Evening Digest: ಬೈಕ್‌ ಮೇಲೆ ಪ್ರೇಮಿಗಳ ರೊಮ್ಯಾನ್ಸ್, ಮೋದಿ ಹೊಗಳಿದ ಬೋರಿಸ್! ಒಂದೇ ಸಲ 4 ಮಕ್ಕಳ ಜನನ, ಇಂದಿನ ಟಾಪ್ ನ್ಯೂಸ್ ಇಲ್ಲಿವೆ ಓದಿ

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಪ್ರಮುಖ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ...

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
Viral Video: ಚಲಿಸುತ್ತಿರುವ ಬೈಕ್‌ ಮೇಲೆಯೇ ರೊಮ್ಯಾನ್ಸ್! ಪ್ರೇಮಿಗಳ ಹುಚ್ಚಾಟಕ್ಕೆ ಛೀ, ಥೂ ಎಂದ ಜನರು

ಚಾಮರಾಜನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ಪ್ರೇಮಿಗಳಿಬ್ಬರು ಜಾಲಿ ರೈಡ್​ ಹೋಗಿದ್ದಾರೆ. ಆದರೆ, ಈ ಪ್ರಿಯಕರ ತನ್ನ ಪ್ರೇಯಸಿಯನ್ನು ಬೈಕ್​ನ ಪೆಟ್ರೋಲ್​ ಟ್ಯಾಂಕ್​ ಮೇಲೆ ಎದುರಾಗಿ ಕೂರಿಸಿಕೊಂಡು ರಸ್ತೆ ಮೇಲೆ ಗಾಡಿ ಓಡಿಸಿದ್ದಾನೆ. ಈ ವೇಳೆ ಆಕೆ ಆತನಿಗೆ ಮುತ್ತು ಕೊಡುತ್ತಾ, ಲಿಪ್ ಲಾಕ್ ಮಾಡಿದ್ದಾಳೆ. ಜಗತ್ತಿನ ಪರಿವೇ ಇಲ್ಲದಂತೆ ಬೈಕ್ ಓಡಿಸುತ್ತಲೇ ಪ್ರೇಮಿಗಳಿಬ್ಬರು ರೊಮ್ಯಾನ್ಸ್ ಮಾಡಿದ್ದಾರೆ. ಪೆಟ್ರೋಲ್​ ಟ್ಯಾಂಕ್​ ಮೇಲೆ ಕುಳಿತ ಯುವತಿ ತನ್ನ ಪ್ರಿಯಕರನನ್ನು ತಬ್ಬಿಕೊಂಡು ಚುಂಬಿಸುತ್ತಿರುವ ದೃಶ್ಯವೂ ಇದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ: Viral Video: ಚಲಿಸುತ್ತಿರುವ ಬೈಕ್‌ ಮೇಲೆಯೇ ರೊಮ್ಯಾನ್ಸ್! ಪ್ರೇಮಿಗಳ ಹುಚ್ಚಾಟಕ್ಕೆ ಛೀ, ಥೂ ಎಂದ ಜನರು

PSI Recruitment Scam: ಕಿಂಗ್​ಪಿನ್​ಗಾಗಿ ಶೋಧ; ನನ್ನನ್ನು ಅರೆಸ್ಟ್​ ಮಾಡಿದ್ರೆ ಹುಷಾರ್​, ಡಿವೈಎಸ್​ಪಿಗೆ ಆರೋಪಿ ಆವಾಜ್​

ಬೆಂಗಳೂರು (ಏ.22): ರಾಜ್ಯದಲ್ಲಿ ಪಿಎಸ್​ಐ ನೇಮಕಾತಿ (PSI Recruitment) ಅಕ್ರಮ (Illegal) ಭಾರೀ ಸುದ್ದಿಯಾಗಿದ್ದು, ಅನೇಕರು ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಒಂದೊಂದೆ ವಿಚಾರ ಬಯಲಾಗ್ತಿದೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಒಟ್ಟು 13 ಜನರ ಬಂಧನ (Arrest) ಮಾಡಲಾಗಿದೆ. ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಷ್ ಪಾಟೀಲ್ ಬಂಧನ ಹಿನ್ನೆಲೆ  ಸಿಐಡಿ ಡಿವೈಎಸ್ ಪಿ ಶಂಕರಗೌಡ ಅವರಿಗೆ ಆರೋಪಿ ಆವಾಜ್ ಹಾಕಿರೋದು ತಿಳಿದುಬಂದಿದೆ.

ಮಹಾಂತೇಷ್ ಪಾಟೀಲ್ ಡಿವೈಎಸ್ ಪಿಗೇ ಬಂಧಿಸದಂತೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೆ ಅಲ್ಲ ಈತನ ತಮ್ಮ  ಸಿಐಡಿ ಡಿವೈಎಸ್ ಪಿ ಶಂಕರಗೌಡ ಅವರಿಗೆ ಕರೆ ಮಾಡಿ ಆವಾಜ್​ ಹಾಕಿದ್ದಾರೆ. ನಮ್ಮ ಅಣ್ಣನನ್ನು ಬಂಧಿಸಿದ್ರೆ ಹುಷಾರ್​, ನಮ್ಮ ಹಿಂದೆ ಕೈ ನಾಯಕರಿದ್ದಾರೆ ಅರೆಸ್ಟ್ ಮಾಡುವ ಮುನ್ನ ಎಚ್ಚರ ಅಂತಾ ಸಿಐಡಿ ಡಿವೈಎಸ್​ಪಿಗೆ  ಆವಾಜ್ ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ಡಿವೈಎಸ್ ಪಿ ಶಂಕರಗೌಡ, ಆರೋಪಿ‌ ಮಹಾಂತೇಶ್​ ಪಾಟೀಲ್ ಕೊರಳ ಪಟ್ಟಿ ಹಿಡಿದು ಎಳೆದೊಯ್ದಿದ್ದಾರೆ.

Second PU Exam: ಪರೀಕ್ಷಾ ಕೇಂದ್ರದಿಂದ ಹೊರ ನಡೆದ ಹಿಜಾಬ್ ತೆಗೆಯಲು ಒಪ್ಪದ ಇಬ್ಬರು ವಿದ್ಯಾರ್ಥಿನಿಯರು

ಇಂದು ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆಗಳು (Second PU Exams) ಆರಂಭವಾಗಿವೆ. ತರಗತಿಗಳಲ್ಲಿ ಧರ್ಮವನ್ನು ಸಂಕೇತಿಸುವ ಯಾವುದೇ ವಸ್ತ್ರ ಧರಿಸುವಂತಿಲ್ಲ ಎಂದು  ಕರ್ನಾಟಕ ಹೈಕೋರ್ಟ್ (Karnataka High court) ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿನಿಯರು (Students) ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದಾರೆ. ಇತ್ತ ಹಿಜಾಬ್ (Hijab) ನಿರ್ಬಂಧದ ನಡುವೆ ರಾಜ್ಯದಲ್ಲಿ SSLC ಪರೀಕ್ಷೆಗಳು ಸುಗಮವಾಗಿ ನಡೆದಿವೆ.

ಇಂದಿನಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭಗೊಂಡಿದ್ದು, ಹಿಜಾಬ್ ಧರಿಸಿ ಎಕ್ಸಾಂಗೆ ಹಾಜರಾಗುವಂತಿಲ್ಲ ಎಂದು ಸಚಿವ ಬಿ.ಸಿ.ನಾಗೇಶ್ (Minister BC Nagesh) ಹೇಳಿದ್ದರು. ಇಂದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರು ಹಿಜಾಬ್ / ಬುರ್ಖಾವನ್ನ ನಿರ್ದಿಷ್ಟ ಕೋಣೆಯಲ್ಲಿ ತೆಗೆಸಿದ್ದರು. ಆದ್ರೆ ಉಡುಪಿಯ (Udupi) ವಿದ್ಯೋದಯ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಹಿಜಾಜ್ ತೆಗೆಯಲು ನಿರಾಕರಿಸಿ ಪರೀಕ್ಷೆಗೆ ಗೈರಾಗಿದ್ದಾರೆ.

Boris Johnson: "ಮೋದಿ ನನ್ನ ಸ್ಪೆಷಲ್ ಫ್ರೆಂಡ್" ಎಂದ ಬ್ರಿಟನ್ ಪ್ರಧಾನಿ, ಭಾರತದ ಕೋವಿಡ್ ಲಸಿಕೆಗೆ ಬೋರಿಸ್ ಜಾನ್ಸನ್ ಮೆಚ್ಚುಗೆ

ನವದೆಹಲಿ: ಬ್ರಿಟನ್‌ ಪ್ರಧಾನಿ (Prime Minister of Britain) ಬೋರಿಸ್‌ ಜಾನ್ಸನ್‌ (Boris Johnson) ಭಾರತ (India) ಪ್ರವಾಸದಲ್ಲಿ (Tour) ಇದ್ದಾರೆ. ಬ್ರಿಟನ್ ಪ್ರಧಾನಿಯಾದ ಬಳಿಕ ಅವರ ಮೊದಲ ಭಾರತ ಭೇಟಿ ಇದಾಗಿದ್ದು, ಭಾರತದೊಂದಿಗಿನ ಸಂಬಂಧ (Relationship) ಉತ್ತಮ ಪಡಿಸಿಕೊಳ್ಳಲು ಬದ್ಧ ಅಂತ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಇದೇ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇಂದು ನವದೆಹಲಿಯಲ್ಲಿ (New Delhi) ಸುದೀರ್ಘ ಮಾತುಕತೆ ನಡೆಸಿದರು.

ರಕ್ಷಣಾ ಕ್ಷೇತ್ರ, ವ್ಯಾಪಾರ ಹಾಗೂ ಸ್ವಚ್ಛ ಇಂಧನದಲ್ಲಿ ಸಹಕಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಚರ್ಚೆಯಾಗಿದೆ. ಬಳಿಕ ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೋರಿಸ್ ಜಾನ್ಸನ್, “ನರೇಂದ್ರ ಮೋದಿ ನನ್ನ ಸ್ಪೆಷಲ್ (Special) ಹಾಗೂ ಕ್ಲೋಸ್ ಫ್ರೆಂಡ್ (Close Friend) ” ಅಂತ ಹೇಳಿದ್ರು. ಭಾರತದ ಕೋವಿಡ್ ವ್ಯಾಕ್ಸಿನ್ (Covid Vaccine) ಬಗ್ಗೆಯೂ ಬ್ರಿಟನ್ ಪ್ರಧಾನಿ ಮೆಚ್ಚುಗೆಯ ಮಾತನ್ನಾಡಿದ್ರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ: Boris Johnson: "ಮೋದಿ ನನ್ನ ಸ್ಪೆಷಲ್ ಫ್ರೆಂಡ್" ಎಂದ ಬ್ರಿಟನ್ ಪ್ರಧಾನಿ, ಭಾರತದ ಕೋವಿಡ್ ಲಸಿಕೆಗೆ ಬೋರಿಸ್ ಜಾನ್ಸನ್ ಮೆಚ್ಚುಗೆ

4 Baby: ಒಂದೇ ಸಲಕ್ಕೆ 4 ಮಕ್ಕಳನ್ನು ಹೆತ್ತ ತಾಯಿ, ಎಲ್ಲರೂ ಕ್ಷೇಮ, ಇಲ್ಲಿವೆ ಫೋಟೋಸ್

ಒಬ್ಬ ಮಹಿಳೆಗೂ ದೇವರು ದೊಡ್ಡ ಸಂತೋಷವನ್ನು ನೀಡಿದ್ದಾನೆ. ಅಮೃತಸರದ ಗುರುನಾನಕ್ ದೇವ್ ಆಸ್ಪತ್ರೆಯಲ್ಲಿ ಮಹಿಳೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಅವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು. ಐದು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದಾರೆ. ಮೊದಲ ಸಲ ಯಾರೋ ನಾಲ್ಕು ಮಕ್ಕಳಿಗೆ ಜನ್ಮ ನೀಡಿರುವುದನ್ನು ನೋಡಿದೆ ಎಂದು ಆಪರೇಷನ್ ಮಾಡಿದ ವೈದ್ಯರು ಹೇಳುತ್ತಾರೆ.
Published by:Annappa Achari
First published: