Evening Digest: ಕಾಂಗ್ರೆಸ್ ಗೆಲ್ಲಿಸೋ ಹೊಣೆ ಹೊತ್ತಿದ್ದಾರೆ ಈ ಅಪರಿಚಿತ ವ್ಯಕ್ತಿ: ಶಿಶುವಿನ ಕಾಲು ಕಚ್ಚಿ ತಿಂದ ಇಲಿಗಳು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕಾಂಗ್ರೆಸ್ ಗೆಲ್ಲಿಸೋ ಹೊಣೆ ಹೊತ್ತಿದ್ದಾರೆ ಈ ಅಪರಿಚಿತ ವ್ಯಕ್ತಿ : ಭಾರತದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಅದ್ಭುತವಾಗಿ ರಣ ತಂತ್ರಗಳನ್ನು ಹೆಣೆಯಬಲ್ಲ ಪ್ರಶಾಂತ್ ಕಿಶೋರ್ (Prashant Kishor) ಕುರಿತು ಸಾಕಷ್ಟು ಜನರಿಗೆ ಈಗಾಗಲೇ ತಿಳಿದಿರಬಹುದು. ಆದರೆ, ಈ ನಿಟ್ಟಿನಲ್ಲಿ ಬಹುತೇಕರಿಗೆ ಸುನೀಲ್ ಕಣುಗೋಲು (Sunil Kanugolu) ಯಾರೆಂಬುದು ಬಹುಶಃ ಗೊತ್ತಿರಲಿಕ್ಕಿಲ್ಲ. ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ (Karnataka Assembly Elections) ಚುನಾವಣೆಯಲ್ಲಿ ಕಾಂಗ್ರೆಸ್ (Congress) ಮತ್ತೆ ತನ್ನ ಕಳೆದುಹೋಗಿರುವ ವರ್ಚಸ್ವವನ್ನು ಮುಖ್ಯವಾಹಿನಿಗೆ ತರುವಂತಾಗಲು ಅದಕ್ಕೆ ಬೇಕಾದ ರಣನೀತಿಗಳನ್ನು ರಚಿಸಿ ಅನುಷ್ಠಾನಗೊಳಿಸಲು ಪಕ್ಷದಿಂದ ಆಯ್ಕೆ ಮಾಡಲಾದ ವ್ಯಕ್ತಿಯೇ ಸುನೀಲ್ ಕಣುಗೋಲು ಎನ್ನಲಾಗುತ್ತಿದೆ. ಹಾಗಾದರೆ ಯಾರು ಇವರು? ಯಾರು ಈ ತಂತ್ರಗಾರ? ಇಲ್ಲಿದೆ ನೋಡಿ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Sunil Kanugolu: ಸಿದ್ದರಾಮಯ್ಯ, ಡಿಕೆಶಿ ಇಬ್ಬರೂ ಅಲ್ಲ, ಕಾಂಗ್ರೆಸ್ ಗೆಲ್ಲಿಸೋ ಹೊಣೆ ಹೊತ್ತಿದ್ದಾರೆ ಈ ಅಪರಿಚಿತ ವ್ಯಕ್ತಿ!

ನಾಯಕತ್ವ ಬದಲಾವಣೆ ಬಗ್ಗೆ ಮಾತಾಡಿದವರಿಗೆ ಕಟೀಲ್ ಕೊಟ್ರು ಖಡಕ್ ವಾರ್ನಿಂಗ್

ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್​ ಶಾ (Amith Sha) ಭೇಟಿ ಕೊಡ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆ ಗರಿಗೆದರಿದೆ. ಅಮಿತ್​ ಶಾ ಆಗಮನ ಹಿನ್ನೆಲೆ ಬಿಜೆಪಿ ನಾಯಕರಲ್ಲಿ (BJP Leaders) ಅನೇಕ ಭರವಸೆಗಳು ಗರಿಗೆದರಿದೆ. ಅಮಿತ್​ ಶಾ ಜೊತೆ ಸಭೆ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ (Cabinet Expansion) ಮಾಡಲಾಗುತ್ತೆ ಅನ್ನೋ ಮಾತು ಕೇಳಿ ಬರ್ತಿದೆ. ಸಿಎಂ ಕೂಡ ಬದಲಾಗ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಇನ್ನು ಇದೇ ವಿಚಾರವಾಗಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, (Nalin Kumar Kateel) ನಾಯಕತ್ವ ಗೊಂದಲದ ಬಗ್ಗೆ ನಮ್ಮ ಪಾರ್ಟಿಯಲ್ಲಿ ಯಾವುದೇ ರೀತಿಯ ಗೊಂದಲಗಳು ಇಲ್ಲ, ಬೊಮ್ಮಾಯಿ (Bommai) ನಾಯಕತ್ವದಲ್ಲೇ ಮುಂದಿನ ಚುನಾವಣೆ ಮಾಡ್ತೀವಿ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಒಟ್ಟಾಗಿ ಚುನಾವಣೆ ಎದುರಿಸಿ, 150 ಸೀಟು ಗೆಲ್ಲುತ್ತೇವೆ ಎಂದ್ರು.

ಶಿಶುವಿನ ಕಾಲು ಕಚ್ಚಿ ತಿಂದ ಇಲಿಗಳು

ಸರ್ಕಾರಿ ಆಸ್ಪತ್ರೆಗಳ (Govt Hospital) ಅವ್ಯವಸ್ಥೆ ಒಂದೆರಡಲ್ಲ. ಹಾಗಾಗಿಯೇ ಜನರು ಸರ್ಕಾರಿ ಆಸ್ಪತ್ರೆಯತ್ತ ಮುಖ ಮಾಡಲು ಹೆದರುತ್ತಾರೆ. ಜನರು ಹೆದರುವಂತೆಯೇ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆಯೂ ಪ್ರಶ್ನೆ ಮಾಡುವಂತಿರುತ್ತದೆ.  ನಿರ್ಲಕ್ಷ್ಯದ ಪ್ರಕರಣದಲ್ಲಿ, ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನವಜಾತ ಶಿಶುವಿನ (Newborn) ಪಾದಗಳನ್ನು(Feet) ಇಲಿಗಳು (Rat) ಕಚ್ಚಿದವು, ಆಸ್ಪತ್ರೆಯ ಆಡಳಿತವು ತನಿಖೆಗೆ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವಜಾತ ಶಿಶುಗಳ ಸರ್ಕಾರಿ ಮಹಾರಾಜ ಯಶವಂತರಾವ್ (ಎಂವೈ) ಆಸ್ಪತ್ರೆಯ ನರ್ಸರಿ ಆರೈಕೆ ಘಟಕದಲ್ಲಿ ಮಗುವಿನ ಪಾದಗಳನ್ನು ಇಲಿಗಳು ಕಚ್ಚುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಆಸ್ಪತ್ರೆಯ ಅಧೀಕ್ಷಕ ಡಾ.ಪ್ರಮೇಂದ್ರ ಠಾಕೂರ್ ತಿಳಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Rats nibble baby feet: ನವಜಾತ ಶಿಶುವಿನ ಕಾಲು ಕಚ್ಚಿ ತಿಂದ ಇಲಿಗಳು, ತನಿಖೆಗೆ ಆದೇಶ

ಮನೆಯಲ್ಲಿ ಸಿಕ್ತು 700 ಕೋಟಿ ಬೆಲೆಯ ಹೆರಾಯಿನ್!

ಗುಜರಾತ್ (Gujarat) ಭಯೋತ್ಪಾದನಾ ನಿಗ್ರಹ ದಳ (ATS) ದೆಹಲಿ (Delhi) ಪೊಲೀಸರ ವಿಶೇಷ ಕೋಶ ಮತ್ತು ಯುಪಿ ಪೊಲೀಸ್ (UP Police) ವಿಶೇಷ ಕಾರ್ಯಾಚರಣೆ ಗುಂಪು (SOG) ಜಂಟಿ ಕಾರ್ಯಾಚರಣೆಯಲ್ಲಿ ಸೋಮವಾರ ಉತ್ತರ ಪ್ರದೇಶದ ಮುಜಾಫರ್‌ನಗರದ ಮನೆಯೊಂದರಿಂದ ಸುಮಾರು 700 ಕೋಟಿ ರೂಪಾಯಿ ಮೌಲ್ಯದ ಸುಮಾರು 155 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ಗುಜರಾತ್, ನವದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಎಟಿಎಸ್ ನಡೆಸಿದ ಮಾದಕ ದ್ರವ್ಯ ದಂಧೆಯ ಸರಣಿಯಲ್ಲಿ ಇದು ಇತ್ತೀಚಿನದು. ಗುಜರಾತ್ (Gujarat) ಎಟಿಎಸ್ ಅಧಿಕಾರಿಗಳ ಪ್ರಕಾರ, ದೆಹಲಿ ಮೂಲದ ಆರೋಪಿ ರಾಜಿ ಹೈದರ್ ಅವರ ಸಂಬಂಧಿಯೊಬ್ಬನ ಮನೆಯಲ್ಲಿ ಡ್ರಗ್ ಪ್ಯಾಕೇಜ್ (Drugs Package) ಪತ್ತೆಯಾಗಿದೆ, ಈ ಹಿಂದೆ ಗುಜರಾತ್ ಎಟಿಎಸ್ ಮುಜಾಫರ್‌ನಗರದ ಕಾರ್ಖಾನೆ ಆವರಣದಿಂದ 35 ಕಿಲೋಗ್ರಾಂಗಳಷ್ಟು ಹೆರಾಯಿನ್ ಪತ್ತೆಯಾದ ನಂತರ ಅವರನ್ನು ಬಂಧಿಸಿತ್ತು.

ಅಮೆರಿಕದಲ್ಲಿ ರಾಜ್ ಬಿ ಶೆಟ್ಟಿ

ಸ್ಯಾಂಡಲ್‌ವುಡ್‌ (Sandalwood) ನಟ (Hero), ನಿರ್ದೇಶಕ (Director), ಬಹುಮುಖ ಪ್ರತಿಭೆಯ ರಾಜ್‌ ಬಿ. ಶೆಟ್ಟಿ (Raj B. Shetty) ಅಂದ ಕೂಡಲೇ ನಿಮಗೆ ಹೆಚ್ಚಾಗಿ ನೆನಪಾಗೋದು ಅವರ ‘ಒಂದು ಮೊಟ್ಟೆಯ ಕಥೆ’ ಹಾಗೂ ‘ಗರುಡ ಗಮನ ವೃಷಭ ವಾಹನ’ ಸಿನಿಮಾಗಳ ನಟನೆಯಿಂದ. ಸದ್ಯ, ರಾಜ್. ಬಿ ಶೆಟ್ಟಿ ಅವರು ಹಾಲಿಡೇ (Holiday) ಮೋಡ್‌ನಲ್ಲಿದ್ದಾರೆ. ಹೌದು, ಅವರು ಮೇ ಮೊದಲ ವಾರದವರೆಗೆ ಯುಎಸ್ (US) ಪ್ರವಾಸದಲ್ಲಿದ್ದಾರೆ (Tour) ಮತ್ತು ನಟ-ಚಲನಚಿತ್ರ ನಿರ್ಮಾಪಕರು ತಮ್ಮ ಸಮಯವನ್ನು ಚೆನ್ನಾಗಿ ಎಂಜಾಯ್‌ ಮಾಡುತ್ತಿದ್ದಾರೆ. ತಮ್ಮ ಅಮೆರಿಕ ಪ್ರವಾಸದ ಬಗ್ಗೆ ರಾಜ್‌. ಬಿ ಶೆಟ್ಟಿ ಮಾಧ್ಯಮವೊಂದರ ಜತೆ ಹಂಚಿಕೊಂಡಿರುವುದು ಹೀಗೆ.. "ನಾನು ಹೊಸದೇನನ್ನಾದರೂ ಪ್ರಯತ್ನಿಸಲು ಇಷ್ಟಪಡುತ್ತೇನೆ - ಅದು ತವರು ನೆಲದಲ್ಲೇ ಆಗಲಿ ಅಥವಾ ವಿದೇಶಿ ತೀರದಲ್ಲೇ ಆಗಲಿ. ಅದು ರಸ್ತೆ ಬದಿಯ ಟೀ ಸ್ಟಾಲ್‌ನಲ್ಲಿ ಕುಳಿತಿರಬಹುದೇ ಆಗಿರಲಿ ಅಥವಾ ಜಲಪಾತದ ಕೆಳಗೆ ಕುಳಿತಿರುವುದೇ ಆಗಲಿ - ಒಟ್ಟಾರೆ ನಾನು ಸಂಪೂರ್ಣವಾಗಿ ಅನುಭವದಲ್ಲಿ ಮುಳುಗಿದ್ದೇನೆ ಎಂದು ಖಚಿತಪಡಿಸಿಕೊಳ್ಳುತ್ತೇನೆ. ಇಲ್ಲಿಯೂ ನಾನು ಅದನ್ನೇ ಮಾಡುತ್ತಿದ್ದೇನೆ” ಎಂದು ನಟ ಹಾಗೂ ನಿರ್ಮಾಪಕ ರಾಜ್. ಬಿ ಶೆಟ್ಟಿ ಹಂಚಿಕೊಳ್ಳುತ್ತಾರೆ.
Published by:Kavya V
First published: