Evening Digest: ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆಗಳಿಗೆ ಬ್ರೇಕ್: ನಟ ಪ್ರಭಾಸ್ ಮದುವೆ ಆಗದಿರಲು ಇದೇ ಕಾರಣವಂತೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆಗಳಿಗೆ ಹೈಕೋರ್ಟ್ ಬ್ರೇಕ್ : ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜಧಾನಿಯಲ್ಲೇ ಪ್ರತಿಭಟನೆ (Protest) ಮೆರವಣಿಗೆಗಳನ್ನ ಮಾಡ್ತಾರೆ. ಆದ್ರೆ ಅದರ ಬಿಸಿ ತಟ್ಟಿ ತೊಂದರೆ ಅನುಭವಿಸೋದು ಸಾರ್ವಜನಿಕರು ಹಾಗೂ ವಾಹನ ಸವಾರರು ಮಾತ್ರ. ಬೃಹತ್ ಮೆರವಣಿಗೆಗಳಿಂದ ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗುತ್ತೆ. ಆಫೀಸ್ ಹಾಗೂ ಮನೆಗೆ ಸೇರೋ ಜನ ಪರದಾಡುವಂತೆ ಆಗೋದು ಬೆಂಗಳೂರಲ್ಲಿ ಸಾಮಾನ್ಯ, ಇದಕ್ಕೆಲ್ಲಾ ಬ್ರೇಕ್ ಹಾಕಲು ಇದೀಗ ಹೈಕೋರ್ಟ್ (High court) ಮುಂದಾಗಿದ್ದು ಮಹತ್ವದ ಆದೇಶ (Order) ಹೊರಡಿಸಿದೆ. ಬೆಂಗಳೂರಲ್ಲಿ ಇನ್ಮುಂದೆ ಬೃಹತ್ ಜಾಥಾ, ಪ್ರತಿಭಟನೆಗಳಿಗೆ ಅನುಮತಿ ನೀಡದಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದೆ. ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಜಾಥಾ, ಮೆರವಣಿಗೆ, ಧರಣಿಗೆ ಅನುಮತಿ ನೀಡದಂತೆ ಹೈಕೋರ್ಟ್ ಆದೇಶ ಹೊರಡಿಸಿದೆ. ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರತಿಭಟನೆಯಿಂದಾಗಿ ಸಾರ್ವಜನಿಕರಿಗೆ ಹೆಚ್ಚಾಗಿ ತೊಂದರೆ ಆಗ್ತಿದೆ ಹೀಗಾಗಿ ಯಾವುದೇ ಬೃಹತ್ ಮೆರವಣಿಗೆಗೆ ಬೆಂಗಳೂರಲ್ಲಿ ಅನುಮತಿ ನೀಡದಂತೆ ಹೈಕೋರ್ಟ್ ರಾಜ್ಯಕ್ಕೆ ಸೂಚನೆ ನೀಡಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: High Court Order: ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ, ಮೆರವಣಿಗೆಗಳಿಗೆ ಬ್ರೇಕ್, ಹೈಕೋರ್ಟ್ ಖಡಕ್ ಆದೇಶ

ಕನ್ನಡಿಗರಿಗೆ ಫೋನ್ ಮಾಡಿ ಧೈರ್ಯ ತುಂಬಿದ CM ಬೊಮ್ಮಾಯಿ
ಉಕ್ರೇನ್ (Ukraine) ಹಾಗೂ ರಷ್ಯಾ (Russia) ಯುದ್ಧ ಹಿನ್ನೆಲೆ ಉಕ್ರೇನ್ನ ಖಾರ್ಕಿವ್ ನಲ್ಲಿ ಭಾರತೀಯ ವಿದ್ಯಾರ್ಥಿಗಳು (Indian Students) ಸಿಲುಕಿಕೊಂಡಿದ್ದು. ಖಾರ್ಕಿವ್ (Kharkiv) ಬಿಡುವಂತೆ ಭಾರತೀಯ ವಿದ್ಯಾರ್ಥಿಗಳಿಗೆ ಸೂಚನೆ ಕೊಡಲಾಗಿದೆ. ಈ ಮಧ್ಯೆ, ಖಾರ್ಕಿವ್ ನಲ್ಲಿ ಸಿಲುಕಿರುವ ಕೆಲ ಕರ್ನಾಟಕ ವಿದ್ಯಾರ್ಥಿಗಳ (Karnataka Students) ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದು ಬಂದಿದೆ. ಉಕ್ರೇನ್ನಲ್ಲಿ ಸಿಲುಕಿರುವ 694 ಕರ್ನಾಟಕದ ವಿದ್ಯಾರ್ಥಿಗಳ ಪೈಕಿ 86 ಜನ ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್ ಆಗಿದ್ದಾರೆ. ಆದರೆ ಕೆಲ ವಿದ್ಯಾರ್ಥಿಗಳ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ. 694 ಜನ ವಿದ್ಯಾರ್ಥಿಗಳ ಕುಟುಂಬಸ್ಥರಿಂದ ಸರ್ಕಾರ ಮಾಹಿತಿ ಪಡೆಯುತ್ತಿದೆ. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ, (CM Basavaraja Bommai) ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರಿಗೆ ಫೋನ್ ಮಾಡಿ ಮಾತಾಡಿದ್ದಾರೆ.

‘ನಾವು ಪುಟಿನ್​​ ಅವರನ್ನು ಯುದ್ಧ ನಿಲ್ಲಿಸುವಂತೆ ಕೇಳಬಹುದಾ?’
ನ್ಯಾಯಾಲದಲ್ಲಿ ಉಕ್ರೇನ್ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಸಂಬಂಧದ ಅರ್ಜಿಯ ವಿಚಾರಣೆಯೊಂದು ನಡೆಯುತ್ತಿದ್ದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಅವರಿಗೆ ಸಂಬಂಧಿದಂತಹ ಪೋಸ್ಟ್ ಒಂದರ ಪ್ರತಿಯಾಗಿ ಅವರು ಈ ರೀತಿ ಕೇಳಿದ್ದಾರೆಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮವೊಂದರಲ್ಲಿ, ಒಂದು ವಿಡಿಯೊ ಹಂಚಿಕೊಳ್ಳಲಾಗಿದ್ದು ಅದರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ಏನು ಮಾಡುತ್ತಿದ್ದಾರೆ, ಅವರು ಭಾರತೀಯರನ್ನು ಕರೆತರಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಕೇಳಲಾಗಿದ್ದು ಆ ವಿಡಿಯೊಗೆ ಪ್ರತಿಕ್ರಿಯಿಸುತ್ತ ಮುಖ್ಯ ನ್ಯಾಯಮೂರ್ತಿಗಳು "ನಾವು ಪುಟಿನ್ ಅವರನ್ನು ಯುದ್ಧ ನಿಲ್ಲಿಸುವಂತೆ ಕೇಳಬಹುದೆ?" ಅಚ್ಚರಿಯ ಅಭಿಪ್ರಾಯ ನೀಡಿದ್ದಾರೆ.

ನಟ ಪ್ರಭಾಸ್ ಮದುವೆ ಆಗದಿರಲು ಇದೇ ಕಾರಣವಂತೆ

ಬಾಹುಬಲಿ' ಖ್ಯಾತಿಯ ಸೌತ್ ಸೂಪರ್ಸ್ಟಾರ್ ಪ್ರಭಾಸ್ ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ರಾಧೆ ಶ್ಯಾಮ್'ಗಾಗಿ ಸುದ್ದಿಯಲ್ಲಿದ್ದಾರೆ. ಕೊರೊನಾ ಕಾರಣ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ಚಿತ್ರದ ಎರಡನೇ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ್ದಾರೆ. ಇದು ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಬಹರಂಗಪಡಿಸಿದೆ. 'ಸಾಮಾನ್ಯವಾಗಿ ಪ್ರೀತಿಯ ಬಗ್ಗೆ ನನ್ನ ಊಹೆಗಳು ತಪ್ಪಾಗುತ್ತವೆ. ಹಾಗಾಗಿ ನನ್ನ ಮದುವೆ ಇನ್ನೂ ಆಗಿಲ್ಲ ಎಂದಿದ್ದಾರೆ. ‘ಬಾಹುಬಲಿ’ಯ ಈ ತಮಾಷೆಯ ಉತ್ತರ ಕೇಳಿ ಅಲ್ಲಿದ್ದವರೆಲ್ಲ ನಗತೊಡಗಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Prabhas Marriage: ಪ್ರೀತಿಯ ಬಗ್ಗೆ ನಾನಂದುಕೊಂಡಿದ್ದೆಲ್ಲ ಸುಳ್ಳಾಗಿದೆ, ಮದ್ವೆಯಾಗದೆ ಇರೋದಕ್ಕೆ ಕಾರಣ ರಿವೀಲ್ ಮಾಡಿದ ಪ್ರಭಾಸ್

ಹೊಸ `ಟ್ರೇಡ್ ಮಾರ್ಕ್’ ಕ್ರಿಯೇಟ್ ಮಾಡಿದ `ಜೇಮ್ಸ್’!
‘ಜೇಮ್ಸ್’ ಚಿತ್ರದ ಟ್ರೇಡ್ ಮಾರ್ಕ್ ಸಾಂಗ್ ಸ್ಯಾಂಡಲ್ವುಡ್ನಲ್ಲಿ ಹೊಸ ಟ್ರೇಡ್ ಮಾರ್ಕ್ ಅನ್ನು ಕ್ರಿಯೇಟ್ ಮಾಡಿದೆ. ಅಪ್ಪು ನಿಧನದ ನಂತರ ‘ಜೇಮ್ಸ್’ ಅಬ್ಬರ ಸಾಗರದಾಚೆಗೂ ವ್ಯಾಪಿಸಿದೆ.. ಕರುನಾಡಿನ ಅದೇಷ್ಟೊ ಹೃದಯಗಳು ‘ಜೇಮ್ಸ್’ ಚಿತ್ರಕ್ಕೆ ಅಭಿಮಾನದ ಅಭಿಷೇಕ ಮಾಡಲು ಯೋಧರಂತೆ ಸನ್ನದ್ದರಾಗಿದ್ದಾರೆ. ಜೊತೆಗೆ ಅಪ್ಪು ಪವರ್ ಪುಲ್ ಪಾತ್ರಕ್ಕೆ ಶಿವಣ್ಣ ಡಬ್ ಮಾಡಿರೋದು ಚಿತ್ರಪ್ರೇಮಿಗಳ ನಿದ್ದೆ ಕೆಡಿಸಿದೆ. ‘ಜೇಮ್ಸ್’ ಚಿತ್ರದ ಟ್ರೇಡ್ ಮಾರ್ಕ್ ಪ್ರಪೋಷನಲ್ ಸಾಂಗ್ನಲ್ಲಿ ಸ್ಯಾಂಡಲ್ ವುಡ್ ತಾರೆಯರ ದಂಡೆ ಸಮಾಗಮವಾಗಿದೆ. ಟ್ರೇಡ್ ಮಾರ್ಕ್ ಸಾಂಗ್ ನಲ್ಲಿ ಚಂದನವನದ ಚೆಲುವೆಯರಾದ ರಚಿತಾ ರಾಮ್, ಶ್ರೀಲೀಲಾ, ಅಶಿಕಾ ರಂಗನಾಥ್ ಹೆಜ್ಜೆ ಹಾಕಿದ್ದಾರೆ. ಇವರಿಗೆ ನಾವೇನು ಕಮ್ಮಿನ ಅಂತ ಚಂದನ್ ಶೆಟ್ಟಿ, ಸಂಗೀತಾ ನಿರ್ದೇಶಕ ಚರಣ್ ರಾಜ್ ಹಾಗೂ ಕೊರಿಯೋಗ್ರಫರ್ ಮೋಹನ್ ಈ ಹಾಡಿನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.
Published by:Kavya V
First published: