Evening Digest: ಬಜೆಟ್​​ನಲ್ಲಿ ರೈತರಿಗೆ ಭರ್ಜರಿ ಪ್ರೋತ್ಸಾಹ ಧನ: ಇದು ಬಡಾಯಿ ಬಜೆಟ್ ಎಂದ ಕಾಂಗ್ರೆಸ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಬಜೆಟ್​​ನಲ್ಲಿ ರೈತರಿಗೆ ಭರ್ಜರಿ ಪ್ರೋತ್ಸಾಹ ಧನ : ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಇಂದು ತಮ್ಮ ಮೊದಲ ಬಜೆಟ್ (Budget) ಮಂಡಿಸಿದರು. ಕೃಷಿ ವಲಯಕ್ಕೆ (Agriculture Budget) ಬಂಪರ್ ಕೊಡುಗೆ ನೀಡಿದ್ದುಕ, ರೈತರ ಆದಾಯ (Farmers Income) ಹೆಚ್ಚಳಕ್ಕೆ ಬಸವರಾಜ್ ಬೊಮ್ಮಾಯಿ ಆದ್ಯತೆ ನೀಡಿದ್ದಾರೆ. ಪ್ರೋತ್ಸಾಹ ಧನ, ಆಹಾರ ಪಾರ್ಕ್ (Food Park) ಸ್ಥಾಪನೆ, ಕೋಳಿ ಸಾಕಾಣಿಕೆ, ರೇಷ್ಮೆ ಬೆಳಗಾರರಿಗೆ ಪ್ರೋತ್ಸಾಹ ನೀಡಿದ್ದಾರೆ. ಇನ್ನು ಉತ್ತರ ಕರ್ನಾಟಕ ದ್ರಾಕ್ಷಿ ಬೆಳಗಾರರಿಗೂ ವಿಶೇಷ ಯೋಜನೆಗಳನ್ನು ಘೋಷನೆ ಮಾಡಿದ್ದಾರೆ. ರೈತ ಶಕ್ತಿ ನೂತನ ಯೋಜನೆಯಡಿ ಕೃಷಿ ಯಂತ್ರೋಪಕರಣಗಳ ಬಳಕೆ ಉತ್ತೇಜನಕ್ಕೆ ಪ್ರತಿ ಎಕರೆಗೆ 250 ರೂ.ಗಳಂತೆ ಡೀಸೆಲ್ ಸಹಾಯಧನ.. 600 ಕೋಟಿ ರೂ. ಅನುದಾನ. ಕೆಪೆಕ್ ಮೂಲಕ ಕೃಷಿ ಉತ್ಪನ್ನಗಳ ಕೊಯ್ಲಿನೋತ್ತರ ನೀರ್ವಹಣೆ, ಮಾರಾಟ ಮತ್ತು ರಫ್ತು ಮಾಡಲು 50 ಕೋಟಿ ರೂ ಹಂಚಿಕೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ PPP ಮಾದರಿಯಲ್ಲಿ ಮಿನಿ ಆಹಾರ ಪಾರ್ಕ್ ಸ್ಥಾಪನೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Karnataka Budget 2022: ಪ್ರೋತ್ಸಾಹ ಧನ, ರೈತರ ಆದಾಯ ಹೆಚ್ಚಳಕ್ಕೆ ಆದ್ಯತೆ: ಕೃಷಿ ವಲಯಕ್ಕೆ ಬಂಪರ್ ಕೊಡುಗೆ

ಇದು ಬಡಾಯಿ ಬಜೆಟ್ ಎಂದ ಕಾಂಗ್ರೆಸ್

ಮೊದಲ ಬಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022ನೇ ಸಾಲಿ ರಾಜ್ಯ ಬಜೆಟ್ ಮಂಡನೆ ಮಾಡಿದ್ದಾರೆ. ರಾಜ್ಯ ಜಜೆಟ್​ ಕುರಿತು ಆಡಳಿತ ಪಕ್ಷದ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ವಿರೋಧ ಪಕ್ಷದ ನಾಯಕರು ಬಜೆಟ್​ ಬಗ್ಗೆ ಟೀಕೆ ಮಾಡ್ತಿದ್ದಾರೆ. ಕಾಂಗ್ರೆಸ್​ ನಾಯಕರು ಬಜೆಜ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾರಿ ಬಜೆಟ್​ ರೈತರು ಹಾಗೂ ಬಡ ಜನರ ಪರವಾಗಿಲ್ಲ ಅಂತ ಕಾಂಗ್ರೆಸ್​ ಮುಖಂಡರು ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ  ಬಸವರಾಜ ಬೊಮ್ಮಯಿ ಅವರ ಮೊದಲ ಬಜೆಟ್ ಮಂಡಿಸಿದ್ದಾರೆ. ಬಜೆಟ್​ ಬಗ್ಗೆ ಜನರಲ್ಲಿ ಬಹಳ ನಿರೀಕ್ಷೆ ಇತ್ತು, ಆದ್ರೆ ನಿರಾಸೆಯಾಗಿದ್ದು,  ಅತ್ಯಂತ ನಿರಸವಾದ ಬಜೆಟ್ ಇದು ಅಂತ ಸಿದ್ದರಾಮಯ್ಯ ಕಿಡಿಕಾರಿದ್ರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Karnataka Budget 2022: ಇದು ಬೊಮ್ಮಾಯಿ ಬಡಾಯಿ ಬಜೆಟ್ ಎಂದ್ರು ಸಿದ್ದು, ಎಲ್ಲಾ ಬಂಡಲ್ ಅಂದ್ರು ಡಿಕೆ ಬ್ರದರ್

ಯಾವುದೇ ಹೊಸ ತೆರಿಗೆ ಇಲ್ಲ!

2022-23ರಲ್ಲಿ ಯಾವುದೇ ರೀತಿಯ ತೆರಿಗೆ ಹೆಚ್ಚಳ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಕರ್ನಾಟಕ ಬಜೆಟ್​ನಲ್ಲಿ ಘೋಷಿಸಿದ್ದಾರೆ. ಈಮೂಲಕ ಕೊವಿಡ್ 19ರಿಂದ ಉಂಟಾದ ನಷ್ಟದಲ್ಲಿರುವ ಜನಸಾಮಾನ್ಯರಿಗೆ ಹೊಸ ತೆರಿಗೆಯ (New Tax) ಹೊರೆ ವಿಧಿಸುವುದಿಲ್ಲ ಎಂದು ಅವರು ಕರ್ನಾಟಕ ಬಜೆಟ್​ನಲ್ಲಿ (Karnataka Budget 2022) ಭರವಸೆ ನೀಡಿದ್ದಾರೆ. 2022-23ನೇ ಸಾಲಿಗೆ ವಾಣಿಜ್ಯ ತೆರಿಗೆ ಇಲಾಖೆಗೆ 77,010 ಕೋಟಿ ರೂ. ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 15,000 ಕೋಟಿ ರೂ, ರಾಜ್ಯ ಅಬಕಾರಿ ಇಲಾಖೆಗೆ 29,000 ಕೋಟಿ ರೂ. ಹಾಗೂ ಸಾರಿಗೆ ಇಲಾಖೆಗೆ 8,007 ಕೋಟಿ ರೂ.ಗಳ ತೆರಿಗೆ ಸಂಗ್ರಹ ಗುರಿ ನೀಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಜೆಟ್​ನಲ್ಲಿ ಘೋಷಣೆ ಮಾಡಿದ್ದಾರೆ. ಕರ್ನಾಟಕ ಬಜೆಟ್​ನಲ್ಲಿ ಹೊಸ ತೆರಿಗೆಯ ಘೋಷಣೆಯಾಗುತ್ತದೆಯೋ ಹೇಗೆ ಎಂಬ ಚಿಂತೆಯಲ್ಲಿದ್ದ ಜನಸಾಮಾನ್ಯರಿಗೆ ಈಮೂಲಕ ಸಿಎಂ ಬಸವರಾಜ ಬೊಮ್ಮಾಯಿ ನಿರಾಳತೆ ನೀಡಿದ್ದಾರೆ.

ಪಾಕ್​​ನ ಮಸೀದಿಯಲ್ಲಿ ಆತ್ಮಾಹುತಿ ದಾಳಿಗೆ 30 ಮಂದಿ ಬಲಿ..

ಪಾಕಿಸ್ತಾನದ ಪೇಶಾವರದ (Peshawar) ಮಸೀದಿಯಲ್ಲಿ (Mosque) ಭಾರೀ ಸ್ಫೋಟ (Huge Blast) ಸಂಭವಿಸಿದ್ದು, 30 ಮಂದಿ ಬಲಿಯಾಗಿದ್ದಾರೆ. 56ಕ್ಕೂ ಹೆಚ್ಚು ಮಂದಿ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೂ ಕೆಲವೇ ನಿಮಿಷಗಳ ಮೊದಲು ಸ್ಫೋಟ ಸಂಭವಿಸಿದ್ದರಿಂದ ಭಾರೀ ಸಾವು-ನೋವು ಘಟಿಸಿದೆ. ರಾಜಧಾನಿ ಇಸ್ಲಾಮಾಬಾದ್‌ನ ಪಶ್ಚಿಮಕ್ಕೆ ಸುಮಾರು 190 ಕಿಲೋಮೀಟರ್ ದೂರದ ಪೇಶಾವರದ ಕೊಚಾ ರಿಸಲ್ದಾರ್ ಪ್ರದೇಶದಲ್ಲಿ ಸ್ಫೋಟ ನಡೆದಿದೆ. ಮಸೀದಿಯನ್ನು ಪ್ರವೇಶಿಸುವ ಮೊದಲು ಒಬ್ಬ ವ್ಯಕ್ತಿ ಇಬ್ಬರು ಪೊಲೀಸರ ಮೇಲೆ ಗುಂಡು ಹಾರಿಸುವುದನ್ನು ನಾನು ನೋಡಿದೆ. ಇದಾದ ಕೆಲವೇ ಕ್ಷಣಗಳಲ್ಲಿ ದೊಡ್ಡ ಸ್ಫೋಟ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿ ಜಾಹಿದ್ ಖಾನ್ ಎಂಬುವರು ಹೇಳಿಕೆ ನೀಡಿದ್ದಾರೆ.

ಬಜೆಟ್​​ ನಲ್ಲಿ ಈ ಬಾರಿ ಚಿತ್ರರಂಗಕ್ಕೆ ಸಿಕ್ಕಿದೇನು?

ಪವರ್​ ಸ್ಟಾರ್​ ​ ಪುನೀತ್ ರಾಜ್ ಕುಮಾರ್ ನಿಧನರಾದಾಗ ಅವರ ಕಣ್ಣುಗಳನ್ನು ದಾನ ಮಾಡಲಾಯಿತು. ನಟ ಸಂಚಾರಿ ವಿಜಯ್ ನಿಧನರಾದಾಗ ಅವರ ಅಂಗಾಂಗ ದಾನ ಮಾಡಿದ್ದರು. ಹೀಗಾಗಿ ಮರಣಾನಂತರ ಅಂಗಾಂಗಗಳನ್ನು ದಾನ ಮಾಡುವಂತೆ ಸಾರ್ವಜನಿಕರನ್ನು ಪ್ರೇರೇಪಿಸಲು, ಈಗಾಗಲೇ ಬೆಂಗಳೂರಿನಲ್ಲಿರುವ  Institute of Gastroenterology and Organ Transplant ಸಂಸ್ಥೆಯನ್ನು ಲೋಕಾರ್ಪಣೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ನಿಮ್ಹಾನ್ಸ್ ಮೂಲಕ ಅಂಗಾಂಗ ಮರುಪಡೆಯುವಿಕೆ ಕೇಂದ್ರವನ್ನು ಪ್ರಾರಂಭಿಸಲಾಗುವುದು ಎಂದು ಬಜೆಟ್​ನಲ್ಲಿ ಹೇಳಲಾಗಿದೆ.
Published by:Kavya V
First published: