Evening Digest: ಕಾಂಗ್ರೆಸ್​​ನಿಂದ ಗಂಟೆ ಬಾರಿಸೋ ಅಭಿಯಾನ: ಯುಗಾದಿ ಹಬ್ಬಕ್ಕೆ ಹೆಚ್ಚುವರಿ KSRTC ಬಸ್​​ಗಳು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕಾಂಗ್ರೆಸ್ ನಿಂದ ಗಂಟೆ ಬಾರಿಸೋ ಅಭಿಯಾನ: ಲಾಕ್ ಡೌನ್ ಸಂದರ್ಭ ಪ್ರಧಾನಿ ಮೋದಿ (Modi) ಕೊರೋನಾ ವಾರಿಯರ್ಸ್ಗೆ (Corona Warriors) ಗೌರವ ಸಲ್ಲಿಸುವುದಕ್ಕಾಗಿ ಗಂಟೆ ಬಾರಿಸುವಂತೆ ಹೇಳಿದ್ದು ನೆನಪಿದೆಯಾ? ಎಲ್ಲರೂ ತಮ್ಮ ತಮ್ಮ ಮನೆಯ ಟೆರೇಸ್ಗಳಿಗೆ ಬಂದು ಗಂಟೆ ಬಾರಿಸಿ, ದೀಪ ಬೆಳಗಿ, ಶಂಖ ಊದುವ ಮೂಲಕ ಕೊರೋನಾ ವಾರಿಯರ್ಸ್ಗೆ ಗೌರವ ಸಲ್ಲಿಸಿದ್ದರು. ಸೆಲೆಬ್ರಿಟಿಗಳಿಂದ (Celebrity) ಹಿಡಿದು ಜನ ಸಾಮಾನ್ಯರ ತನಕ ಎಲ್ಲರೂ ಇದರಲ್ಲಿ ಭಾಗಿಯಾಗಿದ್ದರು. ಹೌದಲ್ಲಾ ಮೊನ್ನೆ ಮೊನ್ನೆ ನಡೆದಂತಿದೆ. ಈಗ ಕಾಂಗ್ರೆಸ್ (Congress) ಕೂಡಾ ಇಂಥದ್ದೇ ಒಂದು ಅಭಿಯಾನವನ್ನು (Campaign) ಶುರು ಮಾಡಿಕೊಂಡಿದೆ. ಇದಕ್ಕಾಗಿ ದಿನಾಂಕ, ಸಮಯ ಎಲ್ಲವನ್ನೂ ನಿಗದಿ ಮಾಡಿಯೂ ಆಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Congress Campaign: ಗುರುವಾರ 11 ಗಂಟೆಗೆ ಕಾಂಗ್ರೆಸ್​ನಿಂದ ಗಂಟೆ ಬಾರಿಸೋ ಅಭಿಯಾನ

ಯುಗಾದಿ ಹಬ್ಬಕ್ಕೆ ಹೆಚ್ಚುವರಿ KSRTC ಬಸ್ಗಳು

ಯುಗಾದಿ (Ugadi) ಹಬ್ಬದ (Festival) ಹಿನ್ನೆಲೆ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಸಾರಿಗೆ ಇಲಾಖೆ ವಿಶೇಷ ಬಸ್ಗಳ (Special buses) ವ್ಯವಸ್ಥೆ ಮಾಡಿದೆ. KRSTC ಮಹತ್ವದ ಕ್ರಮ ಕೈಗೊಂಡಿದ್ದು, ಸುಮಾರು 600 ಹೆಚ್ಚುವರಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಿದೆ. ಈ ಮೂಲಕ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಬೆಂಗಳೂರಿನಿಂದ ಧರ್ಮಸ್ಥಳ, ಸುಬ್ರಹ್ಮಣ್ಯ, ಮಂಗಳೂರು, ಮೈಸೂರು, ಶಿವಮೊಗ್ಗ, ತಮಿಳುನಾಡು ಹಾಗೂ ಕೇರಳ ಕಡೆಗೆ ಹೆಚ್ವುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಆನ್ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ಕಿಂಗ್ (Ticket Booking) ಸೌಲಭ್ಯ ಕಲ್ಪಿಸಲಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Bengaluru: ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್; KSRTCಯಿಂದ 600 ಹೆಚ್ಚುವರಿ ಬಸ್ ವ್ಯವಸ್ಥೆ

ಹಿಜಾಬ್ ಧರಿಸಿ ತರಗತಿ ಒಳಗೆ ನಮಾಜ್ ಮಾಡಿದ ಮುಸ್ಲಿಂ ವಿದ್ಯಾರ್ಥಿನಿ
ಮಧ್ಯಪ್ರದೇಶದ ವಿಶ್ವವಿದ್ಯಾನಿಲಯದಲ್ಲಿ (Madya Pradesh University) ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಹಿಜಾಬ್ ಧರಿಸಿ (hijab) ನಮಾಜ್ (Namaz) ಮಾಡುತ್ತಿರುವ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಕೇಂದ್ರೀಯ ಸಂಸ್ಥೆಯಾದ ಡಾ ಹರಿಸಿಂಗ್ ಗೌರ್ ಸಾಗರ್ ವಿಶ್ವವಿದ್ಯಾಲಯದ ( Dr Harisingh Gour Sagar University) ತರಗತಿಯೊಳಗೆ ವಿದ್ಯಾರ್ಥಿನಿ ನಮಾಜ್ ಮಾಡುತ್ತಿದ್ದಾಳೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಹಿಂದೂ ಜಾಗರಣ ಮಂಚ್ ಎಂಬ ಬಲಪಂಥೀಯ ಗುಂಪು ವಿದ್ಯಾರ್ಥಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಶ್ವವಿದ್ಯಾಲಯದ ಆಡಳಿತಕ್ಕೆ ದೂರು ನೀಡಿದೆ. ತನಿಖೆಗೆ ಆದೇಶಿಸಲಾಗಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿ

ಪಂಜಾಬ್ ವಿಧಾನಸಭೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಆಪ್ (AAP) ಪಕ್ಷ ಹೊಸ ಹುಮ್ಮಸ್ಸಿನಲ್ಲಿದ್ದು, ದೆಹಲಿಯಲ್ಲಿ ಬಜೆಟ್ (Delhi Budget 2022) ಮೂಲಕ ಆಪ್ ಸರ್ಕಾರ ಸದ್ದು ಮಾಡುತ್ತಿದೆ. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Delhi Deputy Chief Minister Manish Sisodia) ಇಂದು ವಿಧಾನಸಭೆಯಲ್ಲಿ 2022-23ನೇ ಹಣಕಾಸು ವರ್ಷಕ್ಕೆ 75,800 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದರು. 'ರೋಜ್ಗಾರ್ ಬಜೆಟ್' ಮೂಲಕ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ದೆಹಲಿ ಸರ್ಕಾರ ಹೊಂದಿದೆ ಎಂದು ದೆಹಲಿ ಹಣಕಾಸು ಸಚಿವ ಸಿಸೋಡಿಯಾ ಇಂದು ಹೇಳಿದ್ದಾರೆ. ಮನೀಶ್ ಸಿಸೋಡಿಯಾ ಅವರು 8 ನೇ ವಾರ್ಷಿಕ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿದರು.

ಉಪ್ಪಿ ಜೊತೆ ಜೇಮ್ಸ್ ನೋಡಿ ಮತ್ತೆ ಶಿವಣ್ಣ ಭಾವುಕ
ಮಾರ್ಚ್ 17ರಂದು ರಿಲೀಸ್ ಆಗಿದ್ದ ಜೇಮ್ಸ್ ಸಿನಿಮಾವನ್ನು ಶಿವಣ್ಣ ಮೈಸೂರಿನಲ್ಲಿ ಅಂದೇ ನೋಡಿ ಅಪ್ಪು ನೆನೆದು ಕಣ್ಣೀರಿಟ್ಟಿದ್ದರು. ಇಂದು ಶಿವಣ್ಣ ದಂಪತಿ ಮತ್ತೆ ಜೇಮ್ಸ್ಸಿನಿಮಾವನ್ನು ನೋಡಿದ್ದಾರೆ. ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದಾರೆ. ಶಿವಣ್ಣನಿಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್ ನೀಡಿದ್ದಾರೆ. ಇದೇ ವೇಳೆ ನಿರ್ಮಾಪಕ ಕಿಶೋರ್ ಹಾಗೂ ನಿರ್ದೇಶಕ ಚೇತನ್ ಕೂಡ ಹಾಜರಿದ್ದರು. ತೆರೆ ಮೇಲೆ ಅಪ್ಪು ನೋಡಿ ಶಿವಣ್ಣ, ಉಪೇಂದ್ರ ಮತ್ತೆ ಭಾವುಕರಾದರು.
Published by:Kavya V
First published: