Evening Digest: ಮತ್ತೆ ಕೊರೊನಾ, ಮತ್ತೆ ಬಂತು ಈ ಎಲ್ಲಾ ರೂಲ್ಸ್: ಶೀಘ್ರವೇ ಸಿಎಂಗಳ ಜೊತೆ ಪ್ರಧಾನಿ ಮೀಟಿಂಗ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮತ್ತೆ ಕೊರೊನಾ, ಮತ್ತೆ ಬಂತು ಈ ಎಲ್ಲಾ ರೂಲ್ಸ್ : ಕೊರೊನಾ ಪ್ರಕರಣಗಳು (Corona Case) ಹೆಚ್ಚುತ್ತಿರುವ ಹಿನ್ನೆಲೆ ಸಿಎಂ ಬಸವರಾಜ​ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ಸಭೆ ನಡೆಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿನ ಕೋವಿಡ್ ಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಸಿಎಂ ಬೊಮ್ಮಾಯಿ ಮಾಹಿತಿ ಪಡೆದಿದ್ದಾರೆ.  ದೆಹಲಿ, ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯ್ತು. ಇತ್ತೀಚಿನ ದಿನಗಳಲ್ಲಿ ಜನರು ಮಾಸ್ಕ್​ (Mask) ಧರಿಸೋದನ್ನೇ ಮರೆತು ಬಿಟ್ಟಿದ್ದಾರೆ. ಇನ್ಮುಂದೆ ಜನರು ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು, ಸಾಮಾಜಿಕ ಅಂತರವನ್ನು ಎಲ್ಲರೂ ಪಾಲಿಸಬೇಕು ಎಂದು ಸಚಿವ ಸುಧಾಕರ್ (Minister Sudhakar)​ ಹೇಳಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ:Corona Virus: ಇನ್ಮುಂದೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ- ಸಚಿವ ಸುಧಾಕರ್

ಶೀಘ್ರವೇ ಸಿಎಂಗಳ ಜೊತೆ ಪ್ರಧಾನಿ ಮೀಟಿಂಗ್

ಒಂದನೇ ಅಲೆ  (1st Wave), ಎರಡನೇ ಅಲೆ (2nd Wave) ಹಾಗೂ ಮೂರನೇ ಅಲೆಯಲ್ಲಿ (3rd Wave) ತನ್ನ ಉಗ್ರ ರೂಪ ತೋರಿಸಿದ್ದ ಕೋವಿಡ್ (Covid) ಮಹಾಮಾರಿ, ಈಗ ನಾಲ್ಕನೇ ಅಲೆ (4th Wave) ರೂಪದಲ್ಲಿ ಒಕ್ಕರಿಸಲು ಹವಣಿಸುತ್ತಿದೆ. ಚೀನಾ (China) ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಕೊರೋನ ಕೇಸ್‌ಗಳ (Corona Case) ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ದಿನಕ್ಕೆ ಲಕ್ಷಾಂತರ ಕೇಸ್‌ಗಳು ಪತ್ತೆಯಾಗುತ್ತಿದ್ದು, ಚೀನಾದ ಅನೇಕ ನಗರಗಳಲ್ಲಿ (City) ಲಾಕ್‌ ಡೌನ್ (Lockdown) ಘೋಷಿಸಲಾಗಿದೆ. ಇತ್ತ ಭಾರತದಲ್ಲೂ ದೆಹಲಿ (Delhi), ಕೇರಳ (Kerala) ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಹತ್ವದ ಸಭೆ (Important Meeting) ಕರೆದಿದ್ದಾರೆ. ಇದೇ ಏಪ್ರಿಲ್ 27ರಂದು ಎಲ್ಲಾ ರಾಜ್ಯಗಳ ಸಿಎಂಗಳು (CM) ಹಾಗೂ ಕೇಂದ್ರಾಡಳಿತ ಪ್ರದೇಶಗಳ (Union Territories) ಮುಖ್ಯಸ್ಥರೊಂದಿಗೆ ಪ್ರಧಾನಿ ಸಭೆ ನಡೆಸಲಿದ್ದು, ಈ ಮೀಟಿಂಗ್ ಅತ್ಯಂತ ಹೆಚ್ಚು ಮಹತ್ವ ಪಡೆದಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ: Modi Meeting: ಮತ್ತೆ ಕೋವಿಡ್ ಕೇಸ್ ಹೈಕ್, ಆಗುತ್ತಾ ದೇಶ 'ಲಾಕ್'? ಏಪ್ರಿಲ್ 27ಕ್ಕೆ ಸಿಎಂಗಳ ಜೊತೆ ಪ್ರಧಾನಿ ಮೀಟಿಂಗ್

ವಿಚಾರಣೆಗೆ ಹಾಜರಾಗಲು ಪ್ರಿಯಾಂಕ್ ಖರ್ಗೆ ಹಿಂದೇಟು

PSI ನೇಮಕಾತಿ ಅಕ್ರಮಕ್ಕೆ  (PSI Recruitment Scam) ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಪ್ರಿಯಾಂಕ್​ ಖರ್ಗೆಗೆ (Priyank Kharge) ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ರು, ಆದ್ರೆ ಪ್ರಿಯಾಂಕ್​ ಖರ್ಗೆ ವಿಚಾರಣೆಗೆ ಹಾಜರಾಗಿಲ್ಲ, ಈ ವಿಚಾರಕ್ಕೆ ಪ್ರತಿಕ್ರಿಯಿಸಿದ  ಗೃಹ ಸಚಿವ ಆರಗ ಜ್ಞಾನೇಂದ್ರ, (Araga jnanendra) ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಬಳಿ ಇರಬಹುದಾದ, PSI ಹುದ್ದೆಗಳ ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಗಳನ್ನು, ಹಾಗೂ ಮಾಹಿತಿಗಳನ್ನು, ಹಂಚಿ ಕೊಳ್ಳಬೇಕು ಎಂದು ಸಿಐಡಿ ಅಧಿಕಾರಿಗಳು ನೋಟಿಸ್ (CID Notice) ನೀಡಿದ್ದರು. ಮಾನ್ಯ ಶಾಸಕರು, ತಮ್ಮ ಬಳಿ ಅಕ್ರಮ ನೇಮಕಾತಿಗೆ  ಸಂಬಂಧಿಸಿದಂತೆ ಬಹಳಷ್ಟು ಸಾಕ್ಷ್ಯಾಧಾರ ಗಳಿವೆ ಹಾಗೂ ಅಕ್ರಮದಲ್ಲಿ ಭಾಗಿಯಾಗಿರೋ ವ್ಯಕ್ತಿಗಳ ಹೆಸರುಗಳು ಗೊತ್ತು, ಎಂದು ಮಾಧ್ಯಮದವರ ಮುಂದೆ ಬಿಂಬಿಸಿಕೊಂಡಿದ್ದರು. ಈಗ ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಲು ಹಿಂಜರಿಯುತ್ತಿದ್ದಾರೆ ಎಂದು ಕಿಡಿಕಾರಿದ್ರು.

ಜಾತಿ ಕಾರಣಕ್ಕೆ ಜೈಲಿನಲ್ಲಿ ನೀರು ಕೊಡ್ತಿಲ್ಲ

ಹನುಮಾನ್ ಚಾಲೀಸಾ ಪಠಣ (Hanuman Chalisa Row) ಪ್ರಕರಣದಲ್ಲಿ​​ ಬಂಧನಕ್ಕೊಳಗಾಗಿರುವ ಸಂಸದೆ ನವನೀತ್ ರಾಣಾ (MP Navneet Rana) ಅವರು ಜೈಲಿನೊಳಗೆ ತಮ್ಮ ವಿರುದ್ಧ ಜಾತಿ ನಿಂದನೆ (Casteist Slur) ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಸೋಮವಾರದಂದು ಅಮರಾವತಿ ಸಂಸದೆ ಸ್ಪೀಕರ್ ಓಂ ಬಿರ್ಲಾ (Speaker Om Birla) ಅವರಿಗೆ ಪತ್ರ ಬರೆದಿದ್ದು, ತನಗೆ ಕುಡಿಯುವ ನೀರಿನ್ನು ನಿರಾಕರಿಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ನನಗೆ ಜೈಲಿನಲ್ಲಿ ಶೌಚಾಲಯವನ್ನು ಬಳಸಲು ಅನುಮತಿ ಕೂಡ ನೀಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಾನು ಪರಿಶಿಷ್ಟ ಜಾತಿ (ನೀಚಿ ಝಾತ್) ಎಂಬ ಕಾರಣಕ್ಕಾಗಿ ಕುಡಿಯುವ ನೀರಿನಂತಹ ಮೂಲಭೂತ ಮಾನವ ಹಕ್ಕುಗಳನ್ನು ನನಗೆ ನಿರಾಕರಿಸಲಾಗಿದೆ ಎಂದು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

900 ಕೋಟಿ ಕ್ಲಬ್​ ಸೇರಿತಾ KGF 2?

ಕೆಜಿಎಫ್ ಚಾಪ್ಟರ್ 2  (KGF: Chapter 2) ಎಲ್ಲೆಂದರಲ್ಲಿ ಹವಾ ಎಬ್ಬಿಸುತ್ತಿದೆ. ಇದರ ಅಬ್ಬರಕ್ಕೆ ಇದುವರೆಗಿನ ದಾಖಲೆಗಳು ಛಿದ್ರಛಿದ್ರವಾಗಿ ಹೋಗಿವೆ. ಹೊಸ ದಾಖಲೆಗಳ ಮೈಲಿಗಲ್ಲನ್ನೇ ಬರೆದಿದೆ. , ಇಡೀ ವಿಶ್ವದಾದ್ಯಂತ (World) ಕೆಜಿಎಫ್‌ ಚಾಪ್ಟರ್ 2 (KGF Chapter 2) ಸಿನಿಮಾ (Cinema) ಅಬ್ಬರ ಮುಂದುವರೆದಿದೆ. ಭಾರತೀಯ ಚಿತ್ರರಂಗದ (Indian Film Industry) ಎಲ್ಲಾ ದಾಖಲೆಗಳನ್ನೂ (Records) ಕೆಜಿಎಫ್‌ ಚಾಪ್ಟರ್ 2 ಉಡೀಸ್ ಮಾಡುತ್ತಿದೆ. ಬಾಕ್ಸ್ ಆಫೀಸ್‌ (Box Office) ಅನ್ನೇ ಶೇಕ್ ಮಾಡಿರುವ ಕೆಜಿಎಫ್‌ ಚಾಪ್ಟರ್ 2, 1000 ಕೋಟಿ ಕ್ಲಬ್ (1000 Crore Club) ತಲುಪುವ ನಿರೀಕ್ಷೆ ಇದೆ. ಎರಡನೇ ವೀಕೆಂಡ್‌ನಲ್ಲಿ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ. ಎಲ್ಲ ಸಿನಿಮಾಗಳ ದಾಖಲೆಗಳನ್ನು ಕೆಜಿಎಫ್​ ಚಾಪ್ಟರ್​ 2 ಬ್ರೇಕ್​ ಮಾಡಿ, ಯಾರೂ ಮತ್ತೆ ಈ ದಾಖಲೆಯನ್ನು ಬ್ರೇಕ್ ಮಾಡದೇ ಇರುವ ಸ್ಥಾನಕ್ಕೆ ಹೋಗಿ ನಿಲ್ಲುತ್ತೆ ಎಂದು ಸಿನಿಪಂಡಿತರು ಹೇಳಿದ್ದಾರೆ.
Published by:Kavya V
First published: