Evening Digest: ಚಾರ್​​​ಧಾಮ್​​ ಯಾತ್ರೆ ಮಾರ್ಗಸೂಚಿಗಳು ಇಲ್ಲಿವೆ: ಕಮಲ್ ಹಾಸನ್ ಸಿನಿಮಾದಲ್ಲಿ ಕನ್ನಡದ ನಟಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಚಾರ್‌ಧಾಮ್‌ ಯಾತ್ರೆ ಮಾರ್ಗಸೂಚಿಗಳು : ಈ ವರ್ಷ ಮೇ 3 ರಂದು ಹಿಂದೂಗಳ ಪವಿತ್ರವಾದ ಚಾರ್‌ ಧಾಮ್‌ ಯಾತ್ರೆ (Char Dham Yatra) ಪ್ರಾರಂಭವಾಗಲಿದೆ. ಈ ಹಿನ್ನೆಲೆ ಯಾತ್ರೆಗೆ ತೆರಳುವ ಎಲ್ಲ ಭಕ್ತರು ಉತ್ತರಾಖಂಡ್‌ಗೆ (Uttarakhand) ಆಗಮಿಸುವ ಮೊದಲು ಆ ರಾಜ್ಯದ ಪೋರ್ಟಲ್‌ನಲ್ಲಿ (Portal) ನೋಂದಾಯಿಸಿಕೊಳ್ಳುವಂತೆ ಸೂಚನೆ ನೀಡಿದೆ. ಆದರೂ, ಚಾರ್‌ ಧಾಮ್‌ ಯಾತ್ರೆಗೆ ತೆರಳುವ ಭಕ್ತರಿಗೆ COVID-19 ಪರೀಕ್ಷೆ ಮತ್ತು ಲಸಿಕೆ ಪ್ರಮಾಣಪತ್ರಗಳ ಪರಿಶೀಲನೆಯನ್ನು ಕಡ್ಡಾಯಗೊಳಿಸಲಾಗಿಲ್ಲ. ಉತ್ತರಾಖಂಡದ ಹೊರಗಿನಿಂದಲೂ ಸಾಕಷ್ಟುಪ್ರಯಾಣಿಕರು ಹಾಗೂ ಯಾತ್ರಾರ್ಥಿಗಳು ಚಾರ್‌ ಧಾಮ್‌ ಯಾತ್ರೆಗೆ ತೆರಳಲಿದ್ದಾರೆ. ಈ ಹಿನ್ನೆಲೆ, ಅವರಿಗೆ ಕೋವಿಡ್ - 19 ಪರೀಕ್ಷೆಗಳನ್ನು ನಡೆಸಬೇಕೋ ಬೇಡವೋ ಎಂಬ ಗೊಂದಲವನ್ನು ನಿವಾರಿಸಲು ಅಲ್ಲಿನ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಸೂಚನೆಯ ಮೇರೆಗೆ ಮುಖ್ಯ ಕಾರ್ಯದರ್ಶಿ ಎಸ್‌.ಎಸ್. ಸಂಧು ಅವರು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Char Dham Yatra 2022: ಚಾರ್‌ಧಾಮ್‌ ಯಾತ್ರೆಗೆ ಕೋವಿಡ್‌ ಪರೀಕ್ಷೆ ಕಡ್ಡಾಯವೇ? ಮಾರ್ಗಸೂಚಿಗಳು ಇಲ್ಲಿವೆ

ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಗೈಡ್ ಲೈನ್​

ಭಾರತದಲ್ಲಿ ಕೋವಿಡ್ (Covid) 3ನೇ ಅಲೆ ಅಷ್ಟು ಪ್ರಭಾವ ಬೀರಿಲ್ಲ. ಈಗ 4ನೇ ಅಲೆ (4th Wave) ಬಗ್ಗೆ ಚರ್ಚೆಗಳು ಆರಂಭವಾಗಿವೆ. ಅದರಲ್ಲೂ ವಿವಿಧ ರಾಜ್ಯಗಳಲ್ಲಿ ಹೊಸ ಕೋವಿಡ್ ಪ್ರಕರಣಗಳ (Covid Case) ಸಂಖ್ಯೆ ಏರಿಕೆಯಾಗಿದ್ದು, ನಾಲ್ಕನೇ ಅಲೆ ಬಂದಿದೆಯೇ? ಎಂಬ ಅನುಮಾನ ಹುಟ್ಟುಹಾಕಿದೆ. ಕೇಂದ್ರ ಸರ್ಕಾರ (Central Government) ಏಪ್ರಿಲ್ 10ರಿಂದಲೇ 18 ವರ್ಷ ಮೇಲ್ಪಟ್ಟ ಎಲ್ಲರೂ ಬೂಸ್ಟರ್ ಡೋಸ್ (Booster Dose) ಪಡೆಯಲು ಅನುಮತಿ ನೀಡಿದೆ. ವಿವಿಧ ರಾಜ್ಯಗಳು ಕೋವಿಡ್ ಬೂಸ್ಟರ್ ಡೋಸ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿವೆ.

ಕಮಲ್ ಹಾಸನ್ ಸಿನಿಮಾದಲ್ಲಿ ಕನ್ನಡ ನಟಿ

ತಮಿಳು (Tamil) ಚಲನಚಿತ್ರೋದ್ಯಮದ ಹಿರಿಯ ನಟ ಕಮಲ್ ಹಾಸನ್ (Kamal Hassan) ಅವರ ಚಲನಚಿತ್ರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿ ತಿಳಿದರೆ ಸಾಕು ಅಭಿಮಾನಿಗಳು ಎಂತಹ ದೊಡ್ಡ ಸಾಲಿನಲ್ಲಿ ನಿಂತಾದರೂ ಟಿಕೆಟ್ (Ticket) ಪಡೆದುಕೊಂಡು ಸಿನಿಮಾ ನೋಡುತ್ತಾರೆ. ಈಗ ಇವರ ಮುಂಬರುವ ಚಿತ್ರವಾದ ‘ವಿಕ್ರಮ್’ (Vikram)  ನ ಬಿಡುಗಡೆಗಾಗಿ ಇವರ ಅಭಿಮಾನಿಗಳು (Fans) ಕಾತುರತೆಯಿಂದ ಕಾಯುತ್ತಿದ್ದಾರೆ ಎಂದು ಹೇಳಬಹುದು. ಇವತ್ತಿಗೂ ಅದೇ ಕ್ರೇಜ್ (Craze) ಅನ್ನು ಹಾಗೆಯೇ ಉಳಿಸಿಕೊಂಡು ಬಂದಿರುವ ಹಿರಿಯ ನಟರ ಪೈಕಿಯಲ್ಲಿ ಕಮಲ್ ಹಾಸನ್ ಸಹ ಒಬ್ಬರು ಎಂದು ಹೇಳಿದರೆ ತಪ್ಪಾಗುವುದಿಲ್ಲ.   ಎಷ್ಟೋ ಜನ ಯುವ ನಟ, ನಟಿಯರು ಇವರ ಜೊತೆ ಪರದೆಯನ್ನು ಹಂಚಿಕೊಳ್ಳಬೇಕೆಂದು ಕನಸು ಕಾಣುತ್ತಿರುತ್ತಾರೆ. ಇಂತಹ ಒಂದು ಅದೃಷ್ಟವು ಈಗ ಕನ್ನಡ ಚಲನಚಿತ್ರೋದ್ಯಮದ ನಟಿಗೆ ಒಲಿದು ಬಂದಿದೆ ಎಂದು ಹೇಳಬಹುದು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Vikram: ಕಮಲ್ ಹಾಸನ್ ಸಿನಿಮಾದಲ್ಲಿ ಕನ್ನಡ ನಟಿ! ಸಣ್ಣ-ಪುಟ್ಟ ಪಾತ್ರ ಅಲ್ಲ, ಇಂಟ್ರೆಸ್ಟಿಂಗ್​ ಕ್ಯಾರೆಕ್ಟರ್​

ನಟಿ ಜಾಕ್ವೆಲಿನ್ ₹7.27 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಸುಕೇಶ್ ಚಂದ್ರಶೇಖರ್ (Conman Sukesh Chandrashekhar) ಅವರ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Actor Jacqueline Fernandez) ಅವರ ಆಸ್ತಿಯನ್ನು ಜಪ್ತಿ ಮಾಡಿದೆ. ಮೂಲಗಳ ಪ್ರಕಾರ, 7.27 ಕೋಟಿ ಮೌಲ್ಯದ ಸ್ಥಿರ ಠೇವಣಿ ಮೌಲ್ಯದ ವಸ್ತುಗಳು ಮತ್ತು ಆಸ್ತಿಯನ್ನು ತನಿಖಾ ಸಂಸ್ಥೆ ಜಪ್ತಿ ಮಾಡಿದೆ. ಕಾನ್‌ಮ್ಯಾನ್ ಚಂದ್ರಶೇಖರ್ ನಟಿಗೆ ಸಾಕಷ್ಟು ಐಷಾರಾಮಿ ಉಡುಗೊರೆಗಳನ್ನು ನೀಡಿದ್ದರು. ಇದರಲ್ಲಿ ಜಿಮ್ ಉಡುಗೆಗಾಗಿ ಗುಚಿ ಬಟ್ಟೆಗಳು, ಶೂಗಳು, ರೋಲೆಕ್ಸ್ ವಾಚ್, 15 ಜೋಡಿ ಕಿವಿಯೋಲೆಗಳು, 5 ದುಬಾರಿ ಬ್ಯಾಗ್‌ಗಳು, ಹರ್ಮ್ಸ್ ಬಳೆಗಳು ಮತ್ತು ಎಲ್‌ವಿ ಬ್ಯಾಗ್‌ಗಳು ಸೇರಿವೆ. ಚಾರ್ಜ್ ಶೀಟ್ ಪ್ರಕಾರ ಜಾಕ್ವೆಲಿನ್ ಗೆ ಮಿನಿ ಚಾಪರ್ ನೀಡಿದ್ದು, ಅದನ್ನು ವಾಪಸ್ ನೀಡಿದ್ದರು. ಆಕೆಯನ್ನು ಇಡಿ ಹಲವು ಬಾರಿ ವಿಚಾರಣೆಗೆ ಕರೆಸಿತ್ತು.

KGF 2 ಸಿನಿಮಾ ನೋಡಿದ ಗುಜರಾತ್ ಟೈಟನ್ಸ್​ ಟೀಂ

ಬೆಂಗಳೂರು ಬಾಯ್ಸ್​ ರಾಕಿ ಭಾಯ್​ ಅಬ್ಬರ ಕಂಡು ದಂಗಾಗಿ ಹೋಗಿದ್ದರು. ಇದೀಗ ಗುಜರಾತ್ ಟೈಟನ್ಸ್ ತಂಡದ ಆಟಗಾರರು ಸಹ ಕೆಜಿಎಫ್ ಚಾಪ್ಟರ್ 2 ಸಿನಿಮಾವನ್ನು ವೀಕ್ಷಿಸಿದ್ದು, ಈ ವಿಷಯವನ್ನು ಸ್ವತಃ ಗುಜರಾತ್ ಟೈಟನ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಗುಜರಾತ್ ಟೈಟನ್ಸ್ ಫ್ರಾಂಚೈಸಿ ತಮ್ಮ ಆಟಗಾರರು ಹಾಗೂ ಸಿಬ್ಬಂದಿ ವರ್ಗದವರಿಗಾಗಿ ಕೆಜಿಎಫ್ ಚಾಪ್ಟರ್ 2 ಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಿತ್ತು. ನಿನ್ನೆ ( ಏಪ್ರಿಲ್ 29 ) ಎಲ್ಲರೂ ಕೆಜಿಎಫ್​ 2 ಸಿನಿಮಾವನ್ನು ನೋಡಿದ್ದಾರೆ.
Published by:Kavya V
First published: