Evening Digest: ಇನ್ಮುಂದೆ ಬೆಂಗಳೂರಲ್ಲಿ 24/7 ಹೋಟೆಲ್​​​ಗಳು ಓಪನ್: ಗುಜರಾತ್​​ಗೆ ಬಂದು ಓದಿ ಎಂದ ಮೋದಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಇನ್ಮುಂದೆ ಬೆಂಗಳೂರಲ್ಲಿ 24/7 ಹೋಟೆಲ್​​​ಗಳು ಓಪನ್: ರಾಜಧಾನಿ ಬೆಂಗಳೂರಲ್ಲಿ (Bengaluru) ಇನ್ಮುಂದೆ 24 ಗಂಟೆ ಹೋಟೆಲ್ (Hotel)​, ಬೇಕರಿ, ಸ್ವೀಟ್​ ಸ್ಟಾಲ್​ಗಳು ಹಾಗೂ ಐಸ್​ ಕ್ರೀಮ್​ ಶಾಪ್​ಗಳು (Ice Cream Shop) ತೆರೆದಿರಲಿವೆ. ಈ ಸಂಬಂಧ ಸರ್ಕಾರ ಅಧಿಸೂಚನೆ (Government Notification ) ಹೊರಡಿಸಿದೆ. ಇದೇ ಮೊದಲ ಬಾರಿಗೆ ಹೋಟೆಲ್​ಗಳು ರಾತ್ರಿ ಪೂರ್ತಿ ತೆರೆಯಲು ಅವಕಾಶ ನೀಡಲಾಗಿದೆ. ಸಿಲಿಕಾನ್​ ಸಿಟಿ ಯಾವಾಗಲೂ ಜನ ಜನಜಂಗುಳಿಯಿಂದ ಕೂಡಿರುತ್ತೆ. ರಾತ್ರಿ ಪಾಳಿಯಲ್ಲಿ ಸಾವಿರಾರು ಜನರು ಕೆಲಸ ಮಾಡ್ತಿದ್ದಾರೆ. ರಾತ್ರಿ ಪಾಳಿ ಕೆಲಸ (Night Shift Work) ಮಾಡುವವರ ಊಟ, ತಿಂಡಿಗೆ ಅನುಕೂಲವಾಗಲೆಂದೆ 24 ಗಂಟೆ ಹೋಟೆಲ್​ ತೆರೆಯಲು ಅನುಮತಿ ನೀಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸರ್ಕಾರದ ಆದೇಶವನ್ನು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ಸ್ವಾಗತಿಸಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Bengaluru Hotels: ಇನ್ಮುಂದೆ ಬೆಂಗಳೂರಲ್ಲಿ 24/7 ಹೋಟೆಲ್​ಗಳು, ಬೇಕರಿಗಳು ಓಪನ್; ರಾತ್ರಿ ಪಾಳಿ ಕೆಲಸಗಾರರು ಖುಷ್

CM ಬೊಮ್ಮಾಯಿ ಭಾಷಣಕ್ಕೆ ಅಡ್ಡಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರ ಭಾಷಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆ ಸಂಶೋಧನ ವಿದ್ಯಾರ್ಥಿಗೆ ಶಿಕ್ಷೆ ನೀಡಲು ಹಂಪಿ ಕನ್ನಡ ವಿಶ್ವವಿದ್ಯಾಲಯ (Hampi  Kannada University) ಮುಂದಾಗಿದೆ. ಸಿಎಂ ಭಾಷಣಕ್ಕೆ ಅಡ್ಡಿಪಡಿಸದ ಹಿನ್ನೆಲೆ ಸಂಶೋಧನ ವಿದ್ಯಾರ್ಥಿಯ ನೋಂದಣಿ ರದ್ದುಗೊಳಿಸೋದಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ ನೋಟಿಸ್ (Notice)​ ಜಾರಿಗೊಳಿಸಿದೆ. ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ವಿದ್ಯಾರ್ಥಿ (Student) ಎ.ಕೆ ದೊಡ್ಡಬಸಪ್ಪ ಸಿಎಂ ಬೊಮ್ಮಾಯಿ ಭಾಷಣಕ್ಕೆ ಅಡ್ಡಿ ಪಡಿಸಿದ ಆರೋಪಕ್ಕೆ ತುತ್ತಾಗಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯ ಸದರಿ ವಿದ್ಯಾರ್ಥಿಯ ನೋಂದಣಿ ರದ್ದುಗೊಳಿಸುವ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ.

ಗುಜರಾತ್​ಗೆ ಬಂದು ಓದಿ ಎಂದ ಮೋದಿ

ಗಾಂಧಿನಗರದಲ್ಲಿರುವ ವಿದ್ಯಾ ಸಮೀಕ್ಷಾ ಕೇಂದ್ರವು (Vidya Samiksha Kendra) ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳನ್ನು ತರಬಹುದು. ಹೀಗಾಗಿ ಇಲ್ಲಿ ಬಂದು ಶಿಕ್ಷಣ ಪಡೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಕರೆ ನೀಡಿದರು. ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ದಿಯೋದರ್‌ನಲ್ಲಿರುವ ಬನಾಸ್ ಡೈರಿಯಲ್ಲಿ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ವಿದ್ಯಾ ಸಮೀಕ್ಷಾ ಕೇಂದ್ರದಂತಹ ಆಧುನಿಕ ವ್ಯವಸ್ಥೆಯಿಂದ ದೇಶದ ಮಕ್ಕಳು ಪ್ರಯೋಜನ ಪಡೆಯುವ ಮೂಲಕ ಭಾರತಕ್ಕೆ ಉಜ್ವಲ ಭವಿಷ್ಯವನ್ನು ನೀಡಬೇಕು ಎಂದರು.  ಎಲ್ಲಾ ಕ್ಷೇತ್ರಗಳಲ್ಲಿ ಗುಜರಾತ್‌ನ ಯಶಸ್ಸು ಮತ್ತು ಅಭಿವೃದ್ಧಿಯನ್ನು ನೋಡಲು ತುಂಬಾ ಹೆಮ್ಮೆ ಎನಿಸುತ್ತೆ. ನಿನ್ನೆ ಗಾಂಧಿನಗರದ ವಿದ್ಯಾ ಸಮೀಕ್ಷಾ ಕೇಂದ್ರದಲ್ಲಿ ನನಗೆ ಈ ಅನುಭವವಾಯಿತು. ನಮ್ಮ ಸರಕಾರಿ ಪ್ರಾಥಮಿಕ ಶಾಲೆಗೆ ಇಂತಹ ಬೃಹತ್ ತಂತ್ರಜ್ಞಾನ ಬಳಕೆಯಾಗಿರುವುದು ವಿಶ್ವವೇ ವಿಸ್ಮಯ ಪಡುತ್ತೆ. ನಾನು ಈ ಕ್ಷೇತ್ರದೊಂದಿಗೆ ಮೊದಲಿನಿಂದಲೂ ಸಂಬಂಧ ಹೊಂದಿದ್ದೇನೆ, ಆದರೆ ನಿನ್ನೆ ನಾನು ವಿಶೇಷವಾಗಿ ಗಾಂಧಿನಗರಕ್ಕೆ ನೋಡಲು ಹೋಗಿದ್ದೆ ಎಂದು ಹೇಳಿದರು.

ಖಡಕ್ ಆದೇಶ ಹೊರಡಿಸಿದ ಸಿಎಂ ಯೋಗಿ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ಅವರು ಕಾನೂನು ಮತ್ತು ಸುವ್ಯವಸ್ಥೆ ಪರಿಶೀಲನಾ ಸಭೆ ನಡೆಸಿದರು. ದೆಹಲಿಯ ಜಹಾಂಗೀರ್‌ಪುರಿ ಪ್ರದೇಶದಲ್ಲಿ ಇತ್ತೀಚಿನ (Clashes in Delhi's Jahangirpuri area) ಘರ್ಷಣೆಗಳನ್ನು ಪರಿಗಣಿಸಿ ಮಹತ್ವದ ನಿರ್ದೇಶನಗಳನ್ನು ನೀಡಿದ್ದಾರೆ. ಈದ್ ಮತ್ತು ಅಕ್ಷಯ ತೃತೀಯ (Eid and Akshay Tritiy) ಹಬ್ಬಗಳು ಮುಂದಿನ ತಿಂಗಳ ಆರಂಭದಲ್ಲಿ ಒಂದೇ ದಿನಾಂಕದಂದು ಬೀಳುವ ಸಾಧ್ಯತೆಯಿರುವುದರಿಂದ ಈ ನಿರ್ದೇಶನಗಳನ್ನು ನೀಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.  ಸರಿಯಾದ ಅನುಮತಿಯಿಲ್ಲದೆ ಯಾವುದೇ ಧಾರ್ಮಿಕ ಮೆರವಣಿಗೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಅನುಮತಿ ನೀಡುವ ಮೊದಲು ಎಲ್ಲಾ ಸಂಘಟಕರು ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಭರವಸೆ ನೀಡುವ ಅಫಿಡವಿಟ್ ಅನ್ನು ಸಲ್ಲಿಸಬೇಕಾಗುತ್ತದೆ. ಧಾರ್ಮಿಕ ಸಾಂಪ್ರದಾಯಿಕ ಹಬ್ಬಗಳಿಗೆ ಮಾತ್ರ ಅನುಮತಿ ನೀಡಲಾಗುವುದು ಮತ್ತು ಹೊಸ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಅವರ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದ್ದಾರೆ.

ಜೋಗಿ ಪ್ರೇಮ್​-ಧ್ರುವ ಸರ್ಜಾ ಸಿನಿಮಾಗೆ ಮುಹೂರ್ತ ಫಿಕ್ಸ್​

ಧ್ರುವ ಸರ್ಜಾ (Dhruva Sarja).. ಕಡಿಮೆ ಸಮಯದಲ್ಲಿ ಹೆಚ್ಚು ಹೆಸರು ಮಾಡಿದ ಯುವ ನಾಯಕ ನಟ. ಬ್ಯಾಗ್ರೌಂಡ್​ ಇದ್ದರೂ ಬಳಸಿಕೊಳ್ಳದೇ ಚಿತ್ರರಂಗಕ್ಕೆ ಕಾಲಿಟ್ಟ ಧ್ರುವ ಸರ್ಜಾ, ‘ಅದ್ಧೂರಿ’ (Addhuri) ಮೂಲಕ ಸ್ಯಾಂಡಲ್​ವುಡ್(Sandalwood)​ನಲ್ಲಿ ನೆಲೆ ಕಂಡುಕೊಂಡರು. ಇದಾದ ಬಳಿಕ ‘ಬಹದ್ದೂರ್’​(Bahaddur), ನಂತರ ‘ಭರ್ಜರಿ’ (Bharjari), ಕೊನೆಯದಾಗಿ ‘ಪೊಗರು’(Pogaru) ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಡೈಲಾಗ್​ ಡೆಲಿವರಿ, ಮ್ಯಾನರಿಸಂ ಎಲ್ಲವೂ ಫ್ಯಾನ್ಸ್​ಗೆ ಸಖತ್​ ಇಷ್ಟ. ಸದ್ಯ ಮಾರ್ಟಿನ್(Martin)​ ಸಿನಿಮಾದ ಶೂಟಿಂಗ್​ನಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ತಮ್ಮ ಮುಂದಿನ ಸಿನಿಮಾಗೆ ಸ್ಯಾಂಡಲ್​ವುಡ್(Sandalwood) ಜೋಗಿ ಪ್ರೇಮ್​ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ ಅನ್ನುವ ಎಲ್ಲರಿಗೂ ಗೊತ್ತಿದೆ. ಇದೀಗ ಧ್ರುವ ಹಾಗೂ ಪ್ರೇಮ್​ ಕಾಂಬಿನೇಷನ್​ ಸಿನಿಮಾಗೆ ಮುಹೂರ್ತ ಫಿಕ್ಸ್​ ಆಗಿದೆ.
Published by:Kavya V
First published: