Evening Digest: ‘ಕೊಟ್ಟ ಕುದುರೆಯನ್ನು ಏರಲು BJPಗೆ ಆಗ್ತಿಲ್ಲ’: 2ನೇ ಬಾರಿಗೆ ಮಣಿಪುರ ಸಿಎಂ ಆದ ಬಿರೇನ್ ಸಿಂಗ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕೊಟ್ಟ ಕುದುರೆಯನ್ನು ಏರಲು BJPಗೆ ಆಗ್ತಿಲ್ಲ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ (Assembly Election) ನಾಲ್ಕು ರಾಜ್ಯಗಳನ್ನು ಗೆದ್ದಿದ್ದರೂ ಬಿಜೆಪಿ ಪಕ್ಷದಲ್ಲಿನ ಆಂತರಿಕ ಕಲಹದಿಂದಾಗಿ ಸರ್ಕಾರ ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ಟೀಕಿಸಿದರು. ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆದ್ದಿದೆ, ಆದರೆ ಪಕ್ಷದೊಳಗಿನ ಆಂತರಿಕ ಕಲಹದಿಂದಾಗಿ ಇದುವರೆಗೆ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ ಎಂದು ಕೇಜ್ರಿವಾಲ್ ಭಾನುವಾರ ಪಂಜಾಬ್ ಎಎಪಿ ಶಾಸಕರನ್ನು (AAP MLAs) ಉದ್ದೇಶಿಸಿ ನಡೆಸಿದ ವಿಡಿಯೋ ಕಾನ್ಫರೆನ್ಸಿಂಗ್ ವೇಳೆ ಹೇಳಿದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:ಕೊಟ್ಟ ಕುದುರೆಯನ್ನು ಏರಲು BJPಗೆ ಆಗ್ತಿಲ್ಲ, 4 ರಾಜ್ಯಗಳಲ್ಲಿ ಇನ್ನೂ ಸರ್ಕಾರ ರಚನೆ ಏಕಿಲ್ಲ: Kejriwal ವ್ಯಂಗ್ಯ

2ನೇ ಬಾರಿಗೆ ಮಣಿಪುರ ಸಿಎಂ ಆದ ಬಿರೇನ್ ಸಿಂಗ್
ಮಣಿಪುರದ ಮುಖ್ಯಮಂತ್ರಿಯಾಗಿ (Manipur New CM) ಎನ್.ಬಿರೇನ್ ಸಿಂಗ್ (N. Biren Singh ) ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಚುನಾವಣಾ ಫಲಿತಾಂಶಗಳು ಬಂದ 10 ದಿನಗಳ ನಂತರ, ಬಿಜೆಪಿ(BJP) ಇಂದು ಸಿಂಗ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಿದೆ. ಸಿಎಂ ರೇಸ್ನಲ್ಲಿ ಬಿಸ್ವಜಿತ್ ಸಿಂಗ್ ಮತ್ತು ಯುಮ್ನಮ್ ಖೇಮ್ಚಂದ್ ಹೆಸರು ಪ್ರಬಲವಾಗಿ ಕೇಳಿ ಬಂದಿತ್ತಾದರೂ ಪಕ್ಷ 2ನೇ ಬಾರಿಗೆ ಬಿರೇನ್ ಅವರಿಗೆ ಮಣೆ ಹಾಕಿದೆ. ಮಣಿಪುರದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಪಕ್ಷವು ಚರ್ಚೆ ನಡೆಸುತ್ತಿದ್ದಂತೆ ಮೂವರು ನಿನ್ನೆ ದೆಹಲಿಯಲ್ಲಿ ಬಿಜೆಪಿಯ ಕೇಂದ್ರ ನಾಯಕರನ್ನು ಭೇಟಿ ಮಾಡಿದ್ದರು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:2ನೇ ಬಾರಿಗೆ ಮಣಿಪುರ ಸಿಎಂ ಆದ Biren Singh.. ಪುಟ್ಬಾಲ್ ಆಟಗಾರ, ಯೋಧ, ಪತ್ರಕರ್ತ CM ಆಗಿದ್ದೇ ರೋಚಕ!

The Kashmir Files: ಸತ್ಯ ಸ್ವೀಕರಿಸೋ ಎದೆಗಾರಿಕೆ ಕಾಂಗ್ರೆಸ್ಗೆ ಇಲ್ಲ
ದಿ ಕಾಶ್ಮೀರ್ ಫೈಲ್ಸ್ (The Kashmir Files) ಚಿತ್ರ ವೀಕ್ಷಣೆ ವಿಚಾರ ಭಾರೀ ಸದ್ದು ಮಾಡ್ತಿದೆ. ಕಾಶ್ಮೀರ್ ಫೈಲ್ ಚಿತ್ರ ನೋಡಲ್ಲ ಅಂತ ಕಾಂಗ್ರೆಸ್ ನಾಯಕರು (Congress Leaders) ಒಬ್ಬರಾದ ಮೇಲೆ ಒಬ್ಬರು ಹೇಳಿಕೆ ನೀಡ್ತಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು (BJP Leaders) ಸಹ ತಿರುಗೇಟು ನೀಡ್ತಿದ್ದಾರೆ. ಮೈಸೂರಿನಲ್ಲಿ ಮಾತಾಡಿದ ಪ್ರತಾಪ್ ಸಿಂಹ (Prathap Simha) ತಾವೇ ಮಾಡಿದ ಅಪರಾಧವನ್ನು ಕಾಂಗ್ರೆಸ್ ನವರು ಸ್ಕ್ರೀನ್ ನಲ್ಲಿ ಹೇಗೆ ನೋಡಲು ಸಾಧ್ಯ ಎಂದರು. ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು. ಅವರೇ ಮಾಡಿದ ಅಪರಾಧವನ್ನು ಅವರೇ ನೋಡಲು ಹೇಗೆ ಸಾಧ್ಯ. ಆದರೆ ಜನರು ನೋಡುತ್ತಿದ್ದಾರೆ ಅವರಿಗೆ ಸತ್ಯದ ಅರಿವಾಗಿದೆ ಅಷ್ಟು ಸಾಕು ಅಂತ ಕಾಂಗ್ರೆಸ್ ನಾಯಕ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ರು.

ಹಿಜಾಬ್ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ
ಹಿಜಾಬ್ ತೀರ್ಪು (Hijab Judgment) ನೀಡಿರುವ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಲಾಗಿದೆ ಎಂದು ವಕೀಲೆ ಸುಧಾಕಾಟ್ವ ಎಂಬವರು ವಿಧಾನಸೌಧ ಪೊಲೀಸ್ ಠಾಣೆಗೆ (Vidhana soudha Police Station) ದೂರು ನೀಡಿದ್ದಾರೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ (Highcourt CJ) ಕೊಲೆ ಬೆದರಿಕೆ ಹಾಕಿರುತ್ತಾರೆ. ಅಪರಿಚಿತ ವ್ಯಕ್ತಿಗಳು ತಮಿಳು ಭಾಷೆ (Tamil Language) ಬಳಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಧಕ್ಕೆಯುಂಟಾಗುತ್ತದೆ. ನ್ಯಾಯಮೂರ್ತಿಗಳನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಅಪರಿಚಿತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಕೀಲೆ ಸುಧಾಕಟ್ಟಾ (Lawyer Sudha Katta) ತಿಳಿಸಿದ್ದಾರೆ.

ನ್ಯೂಯಾರ್ಕ್ನಲ್ಲೂ ಜೇಮ್ಸ್ ಅಬ್ಬರ..
‘ಪವರ್ ಸ್ಟಾರ್’ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶ-ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಜಗತ್ತಿನ ನಾನಾ ಭಾಗದಲ್ಲಿರುವ ಕನ್ನಡಿಗರು ಅಪ್ಪು ಅಗಲಿಕೆಯ ಸುದ್ದಿ ಕೇಳಿ ಕಣ್ಣೀರು ಹಾಕಿದ್ದರು. ಈಗಲೂ ಅವರು ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರ ಮನದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಸದ್ಯ ಪುನೀತ್ ರಾಜ್ಕುಮಾರ್ ಅವರ ‘ಜೇಮ್ಸ್’ ಸಿನಿಮಾದಲ್ಲೂ ರಿಲೀಸ್ ಆಗಿದ್ದು, ಸಖತ್ ಸೌಂಡ್ ಮಾಡುತ್ತಿದೆ. ನ್ಯೂಯಾರ್ಕ್ನಲ್ಲಿ ಜೇಮ್ಸ್ ಸಿನಿಮಾ ನೋಡಿದ ಅಭಿಮಾನಿಗಳು ಅಪ್ಪುಗೆ ಜೈಕಾರ ಹಾಕಿದ್ದಾರೆ. ಸಿನಿಮಾವು ಭಾರತ ಸೇರಿದಂತೆ ವಿಶ್ವಾದ್ಯಂತ ಏಕಕಾಲಕ್ಕೆ ತೆರೆಗೆ ಬಂದಿದ ಆಸ್ಟ್ರೇಲಿಯಾ, ಕೆನಡಾ ಸೇರಿ ಹಲವು ದೇಶಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಹುಟ್ಟುಹಬ್ಬದಂದು ಅವರು ಸಿನಿಮಾ ನೋಡಿ ‘ಜೇಮ್ಸ್’ ಜಾತ್ರೆ ಮಾಡಿದ್ದಾರೆ. ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್..ಪುನೀತ್ ಈಸ್ ಸೂಪರ್ ಸ್ಟಾರ್ ಅಂತ ಜೈಕಾರ ಹಾಕಿದ್ದಾರೆ.ನ್ಯೂ ಯಾರ್ಕ್ ನಲ್ಲಿ ಜೇಮ್ಸ್ ಮೆಚ್ಚಿಅಭಿಮಾನಿಗಳು ಶುಭ ಹಾರೈಸಿದ್ದಾರೆ. ಕಾರ್ನಲ್ಲಿ ಹೋಗುವಾಗ ಒಂದೆಡೆ ಸೇರಿ ಹಾರೈಸಿದ್ದಾರೆ.
Published by:Kavya V
First published: