‘ಹಿಜಾಬ್’ಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ : ಶಾಲೆಗಳಲ್ಲಿ ಹಿಜಾಬ್ (Hijab) ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಮಾರ್ಚ್ 15ರಂದು ಕರ್ನಾಟಕ ಹೈಕೋರ್ಟ್ (Karnataka High Court) ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ (Supreme Court) ಮೇಲ್ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕಳೆದ ವಾರ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿರಲಿಲ್ಲ. ಆಗ ಹೋಳಿ (Holi) ಹಬ್ಬದ ಬಳಿಕ ವಿಚಾರಣೆಗೆ ದಿನಾಂಕ ನಿಗಧಿ ಮಾಡಲಾಗುವುದು ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಮತ್ತೊಮ್ಮೆ ಸುಪ್ರೀಂ ಕೋರ್ಟಿನಲ್ಲಿ ವಿಷಯ ಪ್ರಸ್ತಾಪಿಸಲಾಗಿದ್ದು ಸುಪ್ರೀಂ ಕೋರ್ಟ್ ಮತ್ತೊಮ್ಮೆ ತುರ್ತು ವಿಚಾರಣೆಗೆ ನಿರಾಕರಿಸಿದೆ.
ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Hijab Row: ಹಿಜಾಬ್ ವಿವಾದದ ಬಗ್ಗೆ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಮತ್ತೊಮ್ಮೆ ನಕಾರ
ಹೋಟೆಲ್ ಊಟ-ತಿಂಡಿ ಬೆಲೆ ಏರಿಕೆ?
ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಒಂದೊಂದೇ ದರಗಳು ಏರಿಕೆ ಆಗುತ್ತಿವೆ. ಇತ್ತ ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ತೈಲ ಬೆಲೆ ಸಹ ಏರಿಕೆ ಕಂಡಿದೆ. ಕಳೆದ ವಾರ LPG ಸಿಲಿಂಡರ್ ಬೆಲೆ ಏರಿಕೆಯಾಗಿದ್ದರಿಂದ, ಹೋಟೆಲ್ ಆಹಾರ ಮತ್ತಷ್ಟು ಏರಿಕೆ ಆಗುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಬೆಂಗಳೂರಿನಲ್ಲಿ ಗೃಹ ಬಳಕೆ ಸಿಲಿಂಡರ್ ದರ ಸಾವಿರದ ಸನೀಹಕ್ಕೆ ಬಂದು ನಿಂತಿದೆ. 14.2 ಕೆ.ಜಿ ಗೃಹ ಬಳಕೆಯ ಸಿಲಿಂಡರ್ ಬೆಲೆ 952.50 ರೂ. ಆಗಿದೆ. ಗೃಹ ಬಳಕೆಯ ಸಿಲಿಂಡರ್ ದರದಲ್ಲಿ 50 ರೂ. ಮತ್ತು ವಾಣಿಜ್ಯ ಸಿಲಿಂಡರ್ ದರದಲ್ಲಿ 100 ರೂ. ಏರಿಕೆಯಾಗಿದೆ. ಸದ್ಯ 19 ಕೆ.ಜಿಯ ವಾಣಿಜ್ಯ ಸಿಲಿಂಡರ್ 2,100 ರೂ. ಇದೆ. ಇನ್ನೂ ಏಪ್ರಿಲ್ ತಿಂಗಳಿನಿಂದ ಹಾಲು, ವಿದ್ಯುತ್ ದರವೂ ಮತ್ತಷ್ಟು ದುಬಾರಿಯಾಗಲಿದೆ.
ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Price Hike: LPG ಸಿಲಿಂಡರ್ ಬೆಲೆ ಏರಿಕೆ: ಮತ್ತಷ್ಟು ತುಟ್ಟಿಯಾಗುತ್ತಾ ಹೋಟೆಲ್ ಆಹಾರ? ಮಾಲೀಕರು ಹೇಳೋದೇನು?
ಪರಿಹಾರ ಮೊತ್ತ ಸಂಬಂಧ ಸರ್ಕಾರಕ್ಕೆ ಸಿದ್ದರಾಮಯ್ಯ ತರಾಟೆ
ಸದನದಲ್ಲಿ ಶಿವಮೊಗ್ಗ ಹರ್ಷ ಹತ್ಯೆ (Harsha Murder Case) ಪ್ರಕರಣ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಸರ್ಕಾರ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra ) ಅವರನ್ನು ತರಾಟೆಗೆ ತೆಗೆದುಕೊಂಡರು. ಕೊಲೆ ಮಾಡಿರೋರು ಮುಸ್ಲಿಂ ಗೂಂಡಾಗಳು ಅಂತಾ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ರು. ಕೊಲೆ ಮಾಡೋರ ಬಗ್ಗೆ ಈಶ್ವರಪ್ಪ ಮೊದಲೇ ಪೊಲೀಸರಿಗೆ ಹೇಳಿದಿದ್ರೆ ಕೊಲೆ ಆಗ್ತಿರಲಿಲ್ಲ ಅಲ್ವಾ ಎಂದು ಮಾತಿನಲ್ಲೇ ಜಾಟಿ ಬೀಸಿದ್ರು. ಗಲಾಟೆಯಲ್ಲಿ ನಷ್ಟ ಆದವರಿಗೆ ಇದುವರೆಗೂ ಪರಿಹಾರವೇ ಕೊಟ್ಟೇ ಇಲ್ಲ. ಯಾರ ಮೇಲೂ ಕೇಸ್ ಹಾಕಿಲ್ಲ, ಯಾರಿಗೂ ಪರಿಹಾರ ಕೊಟ್ಟಿಲ್ಲ. ಹರ್ಷ ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಟ್ಟಿದ್ದೀರಿ. ಪರಿಹಾರ ಕೊಟ್ಟಿದ್ದಕ್ಕೆ ತಕರಾರು ಇಲ್ಲ. ಆದರೆ ಬೆಳ್ತಂಗಡಿಯಲ್ಲಿ ಎಸ್ಟಿ ಸಮುದಾಯದ ವ್ಯಕ್ತಿ ಕೊಲೆ ಆಗಿದೆಯಲ್ಲ, ಆತನಿಗೆ 4 ಲಕ್ಷ ಮಾತ್ರ ಪರಿಹಾರ ಕೊಟ್ಟಿದ್ದೀರಿ. ಯಾಕೆ ಈ ತಾರತಮ್ಯ ಎಂದು ಸರ್ಕಾರವನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.
ಕನ್ನಡಿಗರಿಗೆ ಜ್ಯೂ. NTR, ರಾಮ್ಚರಣ್ ಫ್ಯಾನ್ಸ್ ಧಮ್ಕಿ
RRR ಸಿನಿಮಾದ ಅಧಿಕೃತ ಬಿಡುಗಡೆಗೆ ಇನ್ನೊಂದು ದಿನ ಬಾಕಿ ಇದೆ. ಮಾರ್ಚ್ 25(March 25th) ರಂದು ಸಿನಿಮಾ ವಿಶ್ವದೆಲ್ಲೆಡೆ ಏಕಕಾಲಕ್ಕೆ ತೆರೆ ಕಾಣಲಿದೆ. ‘ಆರ್ಆರ್ಆರ್’ ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಿದ್ರೆ 'ಕೆಜಿಎಫ್ 2' ಪರಿಸ್ಥಿತಿ ಏನಾಗುತ್ತೆ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ತಮ್ಮ ಫೇಸ್ಬುಕ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಬರೆದುಕೊಳ್ಳುತ್ತಿದ್ದಾರೆ. ಒಂದು ವೇಳೆ ‘ಆರ್ಆರ್ಆರ್’ ಸಿನಿಮಾವನ್ನು ನೀವು ಬ್ಯಾನ್ ಮಾಡಿದ್ದೇ ಆದಲ್ಲಿ, ‘ಕೆಜಿಎಫ್ 2’ ಶೀಘ್ರದಲ್ಲೇ ರಿಲೀಸ್ ಆಗುತ್ತಿದೆ ಮರೆಯಬೇಡಿ ಎಂದು ಎಚ್ಚರಿಸಿದ್ದಾರೆ .ನಿಮ್ಮ ರಾಜ್ಯದ ಡಿಸ್ಟ್ರಿಬ್ಯೂಟರ್ ಜೊತೆ ಮಾತನಾಡಿ ಈ ಸಮಸ್ಯೆ ಬಗ್ಗೆ ಬಗೆಹರಿಸಿಕೊಳ್ಳಿ. ಆರ್ಆರ್ಆರ್ಗೆ ತೊಂದರೆ ಕೊಡಬೇಡಿ ಎಂದು ಎಚ್ಚರಿಸಿದ್ದಾರೆ.
ಮಹತ್ವದ ಘೋಷಣೆ ಮಾಡಿದ ಅಮಿತಾಭ್ ಬಚ್ಚನ್
ಬಾಲಿವುಡ್(Bollywood)ನ ಹಿರಿಯ ನಟ ಬಿಗ್ ಬಿ ಅಮಿತಾಭ್ ಬಚ್ಚನ್(Amitabh Bachchan), ಸಾಮಾಜಿಕ ಜಾಲತಾಣ(Social Media)ದಲ್ಲಿ ಸಕ್ರಿಯರಾಗಿರುತ್ತಾರೆ. ಸ್ವತಃ ಬರವಣಿಗೆಯಲ್ಲಿ ಅಭಿರುಚಿಯುಳ್ಳ ಬಚ್ಚನ್ ಸಾಹೇಬರು, ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ಪೋಸ್ಟ್(Post) ಹಾಕುತ್ತಲೇ ಇರುತ್ತಾರೆ. ಇತರ ನೆಟ್ಟಿಗರ ಉತ್ತಮ ಕವನಗಳ ಅಥವಾ ಕುತೂಹಲಕಾರಿ, ಆಕರ್ಷಕ ಪೋಸ್ಟ್ಗಳಿಗೆ ಮೆಚ್ಚುಗೆ ಸೂಚಿಸುವಲ್ಲೂ ಬಿಗ್ ಬಿ(Big B) ಹಿಂದೆ ಬಿದ್ದಿಲ್ಲ. ಇದೀಗ ಅಮಿತಾಭ್ ಅವರು ಬುಧವಾರ ಬ್ಲಾಗ್ನಲ್ಲಿ ಹಾಕಿರುವ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಆ ಪೋಸ್ಟ್ನಲ್ಲಿ ಏನಿತ್ತು ಅಂತೀರಾ? ಬಿಗ್ಬಿಯ ಉತ್ತರಾಧಿಕಾರಿ(Heir)ಯ ಘೋಷಣೆಯಿತ್ತು. ಹೌದು, ಆ ಪೋಸ್ಟ್ನಲ್ಲಿ ಬಚ್ಚನ್ ಸಾಹೇಬರು, ತಮ್ಮ ಮಗ, ನಟ ಅಭಿಷೇಕ್ ಬಚ್ಚನ್(Abhishek Bachachan) ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ