Evening Digest: ದಿ ಕಾಶ್ಮೀರಿ ಫೈಲ್ಸ್ ನಿರ್ದೇಶಕನಿಗೆ ಅವಮಾನ; ಡಿಕೆಶಿಗೆ ಕೋರ್ಟ್ ಸಮನ್ಸ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ದಿ ಕಾಶ್ಮೀರಿ ಫೈಲ್ಸ್​​ ನಿರ್ದೇಶಕನಿಗೆ ಅವಮಾನ : ಖ್ಯಾತ ಸಿನಿಮಾ ನಿರ್ಮಾಪಕ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ (The Kashmir Files) ನಿರ್ದೇಶಕರೂ ಆದ ವಿವೇಕ್ ಅಗ್ನಿಹೋತ್ರಿ (Vivek Agnihotri) ಒಂದಲ್ಲಾ ಒಂದು ವಿಷಯದಿಂದ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಅದರಲ್ಲಿಯೂ ಅವರ ವಿಡಿಯೋಗಳು ಕೆಲವೊಮ್ಮೆ ಸಖತ್ ವೈರಲ್ ಆಗುವುದರೊಂದಿಗೆ ವಿವಾದಗಳಿಗೂ ಕಾರಣವಾಗುತ್ತದೆ. ಅನ್ಯಾಯದ ವಿರುದ್ಧ ನಿಲ್ಲಲು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಆಗಾಗ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಪ್ರಸ್ತುತ ಯುರೋಪ್‌ನಲ್ಲಿರುವ (Europe) ಅವರು, ಮಂಗಳವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಘಟನೆಯನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ 'ಹಿಂದೂ ಧ್ವನಿ'ಯನ್ನು ನಿಗ್ರಹಿಸಲಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಸದ್ಯ ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.

ಡಿಕೆಶಿಗೆ ಕೋರ್ಟ್​​ ಸಮನ್ಸ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (KPCC President DK Shivakumar) ಅವರು ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (Enforcement Directorate) ಆರೋಪ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯವು  (Enforcement Directorate Special Court) ಡಿ.ಕೆ. ಶಿವಕುಮಾರ್ ಸೇರಿದಂತೆ ಐದು ಜನ ಆರೋಪಿಗಳಿಗೆ ಸಮನ್ಸ್ ನೀಡಿದೆ. ಜುಲೈ 1ಕ್ಕೆ ವಿಚಾರಣೆ ಮುಂದೂಡಿರುವ ನ್ಯಾಯಾಲಯವು ಮುಂದಿನ ವಿಚಾರಣೆ ವೇಳೆ ಡಿ.ಕೆ. ಶಿವಕುಮಾರ್ ಸೇರಿ ಐವರು ಆರೋಪಿಗಳು ಕೋರ್ಟ್ ಮುಂದೆ ಹಾಜರಿರಬೇಕು ಎಂದು ಸಮನ್ಸ್ ನಲ್ಲಿ ಸೂಚನೆ ನೀಡಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ನೇಮಕ

ಹಿರಿಯ ಐಎಎಸ್ ಅಧಿಕಾರಿ (Senior IAS Officer) ವಂದಿತಾ ಶರ್ಮಾ (Vandita Sharma) ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು. ರಾಜ್ಯ ಸರ್ಕಾರದ (State Government) ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪಿ. ರವಿಕುಮಾರ್ (Ravi Kumar) ಅವರ ವಯೋ ನಿವೃತ್ತಿಯಿಂದ ತೆರವಾದ ಹುದ್ದೆಗೆ ಕರ್ನಾಟಕ ವೃಂದದ ಭಾರತೀಯ ಆಡಳಿತ ಸೇವೆಯ 1986 ನೇ ಸಾಲಿನ ತಂಡದ ವಂದಿತಾ ಶರ್ಮಾ ಉತ್ತರಾಧಿಕಾರಿಯಾಗಿದ್ದಾರೆ.

ಚಕ್ರತೀರ್ಥ ಪರ ಬಿ ಸಿ ನಾಗೇಶ್ ಬ್ಯಾಟಿಂಗ್

2017ರಲ್ಲಿ ನಾಡಗೀತೆಗೆ ಅವಹೇಳನ ಮಾಡಿ ಬರೆದಿರೋದನ್ನ ರೋಹಿತ್ ಚಕ್ರತೀರ್ಥ (Rohith Chakrathirtha) ಶೇರ್ ಮಾಡಿದ್ರು. ಅವರ ಮೇಲೆ ಹಿಂದಿನ ಸರ್ಕಾರ‌ ಕೇಸ್ ಹಾಕಿತ್ತು. ಅದು ಬಿ ರಿಪೋರ್ಟ್ ಆಗಿತ್ತು. ರೋಹಿತ್​ ಚಕ್ರತೀರ್ಥ ನಾನು ಬರೆದಿಲ್ಲ ಎಂದು ಹೇಳಿದ್ದಾರೆ ಎಂದು ಸಚಿವ ಬಿ.ಸಿ ನಾಗೇಶ್ (B.C Nagesh)​ ಹೇಳಿದ್ದಾರೆ. ನಾನು ನಿನ್ನೆ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji) ಭೇಟಿ ಮಾಡಿದ್ದೆ ಎಲ್ಲಾ ವಿಚಾರವನ್ನು ವಿವರವಾಗಿ ಹೇಳಿದ್ದೇನೆ. ಅವರಿಗೆ ಪಠ್ಯ ಪುಸ್ತಕದ ಒಂದು ಸೆಟ್ ಕೊಟ್ಟಿದ್ದೇನೆ. ಸ್ವಾಮೀಜಿ ಅವರಿಗೆ  ಪಠ್ಯಪುಸ್ತಕದ (Text Book) ಬಗ್ಗೆ ಆಕ್ಷೇಪ ಇಲ್ಲ, ನಾಡಗೀತೆ ಅಪಮಾನ ಮಾಡಿದವರನ್ನು ಬಂಧಿಸಲಿ ಎಂದಿದ್ದಾರೆ ಎಂದು ಸಚಿವ ನಾಗೇಶ್​ ಹೇಳಿದ್ದಾರೆ.

ಫ್ರೀಯಾಗಿ ಕೆಜಿಎಫ್​ 2 ಸಿನಿಮಾ ನೋಡ್ಬಹುದು!

ಅಮೇಜಾನ್​ ಪ್ರೈ,ಮ್​ನಲ್ಲೂ ಕೆಜಿಎಫ್​ 2 ದಾಖಲೆ ಬರೆದಿದೆ. ಅಮೆಜಾನ್ ಪ್ರೈಮ್​ 'ಚಲನಚಿತ್ರ ಬಾಡಿಗೆ' ಯೋಜನೆಯ ಭಾಗವಾಗಿ Amazon Prime ವೀಡಿಯೊದಲ್ಲಿ ಕೆಜಿಎಫ್ ಚಾಪ್ಟರ್ 2 ಲಭ್ಯವಿತ್ತು. ಪ್ಲಾಟ್‌ಫಾರ್ಮ್‌ನಲ್ಲಿ ಅಭಿಮಾನಿಗಳು ಚಲನಚಿತ್ರವನ್ನು ರೂ. 199 ಗೆ ಬಾಡಿಗೆಗೆ ಪಡೆಯಬಹುದಾಗಿತ್ತು. ಕೆಜಿಎಫ್ 2 ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಪ್ರೇಕ್ಷಕರಿಗೆ ಲಭ್ಯವಾಗಿತ್ತು. 199 ರೂಪಾಯಿಗಳು ಚಾರ್ಜ್ ಮಾಡಿದರೂ ಜನ ಮಾತ್ರ ದುಡ್ಡು ಕೊಟ್ಟು ಕೆಜಿಎಫ್​ 2 ಸಿನಿಮಾ ನೋಡಿದ್ದಾರೆ.
Published by:Kavya V
First published: