Evening Digest: ಸಿಎಂ ಸಿಟಿ ರೌಂಡ್ಸ್ ಬಗ್ಗೆ ಕುಮಾರಸ್ವಾಮಿ ಕಿಡಿ; ಸಿಧುಗೆ 1 ವರ್ಷ ಜೈಲು ಶಿಕ್ಷೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಸಿಎಂ ಸಿಟಿ ರೌಂಡ್ಸ್ ಬಗ್ಗೆ ಕುಮಾರಸ್ವಾಮಿ ಕಿಡಿ: ನಿರಂತರವಾಗಿ ಸುರಿದ ಮಳೆಯಿಂದ ಅನೇಕ ಅನಾಹುತಗಳು (Disasters) ಸಂಭವಿಸಿದೆ. ಈ ಸಂಬಂಧ ಜೆಪಿ ಭವನದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy) ಸುದ್ದಿಗೋಷ್ಠಿ ನಡೆಸಿದ್ರು. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ದಾಖಲೆ ಮಳೆ (Rain) ಸುರಿಯುತ್ತಿದೆ. ಮಳೆಯಿಂದ ಬಹಳಷ್ಟು ಹಾನಿಯಾಗಿದೆ. ಸಿಎಂ ನಗರ ಪ್ರದಕ್ಷಿಣೆ ವಿರುದ್ಧ ಕಿಡಿಕಾರಿದ ಸಿಎಂ, ಕೇವಲ ಫೋಟೋ ತೆಗೆಸಿಕೊಳ್ಳಲು ನಗರ ಪ್ರದಕ್ಷಿಣೆ ಮಾಡ್ಬೇಡಿ,  ಬೆಂಗಳೂರು ನಗರಾಭಿವೃದ್ಧಿ (Urban Development) ಖಾತೆಯನ್ನ ಸಚಿವರಿಗೆ (Minister) ಕೊಡದೆ ಸಿಎಂ ಬಳಿ ಇಟ್ಟುಕೊಂಡಿದ್ದಾರೆ. ಬೆಂಗಳೂರಿನ ಜನ ನೀರಲ್ಲಿ ಮುಳುಗಿ ಸಾಯ್ತಿದ್ದಾರೆ ಎಂದ್ರು ಸಿಎಂ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ರು. ಮಳೆ ಅನಾಹುತದ ಬಗ್ಗೆ ಹವಾಮಾನ ಇಲಾಖೆ (Department of Meteorology) ಮುನ್ಸೂಚನೆ ಇದ್ದರೂ ಸರ್ಕಾರ ಗಮನ ಹರಿಸಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: ಸಿಎಂ ಸಿಟಿ ರೌಂಡ್ಸ್ ಬಗ್ಗೆ ಕುಮಾರಸ್ವಾಮಿ ಕಿಡಿ; ಹವಾಮಾನ ಇಲಾಖೆ ಮುನ್ಸೂಚನೆ ಇದ್ದರೂ ಸರ್ಕಾರದಿಂದ ನಿರ್ಲಕ್ಷ್ಯ

ಮೇ 27ರಿಂದ SSLC ಪೂರಕ ಪರೀಕ್ಷೆ

ಎಸ್​ಎಸ್​ಎಲ್​ಸಿ ಪರೀಕ್ಷೆ (SSLC Exam)  ಫಲಿತಾಂಶ ಪ್ರಕಟವಾಗಿದ್ದು, ಈ ವರ್ಷ ಶೇ 85.63ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದಿದ್ದ 8.53 ಲಕ್ಷ ವಿದ್ಯಾರ್ಥಿಗಳ ಪೈಕಿ 7.38 ಲಕ್ಷ ವಿದ್ಯಾರ್ಥಿಗಳು (Student) ಪಾಸಾಗಿದ್ದಾರೆ. ಈ ಪೈಕಿ 145 ವಿದ್ಯಾರ್ಥಿಗಳು ಔಟ್​ ಆಫ್  ಅಂಕಗಳನ್ನು (Out Off Marks) ಪಡೆದಿದ್ದಾರೆ. ಫೇಲ್ ಆದ ವಿದ್ಯಾರ್ಥಿಗಳಿಗೆ ಮೇ 27ರಿಂದ ಜೂನ್ 4ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ.  ಬಳಿಕ ಪೂರಕ ಪರೀಕ್ಷೆಯ ಫಲಿತಾಂಶ  ಜೂನ್ 3ನೇ ವಾರದಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C Nagesh) ಹೇಳಿದರು.

ಸಿಧುಗೆ 1 ವರ್ಷ ಜೈಲು ಶಿಕ್ಷೆ

1988 ರ ಬೀದಿ ಕಾಳಗ ಪ್ರಕರಣದಲ್ಲಿ (1988 Road Rage Case) ಮಾಜಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧುಗೆ (Navjot Singh Sidhu) ಸುಪ್ರೀಂ ಕೋರ್ಟ್ (Supreme Court) ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಸಾವನ್ನಪ್ಪಿದ 34 ವರ್ಷಗಳ ಹಿಂದಿನ ರಸ್ತೆ ಆಕ್ರೋಶ ಪ್ರಕರಣದಲ್ಲಿ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ದೋಷಮುಕ್ತಗೊಳಿಸಿದ ಮೇ 2018 ರ ಆದೇಶವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಈ ಹಿಂದೆ ಅನುಮತಿ ನೀಡಿತ್ತು. ಈಗ ಕೋರ್ಟ್​​ ಆದೇಶದಂತೆ ಪಂಜಾಬ್ ಪೊಲೀಸರು ಸಿಧು ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ. ಈ ಹಿಂದೆ ಸಿಧುಗೆ 1000 ರೂಪಾಯಿ ದಂಡ ವಿಧಿಸಿ ಬಿಡುಗಡೆಗೊಳಿಸಲಾಗಿತ್ತು. ಇದೀಗ ಐಪಿಸಿ ಸೆಕ್ಷನ್ 323ರ ಅಡಿಯಲ್ಲಿ ಸಿಧುಗೆ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Navjot Singh Sidhu: ನವಜೋತ್ ಸಿಂಗ್ ಸಿಧುಗೆ ಬಿಗ್ ಶಾಕ್, ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ ಕೋರ್ಟ್

‘ಕೃಷ್ಣಜನ್ಮ ಭೂಮಿಯಲ್ಲಿನ ಮಸೀದಿ ತೆರವು ಮಾಡಿ’

ಕೃಷ್ಣ ಜನ್ಮಭೂಮಿ ಪ್ರಕರಣ (Krishna Janmabhoomi Case) ಸಂಬಂಧ ದೊಡ್ಡ ಬೆಳವಣಿಗೆ ಆಗಿದ್ದು, ಮಥುರಾದ ಸ್ಥಳೀಯ ನ್ಯಾಯಾಲಯವು (Mathura Court) ಗುರುವಾರ ಶಾಹಿ ಈದ್ಗಾವನ್ನು (Shahi Idgah) ತೆಗೆದುಹಾಕಲು ಒತ್ತಾಯಿಸಿದ ಮನವಿಯನ್ನು ಅಂಗೀಕರಿಸಿತು. ಶ್ರೀಕೃಷ್ಣನ ಜನ್ಮಭೂಮಿಯಾದ ಕೃಷ್ಣ ಜನ್ಮಭೂಮಿಯ ಭೂಮಿಯಲ್ಲಿ ನಿರ್ಮಿಸಲಾದ 17 ಶತಮಾನದ ಮಸೀದಿಯನ್ನು ತೆಗೆದುಹಾಕಬೇಕೆಂದು ಹಲವಾರು ಸಂಘಟನೆಗಳು ಒತ್ತಾಯಿಸುತ್ತಿವೆ. ಹಿಂದೂ ಪರ ವಕೀಲ ಹರಿಶಂಕರ್ ಜೈನ್, ಈ ವಿಷಯದ ಕುರಿತು ಅನೇಕ ಮನವಿಗಳಲ್ಲಿ ಒಂದನ್ನು ನ್ಯಾಯಾಲಯ ಸ್ವೀಕರಿಸಿದೆ ಎಂದು ಹೇಳಿದರು.

ರಮ್ಯಾಗೆ ಪ್ರಿಯಾಂಕಾ ಉಪೇಂದ್ರ ಸಾಥ್

ಕಿರುತೆರೆ ನಟಿ ಚೇತನಾ ರಾಜ್ (Chethana Raj) ಸಾವಿಗೆ ಸಂತಾಪ ಸೂಚಿಸಿರುವ ನಟಿ ರಮ್ಯಾ (Ramya) , ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಇದೆ ಎಂಬ ಬಾಂಬ್ ಸಿಡಿಸಿದ್ದಾರೆ.  ರಮ್ಯಾ ಹಾಕಿದ ಲಿಂಗ ತಾರತಮ್ಯ ಎಂಬ ಬಾಂಬ್ ಈಗ ಇಂಡಸ್ಟ್ರಿಯಲ್ಲಿ ಸ್ಫೋಟಿಸಿದ್ದು, ಸಾಕಷ್ಟು ಪರ ವಿರೋಧ ಚರ್ಚೆಗಳಾಗ್ತಿವೆ. ಬಣ್ಣದ ಲೋಕ ಚಿತ್ರರಂಗದಲ್ಲಿ (Film Industry) ಮೇಲ್ ಡಾಮಿನೆಟ್ ಇದೆ ಅನ್ನೋ ಮಾತು ತುಂಬಾ ದಿನಗಳಿಂದ‌ ಕೇಳಿ ಬರ್ತಿದೆ. ಹೀರೋಗಳಿಗೆ  ಇಲ್ಲದ  ಕಂಡಿಷನ್ಸ್ ಹೀರೋಯಿನ್​ಗಳಿಗ್ಯಾಕೆ ಅಂತ ಆಗಾಗ ಯಾರಾದ್ರು ಪ್ರಶ್ನೆ ಮಾಡ್ತಾರೆ. ಆದ್ರೆ ಆ ಪ್ರಶ್ನೆಗೆ ಉತ್ತರ ಸಿಕ್ಕದೆ ಕೇವಲ ಚರ್ಚೆಗಷ್ಟೇ ಸೀಮಿತವಾಗಿರುತ್ತೆ. ಅದೇ ರೀತಿಈ ಚಿತ್ರರಂಗದಲ್ಲಿರುವ ಲಿಂಗ ತಾರತಮ್ಯ, ಹಾಗೂ ಬಾಡಿ ಶೇಮಿಂಗ್ ಬಗ್ಗೆ ನಟಿ ರಾಜಕಾರಣಿ ರಮ್ಯಾ ಸಿಡಿದು ನಿಂತಿದ್ದಾರೆ. ಫ್ಯಾಟ್ ತೆಗೆಸಿ ಫಿಟ್ ಆಗೋಣ ಅಂತ ಹೋಗಿಜೀವವನ್ನೆ ಕಳೆದುಕೊಂಡ ಕಿರುತೆರೆ ನಟಿ ಚೇತನ್ ರಾಜ್ ಸಾವಿಗೆ ಸಂತಾಪ ಸೂಚಿಸಿ. ಚಿತ್ರರಂಗದಲ್ಲಿರುವ ಲಿಂಗ ತಾರತಮ್ಯ, ವೇತನ ತಾರತಮ್ಯ, ಬ್ಯೂಟಿ ಆಧರಿಸಿಪಾತ್ರಗಳ ನಿರ್ಧಾರ ಮಾಡುವ ಕೆಟ್ಟ ಸಂಪ್ರದಾಯದ ವಿರುದ್ದ ನಟಿ ರಮ್ಯಾ ಟ್ವೀಟ್ ಮಾಡುವ ಮೂಲಕ ಚಿತ್ರರಂಗದ ಅಸಮಾನತೆ ವಿರುದ್ದ ಸಮರ ಸಾರಿದ್ದಾರೆ.
Published by:Kavya V
First published: