Evening Digest: ಮೊದಲನೇ ಗಂಡನ ಕೈಯಲ್ಲಿ 2ನೇ ಗಂಡ ಲಾಕ್, ಕೊಹ್ಲಿ ಬಯೋಪಿಕ್​ನಲ್ಲಿ ವಿಜಯ್ ದೇವರಕೊಂಡ?- ಇಂದಿನ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಈ ಸಂಜೆಯ ಪ್ರಮುಖ ಸುದ್ದಿಗಳು

ಈ ಸಂಜೆಯ ಪ್ರಮುಖ ಸುದ್ದಿಗಳು

  • Share this:
ಮೊದಲ ಪತಿಗೆ ಎರಡನೇ ಪತಿಯಿಂದ ಸ್ಕೆಚ್, ಅದೃಷ್ಟ ಕೈಕೊಟ್ಟು ಖಾಕಿ ಕೈಯಲ್ಲಿ ಲಾಕ್!

ಪತ್ನಿಗೆ ಮೆಸೇಜ್ ಮಾಡಿದ ಮೊದಲ ಗಂಡನನ್ನು ಎರಡನೇ ಗಂಡ ಸಿನಿಮಾ ರೀತಿ ಕಿಡ್ನ್ಯಾಪ್ ಮಾಡಿ ಕೊಲೆಗೈಯಲು ಯತ್ನಿಸಿ ಮಾರ್ಗ ಮಧ್ಯೆ ಗಾಡಿ ಕೆಟ್ಟ ಪರಿಣಾಮ ಪೊಲೀಸರಿಗೆ  ಲಾಕ್ ಆದ ಘಟನೆ ಜಿಲ್ಲೆಯ ಕಡೂರು (Kaduru, Chikkamagaluru) ತಾಲೂಕಿನಲ್ಲಿ ನಡೆದಿದೆ. ಕಳೆದ ಐದು ವರ್ಷಗಳ ಹಿಂದೆ ಕಡೂರಿನಲ್ಲಿ ವಾಸಿಸುತ್ತಿದ್ದ ರಾಜಸ್ಥಾನದ (Rajasthan) ಕುಠಾಣಿ ಮೂಲದ ಮಂಜುಳಾಳನ್ನು ಮೋಹನ್ ರಾಮ್ ಎಂಬುವನು ಪ್ರೀತಿಸಿ ಮದುವೆಯಾಗಿದ್ದನು. ಮದುವೆ ಬಳಿಕ ಮೋಹನ್‌ ರಾಮ್ ಪತ್ನಿಯನ್ನು ತನ್ನ ಕಡೂರಿಗೆ ಕರೆದುಕೊಂಡು ಬಂದು ಸಂಸಾರ ನಡೆಸುತ್ತಿದ್ದನು. ನಂತರ ರಾಜಸ್ಥಾನಕ್ಕೆ ಹೋಗಿದ್ದ ಹೆಂಡತಿಯನ್ನ ಕಡೂರಿಗೆ ಕರೆದುಕೊಂಡು ಬರಲು ಹೋಗಿದ್ದ ಪತಿ ಮೋಹನ್ ರಾಮ್ ಜೊತೆ ಮಂಜುಳಾ ಬರಲಿಲ್ಲ. ಇದೇ ವೇಳೆ ಮಂಜುಳಾ ಎರಡನೇ ಮದುವೆಯಾಗಿದ್ದಳು. ಮೋಹನ್ ತನ್ನ ಪತ್ನಿಗೆ ಮೆಸೇಜ್ ಮಾಡುತ್ತಿರುವ ವಿಷಯ ತಿಳಿದ ಎರಡನೇ ಪತಿ ಓಂ ಪ್ರಕಾಶ್ ಮೊದಲ ಪತಿ ಮೋಹನ್ನನ್ನ ಮುಗಿಸಲು ಸಂಚು ರೂಪಿಸಿದ್ದ. ಆದರೆ ಅದೃಷ್ಟ ಕೈಕೊಟ್ಟು ಲಾಕ್ ಆಗಿದ್ದಾನೆ.

ಇದನ್ನೂ ಓದಿ: ಒಬ್ಬಳನ್ನೇ ಮದುವೆಯಾದ ಇಬ್ಬರು, ಪತ್ನಿಗಾಗಿ ಗಂಡಂದಿರ ಫೈಟ್, ಕಿಡ್ನಾಪ್ ವೇಳೆ ತಗ್ಲಾಕೊಂಡ 2ನೇ ಪತಿ!

ಬೆಳಗಾವಿಯಲ್ಲಿ ಲಕ್ಷ್ಮಣ ಸವದಿ ಕಾರು ಅಪಘಾತ, ಅದೃಷ್ಟವಶಾತ್ ಪಾರು
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ (Laxman Savadi) ಕಾರು ಅಪಘಾತವಾಗಿದೆ. ಕಾರು ಅಪಘಾತದಲ್ಲಿ (Car Accident) ಲಕ್ಷ್ಮಣ ಸವದಿಗೆ ಸಣ್ಣಪುಟ್ಟ ಗಾಯವಾಗಿದೆ. ಬೆಳಗಾವಿ ಜಿಲ್ಲೆಯ ಜತ್ ಜಾಂಬೋಟಿ ಅಂತಾರಾಜ್ಯ ಹೆದ್ದಾರಿಯ ಹಾರೂಗೇರಿ ಪಟ್ಟಣದ ಬಳಿ ಆಕ್ಸಿಡೆಂಟ್ ಆಗಿದೆ. ಲಕ್ಷ್ಮಣ ಸವದಿಯವರ ಕಾರು ಅಥಣಿಯಿಂದ ಬೆಳಗಾವಿ ಕಡೆಗೆ ಹೊರಟಿತ್ತು. ಅಪಘಾತದಲ್ಲಿ ಲಕ್ಷ್ಮಣ ಸವದಿ ಪ್ರಾಣಾಪಾಯದಿಂದ (Great Escape) ಪಾರಾಗಿದ್ದಾರೆ. ಬೈಕ್ ಸವಾರ ಸವದಿ ಕಾರಿಗೆ ಅಡ್ಡ ಬಂದಿದ್ದು, ಬೈಕ್ ಸವಾರನನ್ನ ತಪ್ಪಿಸಲು ಹೋಗಿ ಅವಘಡ ಸಂಭವಿಸಿದೆ.

ನಾಳೆ ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್, ನಾಡಿದ್ದು ಪ್ರಧಾನಿ ಮೋದಿ!

ಕರ್ನಾಟಕದಲ್ಲಿ ಎಲೆಕ್ಷನ್​​ಗಿನ್ನು ಏಳೆಂಟು ತಿಂಗಳಿದೆ. ಆದರೂ ಪಕ್ಷಗಳು ಅದರದ್ದೇ ಆದ ತಯಾರಿಯಲ್ಲಿ ತೊಡಗಿದೆ. ಹೀಗಿರೋವಾಗ ಕರ್ನಾಟಕಕ್ಕೆ ದೊಡ್ಡ ದೊಡ್ಡ ನಾಯಕರು ಆಗಮಿಸ್ತಿದ್ದಾರೆ. ಒಬ್ಬರಲ್ಲ, ಇಬ್ಬಿಬ್ಬರು ನಾಯಕರು ಕರ್ನಾಟಕಕ್ಕೆ ಬರ್ತಿದ್ದಾರೆ. ನಾಳೆ ಕರುನಾಡಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adithyanath) , ನಾಡಿದ್ದು ಪ್ರಧಾನಿ ನರೇಂದ್ರ ಮೋದಿ (PM Modi) ಬರ್ತಿದ್ದಾರೆ. ನಾಳೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬರ್ತಿರೋದು ನೆಲಮಂಗಲದಲ್ಲಿ ಕ್ಷೇಮವನ ಉದ್ಘಾಟನೆಗಾಗಿ ಆಗಮಿಸ್ತಿದ್ದಾರೆ.

ವಿರಾಟ್ ಕೊಹ್ಲಿ ಬಯೋಪಿಕ್​​ನಲ್ಲಿ ವಿಜಯ್ ದೇವರಕೊಂಡ?

ಕಳೆದ ಭಾನುವಾರದಂದು ಪಾಕಿಸ್ತಾನ (Pakistan) ಎದುರು ಸೆಣಸಿದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್ ನಲ್ಲಿ ಆದಂತಹ ಸೋಲಿಗೆ ಸೇಡನ್ನು ತೀರಿಸಿಕೊಂಡಿದೆ. ಇದರ ನಡುವೆ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ತೆಲುಗು ಸೂಪರ್ ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಕ್ರಿಕೆಟ್ ಫೀಲ್ಡ್ನಲ್ಲಿ ಆ್ಯಂಕರ್ ರೂಪದಲ್ಲಿ ಕಾಣಿಸಿಕೊಂಡು ಎಲ್ಲರನ್ನು ಬೆರಗುಗೊಳಿಸಿದ್ರು. ಈ ವೇಳೆ ಅವರು ಹೇಳಿರುವ ಒಂದು ವಿಷಯ ಇದೀಗ ಸಖತ್ ಚರ್ಚೆಗೆ ಕಾರಣವಾಗಿದೆ. ಹೌದು, ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ಬಯೋಪಿಕ್ ಮಾಡುವ ಬಯಕೆಯನ್ನು ನಟ ವಿಜಯ್ ದೇವರಕೊಂಡ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ತೆರೆ ಮೇಲೆ ಕಿಂಗ್ ಕೊಹ್ಲಿ ಬಯೋಪಿಕ್? ವಿರಾಟ್​ ಪಾತ್ರದಲ್ಲಿ ಸೌತ್​​ ಸೂಪರ್ ಸ್ಟಾರ್!

ಇಟಲಿಯಲ್ಲಿ ಸೋನಿಯಾ ಗಾಂಧಿ ತಾಯಿ ನಿಧನ

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ತಾಯಿ ಪಾವೊಲಾ ಮೈನೋ (Paola Maino) ನಿಧನರಾಗಿದ್ದಾರೆ. 2022ರ ಆಗಸ್ಟ್ 27 ಶನಿವಾರದಂದು ಇಟಲಿಯ ಮನೆಯಲ್ಲಿ ಪಾವೊಲಾ ಮೈನೋ ನಿಧನರಾಗಿದ್ದು, ಮಂಗಳವಾರ ಅಂತ್ಯಕ್ರಿಯೆ ನಡೆದಿದೆ. ಇದು ವೈದ್ಯಕೀಯ ತಪಾಸಣೆಗಾಗಿ ತೆರಳಿದ್ದ ಅವರ ವಿದೇಶ ಪ್ರವಾಸದ ಭಾಗವಾಗಿತ್ತು. ರಾಹುಲ್ ಗಾಂಧಿ ಮತ್ತು ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ತೆರಳಿದ್ದರು. ಅಂತ್ಯಕ್ರಿಯೆ ಮಂಗಳವಾರ ನಡೆದಿದೆ. ಕಳೆದ ವಾರ ಸೋನಿಯಾ ಗಾಂಧಿ ತಮ್ಮ ತಾಯಿಯನ್ನು ಭೇಟಿಯಾಗಲು ತೆರಳಿದ್ದರು.
Published by:Thara Kemmara
First published: