Evening Digest: ರಾಜ್ಯದಲ್ಲಿ ಇನ್ನೆರಡು ದಿನವೂ ಮಳೆ: ರವಿಚಂದ್ರನ್ ಮಗನ ಮದುವೆ ಆಮಂತ್ರಣ ಪತ್ರಿಕೆ ವೈರಲ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಜ್ಯದಲ್ಲಿ ಇನ್ನೆರಡು ದಿನವೂ ಮಳೆ: ಬೇಸಿಗೆಯ ಬಿಸಿಯ ನಡುವೆ, ದಕ್ಷಿಣ ಒಳನಾಡಿನ ಕರ್ನಾಟಕದ (Karnataka) ಬಹುತೇಕ ಭಾಗಗಳಲ್ಲಿ ಸ್ಥಳೀಯ ಸಂವಹನದಿಂದಾಗಿ ಮುಂದಿನ ಎರಡು ದಿನಗಳ ಕಾಲ ಗುಡುಗು ಮತ್ತು ಮಿಂಚು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದಕ್ಷಿಣ ಅರೇಬಿಯನ್ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶ ರಚನೆಯಾಗಿರುವುದರಿಂದ ಮೇ 6 ರಿಂದ ಕರ್ನಾಟಕದ ಕೆಲವು ಭಾಗಗಳಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ. ಮಂಗಳವಾರ ಸಂಜೆ ನಗರದಲ್ಲಿ ಹಗಲಿನ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ 34.1 ಡಿಗ್ರಿ ಸೆಲ್ಸಿಯಸ್ ಇದ್ದ ಕಾರಣ ಮಳೆಯು ಅನೇಕ ಪ್ರಯಾಣಿಕರನ್ನು ಆಶ್ಚರ್ಯಚಕಿತಗೊಳಿಸಿತು. ಮಂಗಳವಾರ ಸಂಜೆ 5.30ರವರೆಗೆ ಹಾಗೂ ರಾತ್ರಿ 8.30ರವರೆಗೆ ಮಳೆಯಾದ ಬಗ್ಗೆ ವರದಿಯಾಗಿಲ್ಲ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Rain In Karnataka: ರಾಜ್ಯದಲ್ಲಿ ಇನ್ನೆರಡು ದಿನ ಮಳೆ, ಕೊಡೆ ಮರೆಯದಿರಿ

ರವಿಚಂದ್ರನ್​​ ಮಗನ ಮದುವೆ ಆಮಂತ್ರಣ ಪತ್ರಿಕೆ ವೈರಲ್

ಕಳೆದೆರೆಡು ದಿನಗಳಿಂದ ಸಾಮಾಜಿಕ ಜಾಲತಾಣ (Social Media) ದಲ್ಲಿ ಸ್ಯಾಂಡಲ್​ವುಡ್ (Sandalwood)​​ ಕ್ರೇಜಿಸ್ಟಾರ್​ ರವಿಚಂದ್ರನ್ (Crazy Star Ravichandran)​ ಅವರ ಮಗನ ಮದುವೆ ಆಮಂತ್ರಣ ಪತ್ರಿಕೆ (Wedding Invitation)  ವೈರಲ್ ಆಗುತ್ತಿದೆ. ಈ ಬಗ್ಗೆ ಅಭಿಮಾನಿಗಳು ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ. ಇದೇನು ಇದ್ದಕಿದ್ದ ಹಾಗೇ ನಟ ರವಿಚಂದ್ರನ್​ ಮಗನ ಮದುವೆ ಮಾಡಿಕೊಳ್ಳುತ್ತಿದ್ದಾರಾ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅದು ನಟಿಯೊಬ್ಬರ ಜೊತೆ ರವಿಚಂದ್ರನ್​ ಹಿರಿ ಮಗ ಮನೋರಂಜನ್ (Manoranjan) ಫೋಟೋ ಇರುವ ವಿವಾಹ ಪತ್ರಿಕೆ ವೈರಲ್ ಆಗುತ್ತಿದೆ. ಇದು ಏನಪ್ಪಾ ಅಂತ ಗೊಂದಲ ಮಾಡಿಕೊಳ್ಳಬೇಡಿ. ಇದು ರಿಯಲ್​ ಅಲ್ಲ ರೀಲ್​. ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ರವೀಚಂದ್ರನ್ ಅವರ ಪ್ರಾರಂಭ (Prarambha) ಸಿನಿಮಾ ಬಿಡುಗಡೆಯಾಗುತ್ತಿದ್ದು, ಮದುವೆ ಆಹ್ವಾನ ಪತ್ರಿಕೆಯ ರೂಪದಲ್ಲಿ ಸಿನಿ ಪ್ರೇಮಿಗಳಿಗೆ ಚಿತ್ರಮಂದಿರಕ್ಕೆ ಆಹ್ವಾನ ನೀಡಿದ್ದಾರೆ. ಈ ಸಿನಿಮಾ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Ravichandran ಮಗನ ಮದುವೆ ಆಮಂತ್ರಣ ಪತ್ರಿಕೆ ವೈರಲ್​! 'ಆ' ನಟಿ ಜೊತೆ ಮನೋರಂಜನ್ ಹೊಸ 'ಪ್ರಾರಂ

ರಾಜಕಾರಣ ಯಾರಪ್ಪನ ಆಸ್ತಿಯಲ್ಲ; ಸಂಸದ ಪ್ರತಾಪ್​ ಸಿಂಹ

ರಾಜಕೀಯಕ್ಕೆ ಹೊಸ ಮುಖಗಳ ಪರಿಚಯ ಆಗಬೇಕು ಎಂಬ ಬಿ.ಎಲ್.ಸಂತೋಷ್ ಹೇಳಿಕೆಗೆ ನನ್ನ ಸಹಮತ ಇದೆ. ರಾಜಕಾರಣ ಯಾರಪ್ಪನ ಆಸ್ತಿಯಲ್ಲ. ಇದೇ ಕಾರಣಕ್ಕೆ ಬಿಜೆಪಿ (BJP)  ಯಾವಾಗಲೂ ಈ ರೀತಿಯ ಪ್ರಯೋಗ ಮಾಡುತ್ತದೆ. ಇದರಿಂದ ರಾಜಕೀಯ ಹಿನ್ನೆಲೆಯಿಲ್ಲದ ನಾನು ಸಂಸದನಾದೆ. ಮಿಲಿಟರಿ ಜನರಲ್ ಆಗಿದ್ದಂತಹ ವಿ.ಕೆ.ಸಿಂಗ್, ಸತ್ಯಪಾಲ ಸಿಂಗ್, ಆರ್.ಕೆ.ಸಿಂಗ್​​ನಂತಹವರು ರಾಜಕಾರಣಕ್ಕೆ ಬಂದಿದ್ದಾರೆ. ಕೆಲಸ ಮಾಡುವವರು ರಾಜಕಾರಣದಲ್ಲಿ ಇರುತ್ತಾರೆ. ಸರಿಯಾಗಿ ಕೆಲಸ ಮಾಡದಿದ್ರೆ ಮನೆಗೆ ಹೋಗುತ್ತಾರೆ ಎಂದು ಸಂಸದ ಪ್ರತಾಪ್​ ಸಿಂಹ (Pratap Simha) ತಿಳಿಸಿದ್ದಾರೆ.

ದಕ್ಷಿಣದ ಪರ ನಿಂತ ಹಿಂದಿ ಗಾಯಕ ಸೋನು ನಿಗಮ್

ಹಿಂದಿ ಚಿತ್ರರಂಗದ ಪ್ರಸಿದ್ಧ ಗಾಯಕ ಸೋನು ನಿಗಮ್ ಅವರು ಸಹ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದು ಅದೀಗ ಮತ್ತೆ ಚರ್ಚೆಯಾಗುತ್ತಿದೆ. ಖಾಸಗಿ ಸಮಾರಂಭವೊಂದರಲ್ಲಿ ಮಾತನಾಡಿರುವ ಸೋನು ನಿಗಮ್ ಅವರು, ಈ ರೀತಿ ಪ್ರತಿಕ್ರಿಯೆ ನೀಡಿದರು, "ನನಗೆ ಗೊತ್ತಿರುವಂತೆ ನಮ್ಮ ಸಂವಿಧಾನದಲ್ಲಿ ಎಲ್ಲಿಯೂ ಹಿಂದಿಯನ್ನು ರಾಷ್ಟ್ರ ಭಾಷೆ ಎಂಬುದಾಗಿ ಬರೆದಿಲ್ಲ, ಆದರೆ ನನಗೆ ಗೊತ್ತಿದೆ ಹಿಂದಿ ಅತಿ ಹೆಚ್ಚು ಜನರಿಂದ ಬಳಸಲ್ಪಡುವ ಬಾಷೆ ಆಗಿದೆ ಎಂದು. ಈ ಮಾತು ಹಾಗಿರಲಿ, ಆದರೆ ತಮಿಳು ಭಾಷೆಯನ್ನು ಜಗತ್ತಿನ ಅತಿ ಪುರಾತನ ಭಾಷೆ ಎನ್ನಲಾಗುತ್ತದೆ ಎಂಬುದರ ಬಗ್ಗೆ ನಮಗೆ ಅರಿವಿದೆಯೆ? ಸಂಸ್ಕೃತ ಮತ್ತು ತಮಿಳಿನ ಮಧ್ಯೆ ಈಗಲೂ ವಾದ-ಪ್ರತಿವಾದ ನಡೆಯುತ್ತಲೇ ಇದೆ. ಆದರೆ, ಜನರು ತಮಿಳು ಹಳೆಯ ಭಾಷೆ ಎನ್ನುತ್ತಾರೆ್" ಎಂದು ವಿವರಿಸಿದ್ದಾರೆ.

ಕಾಪು ಮಾರಿಯಮ್ಮನ ದರ್ಶನ ಪಡೆದ ಪೂಜಾ ಹೆಗ್ಡೆ!

ಖ್ಯಾತ ಚಲನಚಿತ್ರ ನಟಿ ಪೂಜಾ ಹೆಗ್ಡೆ (Pooja Hegde)ಉಡುಪಿ (Udupi) ಜಿಲ್ಲೆಯ ಕಾಪು ಮಾರಿ ಗುಡಿಗೆ ಭೇಟಿ ನೀಡಿ ದರ್ಶನ ಪಡೆದರು.  ಮಹಾರಾಷ್ಟ್ರದ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಪೂಜಾ ಹೆಗ್ಡೆಯ ಮೂಲ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು. ಖ್ಯಾತ ಮಾಡೆಲ್ ಮತ್ತು ನಟಿಯಾಗಿ ಬೆಳೆದ ನಂತರವೂ ತವರಿನ ಸಂಪರ್ಕವನ್ನು ಈಕೆ ಬಿಟ್ಟಿಲ್ಲ. ಅವಕಾಶ ಸಿಕ್ಕಾಗಲೆಲ್ಲ ಕಾಪುವಿಗೆ ಆಗಮಿಸಿ ಹೊಸ ಮಾರಿಗುಡಿಗೆ ಭೇಟಿಕೊಟ್ಟು ದೇವಿಯ ದರ್ಶನ ಮಾಡುತ್ತಾ ಬಂದಿದ್ದಾರೆ.
Published by:Kavya V
First published: