Evening Digest: ಡ್ರಗ್ಸ್ ಕೇಸ್​​​ನಲ್ಲಿ ತಗ್ಲಾಕೊಂಡ Bigg Boss ವಿನ್ನರ್: JDSನ ಮತ್ತೊಂದು ವಿಕೆಟ್ ಪತನ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಡ್ರಗ್ಸ್ ಕೇಸ್‌ನಲ್ಲಿ ತಗ್ಲಾಕೊಂಡ Bigg Boss ವಿನ್ನರ್: ಸಿನಿಮಾ ರಂಗಕ್ಕೂ (Film Industry), ಡ್ರಗ್ಸ್ಗೂ (Drugs) ಅವಿನಾಭಾವ ಸಂಬಂಧ. ಹಿಂದಿ, ತೆಲುಗು, ತನ್ನಡ, ತಮಿಳು, ಮಲಯಾಳಂ ಸೇರಿದಂತೆ ಭಾರತದ ವಿವಿಧ ಚಿತ್ರರಂಗದಲ್ಲಿ ಡ್ರಗ್ಸ್ ಪಾರ್ಟಿ (Drugs Party), ಡ್ರಗ್ಸ್ ಕೇಸ್ಗಳು (Case) ಆಗಾಗ ಸುದ್ದಿ ಮಾಡುತ್ತವೇ ಇರುತ್ತವೆ. ಇದೀಗ ಹೈದರಾಬಾದ್ನಲ್ಲಿ (Hyderabad) ಸೆಲಿಬ್ರಿಟಿಗಳ (Celebrity) ಡ್ರಗ್ಸ್ ಪಾರ್ಟಿಯೊಂದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ನಿನ್ನೆ ತಡರಾತ್ರಿ (Late Night) ಡ್ರಗ್ಸ್ ಪಾರ್ಟಿ ಮೇಲೆ ಪೊಲೀಸರು ರೇಡ್ ಮಾಡಿದ್ದಾರೆ. ಇದರಲ್ಲಿ ಖ್ಯಾತ ಗಾಯಕ (Singer) ಹಾಗೂ ತೆಲುಗು (Telugu) ಬಿಗ್ ಬಾಸ್ ವಿನ್ನರ್ (Big Boss Winner) ಒಬ್ಬರು ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ಕೇಸ್ಗೆ ಸಂಬಂಧಿಸಿದಂತೆ ಬಿಗ್ ಬಾಸ್ ವಿನ್ನರ್ ಸೇರಿದಂತೆ ಒಟ್ಟು 130 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: ಡ್ರಗ್ಸ್‌ ಕೇಸ್‌ನಲ್ಲಿ ತಗ್ಲಾಕೊಂಡ Bigg Boss ವಿನ್ನರ್! ಪಬ್‌ನಲ್ಲಿ ಪಾರ್ಟಿ ನಡೆಯುತ್ತಿರುವಾಗಲೇ ರೇಡ್

JDSನ ಮತ್ತೊಂದು ವಿಕೆಟ್ ಪತನ

ಹಲವು ತಿಂಗಳುಗಳಿಂದ ಹರಿದಾಡುತ್ತಿದ್ದ ಗಾಸಿಪ್ (Gossip) ಸುದ್ದಿಗೆ ಇದೀಗ ರೆಕ್ಕೆ - ಪುಕ್ಕ ಬಂದಿದೆ. ಸಭಾಪತಿ ಬಸವರಾಜ ಹೊರಟ್ಟಿ (Basavaraj Horahatti) ಬಿಜೆಪಿ ಸೇರ್ಪಡೆಯಾಗುತ್ತಾರೆ ಅನ್ನೋ ವಿಚಾರ ಅಧಿಕೃತವಾಗಿ ಖಾತ್ರಿಯಾಗಿದೆ. ವಿಧಾನ ಪರಿಷತ್ ನ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯಿಂದಲೇ ಸ್ಪರ್ಧೆ ಮಾಡೋದಾಗಿ ಹೊರಟ್ಟಿ ಅಧಿಕೃತವಾಗಿ ಘೋಷಿಸಿದ್ದಾರೆ. ಆ ಮೂಲಕ ಮುಂಬರುವ ಚುನಾವಣೆಯಲ್ಲಿ (Election) ಗೆದ್ದು, ಸಭಾಪತಿ ಸ್ಥಾನದಲ್ಲಿ ಮುಂದುವರೆಯೋ ವಿಶ್ವಾಸದಲ್ಲಿ ಹೊರಟ್ಟಿ ಇದ್ದಾರೆ. ಬಸವರಾಜ ಹೊರಟ್ಟಿ ಹಿರಿಯ ಪರಿಷತ್ ಸದಸ್ಯರು, ಸದ್ಯ ಸಭಾಪತಿಗಳೂ ಹೌದು. ಸತತ 42 ವರ್ಷಗಳ ಕಾಲ ಪರಿಷತ್ (Parishath) ಸದಸ್ಯರಾಗಿ ಕಾರ್ಯನಿರ್ವಹಿಸಿರೋ ಹೊರಟ್ಟಿ, ಮತ್ತೊಂದು ಚುನಾವಣೆ ಎದುರಿಸಿ ಗೆದ್ದು ಬರೋ ಮೂಲಕ ದಾಖಲೆ ನಿರ್ಮಿಸೋ ತವಕದಲ್ಲಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Karnataka Politics: ಮತ್ತೊಂದು ಜೆಡಿಎಸ್ ವಿಕೆಟ್ ಪತನ; ಬಸವರಾಜ ಹೊರಟ್ಟಿ ಬಿಜೆಪಿ ಸೇರ್ಪಡೆ ಫಿಕ್ಸ್

"BJP ಅಂದರೆ ಬಲ್ಲಿದ ಜನರ ಪಕ್ಷ"!

ಮಾಜಿ ಸಿಎಂ (Ex CM) ಎಚ್.ಡಿ. ಕುಮಾರಸ್ವಾಮಿ (H.D. Kumaraswamy) ರಾಜ್ಯ ಬಿಜೆಪಿ (State BJP) ಹಾಗೂ ರಾಜ್ಯ ಸರ್ಕಾರದ (State Government) ವಿರುದ್ಧ ಮತ್ತೆ ಗರಂ ಆಗಿದ್ದಾರೆ. ಹಲಾಲ್ ಕಟ್ (Halal Cut) ಹಾಗೂ ಜಟ್ಕಾ ಕಟ್ (Jhatka Cut) ವಿವಾದ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಬಿಸಿ ಸೇರಿದಂತೆ ಹಲವು ವಿಚಾರಗಳಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸರಣಿ ಟ್ವೀಟ್ (Tweet) ಮಾಡಿರುವ ಅವರು, ಬಿಜೆಪಿ ಅಂದರೆ ಭಾರತೀಯ ಜನತಾ ಪಾರ್ಟಿಯಲ್ಲ ಬದಲಾಗಿ ಬಲ್ಲಿದ ಜನರ ಪಕ್ಷ ಅಂತ ವ್ಯಂಗ್ಯವಾಡಿದ್ದಾರೆ. ಹಲಾಲ್ ಹಾಲಾಹಲದ ನಡುವೆಯೇ ಇಂದು ಬೆಳಗ್ಗೆ ಬರಸಿಡಿಲಿನಂತೆ ಅಪ್ಪಳಿಸಿದ ಸುದ್ದಿ. ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ; 13 ದಿನಗಳಲ್ಲಿ 8 ರೂ. ಜಿಗಿತ! ಇದಪ್ಪಾ ʼಬಹುಜನ ಹಿತಾಯ, ಬಹುಜನ ಸುಖಾಯʼ ಎಂದು ಭಾಷಣ ಬಿಗಿಯುವ ಬಿಜೆಪಿ ಆಡಳಿತದಲ್ಲಿ ಇಂಡಿಯಾ ಶೈನಿಂಗ್!! ಅಂತ ವ್ಯಂಗ್ಯವಾಡಿದ್ದಾರೆ.

ಆಂಧ್ರದಲ್ಲಿ ಹೊಸದಾಗಿ 13 ಜಿಲ್ಲೆಗಳ ಘೋಷಣೆ..
ನಾಳೆಯಿಂದ ಆಂಧ್ರಪ್ರದೇಶದ (Andhra Pradesh) ಸ್ವರೂಪ ಸಂಪೂರ್ಣ ಬದಲಾಗಲಿದೆ. ಆಂಧ್ರಪ್ರದೇಶವು 13 ಹೊಸ ಜಿಲ್ಲೆಗಳ (13 New Districts) ಸೇರ್ಪಡೆಯೊಂದಿಗೆ ತನ್ನ ಜಿಲ್ಲೆಗಳ ಸಂಖ್ಯೆಯನ್ನು 26 ಕ್ಕೆ ದ್ವಿಗುಣಗೊಳಿಸಲಿದೆ. ಏಪ್ರಿಲ್ 7 ರಂದು ಸಚಿವ ಸಂಪುಟದ ಸಭೆ ನಡೆಯಲಿದ್ದು, ರಾಜ್ಯವನ್ನು ನಡೆಸಲು ಹೊಸ ತಂಡವನ್ನು ರೂಪಿಸುವ ಕುರಿತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ. ಆಂಧ್ರಪ್ರದೇಶದಲ್ಲಿ ಹೊಸ ಜಿಲ್ಲೆಗಳ ರಚನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ (CM Jagan Mohan Reddy) ಅವರು 13 ಹೊಸ ಜಿಲ್ಲೆಗಳನ್ನು ನಾಳೆ ಘೋಷಿಸಲಿದ್ದಾರೆ.

ಹೇಗಿರಲಿದೆ ಗೊತ್ತಾ ಅಪ್ಪು ಕೊನೆಯ ದೃಶ್ಯಕಾವ್ಯ?
ಕರ್ನಾಟಕದ ಕಾಡು ಉಳಿಸಿ’ ಎಂಬ ಡಾ. ರಾಜ್ ಸಂದೇಶದ ಮರುಜನ್ಮವೇ ಹೊಸ ಗಂಧದ ಗುಡಿಯ ಕಥೆಯ ಸೀಕ್ರೇಟ್. ನಾನು ಪವರ್ ಸ್ಟಾರ್ ಅಲ್ಲ, ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ತೀನಿ ಎಂದು ‘ಪವರ್ ಸ್ಟಾರ್’ ಬದಿಗೆ ಸರಿಸಿ ದಿವಂಗತ ನಟ ಪುನೀತ್ ನಟಿಸಿರುವ 'ಗಂಧದ ಗುಡಿ' ಕಥೆ ಹುಟ್ಟಿ ಬೆಳೆದಿದ್ದು, ನಿರ್ಮಾಣ, ಪುನೀತ್ ನಟನೆ ಕುರಿತು ವೈಲ್ಡ್ ಕರ್ನಾಟಕ ಖ್ಯಾತಿ ನಿರ್ದೇಶಕ ಅಮೋಘವರ್ಷ ಈ ಹಿಂದೆ ಹೇಳಿದ್ದರು. ಇದೀಗ ಈ ಡಾಕ್ಯುಮೆಂಟರಿ ರಿಲೀಸ್ ಬಗ್ಗೆ ಅಪ್ಡೇಟ್ ಸಿಕ್ಕಿದೆ. ಈ ಡಾಕ್ಯುಮೆಂಟರಿ ಸದ್ಯ ಪೋಸ್ಟ್ ಪ್ರೋಡಕ್ಷನ್ ಹಂತದಲ್ಲಿ ಇದೆ. ಇದಾದ ಬಳಿಕ ಸಿನಿಮಾ ಡೇಟ್ ಅನ್ನು ಅನೌನ್ಸ್ ಮಾಡಲಿದೆಯಂತೆ. ಮುಂಬರುವ ಮೇ ತಿಂಗಳಲ್ಲಿ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಸಾಧ್ಯತೆ ಹೆಚ್ಚಿದೆ. ಜೇಮ್ಸ್ ಬಳಿಕ ಅಪ್ಪು ಅವರನ್ನು ಬೆಳ್ಳಿತೆರೆ ಮೇಲೆ ಕಣ್ತುಂಬಿಕೊಳ್ಳುವ ಭಾಗ್ಯ ಸಿಕ್ಕಿದೆ ಎಂದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
Published by:Kavya V
First published: