Evening Digest: ಮದುವೆಯಾದ ಐದೇ ತಿಂಗಳಿಗೆ ವೈದ್ಯೆಯ ದಾರುಣ ಸಾವು: UPSCಯಲ್ಲಿ ಕನ್ನಡಿಗರ ಸಾಧನೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮದುವೆಯಾದ ಐದೇ ತಿಂಗಳಿಗೆ ವೈದ್ಯೆಯ ದಾರುಣ ಸಾವು: ತೆಲಂಗಾಣದ ರಾಜಧಾನಿಯ ಎಲ್​​ಬಿ ನಗರ ಪೊಲೀಸ್ ಠಾಣಾ (L B Nagar Police Station) ವ್ಯಾಪ್ತಿಯಲ್ಲಿ ವೈದ್ಯೆಯೊಬ್ಬರು (Lady Doctor) ಸಾವನ್ನಪ್ಪಿರುವ ಘಟನೆ ಸ್ಥಳೀಯವಾಗಿ ಸಂಚಲನ ಮೂಡಿಸಿದೆ. ಸೂರ್ಯೋದಯನಗರ ನಿವಾಸಿ ಭಾರತಿ (31) ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪತಿಯಿಂದ ಭಾರತಿ ಸಾವಿನ ಸುದ್ದಿ ತಿಳಿದ ಪೋಷಕರು ಹೈದರಾಬಾದ್‌ಗೆ ಧಾವಿಸಿ ಮಗಳನ್ನು ನೋಡಿ ಕಣ್ಣೀರಿಟ್ಟರು. ಭಾರತಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆಕೆಯ ಪತಿ ರಮೇಶ್ ಮತ್ತು ಅತ್ತೆ ಪೊಲೀಸರಿಗೆ ತಿಳಿಸಿದ್ದಾರೆ. ಭಾರತಿಯ ಪೋಷಕರು ಇದನ್ನು ಅಲ್ಲಗಳೆದಿದ್ದು, ಇವರೆಲ್ಲರೂ ಹೆಚ್ಚುವರಿ ವರದಕ್ಷಿಣೆಗಾಗಿ ತಮ್ಮ ಮಗಳ ಭಾರತಿಗೆ ಕಿರುಕುಳ ನೀಡುತ್ತಿದ್ದರು. ಹಣ ತರುವಂತೆ ಪದೇ ಪದೇ ಮಾನಸಿಕ ಹಿಂಸೆ ನೀಡಿದ್ದರು. ಉನ್ನತ ಶಿಕ್ಷಣ ಪಡೆದಿರುವ ನಮ್ಮ ಮಗಳು ಜೀವವನ್ನು ತೆಗೆದುಕೊಳ್ಳುವಷ್ಟು ಹೇಡಿಯಲ್ಲ ಎಂದು ಎಂದು ಹೇಳಿಕೆ ನೀಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Lady Doctor Death: ಮದುವೆಯಾದ ಐದೇ ತಿಂಗಳಿಗೆ ವೈದ್ಯೆಯ ದಾರುಣ ಸಾವು, ಗಂಡನ ಮನೆಯಲ್ಲಿ ಆಗಿದ್ದೇನು?

UPSC ಪರೀಕ್ಷೆಯಲ್ಲಿ ಕನ್ನಡಿಗರ ಸಾಧನೆ

ಈ ಬಾರಿ UPSC ಪರೀಕ್ಷೆಯಲ್ಲಿ ಕರ್ನಾಟಕದ 25 ಅಭ್ಯರ್ಥಿಗಳು ಪಾಸ್ ಆಗಿದ್ದು, ಅದರಲ್ಲಿ ದಾವಣಗೆರೆಯ ಅವಿನಾಶ್ 31ನೇ ಸ್ಥಾನ ಪಡೆದಿದ್ದಾರೆ. ಉಳಿದಂತೆ ಬೆನಕ ಪ್ರಸಾದ್ 92, ನಿಖಿಲ್ ಬಿ. ಪಾಟೀಲ್ 139, ವಿನಯ್ ಕುಮಾರ್ ಗಾಡಿಗೆ 151, ಚಿತ್ತರಂಜನ್ 155, ಕೆ. ಮನೋಜ್ ಕುಮಾರ್ 157, ಅಪೂರ್ವ ಬಸೂರ್ 191, ನಿತ್ಯಾ 207, ಮಂಜುನಾಥ್ 219, ರಾಜೇಶ್ ಪೊನ್ನಪ್ಪ 222, ಸಾಹಿತ್ಯ ಆಲದಕಟ್ಟಿ 150, ಕಲ್ಪಶ್ರೀ 291, ಅರುಣಾ 308, ದೀಪಕ್ ರಾಮಚಂದ್ರ ಶೇಠ್ 311ನೇ ರ್‍ಯಾಂಕ್, ಹರ್ಷವರ್ಧನ್ 318, ವಿನಯ್ ಕುಮಾರ್ 352, ಮೇಘನಾ 425, ಸವಿತಾ ಗೋಟ್ಯಾಲ್ 479, ಮೊಹಮ್ಮದ್ ಸಿದ್ದಿಕಿ ಷರೀಫ್ 516, ಚೇತನ್ ಕೆ. 532, ಎನ್.ಎಸ್ ಪ್ರಕಾಶ್ 568, ಪ್ರಶಾಂತ್ ಕುಮಾರ್ 641 ಹಾಗೂ ಸುಚಿನ್ ಕೆ.ವಿ 682ನೇ Rank ಪಡೆದಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:     UPSC ಪರೀಕ್ಷೆಯಲ್ಲಿ ಕನ್ನಡಿಗರ ಸಾಧನೆ; ಇಲ್ಲಿದೆ ಕರ್ನಾಟಕದ ಟಾಪರ್ಸ್​ ಲಿಸ್ಟ್​  

ಹಿಜಾಬ್ ಧರಿಸಲು ಅನುಮತಿ ಕೋರಿ ಡಿಸಿ ಕಚೇರಿ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

ಮಂಗಳೂರು ವಿಶ್ವವಿದ್ಯಾನಿಲಯದ (Mangaluru University) ಕೆಲ ಕಾಲೇಜಿನಲ್ಲಿ ಹಿಜಾಬ್ ವಿವಾದ (Hijab Controversy) ಮತ್ತೆ ಭಾರೀ ಸದ್ದು ಮಾಡ್ತಿದೆ. ಕಾಲೇಜಿನಲ್ಲಿ (College) ಹಿಜಾಬ್ ಧರಿಸಲು ಅವಕಾಶ ಕೋರಿ ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅನುಮತಿಗಾಗಿ ವಿದ್ಯಾರ್ಥಿನಿಯರು (Students) ಡಿ.ಸಿ ಕಚೇರಿ ಮೆಟ್ಟಿಲೇರಿದ್ರು. ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ವಿದ್ಯಾರ್ಥಿನಿಯರ ಜೊತೆಗೆ ಸಭೆ ನಡೆಸಿದ್ರು.  ಸಭೆ ಬಳಿಕ ಮಾತಾಡಿದ ಜಿಲ್ಲಾಧಿಕಾರಿಗಳು (District Collector)  ಸಿಂಡಿಕೇಟ್ ಸಭೆಯ (Syndicate Meeting) ನಿರ್ಣಯವನ್ನು ಪಾಲಿಸಲು ಸೂಚಿಸಿರೋದಾಗಿ ತಿಳಿಸಿದ್ದಾರೆ. ಸಭೆಯಲ್ಲಿ ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಅನುಸೂಯ ಅವರು ಕೂಡ ಭಾಗಿಯಾಗಿದ್ದರು.

ನೇಪಾಳ ವಿಮಾನ ಪತನದಲ್ಲಿ ಎಲ್ಲಾ 22 ಮಂದಿ ದುರ್ಮರಣ

ನೇಪಾಳದಲ್ಲಿ ಅಪಘಾತಕ್ಕೀಡಾದ ವಿಮಾನದಲ್ಲಿದ್ದ ಎಲ್ಲಾ (Nepal Plane Crash) ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಇಂದು ಎಎನ್‌ಐಗೆ ತಿಳಿಸಿದ್ದಾರೆ. ರಕ್ಷಣಾ ತಂಡಗಳು ನಾಲ್ಕು ಭಾರತೀಯರು (Four Indians) ಸೇರಿದಂತೆ 22 ಜನರಿದ್ದ ವಿಮಾನದ ಅವಶೇಷಗಳಿಂದ ಮೃತದೇಹಗಳನ್ನು ಹೊರತೆಗೆದಿವೆ. ಮೇ 29 ರಂದು ನೇಪಾಳದ ಪರ್ವತ ಪ್ರದೇಶವಾದ ಮುಸ್ತಾಂಗ್ ಜಿಲ್ಲೆಯಲ್ಲಿ (Mustang district) ನಾಲ್ವರು ಭಾರತೀಯರು ಸೇರಿದಂತೆ 22 ಪ್ರಯಾಣಿಕರಿದ್ದ ತಾರಾ ವಿಮಾನ (Tara Airlines) ಪತನದಲ್ಲಿ ಯಾರೊಬ್ಬರೂ ಬದುಕುಳಿದಿಲ್ಲ. ಸಂಜೆ 5 ಗಂಟೆಯವರೆಗೆ ರಕ್ಷಣಾ ಸಂಸ್ಥೆಗಳು ಅಪಘಾತದ ಸ್ಥಳದಿಂದ 21 ಮೃತದೇಹಗಳನ್ನು ಹೊರತೆಗೆದಿವೆ. ಕೆಲವು ಶವಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ರಕ್ಷಣಾ ಸಿಬ್ಬಂದಿ ಹೇಳಿದರು. ನಾಲ್ಕು ಭಾರತೀಯ ಪ್ರಜೆಗಳಲ್ಲದೆ, ಇಬ್ಬರು ಜರ್ಮನ್ನರು ಮತ್ತು 13 ನೇಪಾಳಿ ಪ್ರಯಾಣಿಕರು ಮತ್ತು ಮೂವರು ಸದಸ್ಯರ ನೇಪಾಳಿ ಸಿಬ್ಬಂದಿ ದುರದೃಷ್ಟಕರ ಟರ್ಬೊಪ್ರಾಪ್ ಟ್ವಿನ್ ಓಟರ್ 9N-AET ವಿಮಾನದಲ್ಲಿದ್ದರು.

ಚಾರ್ಲಿ ಈ ಇಂಗ್ಲಿಷ್ ಸಿನಿಮಾದಿಂದ ಕದ್ದ ಕತೆಯಾ?

ಆರ್​ ಮಾಧವನ್​ ಎನ್ನುವ ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ವಿಡಿಯೋವೊಂದನ್ನು ಹಾಕಿದ್ದು, ಅದರಲ್ಲಿ ಹಾಲಿವುಡ್​ ಚಿತ್ರ ಟೋಗೋ ಹಾಗೂ 777 ಚಾರ್ಲಿ ಚಿತ್ರವನ್ನು ಕಂಪೇರ್ ಮಾಡಿ ಎಡಿಟ್​ ಮಾಡಿ ಹಾಕಿದ್ದಾರೆ. ಈ ಟ್ರೇಲರ್​ನ ಫ್ರೇಮ್​ ಟೋಗೋ ಚಿತ್ರದ್ದು ಎಂದು ಚಾನೆಲ್​ನಲ್ಲಿ ತೋರಿಸಿದ್ದು, ಅದರಲ್ಲಿ ಎರಡು ಚಿತ್ರದ ಫ್ರೇಮ್​ಗಳನ್ನು ಒಟ್ಟಿಗೆ ಎಡಿಟ್​ ಮಾಡಿ ಹಾಕಲಾಗಿದೆ.  ಸದ್ಯ ಈ ವಿಡಿಯೋವನ್ನು 17 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದು, ಹಲವಾರು ಜನರು ಕಾಮೆಂಟ್​ ಸಹ ಮಾಡಿದ್ದಾರೆ.
Published by:Kavya V
First published: