Evening Digest: ಜಮೀರ್ ಪುತ್ರನಿಗೆ ಶಾಕ್, ಲಿಂಬಾವಳಿ ಗರಂ, ರಾಮನಗರದಲ್ಲಿ ನಕಲಿ ಬಾಬಾ- ಇಂದಿನ ಪ್ರಮುಖ ಸುದ್ದಿಗಳು

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ರಾಮನಗರದಲ್ಲಿದ್ದಾನೆ ನಕಲಿ ಪ್ರೇಮಸಾಯಿಬಾಬಾ!

ಈಗ ಎಲ್ಲೆಡೆ ನಕಲಿ ಸ್ವಾಮೀಜಿಗಳ (Fake Swamy) ಹಾವಳಿಯೇ ಜಾಸ್ತಿಯಾಗಿದೆ. ಜನರ ಭಕ್ತಿ, ನಂಬಿಕೆ, ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳುವ ನಕಲಿ ಸ್ವಾಮೀಜಿ, ಬಾಬಾಗಳು, ಬಳಿಕ ಮೋಸ ಮಾಡಿ ಎಸ್ಕೇಪ್ ಆಗುತ್ತಾರೆ. ರಾಮನಗರ (Ramanagar) ಜಿಲ್ಲೆಯ ಚನ್ನಪಟ್ಟಣದಲ್ಲಿಯೂ ನಡೆದಿದೆ. ತಾನು ಪ್ರೇಮಸಾಯಿಬಾಬಾ (Prema Saibaba) ಎಂದು ನಂಬಿಸಿ, ಜನರಿಗೆ ಸುಮಾರು 1.5 ಕೋಟಿ ರೂಪಾಯಿ ವಂಚಿಸಿ ಎಸ್ಕೇಪ್ ಆಗಿದ್ದಾನಂತೆ. ಈತ ನಾನು ದೇವಮಾನವ, ಜನರ ಕಷ್ಟಗಳನ್ನು ಪರಿಹಾರ ಮಾಡುತ್ತೇನೆಂದು ನಂಬಿಸಿದ್ದಾನೆ. ಮತ್ತೊಂದೆಡೆ ಮಹಿಳೆಯೊಬ್ಬಳ ತೋಟ ತನ್ನ ಹೆಸರಿಗೆ ಬರೆದುಕೊಡುವಂತೆ ಕಿರುಕುಳ ನೀಡಿದ್ದು, ಈ ಮಹಿಳೆ ಪೊಲೀಸ್ ಠಾಣೆ (Police Station) ಮೆಟ್ಟಿಲೇರಿದ್ದಾಳೆ.

ಇದನ್ನೂ ಓದಿ: ಸಾಯಿಯಲ್ಲ, ಈತ ಪ್ರೇಮಸಾಯಿಯಂತೆ; ಮಹಿಳೆಗೆ ಕಿರುಕುಳ, ಒಂದೂವರೆ ಕೋಟಿ ವಂಚಿಸಿದ ನಕಲಿ ಬಾಬಾ!

ಮುರುಘಾ ಸ್ವಾಮೀಜಿಗೆ ಪುರುಷತ್ವ ಪರೀಕ್ಷೆ, ತನಿಖೆ ಬಗ್ಗೆ ಅನುಮಾನ

ಪೋಕ್ಸೋ ಆರೋಪ (POCSO Allegation) ಎದುರಿಸುತ್ತಿರುವ ಚಿತ್ರದುರ್ಗದ ಮರುಘಾ ಮಠದ ಶಿವಮೂರ್ತಿ ಸ್ವಾಮೀಜಿ (Murugah Shri) ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು (Police Custody), ವಿಚಾರಣೆ ಎದುರಿಸುತ್ತಿದ್ದಾರೆ. ಶರಣರ ವಿರುದ್ಧ ಎಫ್ಐಆರ್ (FIR) ದಾಖಲಾದ ಬಳಿಕ ಪೊಲೀಸರ ತನಿಖೆ ಬಗ್ಗೆ ಒಡನಾಡಿ ಸಂಸ್ಥೆ (Odanadi Organization) ಆರಂಭದಿಂದಲೂ ಅನುಮಾನ ವ್ಯಕ್ತಪಡಿಸುತ್ತಲೇ ಬಂದಿದೆ. ಗುರುವಾರ ರಾತ್ರಿ ಮುರುಘಾ ಶರಣರನ್ನು ಮಠದಲ್ಲಿಯೇ ವಿಚಾರಣೆ ನಡೆಸಲಾಗಿತ್ತು. ನಂತರ ಶರಣರನ್ನು ಬಂಧಿಸಿ ರಾತ್ರಿಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಪೊಲೀಸರು ಆರೋಪಿಯನ್ನ ತಮ್ಮ ವಶಕ್ಕೆ ಕೇಳದ ಹಿನ್ನೆಲೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಹೀಗಾಗಿ ಪೊಲೀಸರ ತನಿಖೆಯ ಬಗ್ಗೆ ಒಂದಿಷ್ಟು ಅನುಮಾನಗಳು ಹುಟ್ಟಿಕೊಂಡಿವೆ.

ಮಹಿಳೆ ಮೇಲೆ ಗದರಿದ ಶಾಸಕ ಅರವಿಂದ ಲಿಂಬಾವಳಿ

ಜನಪ್ರತಿನಿಧಿಗಳು ತಮ್ಮ ಕ್ಷೇತ್ರಕ್ಕೆ ಅಥವಾ ಊರಿಗೆ ಬಂದರೆ ಸ್ಥಳೀಯರು (People) ತಮ್ಮ ಸಮಸ್ಯೆ ಹೇಳಿಕೊಳ್ಳಲು ಬರೋದು ಸಾಮಾನ್ಯ. ಅದೇ ರೀತಿ ಶಾಸಕ ಅರವಿಂದ್ ಲಿಂಬಾವಳಿ (MLA Aravind Limbavali) ಬಳಿ ಮಹಿಳೆಯೊಬ್ಬರು ಮನವಿ ಸಲ್ಲಿಸಲು ಬಂದಿದ್ದರು. ಆದ್ರೆ ಶಾಸಕರು (MLA) ಮಾತ್ರ ಮಹಿಳೆಗೆ ಗದರಿ, ಪೊಲೀಸ್ ಠಾಣೆಯಲ್ಲಿ ಕೂರಿಸಿ ಎಂದು ಅವಾಜ್ ಹಾಕಿ ಬೆದರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ (Aravind Limbavali Video) ನೋಡಿದ ನೆಟ್ಟಿಗರು ಇವರೇನಾ ನಮ್ಮ ಜನಪ್ರತಿನಿಧಿಗಳು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕೋಪಗೊಂಡ ಮಾನ್ಯ ಶಾಸಕರು, ಏ ಇವರನ್ನು ಕರ್ಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ಕೂರಿಸಿ ಎಂದು ಅಲ್ಲಿದ್ದ ಸಿಬ್ಬಂದಿಗೆ ಸೂಚಿಸುತ್ತಾರೆ.

ಚೀನಾ ಹಿಂದಿಕ್ಕಿದ ಭಾರತ, ಜಿಡಿಪಿ ಹೆಚ್ಚಳ

ಜಾಗತಿಕವಾಗಿ ಅನೇಕ ದೇಶಗಳು ಆರ್ಥಿಕತೆಯನ್ನು (Economy) ಸಮದೂಗಿಸುವಲ್ಲಿ ಹೆಣಗಾಡುತ್ತಿರುವ ಸಂದರ್ಭದಲ್ಲಿ ಭಾರತವು ಆರ್ಥಿಕತೆಯಲ್ಲಿ (Indian Economy) ಉತ್ತಮ ಬೆಳವಣಿಗೆಯನ್ನು ಕಂಡಿದೆ. ಹೌದು ಭಾರತದ ಈ ವರ್ಷದ ಪ್ರಸಕ್ತ ಆರ್ಥಿಕತೆಯು ಉತ್ತಮ ಗಳಿಕೆಯನ್ನು ಕಂಡಿದೆ. ದೇಶದ ಒಟ್ಟು ದೇಶೀಯ ಉತ್ಪನ್ನ (Gross domestic product) (ಜಿಡಿಪಿ) ಬೆಳವಣಿಗೆ ಗಣನೀಯವಾಗಿ ಏರಿಕೆ ಕಂಡಿದೆ. ಈ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್ -ಜೂನ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.13.5% ರಷ್ಟು ಪ್ರಗತಿ ದಾಖಲಿಸಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​​ನಲ್ಲಿ ಬಾಯ್ಕಾಟ್​ ಟ್ರೆಂಡ್​; ಜಮೀರ್​ ಪುತ್ರನ ಬನಾರಸ್​ ಚಿತ್ರಕ್ಕೆ ಹಿಂದೂ ಕಾರ್ಯಕರ್ತರ ವಿರೋಧ

ಜಮೀರ್​ ಪುತ್ರನ ಬನಾರಸ್​ ಚಿತ್ರಕ್ಕೆ ಹಿಂದೂ ಕಾರ್ಯಕರ್ತರ ವಿರೋಧ

ಶಾಸಕ ಜಮೀರ್ ಅಹ್ಮದ್ ಇತ್ತೀಚಿಗೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರಕ್ಕೆ ಭಾರೀ ಸುದ್ದಿಯಾಗಿದ್ರು. ಈ ಎಫೆಕ್ಟ್ ಈಗ ಮಗನ ಚಿತ್ರದ ಮೇಲೆ ಆಗ್ತಿದೆ. ಜಮೀರ್ ಮಗನ ಚೊಚ್ಚಲ ಚಿತ್ರಕ್ಕೆ ಕಂಟಕ ಎದುರಾಗಿದೆ. ನಟ ಜೈದ್ ಖಾನ್ (Zaid Khan) ಅವರು ಚಿತ್ರರಂಗ ಪ್ರವೇಶಿಸಿದ್ದಾರೆ. ಜೈದ್ ಖಾನ್ ಅಭಿನಯದ ಬನಾರಸ್ (Banaras Movie) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಜಯತೀರ್ಥ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಆದ್ರೆ ಇದೀಗ ಚಿತ್ರಕ್ಕೆ ಬಾಯ್ಕಾಟ್ ಬಿಸಿ ತಟ್ಟಿದೆ.
Published by:Thara Kemmara
First published: