Evening Digest: CET ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ್ರೆ ನೋ ಎಂಟ್ರಿ, ಚಡ್ಡಿ ಸುಡೋ ಅಭಿಯಾನ ಮಾಡ್ತಾರಂತೆ ಸಿದ್ದು, ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
CET ಪರೀಕ್ಷೆಗೆ ಹಿಜಾಬ್ ಧರಿಸಿ ಬಂದ್ರೆ ನೋ ಎಂಟ್ರಿ

ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಮಾದರಿಯಲ್ಲೇ ಸಿಇಟಿ ಪರೀಕ್ಷೆ ನಡೆಸಲಾಗುವುದು. ಯಾವುದೇ ಧರ್ಮಸೂಚಕ ವಸ್ತ್ರ ಧರಿಸಿ ಬರುವಂತಿಲ್ಲ ಎಂದು ಪ್ರಾಧಿಕಾರ ಖಡಕ್ ಎಚ್ಚರಿಕೆ ನೀಡಿದೆ. ಜೂನ್​ 16, 17 ಮತ್ತು 18ರಂದು ನಡೆಯಲಿರುವ ಸಿಇಟಿಗೆ ಸಮವಸ್ತ್ರ ಪಾಲನೆಯ ಮಾರ್ಗಸೂಚಿ ಪ್ರಕಟಿಸಲಾಗಿದೆ. ಪಿಎಸ್‍ಐ ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಸಿಇಟಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಲು ತೀರ್ಮಾನಿಸಲಾಗಿದೆ. ನೀಟ್ ಪರೀಕ್ಷೆ ಮಾದರಿಯಲ್ಲೇ ಸಿಇಟಿ ನಡೆಸಲಾಗುವುದು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮಾಂಗಲ್ಯ ಸರ, ಮೂಗುತಿ, ಓಲೆ, ಸರ, ಬಳೆ ಸೇರಿದಂತೆ ಯಾವುದೇ ರೀತಿಯ ಆಭರಣ ಧರಿಸಿ ಬರುವಂತಿಲ್ಲ. ವಾಚ್, ಕ್ಯಾಲ್ಕುಲೇಟರ್ ಮತ್ತಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರುವಂತಿಲ್ಲ. ಮಾತ್ರವಲ್ಲ ಇದೇ ಮೊದಲ ಬಾರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್ ಹಾಗೂ ಮೆಟಲ್ ಡಿಟೆಕ್ಟರ್​​ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

ರಾಜ್ಯಾದ್ಯಂತ ‘ಚಡ್ಡಿ ಸುಡುವ ಅಭಿಯಾನ’ ಶುರು ಮಾಡ್ತೇವೆ

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education minister B C Nagesh) ಮನೆ ಮುಂದೆ NSUI ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ  ಕ್ಲಾರ್ಕ್ಸ್ ಎಕ್ಸಾಟಿಕದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಸುದ್ದಿಗೋಷ್ಠಿ ನಡೆಸಿದರು. ಜೂನ್ 1 ರಂದು NSUI ಅಧ್ಯಕ್ಷ ಕೀರ್ತಿ ಗಣೇಶ್ (Kirtiganesh) ನೇತೃತ್ವದಲ್ಲಿ ಶಿಕ್ಷಣ ಸಚಿವ ನಾಗೇಶ್ ಮನೆ ಮುಂದೆ ನಡೆಯುತ್ತದೆ. ಪಠ್ಯ ಪುಸ್ತಕ ಅಕ್ರಮದ ಬಗ್ಗೆ ಹೋರಾಟ ಮಾಡ್ತಾರೆ. ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ಹಕ್ಕಿದೆ. ಪ್ರತಿಭಟನೆಯಲ್ಲಿ ಚಡ್ಡಿ ಸುಟ್ಟಿದ್ದಾರೆ. RSSನವರು ಆವಾಗ ಚಡ್ಡಿ ಹಾಕ್ತಿದರು. ಈಗ ಪ್ಯಾಂಟ್ ಹಾಕ್ತಿದ್ದಾರೆ . ಗೃಹ ಸಚಿವ ಆರಗ ಜ್ಞಾನೇಂದ್ರ (Home Minister Araga Jananedra) ಹೇಳಿದಂತೆ ಪೊಲೀಸರು ಕೇಸ್ ಹಾಕಿದ್ದಾರೆ. ಈ ಹೋಮ್ ಮಿನಿಸ್ಟರು ಎಲ್ಲಿ ಕ್ರಮ ತಗೊಳ್ಳಬೇಕು ಅಲ್ಲಿ ತಗೊಳ್ಳಲ್ಲ. ಎಲ್ಲಿ ಕ್ರಮ ತಗೊಬಾರದೋ ಅಲ್ಲಿ ತಗೊಳ್ತಾರೆ ಎಂದು ಆಕ್ರೋಶ ಹೊರ ಹಾಕಿದರು.

ಯುವ ಕಾಂಗ್ರೆಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಕ್ಷಾ ರಾಮಯ್ಯ ನೇಮಕ

ಬೆಂಗಳೂರು (ಜೂ.3): ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ. ಎಸ್ ರಕ್ಷಾ ರಾಮಯ್ಯರನ್ನು (Raksha Ramaiah) ಯುವ ಕಾಂಗ್ರೆಸ್​​ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ (National Youth Congress General Secretary) ನೇಮಿಸಲಾಗಿದೆ. ಯುವ ಕಾಂಗ್ರೆಸ್ ನಾಯಕರಾಗಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ನೇಮಕ ಮಾಡಲಾಗಿದೆ. ತಮ್ಮ ಈ ನೇಮಕಕ್ಕೆ ಸಂತಸ ವ್ಯಕ್ತಪಡಿಸಿರುವ ರಕ್ಷಾ ರಾಮಯ್ಯ, 'ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಬಡ್ತಿ ನೀಡಿರುವುದಕ್ಕೆ ಸಂತಸವಾಗುತ್ತಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಈ ನೇಮಕಾತಿ (Recruitment) ಮಾಡಲಾಗಿದೆ' ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್ (B.V Srinivas) ಹೇಳಿದ್ದಾರೆಂದು ಅವರು ತಿಳಿಸಿದ್ದಾರೆ.

ಮದುವೆ ಪ್ರಮಾಣಪತ್ರ ನೀಡಲು ಆರ್ಯ ಸಮಾಜಕ್ಕೆ ಯಾವುದೇ ಅರ್ಹತೆಯಿಲ್ಲ

ದೆಹಲಿ: ಶುಕ್ರವಾರ ಜರುಗಿದ ಮಹತ್ವದ ವಿದ್ಯಮಾನವೊಂದರಲ್ಲಿ ದೇಶದ ಸರ್ವೋಚ್ಛ ನ್ಯಾಯಾಲಯವು ಆರ್ಯ ಸಮಾಜ (Arya Samaj Marriage Certificate) ನೀಡುವ ಮದುವೆ ಪ್ರಮಾಣ ಪತ್ರವನ್ನು ಸ್ವೀಕರಿಸಲು ತಿರಸ್ಕರಿಸಿದೆ. ಅಪಹರಣ ಮತ್ತು ಅಪ್ರಾಪ್ತ ಬಾಲೆಯ ಮೇಲೆ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸೆಕ್ಷನ್ 363, 366A, 384, 376(2)(n), 384 ಐಪಿಸಿ ಮತ್ತು ಪೊಕ್ಸಿ (POCSO Act) ಕಾಯ್ದೆಯ ಸೆಕ್ಷನ್ 5(L)/6 ಗಳಡಿಯಲ್ಲಿ ಎಫ್‍ಐಆರ್ ದಾಖಲಾಗಿರುವ ವ್ಯಕ್ತಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಸರ್ವೋಚ್ಛ ನ್ಯಾಯಾಲಯವು ಆರ್ಯ ಸಮಾಜ ನೀಡುವ ಮದುವೆ ಪ್ರಮಾಣ ಪತ್ರ ಒಪ್ಪಲು ನಿರಾಕರಿಸಿದೆ. ಈಮೂಲಕ ಮದುವೆ ಪ್ರಮಾಣ ಪತ್ರಗಳಿಗೆ ಸಂಬಂಧಿಸಿ ಮಹತ್ವದ ಆದೇಶವೊಂದನ್ನು ಸುಪ್ರೀಂಕೋರ್ಟ್ (Supreme Court) ನೀಡಿದೆ.

ಮಾತು ಮನೆ ಕೆಡಿಸಿತು, ಮೊಬೈಲ್ ಜೀವ ತೆಗೆಯಿತು!

ಬೆಂಗಳೂರು : ರಾಜ್ಯರಾಜಧಾನಿ ಬೆಂಗಳೂರಿನಲ್ಲಿ (Bengaluru) ತಾಯಿಯನ್ನ ಮಗನೇ ಕೊಂದ ಘಟನೆ ನಡೆದಿದ್ದು, ಮೊಬೈಲ್ (Mobile) ಕೊಡಿಸದ ಕಾರಣಕ್ಕೆ ಮಗನೇ ತನ್ನ ಹೆತ್ತ ತಾಯಿಯನ್ನೇ (Murder) ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಬೇಗೂರಿನ  ಮೈಲಸಂದ್ರದಲ್ಲಿ ಘಟನೆ ನಡೆದಿದ್ದು, ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ದೀಪಕ್ (Deepak) ಎಂಬುವನು ತನ್ನ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಮೊಬೈಲ್ ಕೊಡಿಸುವಂತೆ ದೀಪಕ್ ತನ್ನ ತಾಯಿಯನ್ನು ಪೀಡಿಸುತ್ತಿದ್ದ, ಹಣ ಇಲ್ಲವೆಂದು ಮೊಬೈಲ್ ಕೊಡಿಸಲು ತಾಯಿ ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ಆರೋಪಿ ತನ್ನ ತಾಯಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Pavana HS
First published: