Evening Digest: ಅಸನಿ ಚಂಡಮಾರುತದ ಅಬ್ಬರ, ಬೆಂಗಳೂರಲ್ಲೂ ಮಳೆ: 133 ಜನರಿದ್ದ ವಿಮಾನ ಪತನ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಅಸನಿ ಚಂಡಮಾರುತ ಅಬ್ಬರ, ಬೆಂಗಳೂರಲ್ಲೂ ಮಳೆ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಸೈಕ್ಲೋನ್ ಅಸನಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸೋಮವಾರ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಆರ್ಕೆ ಜನಮಣಿ ಹೇಳಿದ್ದಾರೆ. ಸೋಮವಾರ ಬೆಳಿಗ್ಗೆ ತೀವ್ರಗೊಳ್ಳಲಿದ್ದು, ಸಂಜೆಯ ವೇಳೆಗೆ ಇದು ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುತ್ತದೆ. ಶನಿವಾರ ಸಂಜೆ ವೇಳೆಗೆ ಆಗ್ನೇಯ ಮತ್ತು ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಗಂಟೆಗೆ 12 ಕಿಮೀ ವೇಗದಲ್ಲಿ ಉತ್ತರದ ಕಡೆಗೆ ಚಲಿಸಲು ಪ್ರಾರಂಭಿಸಿದೆ ಎಂದು IMD ವಿಜ್ಞಾನಿಗಳು ತಿಳಿಸಿದ್ದಾರೆ. ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಅಗತ್ಯವಿರುವ ಎಲ್ಲಾ ಸಾಧನಗಳೊಂದಿಗೆ ವಿವಿಧ ಸ್ಥಳಗಳಲ್ಲಿ ಸಿದ್ಧರಾಗಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Cyclone Asani: ಸೋಮವಾರ ಸಂಜೆ ಮೇಲೆ ಅಬ್ಬರಿಸಲಿದೆ ಅಸನಿ ಚಂಡಮಾರುತ: NDRF ತಂಡ ಸರ್ವಸನ್ನದ್ಧ!

133 ಜನರಿದ್ದ ವಿಮಾನ ಪತನ

ಅಪಘಾತಕ್ಕೀಡಾದ ಜೆಟ್ ಬೋಯಿಂಗ್ 737 ಪ್ರಯಾಣಿಕರಿದ್ದರು. ಆದರೆ, ಗಾಯಗೊಂಡವರು, ಮತ್ತು ಸಾವನ್ನಪ್ಪಿದವರು ಎಷ್ಟು ಮಂದಿ ಎಂಬುದರ ಬಗ್ಗೆ ನಿಖರ ವರದಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 133 ಜನರನ್ನು ಹೊತ್ತೊಯ್ಯುತ್ತಿದ್ದ ಚೀನಾ ಈಸ್ಟರ್ನ್ ಏರ್​ಲೈನ್ಸ್​ ವಿಮಾನ ಪತನವಾಗಿದೆ. ಪತನದಿಂದ ವುಝೌ ಸಮೀಪದ ಪರ್ವತದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಪಘಾತಕ್ಕೀಡಾದ ಜೆಟ್ ಬೋಯಿಂಗ್ 737 ಪ್ರಯಾಣಿಕರಿದ್ದರು. ಆದರೆ, ಗಾಯಗೊಂಡವರು, ಮತ್ತು ಸಾವನ್ನಪ್ಪಿದವರು ಎಷ್ಟು ಮಂದಿ ಎಂಬುದರ ಬಗ್ಗೆ ನಿಖರ ವರದಿ ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ಸಚಿವರಲ್ಲಿ ನಾಲ್ವರು ದಲಿತರು!

ಗಡಿ ರಾಜ್ಯ ಪಂಜಾಬಿನಲ್ಲಿ (Border State Punjab) 117 ಸ್ಥಾನಗಳ ಪೈಕಿ 92 ಕ್ಷೇತ್ರಗಳನ್ನು ಗೆದ್ದು ಗೆದ್ದುಗೆ ಹಿಡಿದಿರುವ ಆಮ್ ಆದ್ಮಿ ಪಕ್ಷದ (Aam Admi Party) ಸರ್ಕಾರ ಹಲವು ವಿಶೇಷಗಳಿಂದ ಕೂಡಿದೆ. ಶನಿವಾರ ಮುಖ್ಯಮಂತ್ರಿ ಭಗವಂತ್ ಮಾನ್ (Chief Minister Bhagawanth Maan) ಅವರ ಸಚಿವ ಸಂಪುಟಕ್ಕೆ ಸೇರಿದ 10 ಸಚಿವರಲ್ಲಿ ವೈದ್ಯ, ದಂತವೈದ್ಯ, ವಕೀಲ, ಇಂಜಿನಿಯರ್, ಉದ್ಯಮಿ ಮತ್ತು ಕೃಷಿಕರನ್ನು ಕಾಣಬಹುದಾಗಿದೆ. ಇದಲ್ಲದೆ 10 ನೂತನ ಸಚಿವರ ಪೈಕಿ‌‌ 4 ಮಂದಿ ದಲಿತರು (Dalits) ಎಂಬುದು ಕೂಡ ಗಮನಾರ್ಹವಾದ ಸಂಗತಿಯಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Punjab Cabinet: ಆಪ್ ಸರ್ಕಾರದ 10 ಸಚಿವರಲ್ಲಿ ನಾಲ್ವರು ದಲಿತರು!

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಖಂಡನಾ ನಿರ್ಣಯ

ಬೆಂಗಳೂರು (Benglore) ನಗರಕ್ಕೆ ಕುಡಿಯುವ ನೀರು (Drinking Water) ಪೂರೈಸಬೇಕೆಂಬ ಮಹತ್ವಾಕಾಂಕ್ಷೆಯಲ್ಲಿ ಕರ್ನಾಟಕ ಸರ್ಕಾರ (Government of Karnataka) ರಾಮನಗರ ಜಿಲ್ಲೆ ಮೇಕೆದಾಟು (Mekedatu) ಬಳಿ ಅಣೆಕಟ್ಟು ನಿರ್ಮಾಣ ಮಾಡಲು ರೂಪಿಸಿರುವ ಯೋಜನೆಗೆ ನಿರಂತರವಾಗಿ ವಿರೋಧ ಮಾಡುತ್ತಿರುವ ತಮಿಳುನಾಡು ಸರ್ಕಾರ (Government of Tamilunadu)‌ ಇಂದು ಅಲ್ಲಿನ ವಿಧಾನಸಭೆಯಲ್ಲಿ (Assembly) ಮೇಕೆದಾಟು ಯೋಜನೆಗೆ ರಾಜ್ಯ ಬಜೆಟ್ ನಲ್ಲಿ ಹಣ ಮೀಸಲಿಟ್ಟಿರುವ ಕರ್ನಾಟಕ ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಕೈಗೊಂಡಿದೆ.

ಇದೇ ನೋಡಿ 'ಪದ್ಮಾವತಿ' ಸೌಂದರ್ಯ ರಹಸ್ಯ!

ದೀಪಿಕಾ ಪಡುಕೋಣೆಯ ಗ್ಲೋಯಿಂಗ್ ಸ್ಕಿನ್ನಿನ ಆರೈಕೆಯನ್ನು ಯಾರು ಮಾಡುತ್ತಾರೆ ಎಂದು ತಿಳಿಯಬೇಕೆ..? ಇಲ್ಲಿದೆ ಪದ್ಮಾವತಿ ಸೌಂದರ್ಯ ರಹಸ್ಯದ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ. ಆರೋಗ್ಯಕರ ಜೀವನಶೈಲಿಯನ್ನು ಜೀವಿಸುವ ಪ್ರಮುಖ ಹಂತಗಳಲ್ಲಿ ಒಂದೆಂದರೆ ದೇಹವನ್ನು ಹೈಡ್ರೀಕರಿಸಿರುವುದು. ದೇಹಕ್ಕೆ ನೀರಿನ ಸೇವನೆ ಪ್ರಮುಖ ಅಂಶವಾಗಿದೆ. ನಾವು ಎಷ್ಟು ನೀರು ಸೇವಿಸುತ್ತೇವೆಯೋ ಅಷ್ಟು ಆರೋಗ್ಯಯುತರಾಗಿರುತ್ತೇವೆ. ಹಾಗೇ ನಮ್ಮ ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ ಅವರ ಬ್ಯೂಟಿ ಮಂತ್ರ ಕೂಡ ಇದೇ ಆಗಿದೆ. ಡಿಪ್ಪಿ ಸರಿಯಾದ ನೀರಿನ ಸೇವನೆಯನ್ನು ಸಂಪೂರ್ಣವಾಗಿ ನಂಬುತ್ತಾರೆ. ವಿಶೇಷವಾಗಿ ಕೆಲಸ ಮಾಡುವಾಗ, ಶೂಟಿಂಗ್ ವೇಳೆ ಈಕೆ ಹೆಚ್ಚು ಹೆಚ್ಚು ನೀರು ಸೇವಿಸುತ್ತಾರೆ ಮತ್ತು ತಮ್ಮ ವಾಟರ್ ಬಾಟಲಿಯನ್ನು ತೆಗೆದುಕೊಂಡು ಹೋಗಲು ಮಿಸ್ ಮಾಡುವುದೇ ಇಲ್ಲ.
Published by:Kavya V
First published: