Evening Digest: ಕರ್ನಾಟಕ ಪೊಲೀಸರಿಗೆ ಯುಗಾದಿ ಹಬ್ಬಕ್ಕೆ ಬಂಪರ್: ಪಾರ್ಕ್​​ನಲ್ಲಿ ಪ್ರೇಮಿಗಳ ಹೊಡೆದಾಟ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಕರ್ನಾಟಕ ಪೊಲೀಸರಿಗೆ ಯುಗಾದಿ ಹಬ್ಬಕ್ಕೆ ಬಂಪರ್ : ಹೊಸ ತಂತ್ರಜ್ಞಾನವನ್ನು ಪೊಲೀಸ್ ಇಲಾಖೆಯಲ್ಲಿ (Police Department) ಅಳವಡಿಸಲಿದ್ದೇವೆ. ಜೊತೆಗೆ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳನ್ನು ಹೆಚ್ಚಿಸಲು ಈಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸ್ ಸಿಬ್ಬಂದಿಗಳಿಗಾಗಿ ಮನೆ ಕಟ್ಟಲು ಈಗಾಗಲೇ 10 ಸಾವಿರಕ್ಕೂ ಹೆಚ್ಚು ಮನೆಗಳಿಗಾಗಿ ರಾಜ್ಯ ಸರ್ಕಾರ (Karnataka Government) ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್ ಧ್ವಜ ದಿನಾಚರಣೆಯಲ್ಲಿ (Police Flag Day 2022) ಮಾಹಿತಿ ನೀಡಿದ್ದಾರೆ. ಈಮೂಲಕ ಪೊಲೀಸ್ ಸಿಬ್ಬಂದಿ ಮೇಲಿನ ಹೊರೆ ಕಡಿಮೆ ಮಾಡುವ ಮೂಲಕ ಸಿಹಿ ಉಣಬಡಿಸಿದ್ದಾರೆ. ನಾಡಿನ ಜನತೆಗೆ ಯುಗಾದಿ ಹಬ್ಬದ (Ugadi 2022) ಶುಭಾಶಯಗಳನ್ನು ಸಹ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಇದೇ ಸಂದರ್ಭದಲ್ಲಿ ಕೋರಿದ್ದಾರೆ. ಈ ವರ್ಷ ನಾಡಿನ ಜನತೆಗೆ ಸಮೃದ್ದಿ, ಶಾಂತಿ ಸಿಗಲಿ ಅಂತ ಹಾರೈಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Karnataka Police: ಕರ್ನಾಟಕ ಪೊಲೀಸರಿಗೆ ಯುಗಾದಿ ಹಬ್ಬಕ್ಕೆ ಸಿಹಿ ಉಣಿಸಿದ ಸಿಎಂ ಬೊಮ್ಮಾಯಿ!

ಶಿವಮೊಗ್ಗ ಹರ್ಷ ಕೊಲೆಗೆ ವೈಯಕ್ತಿಕ ದ್ವೇಷ ಕಾರಣವಲ್ಲ
ಬಜರಂಗದಳ ಕಾರ್ಯಕರ್ತ (Bajrang Dal Activist) ಹರ್ಷ ಕೊಲೆ ವಿಚಾರ ರಾಜ್ಯದಲ್ಲಿ ಭಾರೀ ಸುದ್ದಿಯಾಗಿತ್ತು. ಹರ್ಷನ ಕೊಲೆ ಹಿಂದೆ ಹಲವು ಹಲವುಗಳಿದ್ವು, ಹರ್ಷ ಕೊಲೆ (Harsha Murder) ಎಂಬ ಯುವಕನ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳವು (NIA) ತನ್ನ ಪ್ರಾಥಮಿಕ ವರದಿಯಲ್ಲಿ ಹರ್ಷ ಕೊಲೆ ಹಿಂದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ಅಡಗಿತ್ತು. ತನ್ಮೂಲಕ ಕೋಮುಗಲಭೆ ಎಬ್ಬಿಸುವ ಉದ್ದೇಶವಿತ್ತು ಎಂಬ ಆತಂಕಕಾರಿ ಅಂಶ ಬಹಿರಂಗಪಡಿಸಿದೆ. ರಾಷ್ಟ್ರೀಯ ತನಿಖಾದಳದ ಪ್ರಾಥಮಿಕ ತನಿಖೆ (Preliminary Investigation) ಮಾಡಿ ಎಫ್ಐಆರ್ ದಾಖಲು ಮಾಡಿದೆ. ಹರ್ಷನ ಕೊಲೆ ಮಾಡುವ ಮೂಲಕ ಆರೋಪಿಗಳು ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಉದ್ದೇಶ ಹೊಂದಿದ್ದರು ಎನ್ನುವುದನ್ನು FIR ನಲ್ಲಿ ದಾಖಲಿಸಲಾಗಿದ್ದಾರೆ.

ಪಾರ್ಕ್ನಲ್ಲಿ ಪ್ರೇಮಿಗಳ ಹೊಡೆದಾಟ!
ಅವರಿಬ್ಬರು ಪ್ರೇಮಿಗಳು (Lovers). ಒಬ್ಬರ ಜೊತೆ ಒಬ್ಬರು ಕುಳಿತು, ಕಷ್ಟ ಸುಖ ಮಾತನಾಡಿ ಮನಸ್ಸು ಹಗುರ ಮಾಡಿಕೊಳ್ಳೋಣ ಅಂತ ಪಾರ್ಕ್ಗೆ (Park) ಹೋಗಿದ್ರು. ಆದ್ರೆ ಅಲ್ಲಿ ಅದೇನಾಯ್ತೋ ಏನೋ, ಇಬ್ಬರು ಶರಂಪರ ಕಿತ್ತಾಡಿಕೊಂಡಿದ್ದಾರೆ. ಇದು ಪಾರ್ಕ್, ಇಲ್ಲಿ ಜನರಿದ್ದಾರೆ ಎಂಬುದನ್ನೂ ಮರೆತು ಪರಸ್ಪರ ಹೊಡೆದಾಟಕ್ಕೆ ನಿಂತಿದ್ದಾರೆ. ಅಷ್ಟರಲ್ಲಿ ಫುಡ್ ಡೆಲಿವರಿ ಬಾಯ್ (Food Delivery Boy) ಒಬ್ಬ ಆ ಪಾರ್ಕ್ಗೆ ಎಂಟ್ರಿ ಕೊಟ್ಟಿದ್ದಾನೆ. ಕೆಲ್ಸ ಮಾಡಿ (Work) ಸುಸ್ತಾಗಿದ್ದ ಆತ, ಕೊಂಚ ಹೊತ್ತು ಕುಳಿತು ರಿಲ್ಯಾಕ್ಸ್ (Relax) ಆಗೋಣ ಅಂತ ಅಲ್ಲಿ ಬಂದಿದ್ದ. ಪ್ರೇಮಿಗಳ ಜಗಳ ನೋಡಿ ಏನನ್ನಿಸಿತೋ ಏನೋ, ಏನ್ರಪ್ಪಾ ನಿಮ್ಮ ಸಮಸ್ಯೆ ಅಂತ ಕೇಳಿದ್ದಾನೆ. ಆಗ ಅಲ್ಲಿ ನಡೆದಿದ್ದೇ ಬೇರೆ. ಇದೀಗ ಈ ಘಟನೆಯ ವಿಡಿಯೋ (Video) ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ (Viral) ಆಗಿದ್ದು, ಕೆಲವರು ತಮಾಷೆ ಅಂತ ಕಾಮೆಂಟ್ (Comment) ಮಾಡಿದ್ರೆ, ಮತ್ತೆ ಕೆಲವರು ಆ ಪ್ರೇಮಿಗಳು ಹಾಗೂ ಫುಡ್ ಡಿಲಿವರಿ ಹುಡುಗನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Viral Video: ಪಾರ್ಕ್‌ನಲ್ಲಿ ಪ್ರೇಮಿಗಳ ಹೊಡೆದಾಟ! ತಪ್ಪಿಸೋಕೆ ಬಂದ ಈ ಮಹಾನುಭಾವ ಏನು ಮಾಡಿದ ನೋಡಿ...

200 ರೂ. ಮುಟ್ಟಿದ ನಿಂಬೆಹಣ್ಣಿನ ಬೆಲೆ
ಹಿಂದೂ ಪಂಚಾಂಗದಂತೆ ಯುಗಾದಿ ಹಬ್ಬದ ಮೂಲಕ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಬೇಸಿಗೆ ನೆತ್ತಿ ಸುಡಲು ಆರಂಭವಾಗಿದೆ, ಬಾಯಾರಿಕೆ ಸಾಮಾನ್ಯವಾಗಿದೆ. ಯುಗಾದಿಯ ಹೊಸ್ತಿಲಲ್ಲೇ ಶ್ರೀರಾಮನವಮಿ ಕಾಲಿಡಲಿದೆ. ಪಾನಕ-ಮಜ್ಜಿಗೆ ತಯಾರಿಗೆ ನೀವೇನಾದರೂ ಮುಂದಾಗಿದ್ದರೆ ಜೇಬು ಸುಡೋದು ಗ್ಯಾರಂಟಿ. ಹಬ್ಬದ ಖುಷಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ನಿಂಬೆಹಣ್ಣಿನ ಬೆಲೆ 200 ರೂ. ದಾಟಿದೆ. ಅಚ್ಚರಿಯಾದರೂ ಇದು ಸತ್ಯ. ಇತ್ತೀಚಿನ ವರದಿಯ ಪ್ರಕಾರ ಗುಜರಾತ್ ನ ರಾಜ್ ಕೋಟ್ ನಲ್ಲಿ ನಿಂಬೆಹಣ್ಣು ಬೆಲೆ ಕೆಜಿಗೆ 200 ರೂ.ಗೆ ಏರಿದೆ. ಹಣದುಬ್ಬರದಿಂದಾಗಿ ಸಾಮಾನ್ಯ ಜನರು ಈಗಾಗಲೇ ಏರುತ್ತಿರುವ ಬೆಲೆಗಳೊಂದಿಗೆ ಹೆಣಗಾಡುತ್ತಿರುವ ಸಮಯದಲ್ಲಿ ನಿಂಬೆಯೂ ದುಬಾರಿಯಾಗಿ ತಲೆಬಿಸಿ ತಂದಿದೆ. ಈ ಹಿಂದೆ ಕೆಜಿಗೆ 50-60 ರೂ. ಇದ್ದ ನಿಂಬೆಹಣ್ಣಿನ ಬೆಲೆ ಈಗ ಕೆಜಿಗೆ 200 ರೂಪಾಯಿ ಆಗಿದೆ. ಇದು ನಮ್ಮ ‘ಅಡುಗೆ ಮನೆ ಬಜೆಟ್’ ಮೇಲೆ ಪರಿಣಾಮ ಬೀರುತ್ತಿದೆ.

KGF- 2 ಹಿಟ್ ಆಗದಿದ್ದರೆ ಏನಾಗಬಹುದು?
ಕೆಜಿಎಫ್ 2 ನಿಜಕ್ಕೂ ನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿದೆ. ಆದರೆ ಪ್ರಸ್ತುತ ಚಿತ್ರದ ಮೇಲಿರುವ ನೀರಿಕ್ಷೆಗಳು ಹುಸಿಯಾದರೆ ಏನಾಗಬಹುದು ಎಂಬ ಲೆಕ್ಕಾಚಾರಗಳು ಹುಟ್ಟಿಕೊಂಡಿವೆ. ಚಿತ್ರ ಅಂದುಕೊಂಡ ಮಟ್ಟಿಗೆ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡದಿದ್ದಾರೆ ಏನಾಗಬಹುದು ಎಂಬ ಕೆಲವು ಪ್ರಶ್ನೆಗಳು ಕೇಳಿ ಬರುತ್ತಿವೆ. ಹಾಗಾದರೆ ಇದರತ್ತ ನೋಡುವುದಾದರೆ ಕೆಜಿಎಫ್ 2 ಚಿತ್ರ ನಿರ್ದೇಶಕ ಪ್ರಶಾಂತ್ ನೀಲ್ಗೆ ಹೆಚ್ಚು ನಿರ್ಣಾಯಕವಾಗಿದೆ.
Published by:Kavya V
First published: