Evening Digest: ‘3 ವರ್ಷ ನೋಡೋಣ ಅಡ್ಜೆಸ್ಟ್ ಆಗಿಲ್ಲ ಅಂದ್ರೆ ಬೇರೆಬೇರೆ’: ಶೀಘ್ರವೇ ರೈತರ ಖಾತೆಗಳಿಗೆ ಹಣ ಜಮೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
3 ವರ್ಷ ನೋಡೋಣ ಅಡ್ಜೆಸ್ಟ್ ಆಗಿಲ್ಲ ಅಂದ್ರೆ ಬೇರೆಬೇರೆ: ವಿವಾಹ ಒಪ್ಪಂದಕ್ಕೆ ಸಹಿ ಹಾಕುವುದು ಭಾರತದಲ್ಲಿ ಇನ್ನೂ ಹೆಚ್ಚೇನು ಪ್ರಸಿದ್ಧವಾಗಿಲ್ಲ. ಆದರೆ ವಡೋದರಾದ ದಂಪತಿಗಳು ಪ್ರತ್ಯೇಕತೆಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅನೇಕರ ಹುಬ್ಬೇರಿಸಿದ್ದಾರೆ. ವಿಚ್ಛೇದಿತ ದಂಪತಿಗಳು ತಿಳುವಳಿಕೆಯ ಜ್ಞಾಪಕ ಪತ್ರಕ್ಕೆ (MoU) ಸಹಿ ಹಾಕಿದ್ದಾರೆ. ಇದರಲ್ಲಿ ಅವರು ಮೂರು ವರ್ಷಗಳ ಕಾಲ ದೂರವಿರಲು ಒಪ್ಪಿಕೊಂಡರು ಮತ್ತು ರಾಜಿಯಾಗದಿದ್ದಲ್ಲಿ, ಪ್ರತ್ಯೇಕವಾಗುವುದು. 2020 ರಲ್ಲಿ ಸಹಿ ಮಾಡಿದ ಎಂಒಯು ನೋಟರೈಸ್ ಮಾಡಲ್ಪಟ್ಟಿದೆ. ಆದ್ದರಿಂದ ಗಂಡ-ಹೆಂಡತಿ ಇಬ್ಬರೂ ಒಪ್ಪಂದಕ್ಕೆ ಬದ್ಧರಾಗಿದ್ದಾರೆ. ಆದರೆ ಒಪ್ಪಂದದ ಅವಧಿಯಲ್ಲಿ ದಂಪತಿಗಳ ನಡುವಿನ ವಿವಾದವು ನ್ಯಾಯಾಲಯದ ಮೆಟ್ಟಿಲೇರಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​​​ ಮಾಡಿ: Contract for Separation: 3 ವರ್ಷ ನೋಡೋಣ, ಅಡ್ಜೆಸ್ಟ್ ಆಗಿಲ್ಲ ಅಂದ್ರೆ ಬೇರೆಬೇರೆ; ಗಂಡ-ಹೆಂಡತಿ ಅಗ್ರಿಮೆಂಟ್!

ಶೀಘ್ರವೇ ರೈತರ ಖಾತೆಗಳಿಗೆ ಹಣ ಜಮೆ

PM ಕಿಸಾನ್ನ 11 ನೇ ಕಂತಿಗೆ ಅರ್ಹ ರೈತರ ಬ್ಯಾಂಕ್ ಖಾತೆಗೆ 2000 ರೂ. ಜಮಾ ಮಾಡಲಾಗುತ್ತದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕೇಂದ್ರ ಕೃಷಿ ಸಚಿವಾಲಯದ ಮೂಲಗಳು ತಿಳಿಸಿವೆ. ‘ರೈತ ಸಹಭಾಗಿತ್ವ-ಆದ್ಯತಾ ಹಮಾರಿ’ ಕಾರ್ಯಕ್ರಮದ ಪೂರ್ವಭಾವಿಯಾಗಿ ಕೇಂದ್ರವು ಹೆಚ್ಚಿನ ಸಂಖ್ಯೆಯ ರೈತರಿಗೆ ಕೆಸಿಸಿ (ಕಿಸಾನ್ ಕ್ರೆಡಿಟ್ ಕಾರ್ಡ್) ಕಾರ್ಡ್ಗಳನ್ನು ವಿತರಿಸಲಿದೆ. ಈ ಯೋಜನೆಯು ಪಿಎಂ ಕಿಸಾನ್ ಯೋಜನೆಗೆ ಕೂಡ ಲಿಂಕ್ ಆಗಿದೆ. ಪ್ರಚಾರ ಅಂತ್ಯಗೊಂಡಿದ್ದು, ಹಣ ಹಂಚಲು ಸಜ್ಜಾಗಿದೆ. ಪಿಎಂ ಕಿಸಾನ್ 11ನೇ ಕಂತಿನ ಹಣ ಮೇ ಎರಡನೇ ವಾರದಲ್ಲಿ ಅಂದರೆ ಮೇ 14 ಅಥವಾ 15ರಂದು ರೈತರ ಖಾತೆಗೆ ಜಮಾ ಆಗುವ ಸಾಧ್ಯತೆ ಇದೆ. ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬೀಳಬೇಕಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​​​ ಮಾಡಿ:PM Kisan: ಮೇ 14 ಇಲ್ಲ 15ರಂದು ರೈತರ ಖಾತೆಗಳಿಗೆ ಹಣ ಜಮೆ, ಆದರೆ ಇದನ್ನು ಮಾಡಬೇಕು

ಆಸ್ತಿಗಾಗಿ ಹೆತ್ತ ತಾಯಿಯನ್ನೇ ಕೊಂದ ಕ್ರೂರಿ ಮಗ

ಆಸ್ತಿಗಾಗಿ ಹೆತ್ತ ತಾಯಿಯನ್ನೆ (Mother) ಕ್ರೂರಿ ಮಗನೋರ್ವ ಹತ್ಯೆ ಮಾಡಿರುವ ಘಟನೆ ಧಾರವಾಡ (Dharwad) ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ನಡೆದಿದೆ. 65  ವರ್ಷದ ಶಾಂತವ್ವ ಕಲ್ಲಪ್ಪ (Shanthavva Kallappa) ಅಣ್ಣಿಗೇರಿ  ಎಂಬ ಮಹಿಳೆಯೇ (Women) ಮೃತ  ದುರ್ದೈವಿ. ಬಸವರಾಜ್ ಕಲ್ಲಪ್ಪ ಅಣ್ಣಿಗೇರಿ ತಾಯಿಯನ್ನೆ ಕೊಲೆ ಮಾಡಿದ ಮಗ. ಬಸವರಾಜ್ (Basavaraj) ಕ್ರೂರ ಕೃತ್ಯ ಸ್ಥಳೀಯರಿಗೆ ತಿಳಿದುಬಂದ ತಕ್ಷಣ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಈ ಪರಿಣಾಮ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

  ಒತ್ತಾಯಪೂರ್ವಕವಾಗಿ ಲಸಿಕೆ ನೀಡುವಂತಿಲ್ಲ!

ಭಾರತದಲ್ಲಿ (India) ಕೊರೋನಾ ಕೇಸ್‌ (Corona Case) ಹೆಚ್ಚಾಗುತ್ತಿದೆ. ದೆಹಲಿ (Delhi), ಕೇರಳ (Kerala) ಸೇರಿದಂತೆ ಹಲವು ರಾಜ್ಯಗಳಲ್ಲಿ (State) ದಿನ ದಿನಕ್ಕೂ ಕೋವಿಡ್ (Covid) ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಲೆ ಇದೆ. ಕೋವಿಡ್ ವಿರುದ್ಧ ಹೋರಾಡುವ ಲಸಿಕೆಯನ್ನು (Vaccine) ಹಾಕಿಸಿಕೊಳ್ಳಿ ಅಂತ ಸರ್ಕಾರ (Government) ಮನವಿ ಮಾಡುತ್ತಿದೆ. ಕೆಲವೆಡೆ 2 ಡೋಸ್ (2 dose) ಪಡೆದ ಬಳಿಕವೂ ಬೂಸ್ಟರ್ ಡೋಸ್‌ಗೂ (Booster Dose) ಸರ್ಕಾರ ಮಹತ್ವ ನೀಡಿದೆ. ಈ ನಡುವೆಯೇ ಕೋವಿಡ್ ಲಸಿಕೆ ಕುರಿತಂತೆ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪೊಂದನ್ನು (Judgment) ನೀಡಿದೆ. “ಭಾರತದಲ್ಲಿ ಕೋವಿಡ್ ಲಸಿಕೆಯನ್ನು ಯಾರಿಗೂ ಒತ್ತಾಯಪೂರ್ವಕವಾಗಿ (Forcefully) ಕೊಡುವಂತಿಲ್ಲ” ಅಂತ ಸುಪ್ರೀಂ ಕೋರ್ಟ್ ನ್ಯಾಯಪೀಠ ಮಹತ್ವದ ಆದೇಶ (Order) ನೀಡಿದೆ.

ಕನ್ನಡಕ್ಕಾಗಿ ಹೊಸ ಓಟಿಟಿ ಬಿಡುಗಡೆ

ಹಲವು ವರ್ಷಗಳಿಂದ ಆನ್ ಲೈನ್ ನಲ್ಲಿ ಪರಿಣಿತಿ ಪಡೆದಿರುವ ಆನ್ ಲೈನ್ ಭಾಸ್ಕರ್ ಎಂದೇ ಖ್ಯಾತರಾಗಿರುವ ಭಾಸ್ಕರ್ ವೆಂಕಟೇಶ್ ಹಾಗು ನಿರ್ಮಾಪಕ, ಕರ್ನಾಟಕ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರ ಸಾರಥ್ಯದಲ್ಲಿ ಸಿನಿಬಜಾರ್ ಆಪ್ ಹೊರಬಂದಿದೆ. ಈ ಮೂಲಕ ಸಿನಿ ಪ್ರಿಯರಿಗೆ ಸಿಹಿ ಸುದ್ದಿಯಾಗಿದೆ. ಅದರಲ್ಲಿಯೂ ಕನ್ನಡದ ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್ ದೊರೆತಂತಾಗಿದೆ. ಈ ಆಪ್ ನಲ್ಲಿ ಸಿನಿಮಾ ವೀಕ್ಷಣೆಗೆ ತಗಲುವ ವೆಚ್ಚ ಕೇವಲ ಇಪ್ಪತ್ತೈದರಿಂದ ಮೂವತ್ತು ರೂಪಾಯಿ. 24 ಗಂಟೆಗಳ ಅವಧಿಯಿರುತ್ತದೆ. ಅಷ್ಟರೊಳಗೆ ಎಷ್ಟು ಸಿನಿಮಾ ಬೇಕಾದರೂ ನೋಡಬಹುದು. ಈ ಸಿನಿಮಾವನ್ನು ಎಷ್ಟು ಜನ ವೀಕ್ಷಿಸಿದ್ದಾರೆ ಎಂಬ ಮಾಹಿತಿ ಕೂಡ ನಿರ್ಮಾಪಕರಿಗೆ ತಿಳಿಯಲಿದೆ. ಪೈರಸಿ ತಡೆಗಟ್ಟುವ ಕಡೆಗೂ ಗಮನ ಹರಸಲಾಗಿದೆ. ಧ್ವನಿಯಿಂದ ಹಿಡಿದು, ಸ್ಕ್ರೀನಿಂಗ್ ‌ತನಕ ಎಲ್ಲಾ ಉತ್ತಮ ಗುಣಮಟ್ಟದಾಗಿರುತ್ತದೆ.‌ ಈಗಾಗಲೇ ಬಿಡುಗಡೆಯಾಗಿರುವ ಚಿತ್ರಗಳು ಈಗಾಗಲೇ ಈ ಆಪ್ ನಲ್ಲಿದೆ. ಈ ಆಪ್ ಮೂಲಕವೇ ಚಿತ್ರವನ್ನು ಬಿಡುಗಡೆ ಮಾಡಲು ಇಚ್ಛಿಸುವವರು ನಮ್ಮ ತಂಡವನ್ನು ಸಂಪರ್ಕಿಸಬಹುದು‌. ಒಟ್ಟಿನಲ್ಲಿ ಕನ್ನಡ ನಿರ್ಮಾಪಕರಿಗೆ ಒಳಿತಾಗಲಿ ಎಂಬುದೇ ನಮ್ಮ ಆಶಯ ಎಂದು ಭಾಸ್ಕರ್ ವೆಂಕಟೇಶ್ ಹೇಳಿದ್ದಾರೆ.
Published by:Kavya V
First published: