Evening Digest: ಫಸ್ಟ್​​ನೈಟ್​ನಲ್ಲಿ ಹೆಂಡತಿಗಾಗಿ ಕಾದು ಕುಳಿತವನಿಗೆ ಶಾಕ್: ಹೆತ್ತವರು ಇರುವಾಗ ಮಕ್ಕಳಿಗೆ ಆಸ್ತಿ ಹಕ್ಕಿಲ್ಲ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಫಸ್ಟ್ ನೈಟ್ ನಲ್ಲಿ ಹೆಂಡತಿಗಾಗಿ ಕಾದು ಕುಳಿತವನಿಗೆ ಶಾಕ್ : ಮದುವೆ (Marriage) ಎನ್ನುವುದು ಪ್ರತಿಯೊಬ್ಬರ ಬಾಳಲ್ಲೂ ಸುಂದರ ಅನುಭವ (Experience) ನೀಡುವಂತದ್ದು. ಮದುವೆ ಅಂದರೆ ಎರಡು ದೇಹಗಳಷ್ಟೇ (Body) ಅಲ್ಲ, ಎರಡು ಆತ್ಮಗಳ (Soul) ಮಿಲನ, ಎರಡು ಕುಟುಂಬಗಳ (Family) ಸಮ್ಮಿಲನ ಅಂತ ಹಿರಿಯರು ಹೇಳ್ತಾರೆ. ಪ್ರತಿಯೊಬ್ಬರಿಗೂ ತಮ್ಮ ಮದುವೆ ಹೀಗೆ ಆಗಬೇಕು, ಹಾಗೆ ಆಗಬೇಕು, ಅಲ್ಲಿಗೆ ಹನಿಮೂನ್ಗೆ (Honeymoon) ಹೋಗಬೇಕು, ನಮ್ಮ ಪ್ರಥಮ ರಾತ್ರಿ (First Night) ಇಷ್ಟು ರೋಮ್ಯಾಂಟಿಕ್ ಆಗಿರಬೇಕು ಅಂತ ಸಾವಿರ ಕನಸು (Dreams) ಕಂಡಿರುತ್ತಾರೆ. ಈ ಯುವಕ ಕೂಡ ಮದುವೆ ಬಗ್ಗೆ ನೂರಾರು ಕನಸು ಕಂಡಿದ್ದ. ಮದುವೆ ಆಗಿ, ಪ್ರಥಮ ರಾತ್ರಿಯಲ್ಲಿ ಬೆಡ್ ರೂಂನಲ್ಲಿ (Bed Room) ಕುಳಿತು, ಹೆಂಡತಿಗಾಗಿ ಕಾದು ಕುಳಿತಿದ್ದ. ಆದ್ರೆ ಹಾಲಿನ ಲೋಟ ಹಿಡಿದು ಬಂದ ಹೆಂಡತಿ, ಆತನಿಗೆ ಬಿಗ್ ಶಾಕ್ (Big Shock) ಕೊಟ್ಟುಬಿಟ್ಟಳು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:First Nightನಲ್ಲಿ ಹೆಂಡತಿಗಾಗಿ ಕಾದು ಕುಳಿತವನಿಗೆ ಶಾಕ್! ಹಾಲಿನ ಲೋಟ ಹಿಡಿದು ಬಂದ ಹೆಂಡ್ತಿ ಹಿಂಗಾ ಮಾಡೋದು?

ಹೆತ್ತವರು ಇರುವಾಗ ಮಕ್ಕಳಿಗೆ ಆಸ್ತಿ ಹಕ್ಕಿಲ್ಲ
ಬಾಂಬೆ ಹೈಕೋರ್ಟ್ (Bombay High Court), ಕೌಟುಂಬಿಕ ಆಸ್ತಿಗೆ (Family Property) ಸಂಬಂಧಿಸಿದಂತೆ ಮಹತ್ವದ ತೀರ್ಪು (Verdict) ನೀಡಿದೆ. ತಂದೆ-ತಾಯಿ ಬದುಕಿರುವವರೆಗೆ ಅವರ ಮಗ ಆಸ್ತಿ ಹಕ್ಕು (Property Rights) ಪಡೆಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಹೈಕೋರ್ಟ್ನಲ್ಲಿ ವ್ಯಕ್ತಿಯೊಬ್ಬರು ತನ್ನ ತಾಯಿ ಎರಡು ಫ್ಲಾಟ್ಗಳನ್ನು ಮಾರಾಟ (Sell) ಮಾಡುವುದನ್ನು ತಡೆಯಬೇಕೆಂದು ಅರ್ಜಿ ಸಲ್ಲಿಸಿದ್ದರು. ತಾಯಿ (Mother) ಎರಡು ಫ್ಲಾಟ್ ಗಳನ್ನು ಮಾರಾಟ ಮಾಡದಂತೆ ತಡೆಯುವಂತೆ ಕೋರಿದ್ದರು. ಈ ವ್ಯಕ್ತಿಯ ತಂದೆ ಕಳೆದ ಹಲವು ವರ್ಷಗಳಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಅಂದರೆ ವೈದ್ಯಕೀಯ ಪರಿಭಾಷೆಯ ಭಾಷೆಯಲ್ಲಿ ಹೇಳುವುದಾದರೆ ಒಂದು ರೀತಿಯಲ್ಲಿ ಕೋಮಾದಲ್ಲಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಹೈಕೋರ್ಟ್ ಕಳೆದ ವರ್ಷ ಅವರ ತಾಯಿಗೆ ಕುಟುಂಬವನ್ನು ನಡೆಸಲು ಕಾನೂನಾತ್ಮಕ ಹಕ್ಕನ್ನು ನೀಡಿತ್ತು.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Property Rights: ತಂದೆ, ತಾಯಿ ಬದುಕಿರುವವರೆಗೂ ಮಕ್ಕಳು ಆಸ್ತಿ ಹಕ್ಕು ಪಡೆಯಲು ಸಾಧ್ಯವಿಲ್ಲ: ಹೈಕೋರ್ಟ್

ಪ್ರಿಂಟ್ ಮಾಡಲು ಪೇಪರ್ ಇಲ್ಲ ಎಂದು ಪರೀಕ್ಷೆಗಳೇ ರದ್ದು
ಶ್ರೀಲಂಕಾದಲ್ಲಿ ಮುದ್ರಣ ಕಾಗದದ(Printing Paper) ಕೊರತೆಯಿಂದಾಗಿ ಲಕ್ಷಾಂತರ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ(exams cancelled). 1948 ರ ಸ್ವಾತಂತ್ರ್ಯದ ನಂತರ ಶ್ರೀಲಂಕಾ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಕಾರಣ, ಸೋಮವಾರದಿಂದ ಒಂದು ವಾರದ ಅವಧಿಯ ಪರೀಕ್ಷೆಗಳನ್ನು ಕಾಗದದ ಕೊರತೆಯಿಂದಾಗಿ ಅನಿರ್ದಿಷ್ಟವಾಗಿ ಮುಂದೂಡಲಾಗಿದೆ ಎಂದು ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಿಂಟರ್ಗಳು, ಕಾಗದ ಮತ್ತು ಶಾಯಿಯನ್ನು ಆಮದು ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಶಾಲಾ ಮುಖ್ಯಸ್ಥರು ಪರೀಕ್ಷೆಗಳನ್ನು ನಡೆಸಲು ಆಗುತ್ತಿಲ್ಲ ಎಂದು ಪಶ್ಚಿಮ ಪ್ರಾಂತ್ಯದ ಶಿಕ್ಷಣ ಇಲಾಖೆ ತಿಳಿಸಿದೆ. ಇದರಿಂದ ದೇಶದ 4.5 ಮಿಲಿಯನ್ ವಿದ್ಯಾರ್ಥಿಗಳಲ್ಲಿ ಮೂರನೇ ಎರಡರಷ್ಟು ಪರೀಕ್ಷೆಗಳು ಮುಂದೂಡಲ್ಪಟ್ಟಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಗವದ್ಗೀತೆ, ಕುರಾನ್, ಬೈಬಲ್​ಗೆ ವಿರೋವಿಲ್ಲ-ಸಿದ್ದು
ಶಾಲೆಯಲ್ಲಿ ಭಗವದ್ಗೀತೆ ಕಲಿಸುವುದನ್ನು ಸ್ವಾಗತಿಸ್ತೇನೆ. ನೈತಿಕ ವಿಚಾರ ಕಲಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಬೇಕು. ಭಗವದ್ಗೀತೆ, ಕುರಾನ್, ಬೈಬಲ್ ಯಾವುದನ್ನೂ ವಿರೋಧಿಸಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಮಗೂ ಮನೆಯಲ್ಲಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಹೇಳಿಕೊಟ್ಟಿದ್ದಾರೆ. ನಾವೇನು ಹಿಂದೂಗಳಲ್ಲವೆ. ಹಳ್ಳಿಗಳಲ್ಲಿ ನಾಟಕಗಳಲ್ಲಿ ಇವುಗಳನ್ನು ಹಾಡೋದು ನೋಡಿದ್ದೇವೆ. ನಾವು ಭಗವದ್ಗೀತೆ, ಖುರಾನ್, ಬೈಬಲ್ ಇವು ಯಾವುದಕ್ಕೂ ವಿರೋಧ ಮಾಡಲ್ಲ. ನಮ್ಮದು ಬಹು ಸಂಸ್ಕೃತಿಯ ದೇಶ, ಶಿಕ್ಷಣದಲ್ಲಿ ಕಲಿಸುವ ವಿಷಯ ಸಂವಿಧಾನ ಬದ್ಧವಾಗಿರಬೇಕು ಅಷ್ಟೆ. ಸಹಿಷ್ಣುತೆ ಮತ್ತು ಸಹಬಾಳ್ವೆಯಲ್ಲಿ ನಮಗೆ ನಂಬಿಕೆ ಇದೆ ಎಂದರು.

ಅಪ್ಪು ಬ್ಯಾನರ್ ಕಿತ್ತು ಹಾಕಿದ್ದಕ್ಕೆ ಅಭಿಮಾನಿಗಳ ಆಕ್ರೋಶ
ಹುವಿನಾಳ ಗ್ರಾಮದಲ್ಲಿ ನಟ ಪುನೀತ್ ರಾಜ್ಕುಮಾರ್ (Puneeth Rajkumar) ಬ್ಯಾನರ್ ಹಾಗೂ ಕನ್ನಡ ಬಾವುಟ ಕಿತ್ತು ಹಾಕಿದ್ದಕ್ಕೆ ಅಭಿಮಾನಿಗಳು ರೊಚ್ಚಿಗೆದಿದ್ದಾರೆ. ಕೊಪ್ಪಳ ತಾಲೂಕಿನ ಹುವಿನಾಳ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಬ್ಯಾನರ್ (Banner) ಕಿತ್ತುಕೊಂಡು ಹೋಗಿ ಕೆರೆಯಲ್ಲಿ (Lake) ಬಿಸಾಡಿದ್ದಾರೆ. ಇದಕ್ಕೆ ಅಪ್ಪು ಅಭಿಮಾನಿಗಳ (Fans) ತೀವ್ರ ಆಕ್ರೋಶ (Outrage) ಹೊರಹಾಕಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರ ಈ ಕೆಲಸ ಮಾಡಿದ್ದು, ಆತನ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಹೂವಿನಾಳ ಗ್ರಾಮದಲ್ಲಿ ಟಯರ್ಗೆ ಬೆಂಕಿ ಹಚ್ಚಿ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ರು. ಪುನೀತ್ ರಾಜ್ ಕುಮಾರ್ ಬ್ಯಾನರ್ ಕಿತ್ತು ಹಾಕಿದ್ದ ಗ್ರಾಮ ಪಂಚಾಯತ್ ಸದಸ್ಯ ಪತ್ರಯ್ಯ ಹಾಗೂ ಶಾಂತಯ್ಯರನ್ನು ಪೊಲೀಸರು ಬಂಧಿಸಿದ್ದಾರೆ.
Published by:Kavya V
First published: