Evening Digest: ಕಿಚ್ಚ, ದೇವಗನ್ ಮಧ್ಯೆ ಮೋದಿ ಬೆಂಬಲ ಯಾರಿಗೆ? ಚಪ್ಪಲಿ ಹಾಕಿಸಿಕೊಂಡ ಸಿದ್ದರಾಮಯ್ಯ; ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕಿಚ್ಚ, ದೇವಗನ್​​ ಮಧ್ಯೆ ಮೋದಿ ಬೆಂಬಲ ಯಾರಿಗೆ?: ಹಿಂದಿ ಭಾರತದ ರಾಷ್ಟ್ರ ಭಾಷೆ ಅಲ್ಲ ಎಂಬ ಕನ್ನಡದ ನಟ ಕಿಚ್ಚ ಸುದೀಪ್​​ (Kiccha Sudeep) ಹೇಳಿಕೆಗೆ ಹಿಂದಿ ನಟ ಅಜಯ್​ ದೇವಗನ್ (Ajay Devgan)​ ಟ್ವಿಟ್ಟರ್​​ನಲ್ಲಿ ಪ್ರತಿಕ್ರಿಯಿಸಿದ್ದು, ಇತ್ತೀಚೆಗೆ ಭಾಷೆಗಳ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೀಗ ಖುದ್ದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಪ್ರಾದೇಶಿಕ ಭಾಷೆಗಳ ಬಗ್ಗೆ ಮಾತನಾಡಿದ್ದಾರೆ. ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯು ಪ್ರತಿಯೊಂದು ಪ್ರಾದೇಶಿಕ ಭಾಷೆಯಲ್ಲಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬವನ್ನು ನೋಡುತ್ತದೆ. ಅವುಗಳನ್ನು ಪೂಜಿಸಲು ಯೋಗ್ಯವೆಂದು ಪರಿಗಣಿಸುತ್ತದೆ ಎಂದು ಹೇಳಿದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: PM Modi: ಕಿಚ್ಚ, ಅಜಯ್ ದೇವಗನ್ ಭಾಷಾ ವಾರ್​ಗೆ ಮೋದಿ ಎಂಟ್ರಿ: ಆ ಭಾಷೆಗಳು ಭಾರತದ ಆತ್ಮ ಎಂದ ಪ್ರಧಾನಿ

ಹೈದರಾಬಾದ್ ಪಶುವೈದ್ಯೆ ರೇಪ್ ಆರೋಪಿಗಳ ಎನ್ಕೌಂಟರ್ ನಕಲಿ ಎಂದು ವರದಿ

ಹೈದರಾಬಾದ್ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ (Hyderabad vet's Gang-rape and Murder) ಆರೋಪಿಗಳ ಎನ್‌ಕೌಂಟರ್ (Encounter of the Accused) ಬಗ್ಗೆ ತನಿಖೆ ನಡೆಸುತ್ತಿರುವ ಸಿರ್ಪುರ್ಕರ್ ಆಯೋಗವು (Sirpurkar Commission) ತನ್ನ ವರದಿಯಲ್ಲಿ ಆರೋಪಿಗಳ ಎನ್‌ಕೌಂಟರ್ ಹಿಂದೆ ಕೊಲ್ಲುವ ಉದ್ದೇಶವಿದೆ ಎಂದು ಹೇಳಿದೆ. ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಉದ್ದೇಶಪೂರ್ವಕವಾಗಿ ಅವರ ಸಾವಿಗೆ ಕಾರಣವಾಗುವ ಉದ್ದೇಶದಿಂದ ಗುಂಡು ಹಾರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವಿಚಾರದಲ್ಲಿ ಆಯೋಗ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಆಯೋಗದ ವರದಿ ಕುರಿತು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ತೆಲಂಗಾಣ ಹೈಕೋರ್ಟ್‌ಗೆ ಸೂಚಿಸಿದೆ. ನಾಲ್ವರು ಆರೋಪಿಗಳು ಪಿಸ್ತೂಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದರು ಎಂದು ಪೊಲೀಸರು ಹೇಳಿರುವುದನ್ನು ನಂಬಲು ಸಾಧ್ಯವಿಲ್ಲ ಮತ್ತು ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ವರದಿ ತಿಳಿಸಿದೆ.

ಚಪ್ಪಲಿ ಹಾಕಿಸಿಕೊಂಡ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಕಾರ್ಯಕರ್ತನಿಂದ ಚಪ್ಪಲಿ ಹಾಕಿಸಿಕೊಂಡಿದ್ದಾರೆ. ರಾಯಚೂರಿನ (Raichuru) ಗಬ್ಬೂರಿನ ಬೂದಿ ಬಸವೇಶ್ವರ ಮಠದಲ್ಲಿ ಘಟನೆ ನಡೆದಿದೆ.75 ಜೋಡಿಯ ಸಾಮೂಹಿಕ ವಿವಾಹ (Mass Wedding) ಕಾರ್ಯಕ್ರಮಕ್ಕೆ ಬಂದಿದ್ದ ಸಿದ್ದರಾಮಯ್ಯಮಠಕ್ಕೆ ಭೇಟಿ ನೀಡಿದ ವೇಳೆ ಚಪ್ಪಲಿ ಹೊರಗೆ ಬಿಟ್ಟು ಹೋಗಿದ್ರು ಬಳಿಕ ವಾಪಸ್​ ಹೊರಡುವ ಮುನ್ನ ಕಾರ್ಯಕರ್ತ (Activist) ಸಿದ್ದರಾಮಯ್ಯ ಕಾಲಿಗೆ ಚಪ್ಪಲಿ ಹಾಕಿದ್ದಾನೆ ಈ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Siddaramaiah: ಕಾರ್ಯಕರ್ತನ ಕೈಯಲ್ಲಿ ಚಪ್ಪಲಿ ಹಾಕಿಸಿಕೊಂಡ ಸಿದ್ದರಾಮಯ್ಯ

8 ವಾರದೊಳಗೆ BBMP ಚುನಾವಣಾ ಪ್ರಕ್ರಿಯೆ

ವಾರ್ಡ್‌ಗಳ ಮರು ವಿಂಗಡಣೆ‌ ಹಾಗೂ ಒಬಿಸಿ ಮೀಸಲಾತಿ ಅಂತಿಮಗೊಳಿಸುವ ಕಾರ್ಯ ಪೂರ್ಣಗೊಂಡ ಕೂಡಲೇ ಬೃಹತ್ ಬೆಂಗಳೂರು ಮಹಾನಗರ‌ ಪಾಲಿಕೆ (BBMP)ಯ ಚುನಾವಣೆ ಆಯೋಜಿಸುವಂತೆ ಸುಪ್ರೀಂ ಕೋರ್ಟ್ (Supreme Court) ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಚುನಾವಣೆಗೆ ಕೊನೆಗೂ ಕಾಲಮಿತಿ ನಿಗದಿಯಾಗಿದೆ. ಎರಡು ತಿಂಗಳೊಳಗೆ (8 ವಾರ) ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು  ಸುಪ್ರೀಂಕೋರ್ಟ್​ ತಿಳಿಸಿದೆ.

NTR ಅಭಿಮಾನಿಗಳಿಗೆ ಡಬಲ್ ಧಮಾಕ

ತೆಲುಗಿನ ಸೂಪರ್ ಸ್ಟಾರ್​ ಜೂನಿಯರ್ ಎನ್​ಟಿಆರ್​ (Jr NTR) ಅವರಿಗೆ ಇಂದು 39ನೇ ಜನ್ಮದಿನದ (Birthday) ಸಂಭ್ರಮ. ಇದರೊಂದಿಗೆ ತಾರಕ್​ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ ಸರಿಯಾಗಿ 21 ವರ್ಷವಾಗಿದೆ. ಹೀಗಾಗಿ NTR ಹಾಗೂ ಅಭಿಮಾನಿಗಳಿಗೆ ಇಂದು ಡಬಲ್ ಸಂತಸದ ಸುದ್ದಿಯಾಗಿದೆ. ಇದರೊಂದಿಗೆ ಎನ್​ಟಿಆರ್​ ಅವರ ಸಾಲು ಸಾಲು ಸಿನಿಮಾಗಳ (Movies) ಅನೌನ್ಸ್ ಸಹ ಆಗುತ್ತಿದೆ. ಹೌದು, ತಾರಕ್ ಹುಟ್ಟುಹಬ್ಬದ ಸಂದರ್ಭದಲ್ಲಿ ಹೊಸ ಸಿನಿಮಾಗಳ ಅನೌನ್ಸ್ ಆಗಿದ್ದು, NTR30 ಚಿತ್ರದ ಅಪ್ಡೇಟ್ ಬಂದಿದೆ. NTR30 ಚಿತ್ರವನ್ನು ಕೊರಟಾಲ ಶಿವ ನಿರ್ದೇಶಿಸಲಿದ್ದಾರೆ. ಇದರ ನಡುವೆ NTR31 ಚಿತ್ರದ ಬಗ್ಗೆ ಹೊಸ ಅಪ್‌ಡೇಟ್ ಬಂದಿದೆ.
Published by:Kavya V
First published: