Evening Digest: ಫಸ್ಟ್​​​ನೈಟ್​ಗೆ ಹೆದರಿ ವರ ಸಾವು: ಆಯುಷ್ ವೀಸಾ ಘೋಷಿಸಿದ ಪ್ರಧಾನಿ ಮೋದಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಫಸ್ಟ್​​​ನೈಟ್​ಗೆ ಹೆದರಿ ವರ ಸಾವು: ನವವಿವಾಹಿತರು ಮೊದಲ ರಾತ್ರಿಗಾಗಿ ಎದುರು ನೋಡುತ್ತಾರೆ. ನೂರಾರು ಕನಸುಗಳನ್ನೂ ಕಟ್ಟಿಕೊಂಡಿರುತ್ತಾರೆ. ಇಡೀ ಜೀವನ ಜೊತೆಯಾಗಿ ಬಾಳಬೇಕಾದವರಿಗೆ ಶೋಭನದ ರಾತ್ರಿ ತುಂಬಾನೇ ಮುಖ್ಯ. ಮದುವೆಯ ಮುಖ್ಯ ಕಾರ್ಯಕ್ರಮಗಳಲ್ಲಿ ಶೋಭನ ಕೂಡ ಒಂದು. ಫಸ್ಟ್ ನೈಟ್ ಗಾಗಿಯೇ ಶುಭ ಘಳಿಗೆಯನ್ನು ನೋಡುತ್ತಾರೆ. ನವ ದಂಪತಿ ಮಲಗುವ ಕೋಣೆಯನ್ನು ಹೂಗಳಿಂದ ಸಿಂಗರಿಸುತ್ತಾರೆ. ರೆಸಾರ್ಟ್ಗಳಲ್ಲಿ ಒಳ್ಳೆಯ ರೂಂಗಳನ್ನು ಸಹ ಇದಕ್ಕಾಗಿಯೇ ಬುಕ್ ಮಾಡುತ್ತಾರೆ. ಆದರೆ ಇಲ್ಲೊಬ್ಬ ಯುವಕನೊಬ್ಬನಿಗೆ ಮೊದಲ ರಾತ್ರಿಯೇ ದುಃಸ್ವಪ್ನವಾಗಿದೆ. ಫಸ್ಟ್ ನೈಟ್ ಭಯ ಜೀವಕ್ಕೆ ಕುತ್ತು ತಂದಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:First Night Death: ಫಸ್ಟ್​​​ನೈಟ್​​ ಅಂದರೆ ಭಯ, ಹೆದರಿದ ವರ ಮಾಡಿದ್ದು ಮಾತ್ರ ದುರಂತ!

ಆಯುಷ್ ವೀಸಾ ಘೋಷಿಸಿದ ಪ್ರಧಾನಿ ಮೋದಿ

ಸಾಂಪ್ರದಾಯಿಕ ಔಷಧ ಉದ್ಯಮವನ್ನು ಉತ್ತೇಜಿಸಲು, ಭಾರತವು ಶೀಘ್ರದಲ್ಲೇ 'ಆಯುಷ್ ಮಾರ್ಕ್' (AYUSH mark) ಅನ್ನು ಪ್ರಾರಂಭಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi ) ಗುಜರಾತ್​ ಪ್ರವಾಸದ ವೇಳೆ ಘೋಷಿಸಿದರು. ಇದು ದೇಶದಲ್ಲಿ ತಯಾರಾದ ಗುಣಮಟ್ಟದ ಆಯುಷ್ ಉತ್ಪನ್ನಗಳಿಗೆ ಅಧಿಕೃತತೆಯನ್ನು ನೀಡುತ್ತದೆ. "ಹೀಲ್ ಇನ್ ಇಂಡಿಯಾ" ಕುರಿತು ಮಾತನಾಡಿದ ಅವರು, ಆಯುಷ್ ಚಿಕಿತ್ಸೆಗಳನ್ನು ಪಡೆಯಲು ದೇಶಕ್ಕೆ ಪ್ರಯಾಣಿಸಲು ಬಯಸುವವರಿಗೆ ವಿಶೇಷ ವೀಸಾ ವರ್ಗವನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಘೋಷಿಸಿದರು. ವಿಶೇಷವಾದ "ಆಯುಷ್ ವೀಸಾ" (AYUSH Visa) ಭಾರತದಲ್ಲಿ ಸಾಂಪ್ರದಾಯಿಕ ಚಿಕಿತ್ಸೆಯನ್ನು ಪಡೆಯಲು ಬಯಸುವವರಿಗೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಇಲ್ಲ

ಕೆಲವು ಅಡಚಣೆಯಿಂದ ವಿದ್ಯುತ್ ಸಮಸ್ಯೆ (Power Problem) ಆಗಿರಬಹುದು. ಕಲ್ಲಿದ್ದಲು ಕೊರತೆಯಿಂದ ಯೂನಿಟ್ ಸ್ಥಗಿತ ಮಾಡಿಲ್ಲ. ಸರಬರಾಜಿನ ವ್ಯತ್ಯಾಸದಲ್ಲಿ ತೊಂದರೆ ಆಗಿರಬಹುದು. ಆದರೆ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಸಮಸ್ಯೆ ಆಗಿಲ್ಲ. ಕಲ್ಲಿದ್ದಲು ಕೊರತೆಯಿಂದ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಅಭಾವದ ಕುರಿತು ಇಂದು ಇಂಧನ ಸಚಿವ ಸುನೀಲ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಸಭೆ ಬಳಿಕಮಾತನಾಡಿದ ಅವರು, ಕಾಂಗ್ರೆಸ್​ನವರು ಕಲ್ಲಿದ್ದಲು ಕೊರತೆ ಬಗ್ಗೆ ಮಾತಾಡುತ್ತಾರೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಇಲ್ಲ. ಕೆಲವು ಅಡಚಣೆಯಿಂದ ವಿದ್ಯುತ್ ಸಮಸ್ಯೆ ಆಗಿರಬಹುದು. ಕಲ್ಲಿದ್ದಲು ಕೊರತೆಯಿಂದ ಯೂನಿಟ್ ಸ್ಥಗಿತ ಮಾಡಿಲ್ಲ. ಸರಬರಾಜಿನ ವ್ಯತ್ಯಾಸದಲ್ಲಿ ತೊಂದರೆ ಆಗಿರಬಹುದು. ಆದರೆ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಸಮಸ್ಯೆ ಆಗಿಲ್ಲ ಎಂದು ತಿಳಿಸಿದರು.

ಮಸೀದಿಗಳಲ್ಲಿ ಮೈಕ್ ತೆರವು ಮಾಡದಿದ್ರೆ ಹನುಮಾನ್​ ಚಾಲೀಸಾ ಪಠಣೆ

ಮಸೀದಿಗಳ ಧ್ವನಿವರ್ಧಕಗಳಿಂದ ಉಂಟಾಗುತ್ತಿರುವ ತೊಂದರೆ ಕುರಿತು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಆದರೆ, ಇದುವರೆಗೂ ಮಸೀದಿಗಳ ಮೇಲಿನ ಆಜಾನ್ ಧ್ವನಿವರ್ಧಕಗಳನ್ನ ಇದುವರೆಗೆ ತೆರವುಗೊಳಿಸಿಲ್ಲ ಎಂದು ಸರ್ಕಾರದ ವಿರುದ್ದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ಧಲಿಂಗ ಶಿವಾಚಾರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಹೆಚ್ಚಿನ ಶಬ್ಧ ಹೊರಸೂಸುವ ಧ್ವನಿವರ್ಧಕಗಳ ಬಳಕೆ ಮಾಡಬಾರದೆಂದು ಈಗಾಗಲೇ ಸುಪ್ರೀಂಕೋರ್ಟ್‌ ಆದೇಶ ಮಾಡಿದೆ. ಆದರೆ ಇದುವರೆಗೂ ಮಸೀದಿಗಳನ್ನು ಧ್ವನಿವರ್ಧಕ ತೆರವುಗೊಳಿಸಿಲ್ಲ. ಈ ಹಿನ್ನಲೆ ನಾವು ಆಜಾನ್‌ಸೇ ಆಜಾದ್ ಚಳುವಳಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಒಟಿಟಿಗೆ ಬರ್ತಿದೆ ದಿ ಮೋಸ್ಟ್​ ಸೆನ್ಸೇಷನ್ ಸಿನಿಮಾ 'ದಿ ಕಾಶ್ಮೀರ್​ ಫೈಲ್ಸ್' ​!

‘ದಿ ಕಾಶ್ಮೀರ್ ಫೈಲ್ಸ್‌’(The Kashmir Files) ಚಿತ್ರ ಇಡೀ ದೇಶದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ದೇಶದ ಮುಕುಟ ಕಾಶ್ಮೀರ(Kashmir)ದ ಪಂಡಿತರ ಕತೆಯನ್ನು ಈ ಚಿತ್ರ ಹೊಂದಿದೆ. ರಾಜ್ಯದಲ್ಲಿ ಈ ಚಿತ್ರ ವೀಕ್ಷಿಸುವವರಿಗೆ ತೆರಿಗೆ(Tax)ಯನ್ನೂ ತೆಗೆದುಹಾಕಲಾಗಿತ್ತು. ನಮ್ಮ ರಾಜ್ಯದ ಎಲ್ಲ ಶಾಸಕರಿಗೂ ಈ ಚಿತ್ರವನ್ನು ನೋಡುವಂತೆ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಒಟ್ಟಾರೆ, ಈ ಚಿತ್ರ ದೇಶದಲ್ಲಿ ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ. ಇದೀಗ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ಒಟಿಟಿ(The Kashmir Files Ott) ಪ್ರಸಾರಕ್ಕೆ ಸಿದ್ಧತೆ ನಡೆದಿದೆ. ಜೀ5 ಮೂಲಕ ಈ ಸಿನಿಮಾ ಪ್ರಸಾರ ಆಗಲಿದೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ ಸಿನಿಮಾಗಳಲ್ಲಿ ಒಂದಾದ ‘ದಿ ಕಾಶ್ಮೀರ್​ ಫೈಲ್ಸ್​’ ಈಗ ಒಟಿಟಿಗೆ ಬರಲು ಸಜ್ಜಾಗಿದೆ. ಎಲ್ಲರೂ ಈ ಸಿನಿಮಾ ನೋಡಲು ಕಾತುರದಿಂದ ಎದುರು ನೋಡುತ್ತಿದ್ದರು. ಶೀಘ್ರದಲ್ಲೇ ಈ ಸಿನಿಮಾ  ಜೀ 5(Zee 5)ನಲ್ಲಿ ಸ್ಟ್ರೀಮ್​ ಆಗಲಿದೆ.
Published by:Kavya V
First published: