Evening Digest: ಹಿಜಾಬ್, ಹಲಾಲ್ ಬಳಿಕ ಮಸೀದಿ ಮೈಕ್ ನಿಷೇಧಕ್ಕೆ ಆಗ್ರಹ: ತಲೆ ಬೋಳಿಸಿಕೊಂಡ ನಟಿ ಸಂಜನಾ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಹಿಜಾಬ್, ಹಲಾಲ್ ಬಳಿಕ ಮಸೀದಿ ಮೈಕ್ ನಿಷೇಧಕ್ಕೆ ಆಗ್ರಹ : ಹಿಜಾಬ್, ಹಲಾಲ್ ಬಳಿಕ ಇದೀಗ ಮೈಕ್ (Loud Speaker) ನಿಷೇಧದ ಕೂಗು ಹೆಚ್ಚಾಗಿದೆ. ಮಸೀದಿಯಲ್ಲಿ (Mosques) ಧ್ವನಿವರ್ಧಕಗಳನ್ನು ನಿಷೇಧಿಸುವಂತೆ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ (Chikkamagaluru) ಪ್ರತಿಕ್ರಿಯಿಸಿದ ಕಾಳಿ ಮಠದ ಋಷಿಕುಮಾರ ಸ್ವಾಮಿ, ಮೈಕ್ ಹಾಕಿಕೊಂಡು ಕೂಗಬೇಕು ಅಂದ್ರೆ, ನಿಮ್ಮ ಅಲ್ಲಾ ಕಿವುಡಾನಾ, 70 ವರ್ಷದಿಂದ ಮೈಕ್ ಹಾಕಿಕೊಂಡು ಕೂಗುತ್ತಿದ್ದಾರಾ? ಮೈಕ್ ಬಂದು ಎಷ್ಟು ವರ್ಷ ಆಯ್ತು, ಧರ್ಮ ಹುಟ್ಟಿದಾಗಲೇ ಮೈಕ್ ಇತ್ತಂತಾ ಎಂದು ಪ್ರಶ್ನೆ ಮಾಡಿದ್ದಾರೆ. ಇರುವೆ ಕಾಲಿಗೆ ಗೆಜ್ಜೆ ಕಟ್ಟಿದರೂ ಕೇಳಿಸಿಕೊಳ್ಳುವವನು ಅಲ್ಲಾ ಎಂದು ಕಬೀರ್ ದಾಸ್ ಹೇಳಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:ಹಿಜಾಬ್​, ಹಲಾಲ್ ಆಯ್ತು ಇದೀಗ ಮಸೀದಿ ಮೈಕ್​ ನಿಷೇಧಕ್ಕೆ ಆಗ್ರಹ; ನಿಮ್ಮ ಅಲ್ಲಾ ಕಿವುಡಾನಾ ಅಂದ್ರು ಈ ಸ್ವಾಮೀಜಿ

60 ವರ್ಷ ಮೀರಿದ ಬಿಸಿಯೂಟ ಅಡುಗೆ ಸಿಬ್ಬಂದಿಯನ್ನು ತೆಗೆದು ಹಾಕುವಂತೆ ಆದೇಶ
ರಾಜ್ಯದಲ್ಲಿ ಅಕ್ಷರ ದಾಸೋಹ (Akshara Dasoha) ಮಧ್ಯಾಹ್ನದ ಬಿಸಿಯೂಟ (Mid Day Meal) ಯೋಜನೆಯಡಿ ಶಾಲಾ ಅಡುಗೆ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ 60 ವರ್ಷ ಮೇಲ್ಪಟ್ಟ ಅಡುಗೆ ಸಿಬ್ಬಂದಿಗಳನ್ನು (Workers ) ಕಡ್ಡಾಯವಾಗಿ ಕೆಲಸದಿಂದ ತೆಗೆಯಲು ಸಾರ್ವಜನಿಕ ಶಿಕ್ಷಣ ಇಲಾಖೆ (Education Department) ಮುಂದಾಗಿದೆ. ಬಿಸಿಯೂಟ ಯೋಜನೆ ಆರಂಭವಾದಾಗಿನಿಂದ ಅಂದರೆ 2003-04ರಿಂದ ಇಲ್ಲಿಯವರೆಗೂ ವಯೋಮಾನ 60 ಮೀರಿದ್ದರೂ ಆರೋಗ್ಯವಂತರಾಗಿರುವ ಅಡುಗೆ ಸಿಬ್ಬಂದಿಯನ್ನು ಮಾನವೀಯತೆ ದೃಷ್ಟಿಯಿಂದ ಕೆಲಸದಲ್ಲಿ ಮುಂದುವರಿಸಿಕೊಂಡು ಬರಲಾಗಿತ್ತು. ಆದರೆ, ಇದೇ ವರ್ಷ ಪ್ರಥಮ ಬಾರಿಗೆ ಇಲಾಖೆ ಈ ಕುರಿತು ಅಧಿಕೃತ ಆದೇಶ (Order) ಹೊರಡಿಸಿ, 60 ವರ್ಷ ಪೂರ್ಣಗೊಳಿಸಿದವರನ್ನು ಕಡ್ಡಾಯವಾಗಿ ಅಡುಗೆ ಕರ್ತವ್ಯದಿಂದ ತೆಗೆಯುವಂತೆ ಆದೇಶ ಹೊರಡಿಸಿದೆ.

ಬ್ರಿಟನ್ನಲ್ಲಿ ಪತ್ತೆಯಾಯ್ತು ಕೋವಿಡ್ ಹೊಸ ತಳಿ XE
ಹೋದ್ಯಾ ಪಿಶಾಚಿ ಎಂದರೆ ಬಂದ್ಯಾ ಗವಾಕ್ಷಿ ಎನ್ನುವಂತೆ ಕೋವಿಡ್ ವೈರಾಣು (Coronavirus) ನಮ್ಮನ್ನು ಬಿಟ್ಟು ತೊಲಗುವುದೇ ಅಥವಾ ಇಲ್ಲವೇ ಎಂಬುದು ಗೊತ್ತಾಗದಂತಹ ಪರಿಸ್ಥಿತಿ ನಿರ್ಮಾಣವಾದಂತಾಗಿದೆ. ಮೊದಲಿಗೆ ಕೋವಿಡ್-19 (Covid -19) ರೂಪದಲ್ಲಿ ಜಗತ್ತಿನ ಸಕಲ ಮಾನವ ಕುಲಕ್ಕೆ ಶಾಪವಾಗಿ ಅಂಟಿಕೊಂಡ ವೈರಾಣು ತದನಂತರ ಡೆಲ್ಟಾ, ಓಮಿಕ್ರಾನ್ (Delta, Omicron) ಹೀಗೆ ಹಲವು ಸ್ವರೂಪಗಳಲ್ಲಿ ರೂಪಾಂತರ ಹೊಂದಿ ಕಾಡುತ್ತಲೇ ಇತ್ತು. ಬೆನ್ನು ಬಿಡದ ಬೇತಾಳನ ರೀತಿ ಈಗ ಮತ್ತೆ ಇನ್ನೊಂದು ಸ್ವರೂಪದಲ್ಲಿ ಈ ಮಹಾಮಾರಿ ಗೋಚರವಾಗುತ್ತಿದೆ ಎಂದು ತಿಳಿದುಬಂದಿದೆ. ಯುಕೆಯಲ್ಲಿ ಹೊಸ ಕೋವಿಡ್ ರೂಪಾಂತರ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಇತ್ತೀಚಿನ ವರದಿಯಲ್ಲಷ್ಟೇ ತಿಳಿಸಿದೆ. ಈಗ ಕಂಡುಬಂದಿರುವ ಹೊಚ್ಚ ಹೊಸ ಕೋವಿಡ್ ರೂಪಾಂತರಿಯನ್ನು XE ಎಂದು ಹೆಸರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ, XE ಎಂದು ಕರೆಯಲ್ಪಡುವ ಈ ಹೊಸ ರೂಪಾಂತರಿಯು ಯಾವುದೇ COVID-19 ಗಿಂತಲೂ ಹೆಚ್ಚು ರಭಸದಲ್ಲಿ ಹರಡಬಹುದು ಎಂದು ಹೇಳಿದೆ.

ತಲೆ ಬೋಳಿಸಿಕೊಂಡ ಸಂಜನಾ
ನಟಿ ಸಂಜನಾ ಗಲ್ರಾನಿ ಮತ್ತೆ ಸುದ್ದಿ ಮಾಡಿದ್ದಾರೆ. ಹಿಂದೆ ತಮ್ಮ 'Bold' ಫೋಟೋಗಳಿಂದ ಅಭಿಮಾನಿಗಳನ್ನು ಸೆಳೆಯುತ್ತಿದ್ದ ಸಂಜನಾ, ಈಗ 'Bald' ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ತಲೆ ಬೋಳಿಸಿಕೊಂಡು ಫೋಟೋಗಳನ್ನು ತಮ್ಮ Instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಸಂಜನಾ ಹೊಸ ಅವತಾರ ನೋಡಿದ ಫ್ಯಾನ್ಸ್ ಒಂದು ಕ್ಷಣ ಕಂಗಾಲಾಗಿದ್ದಲ್ಲದೇ, ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಸಂಜನಾ ಗಲ್ರಾನಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ 'Bold' ಫೋಟೋಗಳಿಂದ ಅಭಿಮಾನಿಗಳನ್ನು ಸೆಳೆಯುತ್ತಿದ್ದ ಸಂಜನಾ, ಈಗ 'Bald' ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣವಾಗಿ ತಲೆ ಬೋಳಿಸಿಕೊಂಡು ಫೋಟೋಗಳನ್ನು ತಮ್ಮ Instagram ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ಮಧ್ಯೆ ತಮ್ಮ ತಾಯ್ತನದ ಖುಷಿಯನ್ನು ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದರು. ಇದೀಗ ತಲೆ ಬೋಳಿಸಿಕೊಂಡು ಪೋಸ್ ಕೊಟ್ಟಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Photos: ತಲೆ ಬೋಳಿಸಿಕೊಂಡ ಸಂಜನಾ ಗಲ್ರಾನಿಯ 'Bald' ಆ್ಯಂಡ್ Beautiful ಲುಕ್ ಇಲ್ಲಿದೆ ನೋಡಿ!

ಯುಕೆಯಲ್ಲಿ ಕೆಜಿಎಫ್ 2 ಟಿಕೆಟ್ ಸೋಲ್ಡ್ ಔಟ್
ಕೆಜಿಎಫ್ ಸಿನಿಮಾ ಬಂದಮೇಲೆ ಹೊರ ದೇಶಗಳಲ್ಲೂ ಕನ್ನಡ ಸಿನಿಮಾಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಿದೆ. ದಕ್ಷಿಣ ಭಾರತದ ಸಿನಿಮಾಗಳು ವಿದೇಶಗಳಲ್ಲಿ ಹೇಗೆ ದುಡ್ಡು ಮಾಡುತ್ತವೆ ಅನ್ನುವುದಕ್ಕೆ ಇತ್ತೀಚೆಗೆ ತೆರೆಕಂಡಿರುವ ‘ಆರ್ಆರ್ಆರ್’ ಸಿನಿಮಾಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಇದೀಗ ನಮ್ಮ ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಸರದಿ. ಕೆಜಿಎಫ್ 2 ನೋಡಲು ಇಡೀ ವಿಶ್ವದ ಜನರು ಕಾಯುತ್ತಿದ್ದಾರೆ. ಹೌದು, ಯುಕೆಯಲ್ಲಿ ಕೇವಲ 12 ಗಂಟೆಗಳಲ್ಲಿ 5000 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿದೆ. ಇದನ್ನು ನೋಡಿದರೆ ತಿಳಿಯುತ್ತೆ ರಾಕಿಭಾಯ್ನ ಹವಾ ಎಷ್ಟಿದೆ ಅಂತ.
Published by:Kavya V
First published: