Evening Digest: ಸರಿಯಾಗಿ ತನಿಖೆ ನಡೆದ್ರೆ ರಾಜ್ಯಕ್ಕೆ 3ನೇ ಸಿಎಂ?; ಪಾಕ್ ಪ್ರಧಾನಿಯನ್ನು ಕಳ್ಳ ಎಂದ ಜನ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸರಿಯಾಗಿ ತನಿಖೆ ನಡೆದ್ರೆ ರಾಜ್ಯಕ್ಕೆ 3ನೇ ಸಿಎಂ?: ಪಿಎಸ್‌ಐ ನೇಮಕಾತಿಯಲ್ಲಿ (PSI Recruitment) ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಪ್ರಿಯಾಂಕ್​ ಖರ್ಗೆ (Priyank Khrge) ನಿತ್ಯ ಒಂದಿಲ್ಲೊಂದು ಮಾಹಿತಿ, ಸಾಕ್ಷಿ ನೀಡ್ತಾ ಸುದ್ದಿಯಾಗಿದ್ದಾರೆ. ಇವತ್ತು ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿ (Press Meet) ನಡೆಸಿ ಮಾತಾಡಿದ ಅವ್ರು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ರು. ಬಿಜೆಪಿ ನಾಯಕಿ ದಿವ್ಯಾ (Divya) ಹಾಗರಗಿ ಬಂಧನ ಸರ್ಕಾರದ ಸಾಧನೆಯಲ್ಲ, ಇದೀಗ ದಿವ್ಯಾ ಹಾಗರಗಿ ಅವರನ್ನು ಬಂಧಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ತಿದ್ದಾರೆ. ಇದು ಹಾಸ್ಯಾಸ್ಪದ ವಿಚಾರ ಎಂದ್ರು. ಸಂಪೂರ್ಣ ತನಿಖೆ ಯಾವ ದಿಕ್ಕಿನಲ್ಲಿ ಸಾಗಿದೆ ಅನ್ನೋ ಮಾಹಿತಿ ಗೃಹ ಸಚಿವರಿಗೆ (Home Minister) ಅರಿವಿಲ್ಲ ಎಂದು ಪ್ರಿಯಾಂಕ್​ ಖರ್ಗೆ ಹೇಳಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Priyank Kharge: ಸರಿಯಾಗಿ ತನಿಖೆ ನಡೆದ್ರೆ 3ನೇ ಸಿಎಂ ಫಿಕ್ಸ್; ದೈಹಿಕ ಪರೀಕ್ಷೆಯಲ್ಲೂ ನಡೆದಿದೆ ಹಗರಣ

ಒಂದು ಹೆಣ್ಣು ಮಗಳನ್ನು ಹಿಡಿಯಲು 20 ದಿನ ಬೇಕಾ?

ಪಿ ಎಸ್ ಐ ನೇಮಕಾತಿ (PSI Recruitment) ಪಟ್ಟಿಯನ್ನೇ ರದ್ದು ಪಡಿಸಿ ಹೊಸದಾಗಿ ಪರೀಕ್ಷೆ ನಡೆಸಿ ಪ್ರತಿಭಾವಂತರಿಗೆ ನ್ಯಾಯ ದೊರಕಿಸಿಕೊಡುವುದಾಗಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಘೋಷಿಸಿದ್ದಾರೆ. ಪಿ ಎಸ್ ಐ ನೇಮಕಾತಿ ಬ್ರಹ್ಮಾಂಡ ಭ್ರಷ್ಟಾಚಾರ (Corruption), ಭಾರಿ ಅಕ್ರಮದ (Scam) ಕರ್ಮಕಾಂಡ ಅಗಿದ್ದು ದಿನಕ್ಕೊಂದು ರೀತಿಯ ದಗಲ್ಬಾಜಿ ಸಂಗತಿಗಳು ಬೆಳಕಿಗೆ ಬಂದಿದ್ದರಿಂದ ಈ ಪಟ್ಟಿ ರದ್ದಾಗಲೇಬೇಕಿತ್ತು. ಸಹಜವಾಗಿ ಅದನ್ನು ಮಾಡಿದ್ದಾರೆ. ಹೀಗೆ ಮಾಡಿ ಜನರ ಗಮನ ಬೇರೆಡೆ ಸೆಳೆದು ಅಕ್ರಮದ ಆರೋಪಿಗಳನ್ನು ರಕ್ಷಿಸಬಹುದೆಂದು ಗೃಹ ಮಂತ್ರಿ (Home Minister) ತಿಳಿದಿದ್ದರೆ ಅದು ಮೂರ್ಖತನವಾದೀತು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ (Ramalinga Reddy) ಕಿಡಿಕಾರಿದ್ದಾರೆ

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:PSI Recruitment Scam: ಒಂದು ಹೆಣ್ಣು ಮಗಳನ್ನು ಹಿಡಿಯಲು 20 ದಿನ ಬೇಕಾ? ಅಕ್ರಮದಲ್ಲಿ BJP ನಾಯಕರು ಭಾಗಿ-ಕಾಂಗ್ರೆಸ್ ಕಿಡಿ

ಪಾಕ್​ ಪ್ರಧಾನಿಯನ್ನು ಕಳ್ಳ ಎಂದ ಜನ

ಪಾಕಿಸ್ತಾನ ಪ್ರಧಾನಿ (Pakistan PM) ಶೆಹಬಾಜ್ ಷರೀಫ್ (Shehbaz Sharif) ನೇತೃತ್ವದ ನಿಯೋಗಕ್ಕೆ ಮದೀನಾದ ಮಸೀದಿಯಲ್ಲಿ ಮುಜುಗರದ ಸ್ವಾಗತ ದೊರೆಯಿತು. ಪಾಕಿಸ್ತಾನಿ ಪ್ರಧಾನಿ ನಿಯೋಗವು ಪವಿತ್ರ ಮಸೀದಿ-ಎ-ನವಾಬಿಗೆ ತೆರಳುತ್ತಿದ್ದಂತೆ ನೂರಾರು ಯಾತ್ರಿಕರು 'ಚೋರ್-ಚೋರ್' ಎಂದು ಕೂಗುದ್ರು,. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮದೀನಾ ಮುಸ್ಲಿಮರ ಪವಿತ್ರ ಯಾತ್ರಾ ಸ್ಥಳ. ಈ ಕ್ಷೇತ್ರದಲ್ಲಿ ಪಾಕಿಸ್ತಾನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಶೆಹಬಾಜ್ ಷರೀಫ್ ಮತ್ತು ಅವರ ನೇತೃತ್ವದ ನಿಯೋಗದ ವಿರುದ್ಧ ಮದೀನಾಕ್ಕೆ ಆಗಮಿಸಿದ್ದ ಯಾತ್ರಿಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶ್ರೀಲಂಕಾಕ್ಕೆ ಕೂಡಲೇ ನೆರವು ನೀಡಿ: ಕೇಂದ್ರಕ್ಕೆ ತಮಿಳುನಾಡು ಸರ್ಕಾರದ ಮನವಿ

ಆರ್ಥಿಕ ಬಿಕ್ಕಟ್ಟಿಗೆ (Economic Crisis) ಸಿಲುಕಿರುವ ಶ್ರೀಲಂಕಾ (Sri Lanka) ಆಹಾರ ಮತ್ತು ಜೀವರಕ್ಷಕ ಔಷಧಿಗಳನ್ನು ತಕ್ಷಣವೇ ರವಾನಿಸಲು ರಾಜ್ಯ ಸರ್ಕಾರದ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸುವಂತೆ ಕೇಂದ್ರ ಸರ್ಕಾರ‌‌ (Union Government) ಅನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ (Tamil Madu Assembly) ಶುಕ್ರವಾರ ಅಂಗೀಕರಿಸಿತು. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (Chief Minister M.K. Stalin) ಭಾರತವು ಮಾನವೀಯ ನೆಲಯಲ್ಲಿ ಶ್ರೀಲಂಕಾಕ್ಕೆ ನೆರವು ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.

ಕೇನ್ಸ್ ಫಿಲ್ಮ್ ಫೆಸ್ಟಿವಲ್ ಜ್ಯೂರಿಯಾಗಿ ದೀಪಿಕಾ ಪಡುಕೋಣೆ

ಬಾಲಿವುಡ್ (Bollywood) ನಟಿ ದೀಪಿಕಾ ಪಡುಕೋಣೆ (Deepika Padukone) ಅವರ ದೊಡ್ಡ ಅಭಿಮಾನಿಯಾಗಿದ್ದರೆ, ನಿಮಗೆ ಇತ್ತೀಚೆಗೆ ಬಂದ ಸುದ್ದಿ ತಿಳಿದೇ ಇರುತ್ತದೆ. ಹೌದು, ಪ್ರತಿಷ್ಠಿತ ಚಲನಚಿತ್ರ ವೇದಿಕೆಗಳಲ್ಲಿ ಒಂದಾಗಿರುವ ಕೇನ್ಸ್ ಚಲನಚಿತ್ರೋತ್ಸವಕ್ಕೆ (Cannes Film Festival) ಈ ವರ್ಷ ತೀರ್ಪುಗಾರ ಪಟ್ಟಿಯಲ್ಲಿ ಒಬ್ಬರಾಗಿ ಬಾಲಿವುಡ್ ಸ್ಟಾರ್‌ ನಟಿ ದೀಪಿಕಾ ಪಡುಕೋಣೆ ಅವರ ಹೆಸರು ಇದ್ದು, ಭಾರತವನ್ನು ಪ್ರತಿನಿಧಿಸಲಿದ್ದಾರೆ. ಈ ಬಾರಿಯ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಟಿ ದೀಪಿಕಾ ಪಡುಕೋಣೆ ಮುಖ್ಯ ತೀರ್ಪುಗಾರರ ಭಾಗವಾಗಲಿದ್ದಾರೆ. ಫೆಸ್ಟಿವಲ್ ಡಿ ಕೇನ್ಸ್‌ನ ಅಧಿಕೃತ ಟ್ವಿಟ್ಟರ್‌ ಖಾತೆಯು ಈ ಸುದ್ದಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್‌ (Twitter) ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, 8 ತೀರ್ಪುಗಾರರ ಸದಸ್ಯರೊಂದಿಗೆ 75ನೇ ಫೆಸ್ಟಿವಲ್ ಡಿ ಕೇನ್ಸ್‌ನ ತೀರ್ಪುಗಾರರ ಅಧ್ಯಕ್ಷರಾಗಿ ಫ್ರೆಂಚ್ ನಟ ವಿನ್ಸೆಂಟ್ ಲಿಂಡನ್ ಅವರನ್ನು ಘೋಷಿಸಿದ್ದಾರೆ.
Published by:Kavya V
First published: