• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Evening Digest: ಮುರುಘಾ ಸ್ವಾಮೀಜಿಗೆ ಪೊಲೀಸ್ ಕಸ್ಟಡಿ, ಕೆಜಿಎಫ್ ಸಿನಿಮಾ ನೋಡಿ ಕೊಲೆ-ಇಂದಿನ ಪ್ರಮುಖ ಸುದ್ದಿಗಳು

Evening Digest: ಮುರುಘಾ ಸ್ವಾಮೀಜಿಗೆ ಪೊಲೀಸ್ ಕಸ್ಟಡಿ, ಕೆಜಿಎಫ್ ಸಿನಿಮಾ ನೋಡಿ ಕೊಲೆ-ಇಂದಿನ ಪ್ರಮುಖ ಸುದ್ದಿಗಳು

ಸಂಜೆ ಸುದ್ದಿ

ಸಂಜೆ ಸುದ್ದಿ

ರಾಜ್ಯ, ದೇಶ, ವಿದೇಶದಲ್ಲಿ ಇಂದು ಏನೇನಾಯ್ತು? ರಾಜಕೀಯ, ಉದ್ಯೋಗ, ಕ್ರೀಡೆ, ಸಿನಿಮಾ ಕ್ಷೇತ್ರಗಳ ಅಪ್‌ಡೇಟ್ಸ್ ಏನು? ವಾಣಿಜ್ಯ ಕ್ಷೇತ್ರ ಹೇಗೆ ನಡೀತಿದೆ? ಸೀರಿಯಲ್‌ಗಳಲ್ಲಿ ಏನ್ ಆಗ್ತಿದೆ? ನೀವು ಓದದೇ ಮಿಸ್ ಮಾಡಿಕೊಂಡ ಈ ಸಂಜೆಯ ಬಿಸಿ ಬಿಸಿ ಸುದ್ದಿಗಳು ಇಲ್ಲಿವೆ ಓದಿ..

  • Share this:

ಮುರುಘಾ ಸ್ವಾಮೀಜಿಗೆ 3 ದಿನ ಪೊಲೀಸ್ ಕಸ್ಟಡಿ, ಆಸ್ಪತ್ರೆ ಹೈಡ್ರಾಮಾಕ್ಕೆ ಬ್ರೇಕ್


ಅತ್ಯಾಚಾರ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮುರುಘಾ ಸ್ವಾಮೀಜಿಗೆ ಸಂಕಷ್ಟ ತಪ್ಪುತ್ತಿಲ್ಲ. ಪೋಕ್ಸೋ ಕೇಸ್​​​ನಲ್ಲಿ ಅರೆಸ್ಟ್ ಆಗಿರುವ ಮುರುಘಾ ಸ್ವಾಮೀಜಿಯನ್ನು ಕೋರ್ಟ್ ಈಗ 3 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಸೆಪ್ಟೆಂಬರ್ 5ರವರೆಗೂ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿದೆ. ಈ ಮೂಲಕ ಮುರುಘಾ ಸ್ವಾಮೀಜಿಯ ಆಸ್ಪತ್ರೆ ಹೈಡ್ರಾಮಕ್ಕೆ ಕೋರ್ಟ್ ಬ್ರೇಕ್ ಹಾಕಿದೆ. ಇದರ ನಡುವೆ ಬೇರೆ ಕೇಸ್ ಕೂಡ ಸ್ವಾಮೀಜಿಯನ್ನು ಕಾಡಲಾರಂಭಿಸಿದೆ. ಬೆಂಗಳೂರು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಿಂದ ಮುರುಘಾ ಸ್ವಾಮೀಜಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ತಿಪ್ಪಶೆಟ್ಟಿ ಮಠದ ಆಸ್ತಿ ಮಾರಾಟ ವಿಚಾರದಲ್ಲಿ ವಂಚನೆ ಆರೋಪದ ಸಂಬಂಧ ಸ್ವಾಮೀಜಿಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ.


ಕೆಜಿಎಫ್​​ ಸಿನಿಮಾ ನೋಡಿ ಕೊಲೆ ಮಾಡ್ತಿದ್ದವ ಅರೆಸ್ಟ್!


ಕೆಜಿಎಫ್ ಸಿನಿಮಾದಿಂದ ಪಾತ್ರದಿಂದ ಪ್ರೇರಿತಗೊಂಡು ಕೊಲೆ ಮಾಡುತ್ತಿದ್ದ (KGF Inspired Teen Serial Killer) ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಧ್ಯಪ್ರದೇಶದಲ್ಲಿ ನಾಲ್ವರು ಸೆಕ್ಯೂರಿಟಿ ಗಾರ್ಡ್‌ಗಳು ನಿದ್ದೆಯಲ್ಲಿರುವಾಗಲೇ ಕೊಂದಿರುವ ಶಂಕಿತ ಸರಣಿ ಹಂತಕನೊಬ್ಬನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಈ ವ್ಯಕ್ತಿ ಕೊಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 19 ವರ್ಷದ ಶಿವ ಪ್ರಸಾದ್ ಎಂದು ಗುರುತಿಸಲಾದ ವ್ಯಕ್ತಿ, ಬ್ಲಾಕ್‌ಬಸ್ಟರ್ ಸಿನಿಮಾ ಕೆಜಿಎಫ್‌ನಿಂದ (KGF Film) ಪ್ರೇರಿತನಾಗಿ ಪ್ರಸಿದ್ಧನಾಗಲು ಬಯಸಿದ್ದ ಎಂದು ಮೂಲಗಳು ತಿಳಿಸಿವೆ. ಸಾಗರ್ ಎಂಬ ಪ್ರದೇಶದಲ್ಲಿ ಮೂರು ರಾತ್ರಿಗಳಲ್ಲಿ ಮೂರು ವ್ಯಕ್ತಿಗಳನ್ನು ಈತ ಕೊಲೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.


ಏಷ್ಯಾ ಕಪ್​ನಿಂದ ರವೀಂದ್ರ ಜಡೇಜಾ ಹೊರಕ್ಕೆ


ಏಷ್ಯಾ ಕಪ್​ 2022ರ ಸೂಪರ್​ 4 ಹಂತಕ್ಕೆ ಈಗಾಗಲೇ ಭಾರತ ತಂಡ ಲಗ್ಗೆ ಇಟ್ಟಿದೆ. ಜೊತೆಗೆ ಸೂಪರ್​ 4 ಹಂತದ ಮೊದಲ ಪಂದ್ಯವನ್ನು ಇದೇ ರವಿವಾರದಂದು ನಡೆಯಲಿದೆ. ಇದರ ನಡುವೆ ಭಾರತ ತಂಡಕ್ಕೆ ಬಿಗ್​ ಶಾಕ್​ ಒಂದು ಎದುರಾಗಿದೆ. ತಂಡದ ಸ್ಟಾರ್​ ಆಲ್​ ರೌಂಡರ್​ ರವೀಂದ್ರ ಜಡೇಜಾ (Ravindra Jadeja) ಅವರು ಏಷ್ಯಾ ಕಪ್​ ಟೂರ್ನಿಯಿಂದ ಹೊರನಡೆದಿದ್ದಾರೆ. ಹೌದು, ಗಾಯದ ಸಮಸ್ಯೆಯಿಂದ ಏಷ್ಯಾ ಕಪ್​ 2022ರಿಂದ ಔಟ್​ ಆಗಿದ್ದಾರೆ. ಅವರ ಬದಲಾಗಿ ಎಡಗೈ ಸ್ಪಿನ್ ಆಲ್ ರೌಂಡರ್ ಅಕ್ಷರ್ ಪಟೇಲ್ (Axar Patel) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ (BCCI) ಅಧಿಕೃತವಾಗಿ ಮಾಹಿತಿ ನೀಡಿದೆ.


ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಷ್ಯಾ ಕಪ್​ನಿಂದ ಜಡೇಜಾ ಔಟ್​!


ಮಂಗಳೂರಿನಲ್ಲಿ ಮೋದಿ ಮೇನಿಯಾ,  3,700 ಕೋಟಿಯ ಯೋಜನೆಗಳಿಗೆ ಚಾಲನೆ 


ಕಡಲನಗರಿ ಮಂಗಳೂರಿನಲ್ಲಿ ಪ್ರಧಾನಿ ಮೋದಿ ಮೇನಿಯಾ ಜೋರಾಗಿತ್ತು. ಮೋದಿ 3,700 ಕೋಟಿಯ ಯೋಜನೆಗಳಿಗೆ ಚಾಲನೆ ಕೊಟ್ಟರು. ಬಳಿಕ ಮೋದಿ ಮಾತನಾಡಿ ಕರ್ನಾಟಕ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ (Double Engine Government) ಲಾಭವಾಗಿದೆ. ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ ಅಂತಾ ಮೋದಿ ಹೇಳಿದರು. ಇದೇ ವೇಳೆ ಯಡಿಯೂರಪ್ಪರನ್ನು(Yediyurappa)  ಪ್ರಧಾನಿ ಮೋದಿ ಬಳಿ ಕರೆದು ತಮ್ಮ ಸಾಲಿನಲ್ಲೇ ಕೂರಿಸಿಕೊಂಡರು.


ಇದನ್ನೂ ಓದಿ: ಲೈಗರ್ ಸೋಲಿನ ಹೊಣೆ ಹೊತ್ತ ರೌಡಿ ಸ್ಟಾರ್! ಪುರಿ, ಚಾರ್ಮಿಗೆ ಪೇಮೆಂಟ್ ವಾಪಸ್ ಕೊಟ್ಟ ವಿಜಯ್ ದೇವರಕೊಂಡ


ಲೈಗರ್ ಸೋಲು, ನಿರ್ದೇಶಕರಿಗೆ ಅರ್ಧ ಸಂಭಾವನೆ ವಾಪಸ್​ ಕೊಟ್ಟ ದೇವರಕೊಂಡ

top videos


    ವಿಜಯ್ ದೇವರಕೊಂಡ ಅವರ ಪ್ಯಾನ್ ಇಂಡಿಯಾ ಸಿನಿಮಾ ಪ್ರೇಕ್ಷಕರ ಮನ ಗೆಲ್ಲಲು ಸೋತಿದೆ. ಭಾರೀ ನಿರೀಕ್ಷೆಗಳ ನಡುವೆ ಬಂದಿದ್ದ ಲೈಗರ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೋತಿದೆ. ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಲು ಸಾಧ್ಯವಾಗಲಿಲ್ಲ. ಇದರಿಂದ ಥಿಯೇಟರ್ ಮಾಲೀಕರು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆ ನಿರ್ಮಾಪಕರ ನಷ್ಟವನ್ನು ಭರಿಸಲು ವಿಜಯ್ ದೇವರಕೊಂಡ ಎಂಟ್ರಿ ಕೊಟ್ಟಿದ್ದಾರೆ. ಲೈಗರ್ ಅವರು ಚಿತ್ರಕ್ಕಾಗಿ ತೆಗೆದುಕೊಂಡ ಅರ್ಧದಷ್ಟು ಸಂಭಾವನೆಯನ್ನು ಹಿಂತಿರುಗಿಸಲು ಸಿದ್ಧರಾಗಿದ್ದಾರೆ. ಲೈಗರ್ ಚಿತ್ರಕ್ಕಾಗಿ ವಿಜಯ್ ದೇವರಕೊಂಡ 15 ಕೋಟಿ ತೆಗೆದುಕೊಂಡಿದ್ದಾರೆ. ವಿಜಯ್ ದೇವರಕೊಂಡ 6 ಕೋಟಿ ರೂಪಾಯಿಗಳನ್ನು ಹಿಂತಿರುಗಿಸುತ್ತಿದ್ದಾರೆ.

    First published: