Evening Digest: ಕರೆಯದಿದ್ದರೂ ಮದುವೆಗೆ ಹೋದ್ರಾ ಸಿದ್ದರಾಮಯ್ಯ? 5-12 ವರ್ಷದ ಮಕ್ಕಳಿಗೂ ಬಂತು ಲಸಿಕೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕರೆಯದಿದ್ದರೂ ಮದುವೆಗೆ ಹೋದ್ರಾ ಸಿದ್ದರಾಮಯ್ಯ?: ಕಾನೂನು ಸಚಿವ ಜೆಸಿ ಮಾಧುಸ್ವಾಮಿ (JC Madhu Swamy) ಅವರ ಮಗನ ಮದುವೆಯಲ್ಲಿ ಪ್ರಮುಖ ಮೂರು ಪಕ್ಷಗಳ ನಾಯಕರ ಹಾಜರಾಗಿ ಗಮನಸೆಳೆದರು. ಮದುವೆಗೆ ಆಗಮಿಸಿದ್ದ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮಾತನಾಡಿ, ಮಾಧುಸ್ವಾಮಿ ಅವರು ಮದುವೆಗೆ ಕರೆಯದಿದ್ದರೂ ಬಂದಿದ್ದೇನೆ. ಮಾಧುಸ್ವಾಮಿ ಈಗ ಬಿಜೆಪಿಯಲ್ಲಿ ಇದ್ದರೂ ಮೊದಲು ನಮ್ಮ ಜೊತೆ ಇದ್ದವರು. ಮಾಧುಸ್ವಾಮಿ ನನಗೆ ರಾಜಕೀಯವಾಗಿ ಬಹಳ ಆಪ್ತರು. ರಾಜಕೀಯ ಬೇರೆ ಸ್ನೇಹ ಬೇರೆ. ಮದುವೆಗೆ ಬಂದು ಅವರ ಮಕ್ಕಳಿಗೆ ಶುಭಕೋರಿದ್ದೇನೆ ಎಂದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ:JC Madhu Swamy ಮಗನ ಮದುವೆಯಲ್ಲಿ ಮುಖಾಮುಖಿಯಾದ ಸಿಎಂ- ದೇವೇಗೌಡರು; ಕರೆಯದಿದ್ದರೂ ಬಂದಿದ್ದೇನೆ ಎಂದ ಸಿದ್ದರಾಮಯ್ಯ

5-12 ವರ್ಷದ ಮಕ್ಕಳಿಗೂ ಬಂತು ಲಸಿಕೆ

ದೇಶದಲ್ಲಿ ಕೊರೊನಾ 4ನೇ ಅಲೆಯ ಮುನ್ಸೂಚನೆಗಳು ಕಂಡು ಬರುತ್ತಿವೆ. ಕಳೆದ ಕೆಲವು ದಿನಗಳಿಂದ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಇದೇ ಸಮಯದಲ್ಲಿ 12 ವರ್ಷದೊಳಗಿನ ಮಕ್ಕಳಿಗೂ ಕೋವಿಡ್​ ಲಸಿಕೆ ನೀಡುವ ಕುರಿತು ಮಹತ್ವದ ಬೆಳವಣಿಗೆ ನಡೆದಿದೆ. DCGI ಯ ವಿಷಯ ತಜ್ಞರ ಸಮಿತಿ (SEC) 5-12 ವರ್ಷ ವಯಸ್ಸಿನ ಮಕ್ಕಳಲ್ಲಿ ಜೈವಿಕ ಇ ಕಾರ್ಬೆವಾಕ್ಸ್ ಬಳಕೆಯನ್ನು ಶಿಫಾರಸು ಮಾಡಿದೆ. ಆ ವಯೋಮಾನದ ಮಕ್ಕಳಲ್ಲಿ ಲಸಿಕೆಯ ಬಳಕೆಯನ್ನು ಚರ್ಚಿಸಲು ಸಮಿತಿಯು ಮಧ್ಯಾಹ್ನ ಸಭೆ ಸೇರಿತು. ಶಿಫಾರಸುಗಳನ್ನು ಈಗ SEC ಯಿಂದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಕಳುಹಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಅಂತಿಮ ಅನುಮತಿ ನೀಡುವ ಮೊದಲು DCGI ಯ ಅನುಮೋದನೆಯನ್ನು ಈಗ ಕಾಯಲಾಗುತ್ತಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ:Corbevax Vaccine: 5 ರಿಂದ 12 ವರ್ಷದೊಳಗಿನ ಮಕ್ಕಳಿಗೆ ಕಾರ್ಬೆವಾಕ್ಸ್ ಲಸಿಕೆ ನೀಡಲು ಶಿಫಾರಸು

ಮಾಲೂರಿನಲ್ಲಿ ಜನತಾ ಜಲಧಾರೆ ಜೊತೆ ಉಚಿತ ಪೆಟ್ರೋಲ್ ಧಾರೆ

ಜೆಡಿಎಸ್​​ನ ಜನತಾ ಜಲಧಾರೆ ರಥ ಇಂದು ಕೋಲಾರಕ್ಕೆ ಆಗಮಿಸಿದೆ. ಈ ಹಿನ್ನಲೆ ಚಿಕ್ಕತಿರುಪತಿ ದೇಗುದಿಂದ ಮಾಲೂರು ಪಟ್ಟಣದ ವರೆಗೂ ಬೃಹತ್ ಬೈಕ್ ರ್ಯಾಲಿ ನಡೆಸಲು ನಿರ್ಧರಿಸಲಾಗಿದೆ. ಇನ್ನು ಇಂದು ಕೋಲಾರದ ಮಾಲೂರು ಪಟ್ಟಣಕ್ಕೆ ಜೆಡಿಎಸ್​ ಜನತಾ ಜಲಧಾರೆ ರಥ ಆಗಮಿಸುವ ಹಿನ್ನಲೆ ಪಟ್ಟಣದ ಜನರಿಗೆ ಜೆಡಿಎಸ್​ ನಾಯಕ ಬಂಪರ್​ ಉಡುಗೊರೆ ನೀಡಿದ್ದಾರೆ. ಪೆಟ್ರೋಲ್​ ಗಗನಮುಖಿಯಾಗಿರುವ ಸಮಯದಲ್ಲಿ ಜನತಾ ಜಲಧಾರೆ ಅಂಗವಾಗಿ ಇಂದು ನಗರದ ಜನರಿಗೆ ಉಚಿತವಾಗಿ ಪೆಟ್ರೋಲ್​ ಹಂಚಲಾಗಿದೆ.

ಅಬು ಸಲೇಂ ಪ್ರಕರಣದಲ್ಲಿ ಕೇಂದ್ರಕ್ಕೆ ಸುಪ್ರೀಂ ಚಾಟಿ!

ಗ್ಯಾಂಗ್​ಸ್ಟಾರ್​​​ ಅಬು ಸಲೇಂ (Gangster Abu Salem) ತನಗೆ 25 ವರ್ಷಕ್ಕೂ ಹೆಚ್ಚಿನ ಜೈಲು ಶಿಕ್ಷೆಯನ್ನು (Jail Sentence) ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ (Supreme Court)  ಇಂದು ಕಟುವಾದ ಪದಗಳನ್ನು ಬಳಸಿದ್ದು, ಅರ್ಜಿ ಅಕಾಲಿಕವಾಗಿದೆ (Premature) ಎಂಬ ಕೇಂದ್ರ ಗೃಹ ಸಚಿವಾಲಯದ ನಿಲುವನ್ನು ತಿರಸ್ಕರಿಸಿದೆ. ಈ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಕೂಡ ಆಕ್ಷೇಪ ವ್ಯಕ್ತಪಡಿಸಿದೆ. ನ್ಯಾಯಾಂಗಕ್ಕೆ ಉಪನ್ಯಾಸ ನೀಡಬೇಡಿ. ನೀವು ನಿರ್ಧರಿಸಬೇಕಾದ ಯಾವುದನ್ನಾದರೂ ನಿರ್ಧರಿಸಲು ನೀವು ನಮಗೆ ಹೇಳಿದಾಗ ನಾವು ಅದನ್ನು ತೆಗೆದುಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿ ಎಸ್‌ಕೆ ಕೌಲ್ ಗೃಹ ಸಚಿವಾಲಯಕ್ಕೆ ತಿಳಿಸಿದರು. ಸಮಸ್ಯೆಯನ್ನು ನಿರ್ಧರಿಸಲು ನಮಗೆ ಗೃಹ ಕಾರ್ಯದರ್ಶಿ ಯಾರೂ ಹೇಳುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಅವರು ಏನು ಹೇಳಲು ಬಯಸುತ್ತಾರೆ ಎಂಬುದರಲ್ಲಿ ಕೇಂದ್ರವು ನಿಸ್ಸಂದಿಗ್ಧವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಗೃಹ ಸಚಿವಾಲಯದ ಅಫಿಡವಿಟ್‌ನಲ್ಲಿರುವ ಸೂಕ್ತ ಸಮಯದಲ್ಲಿ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂಬ ವಾಕ್ಯಗಳನ್ನು ನಾವು ಇಷ್ಟಪಡುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಕನ್ನಡತಿ ಸೀರಿಯಲ್​ಗೆ ಮತ್ತೊಂದು ಕಿರೀಟ

ಕನ್ನಡತಿ ಸೀರಿಯಲ್ ಮರಾಠಿ ನಂತರ ಹಿಂದಿ ಭಾಷೆಗೂ ಡಬ್ ಆಗುತ್ತಿದೆ. ಹಿಂದಿಯಲ್ಲಿ ‘ಅಜ್ನಬಿ ಬನೇ ಹಮ್ಸಫರ್‘ ಎಂಬ ಹೆಸರಿನಲ್ಲಿ ಧಾರಾವಾಹಿ ಪ್ರಸಾರವಾಗಲಿದೆ. ಹಿಂದಿಯ ಜಿಇಸಿ ವಾಹಿನಿಯಲ್ಲಿ ಹಿಂದಿ ಕನ್ನಡತಿ ಡಬ್ಬಡ್ ವರ್ಷನ್ ಅಜ್ನಬಿ ಬನೇ ಹಮ್ಸಫರ್ ಪ್ರಸಾರವಾಗಲಿದೆ. ಈಗಾಗಲೇ ವಾಹಿನಿಯಲ್ಲಿ ಇದರ ಪ್ರೋಮೋ ವನ್ನು ಪ್ರಸಾರ ಮಾಡಲಾಗುತ್ತಿದೆ. ಈ ಹಿಂದಿ ಪ್ರೋಮೋವನ್ನು ನಟ ಕಿರಣ್ ರಾಜ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
Published by:Kavya V
First published: