Evening Digest: ಒಂದು ಕಪ್ ಟೀಗೆ ಕಾದು ಕುಳಿತಿದಿದ್ದೇಕೆ ಸಚಿವ ಗಡ್ಕರಿ?: ಇಂಧನ ತೆರಿಗೆ ತಗ್ಗಿಸುವಂತೆ ರಾಜ್ಯಗಳಿಗೆ PM ಸೂಚನೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಒಂದು ಕಪ್​​​ ಟೀಗೆ ಕಾದು ಕುಳಿದಿದ್ದೇಕೆ ಸಚಿವ ಗಡ್ಕರಿ?: ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ (Union minister Nitin Gadkari )ಅವರು ಒಂದು ಕಪ್ ಚಹಾಗಾಗಿ (Tea) ಕಲಬುರಗಿ ವಿಮಾನ ನಿಲ್ದಾಣದಲ್ಲಿ (Kalaburagi Airport)  15 ನಿಮಿಷಗಳ ಕಾಲ ಕಾದ ಘಟನೆ ನಡೆದಿದೆ. ನಿತಿನ್ ಗಡ್ಕರಿ ಎರಡು ಬಾರಿ ಚಹಾ ಕೇಳಿದರೂ ಸಹ, ಆಹಾರ ಸುರಕ್ಷತಾ ಅಧಿಕಾರಿಗಳ ಕೊರತೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳ ಬೇಜವಾಬ್ದಾರಿತನದಿಂದ 15 ನಿಮಿಷಗಳ ಕಾಲ ಒಂದು ಕಪ್ ಚಹಾಕ್ಕೆ ಕೇಂದ್ರ ಸಚಿವರು ಕಾಯುಬೇಕಾಯಿತು. ನಿನ್ನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಭೀಮಾ-ಅಮರ್ಜಾ ಸಂಗಮದಲ್ಲಿರುವ ಗಾಣಗಾಪುರದ ದತ್ತ ಮಂದಿರ ತೀರ್ಥ ಕ್ಷೇತ್ರಕ್ಕೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಮರಳಿ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಲು ಕಲಬುರಗಿ ಏರ್‌ಪೋರ್ಟ್‌ಗೆ ಆಗಮಿಸಿದ್ದರು. ಈ ವೇಳೆ ಒಂದು ಕಪ್ ಚಹಾಕ್ಕಾಗಿ ಕೇಂದ್ರ ಸಚಿವರು ಕೆಲ ಹೊತ್ತು ಕಾಯಬೇಕಾದ ಘಟನೆ ಸಂಭವಿಸಿತು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Nitin Gadkari: ಒಂದು ಕಪ್ ಚಹಾಕ್ಕೆ ಕಾದು ಕುಳಿತ ಕೇಂದ್ರ ಸಚಿವ ಗಡ್ಕರಿ: ಏನಿದು ಬೇಜವಾಬ್ದಾರಿತನ, ಏನಾಯ್ತು?

ಇಂಧನ ತೆರಿಗೆ ತಗ್ಗಿಸುವಂತೆ ರಾಜ್ಯಗಳಿಗೆ PM ಸೂಚನೆ

ಮತ್ತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ (Corona Cases) ಸಂಬಂಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ (PM Modi), ಇಂಧನ ತೆರಿಗೆ (Fuel Prices) ಸಂಬಂಧ ಮಹತ್ವದ ಸೂಚನೆ ನೀಡಿದ್ದಾರೆ. ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆ (VAT) ಅನ್ನು ಕಡಿಮೆ ಮಾಡಲು ಮೋದಿ ಇಂದು ರಾಜ್ಯಗಳಿಗೆ ಮನವಿ ಮಾಡಿದರು. ದೇಶಾದ್ಯಂತದ ನಗರಗಳಲ್ಲಿ ಇಂಧನ ಬೆಲೆಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ವ್ಯಾಟ್ ಅನ್ನು ಕಡಿಮೆ ಮಾಡಿದ ರಾಜ್ಯಗಳು ಕಡಿಮೆ ಇಂಧನ ಬೆಲೆಗಳನ್ನು ಹೊಂದಿವೆ ಎಂದು ಸೂಚಿಸಿದರು. ಸಂವಿಧಾನದಲ್ಲಿ ಪ್ರತಿಪಾದಿಸಲಾದ ಸಹಕಾರಿ ಫೆಡರಲಿಸಂನ ಮನೋಭಾವವನ್ನು ಒತ್ತಿಹೇಳುತ್ತಾ, ದೇಶವು ಆ ಮನೋಭಾವದ ಮೂಲಕ ಕೋವಿಡ್ ವಿರುದ್ಧ ಸುದೀರ್ಘ ಯುದ್ಧವನ್ನು ಬಲವಾಗಿ ಹೋರಾಡಿದೆ. ರಷ್ಯಾ ಉಕ್ರೇನ್​​ ಯುದ್ಧದಿಂದ ಜಾಗತಿಕ ಸಮಸ್ಯೆಗಳು ನೀಡಿದ ಆರ್ಥಿಕ ಸಮಸ್ಯೆಗಳಿಗೆ ಸಹ ಅದೇ ರೀತಿ ಮಾಡಬೇಕು ಎಂದು ಹೇಳಿದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:PM Modi: ಇಂಧನ ಮೇಲಿನ ವ್ಯಾಟ್ ಅನ್ನು ರಾಜ್ಯಗಳು ಕಡಿತಗೊಳಿಸಿ, ಜನರ ಹೊರೆ ಇಳಿಸಿ: ಪ್ರಧಾನಿ ಮೋದಿ ಸೂಚನೆ

ಮಕ್ಕಳ ಲಸಿಕೆ ಅಭಿಯಾನಕ್ಕೆ ವೇಗ ನೀಡಲು ಪ್ರಧಾನಿ ಸೂಚನೆ

ದೇಶದಲ್ಲಿ ತಗ್ಗಿದ್ದ ಕೋವಿಡ್ (Covid)​ ಪ್ರಕರಣಗಳು ಮತ್ತೇ ಏರಿಕೆ ಕಾಣುತ್ತಿದ್ದು, ಅನೇಕ ರಾಜ್ಯಗಳಲ್ಲಿ ಮಾಸ್ಕ್ (Mask)​ ಕಡ್ಡಾಯ ಆದೇಶ ಜಾರಿ ಮಾಡಲಾಗಿದೆ. ಈ ನಡುವೆ ನಾಲ್ಕನೇ ಅಲೆ ಭೀತಿ (Fourth wave) ಎದುರಾಗಿರುವ ಹಿನ್ನಲೆ ತೆಗೆದುಕೊಳ್ಳಬೇಕಾದ ಕಟ್ಟು ನಿಟ್ಟಿನ ಕ್ರಮಗಳ ಕುರಿತು ದೇಶದ ರಾಜ್ಯಗಳ ಸಿಎಂಗಳ ಜೊತೆ ಇಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಭೆ ನಡೆಸಿದರು. ಈ ವೇಳೆ ಕೋವಿಡ್ ರೂಪಾಂತಾರಿ ತಳಿ ಸೋಂಕಿನ ಕುರಿತು ಮಾಹಿತಿ ಪಡೆದ ಅವರು, ರಾಜ್ಯಗಳು ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮದ ಕುರಿತು ಸೂಚನೆ ನೀಡಿದರು.

5 ವರ್ಷದ ಹೆಣ್ಣು ಮಗುವಿನ ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ

ಜಾರ್ಖಂಡ್‌ನ ಖುಂತಿ ಜಿಲ್ಲೆಯಲ್ಲಿ 12 ವರ್ಷದ ಬಾಲಕನೊಬ್ಬ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು (Police) ಮಂಗಳವಾರ ತಿಳಿಸಿದ್ದಾರೆ. ಬಾಲಕಿ ತನ್ನ ಮನೆಯ ಸಮೀಪದ ಅಂಗಡಿಯೊಂದಕ್ಕೆ ತಂಪು ಪಾನೀಯ ಖರೀದಿಸಲು (Cool Drinks) ಹೋದಾಗ ಅಲ್ಲಿ ಒಬ್ಬನೇ ಇದ್ದ ಹುಡುಗ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಅವರು ಹೇಳಿದ್ದಾರೆ. ಶನಿವಾರದಂದು ತೋರ್ಪಾ ಪೊಲೀಸ್ ಠಾಣಾ (Police Station) ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಜಿಲ್ಲೆಯಾದ್ಯಂತ ಬೆಚ್ಚಿಬೀಳಿಸಿದೆ. ಭಾನುವಾರ ಬಾಲಕನನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮನ್ ಕುಮಾರ್ ಹೇಳಿದ್ದಾರೆ. ರಿಮಾಂಡ್ ಮೇಲೆ ಬಾಲಕನನ್ನು ರಾಂಚಿಯ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

ಮೊಮ್ಮಗಳನ್ನು ಹೆಲಿಕಾಪ್ಟರ್​ ಮೂಲಕ ಮನೆಗೆ ಬರ ಮಾಡಿಕೊಂಡ ಅಜ್ಜ

ಪುಣೆ: ಗಂಡು ಮಗುವಿನ ವ್ಯಾಮೋಹ, ಹೆಣ್ಣೆಂದರೆ ತಾತ್ಸಾರ ಇಂದಿಗೂ ನಮ್ಮ ಸಮಾಜದಲ್ಲಿ ಕೊನೆಯಾಗಿಲ್ಲ. ತಾಯಿಯಾಗಿ, ಪತ್ನಿಯಾಗಿ, ಸೋದರಿಯಾಗಿ ಬೇಕಿರುವ ಹೆಣ್ಣು ಮಗಳಾಗಿ ಮಾತ್ರ ಬೇಡ ಎನ್ನುವವರು ಇಂದಿಗೂ ಇದ್ದಾರೆ. ಆದರೆ ಈ ಮಾತಿಗೆ ಅಪವಾದ ಎಂಬಂತೆ ಮಹಾರಾಷ್ಟ್ರದ ಪುಣೆಯ ಕುಟುಂಬವೊಂದು ಹೆಣ್ಣು ಮಗು ಹುಟ್ಟಿದಕ್ಕೆ ಯಾರೂ ಊಹಿಸದ ರೀತಿಯಲ್ಲಿ ಸಂಭ್ರಮಿಸಿದ್ದಾರೆ. ಪುಟ್ಟ​ ಲಕ್ಷ್ಮಿಯನ್ನು ಹೆಲಿಕಾಪ್ಟರ್​ ಮೂಲಕ ಮನೆಗೆ ಕರೆ ತಂದಿದ್ದಾರೆ.  ಮಹಾರಾಷ್ಟ್ರದ ಪುಣೆ ಜಿಲ್ಲೆಯ ರೈತರೊಬ್ಬರು ತಮ್ಮ ಮನೆಗೆ ಮೊಮ್ಮಗಳನ್ನು ಭವ್ಯವಾಗಿ ಸ್ವಾಗತಿಸಲು ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆದಿದ್ದಾರೆ. ಮೊಮ್ಮಗಳು ಹುಟ್ಟಿದ್ದಕ್ಕೆ ಹರ್ಷಗೊಂಡ ಅಜಿತ್ ಪಾಂಡುರಂಗ ಬಲ್ವಾಡ್ಕರ್ ಅವರು ಪುಣೆಯ ಶೆವಾಲ್ವಾಡಿಯ ಮಂಜ್ರಿ ಫಾರ್ಮ್‌ನಲ್ಲಿರುವ ಅವರ ತಾಯಿಯ ಮನೆಯಿಂದ ಬಾಳೆವಾಡಿಯ ಅವರ ಮನೆಗೆ ಕುಟುಂಬದ ಹೊಸ ಸದಸ್ಯತೆ ಮತ್ತಯ ಅವರ ಸೊಸೆಯನ್ನು ಕರೆತರಲು ಹೆಲಿಕಾಪ್ಟರ್ ಅನ್ನು ಬಳಸಿದ್ದಾರೆ.
Published by:Kavya V
First published: