದೆ ತೆರೆಕಂಡು ಭರ್ಜರಿಯಾಗಿ ವೀಕ್ಷಿಸಲ್ಪಡುತ್ತಿದೆ. ಜೀ5 ಒಟಿಟಿ ಯಲ್ಲಿ ಪ್ರಸಾರ ಶುರುವಾದ 24 ಗಂಟೆಗಳಲ್ಲಿಯೇ ಸುಮಾರು 50 ಕೋಟಿ ನಿಮಿಷ ಜನ ಸಿನಿಮಾ ವೀಕ್ಷಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ. ವಿಕ್ರಾಂತ್ ರೋಣ ಜುಲೈ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.

ಇದನ್ನೂ ಓದಿ: ಜೀ5 ಓಟಿಟಿಯಲ್ಲಿ 'ವಿಕ್ರಾಂತ್ ರೋಣ' ದಾಖಲೆ; 24 ಗಂಟೆಯಲ್ಲಿ 50 ಕೋಟಿ ನಿಮಿಷ ಸ್ಟ್ರೀಮಿಂಗ್

ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗೆ ಈ ಗತಿ- ಯತ್ನಾಳ್
ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಪೊಲೀಸ್ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಟಿಪ್ಪು ಸುಲ್ತಾನ್ನನ್ನು ವರ್ಣನೆ ಮಾಡಿದಕ್ಕೆ ಮುರುಘಾ ಸ್ವಾಮೀಜಿಗಳಿಗೆ ಈ ಸ್ಥಿತಿ ಬಂದಿದೆ ಎಂದರು. ಟಿಪ್ಪು ಸುಲ್ತಾನ್ ಪರವಾಗಿದ್ದರ ಪರಿಸ್ಥಿತಿ ಏನಾಗಿದೆ ಎಂದು ನೋಡಿ. ಟಿಪ್ಪು ಖಡ್ಗ ಪಡೆದ ವಿಜಯ್ ಮಲ್ಯ ಹಾಳಾದ, ಟಿಪ್ಪು ಸಿನಿಮಾ ಮಾಡಿ ಪ್ರೊಡ್ಯೂಸರ್ ಹಾಳಾದ. ಟಿಪ್ಪು ಜಯಂತಿ ಮಾಡಿ ಸಿದ್ದರಾಮಯ್ಯ ಸೋತರು. ಇದೀಗ ಸ್ವಾಮೀಜಿಗಳ ಸರದಿ ಎಂದು ಹೇಳಿದರು.
Published by:Thara Kemmara
First published: