Evening Digest: ಜಿಯೋಗೆ ನೂತನ ಸಾರಥಿ; ರಾಜ್ಯದಲ್ಲಿ ವಿದ್ಯುತ್​ ದರ ಏರಿಕೆ ಮಾಡಿಲ್ಲ; ಇವು ಈ ಸಂಜೆಯ ಟಾಪ್‌ ಸುದ್ದಿಗಳು

ಇಂದಿನ ಪ್ರಮುಖ ಸುದ್ದಿ ಯಾವುದು? ದೇಶ-ವಿದೇಶಗಳಲ್ಲಿ ಏನೇನಾಯ್ತು? ರಾಜಕೀಯ, ಕ್ರೀಡೆ, ಸಿನಿಮಾ ಕ್ಷೇತ್ರದ ಟಾಪ್ ನ್ಯೂಸ್‌ಗಳೇನು? ನೀವು ಮಿಸ್ ಮಾಡದೆ ಓದಲೇ ಬೇಕಾದ ಟಾಪ್ ಸುದ್ದಿಗಳು ಇಲ್ಲಿವೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸದ್ಯಕ್ಕೆ ವಿದ್ಯುತ್ ದರ ಹೆಚ್ಚಳ ಇಲ್ಲ

ಬೆಂಗಳೂರು (ಜೂ 28): ರಾಜ್ಯದಲ್ಲಿ ವಿದ್ಯುತ್​ ದರ ಏರಿಕೆ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದೆ. ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರಕಾರ ಯಾವುದೇ ಸೂಚನೆ ನೀಡಿಲ್ಲ. ಕಲ್ಲಿದ್ದಲು ಹಾಗೂ‌‌ ಪೆಟ್ರೋಲಿಯಂ‌ ಉತ್ಪನ್ನಗಳ ಮಾರುಕಟ್ಟೆ ದರ ಆಧರಿತ ಹೊಂದಾಣಿಕೆ ವೆಚ್ಚದಲ್ಲಿ‌ ಮಾತ್ರ ವ್ಯತ್ಯಾಸವಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.  ವಿದ್ಯುತ್ ದರ ಪರಿಷ್ಕರಣೆಗೆ ರಾಜ್ಯ ಸರಕಾರ ಮುಂದಾಗಿದೆ ಎಂಬ ಬಗ್ಗೆ ಕೆಲವೆಡೆ ತಪ್ಪು ಸಂದೇಶ ರವಾನೆಯಾಗಿದೆ. ಆದರೆ ರಾಜ್ಯ ಸರಕಾರದ ಮುಂದೆ ಅಂಥ ಯಾವುದೇ ಪ್ರಸ್ತಾಪವಿಲ್ಲ.‌ ವಿದ್ಯುತ್ ದರವನ್ನು ವರ್ಷದಲ್ಲಿ ಒಮ್ಮೆ ಮಾತ್ರ ಪರಿಷ್ಕರಿಸುವುದು ವಾಡಿಕೆಯಾಗಿದೆ. ಹೀಗಾಗಿ ದರ ಹೆಚ್ಚಳದ ವದಂತಿ ಬಗ್ಗೆ ಸಾರ್ವಜನಿಕರು ಆತಂಕಗೊಳ್ಳಬೇಕಾದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಜಿಯೋಗೆ ನೂತನ ಸಾರಥಿ ಆಕಾಶ್‌ ಅಂಬಾನಿ

ಮುಂಬೈ: ರಿಲಯನ್ಸ್ ಜಿಯೋ ನಿರ್ದೇಶಕ ಮುಖೇಶ್ ಅಂಬಾನಿ ಅವರು (Mukesh Ambani) ಜೂನ್ 27 ರಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಂಪನಿಯ ಅಧಿಕಾರವನ್ನು ತಮ್ಮ ಹಿರಿಯ ಮಗ ಆಕಾಶ್‌ ಅಂಬಾನಿ ಅವರಿಗೆ (Akash Ambani) ಹಸ್ತಾಂತರಿಸಿದ್ದಾರೆ. ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್​ನಲ್ಲಿ ರಿಲಯನ್ಸ್ ಜಿಯೋ ಕಂಪನಿಯ ಮಂಡಳಿಯ ಸಭೆಯಲ್ಲಿ Reliance Jio ಕಂಪನಿಯ  ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಕಾಶ್ ಅಂಬಾನಿ ಅವರನ್ನು ನೇಮಿಸಲು ಅನುಮೋದಿಸಲಾಗಿದೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Reliance Jio: ಜಿಯೋ ಬೆಳವಣಿಗೆಗೆ ಆಕಾಶ್ ಅಂಬಾನಿ ಕೊಡುಗೆ; ಜಾಗತಿಕವಾಗಿ ಇನ್ನಷ್ಟು ಬೆಳವಣಿಗೆ

ರೆಸಾರ್ಟ್‌ನಿಂದ ಮುಂಬೈಗೆ ಬರ್ತಾರಾ ರೆಬೆಲ್ ಶಾಸಕರು?

ಮುಂಬೈ, ಮಹಾರಾಷ್ಟ್ರ: ನೆರೆಯ ಮಹಾರಾಷ್ಟ್ರ (Maharashtra) ರಾಜ್ಯ ರಾಜಕೀಯ (State Politics) ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ನಿನ್ನೆಯಷ್ಟೇ ಶಾಸಕರ (MLA) ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ (Supreme Court) ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಜುಲೈ 11ಕ್ಕೆ ಮುಂದೂಡಿತ್ತು. ಇತ್ತ ರೆಬೆಲ್ ಶಾಸಕರನ್ನು (Rebel MLA’s) ಸಂಪರ್ಕಿಸಲು ಸಿಎಂ ಉದ್ಧವ್ ಠಾಕ್ರೆ ಬಣ (Uddhav Thackeray Team) ಶತ ಪ್ರಯತ್ನ ನಡೆಲುತ್ತಿದೆ. ಈ ನಡುವೆ ನಮ್ಮ ಬಳಿ 50 ಶಾಸಕರ ಬಲವಿದೆ ಅಂತ ಏಕನಾಥ್ ಶಿಂಧೆ ಬಣ (Eknath Shindhe Team) ಹೇಳಿದೆ. ನಾವು ಶೀಘ್ರದಲ್ಲೇ ಅಸ್ಸಾಂ (Assam) ರಾಜ್ಯದ ಗುವಾಹಟಿಯ (Gauhati) ಖಾಸಗಿ ರೆಸಾರ್ಟ್‌ನಿಂದ (Privet Resort) ಮುಂಬೈಗೆ (Mumbai) ವಾಪಸ್ಸಾಗುತ್ತೇವೆ ಅಂತ ಏಕನಾಥ್ ಶಿಂಧೆ ಹೇಳಿದ್ದಾರೆ.

KSRTCಯಿಂದ ವಿದ್ಯಾರ್ಥಿಗಳಿಗೆ ಬಸ್​ ಪಾಸ್​ ಅವಧಿ ವಿಸ್ತರಣೆ

ಬೆಂಗಳೂರು (ಜೂ 28): ಪದವಿ (Degree), ವೃತ್ತಿಪರ ಕೋರ್ಸ್ ಹಾಗೂ ಸ್ನಾತಕೋತ್ತರ ಪದವಿಯಲ್ಲಿ (Master Degree) ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳ ಹಿತದೃಷ್ಟಿ ಹಿನ್ನೆಲೆ KSRTC ವಿದ್ಯಾರ್ಥಿ ಪಾಸ್​ಗಳ (Student Pass) ಅವಧಿ ವಿಸ್ತರಣೆ ಮಾಡಿದೆ. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 2022ರ ಆಗಸ್ಟ್, ಸೆಪ್ಟೆಂಬರ್, ನವೆಂಬರ್ ವರೆಗೂ ಪರೀಕ್ಷೆಗಳು (Exam) ನಡೆಯಲಿದೆ. ಈ ಹಿನ್ನಲೆ ಪಾಸ್ ಅವಧಿ ವಿಸ್ತರಣೆಗೆ (Extension) ನಿರ್ದೇಶನ ಬಂದಿತ್ತು. ಹೀಗಾಗಿ ಬಸ್​ ಪಾಸ್​ ಅವಧಿ ವಿಸ್ತರಣೆಗೆ KSRTC ನಿರ್ಧರಿಸಿದೆ. ಸದ್ಯಕ್ಕೆ ವಿದ್ಯಾರ್ಥಿ ಪಾಸ್‌ ಮೊತ್ತ ವರ್ಷಕ್ಕೆ 900 ರೂಪಾಯಿ ಇದೆ. ವಿದ್ಯಾರ್ಥಿಗಳ ಪರೀಕ್ಷೆಗೆ ಅನುಗುಣವಾಗಿ 1 ಅಥವಾ 2 ತಿಂಗಳಿಗೆ ಮಾತ್ರ ಪಾಸ್ ವಿಸ್ತರಣೆ ಮಾಡಲಾಗುವುದು ಎಂದು KSRTC ಪ್ರಕಟಣೆ ಮೂಲಕ ತಿಳಿಸಿದೆ.

ಇದನ್ನೂ ಓದಿ: KSRTC Bus Pass: ವಿದ್ಯಾರ್ಥಿಗಳಿಗೆ ಗುಡ್​ ನ್ಯೂಸ್​; KSRTCಯಿಂದ ಬಸ್​ ಪಾಸ್​ ಅವಧಿ ವಿಸ್ತರಣೆ 

ರಾಜಕಾರಣದಲ್ಲಿ ಮಗನಿಗೆ ಸ್ಟೂಲ್ ಹಿಡಿಯಲ್ಲ

ಮಂಡ್ಯಕ್ಕೆ ಆಗಮಿಸಿದ ಸಂಸದೆ ಸುಮಲತಾ ಅಂಬರೀಶ್ (MP Sumalatha Ambareesh) ಮಾಧ್ಯಮಗಳ ಜೊತೆ ಮಾತನಾಡಿ ಪುತ್ರ ಅಭಿಷೇಕ್​ಗೆ ರಾಜಕೀಯ ಪಕ್ಷಗಳು ನೀಡಿರೋದು ನಿಜ. ಆದರೆ ಯಾವ ಪಕ್ಷ ಎಂದು ಈ ಸಮಯದಲ್ಲಿ ಹೇಳಲು ಆಗಲ್ಲ. ಮದ್ದೂರು ಅಥವಾ ಬೆಂಗಳೂರು ಉತ್ತರಕ್ಕೆ ಟಿಕೆಟ್ ಕೇಳುವ ಪರಿಸ್ಥಿತಿ ನಮಗೆ ಬಂದಿಲ್ಲ. ಸಿನಿಮಾದಲ್ಲಿ ಮೊದಲ ಹೆಜ್ಜೆ ಇರಿಸಿರುವ ರಾಜಕೀಯಕ್ಕೆ ಬರುವ ಕುರಿತು ಅವನು ನಿರ್ಧರಿಸಬೇಕು. ಬೇರೆ ಬೇರೆ ಪಕ್ಷದಿಂದ ಆಫರ್ ಇರೋದು ನಿಜ. ಯಾವ ಪಕ್ಷಕ್ಕೆ ಅಭಿಷೇಕ್ ಅನಿವಾರ್ಯ ವದೆಯೋ ಆ ಪಕ್ಷದವರು ಮಾತನಾಡುತ್ತಾರೆ. ನಾನು ಸಂಸದೆಯಾಗಿ ರಾಜಕಾರಣದಲ್ಲಿ ಮಗನಿಗೆ ಸ್ಟೂಲ್ ಹಿಡಿಯಲ್ಲ ಎಂದು ಹೇಳಿದರು.

ಬೆಂಗಳೂರಲ್ಲಿ ಮತ್ತೊಂದೆಡೆ ಕಿತ್ತು ಹೋಗಿದೆ ಡಾಂಬರು

ಬೆಂಗಳೂರು (ಜೂ 28): ಜೂನ್ 20ಕ್ಕೆ ನರೇಂದ್ರ ಮೋದಿ (PM Narendra Modi) ಬೆಂಗಳೂರಿಗೆ ಬಂದಿದ್ದರು. ಬಂದವರೇ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಮೈಸೂರಿಗೆ (Mysuru) ಹೋದರು. ಮೋದಿ ಬರುವ ಹಿನ್ನೆಲೆ ಬಿಬಿಎಂಪಿ ರಸ್ತೆಗಳಿಗೆಲ್ಲಾ ಡಾಂಬರು ಹಾಕಿ ಶೃಂಗಾರ ಮಾಡಿತ್ತು. ಆದರೆ ಮೋದಿ ಬಂದು ಹೋದ ಮೂರೇ ದಿನಕ್ಕೆ ಡಾಂಬರು ಕಿತ್ತು ಬಂದಿತ್ತು. ಇದೀಗ ಒಂದು ವಾರದ ಬಳಿಕ ಮತ್ತೊಂದು ಕಡೆಯ ಡಾಂಬರು ಕಿತ್ತು ಬಂದಿದೆ. ಈ ಬಗ್ಗೆ ನ್ಯೂಸ್ 18 ಕನ್ನಡ (News18 kannada) ಸವಿಸ್ತಾರವಾದ ವರದಿ ಪ್ರಸಾರ ಮಾಡಿತ್ತು. ವರದಿ ಪ್ರಸಾರ ಮಾಡಿದ ಒಂದೇ ಗಂಟೆಯೊಳಗೆ ಬಿಬಿಎಂಪಿ ಅಧಿಕಾರಿಗಳು (BBMP Officer) ಸ್ಥಳಕ್ಕೆ ಬಂದು ಡಾಂಬರೀಕರಣ ಮಾಡಿ ಹೊರಟಿದ್ದಾರೆ.
Published by:Pavana HS
First published: