Evening Digest: ಬೆಂಗಳೂರಲ್ಲಿ ಶಾಲಾ ಬಾಲಕಿಯರ ಸ್ಟ್ರೀಟ್ ಫೈಟ್: ರಾಜೀವ್ ಗಾಂಧಿ ಹತ್ಯೆ ಅಪರಾಧಿ ಬಿಡುಗಡೆ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

 • Share this:
  ಬೆಂಗಳೂರಲ್ಲಿ ಶಾಲಾ ಬಾಲಕಿಯರ ಸ್ಟ್ರೀಟ್​ ಫೈಟ್ : ನಗರದ ಪ್ರತಿಷ್ಠಿತ ಶಾಲೆಯೊಂದರ (School) ವಿದ್ಯಾರ್ಥಿಗಳು (Student) ಶಾಲೆ ಹೊರಗೆ ಕಾದಾಟ ನಡೆಸಿದ್ದು, ಈ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಶಾಲಾ ಸಮವಸ್ತ್ರದಲ್ಲಿಯೇ ವಿದ್ಯಾರ್ಥಿಗಳ ಎರಡು ಗುಂಪು ಶಾಲೆಯ ಆವರಣದಲ್ಲಿ ಪರಸ್ಪರ ಹಿಂಸಾತ್ಮಕವಾಗಿ ಹಲ್ಲೆ ಹಾಗೂ ನಿಂದನೆ ಮಾಡಿಕೊಂಡಿರುವುದು ಕಂಡು ಬಂದಿದೆ.  ಶಾಲೆಯ ಹಲವಾರು ವಿದ್ಯಾರ್ಥಿನಿಯರು ಹೊಡೆದಾಡಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವಿದ್ಯಾರ್ಥಿನಿಯರು ಪರಸ್ಪರ ಕೂದಲನ್ನು ಎಳೆದಾಡಿಕೊಂಡು ಮತ್ತು ಹಿಂಸಾತ್ಮಕವಾಗಿ ತಳ್ಳಾಡಿಕೊಂಡಿರುವುದು ಕಂಡುಬಂದಿದೆ. ಈ ದೃಶ್ಯ ಕ್ಯಾಮರಾದಲ್ಲಿ (Camera) ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.

  ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: Student Fight: ಬೆಂಗಳೂರಲ್ಲಿ ಶಾಲಾ ಬಾಲಕಿಯರ ಬಿಗ್ ಫೈಟ್; ಗ್ಯಾಂಗ್ ವಾರ್ ವಿಡಿಯೋ ವೈರಲ್

  ರಾಜೀವ್ ಗಾಂಧಿ ಹತ್ಯೆ ಅಪರಾಧಿ ಬಿಡುಗಡೆ

  ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ (Rajiv Gandhi Assassination) ಪ್ರಕರಣದ ಅಪರಾಧಿ ಎಜಿ ಪೇರರಿವಾಳನ್ (50) ಅವರನ್ನು (Perarivalan) ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 31 ನೇ ಪುಣ್ಯತಿಥಿಗೆ ಕೇವಲ ಮೂರು ದಿನಗಳು ಬಾಕಿ ಉಳಿದಿವೆ. ಪೇರರಿವಾಳನ್ ಅವರ ತಾಯಿ ಅರ್ಪುತಮ್ ಅಮ್ಮಾಳ್ ಮತ್ತು ಇನ್ನೂ ಅನೇಕರು ಮೂರು ದಶಕಗಳ ಹೋರಾಟವನ್ನು ಇಂದಿನವರೆಗೂ ಮುನ್ನಡೆಸಿದ್ದು ಅಂತೂ ಕೋರ್ಟ್ (Supreme Court) ಪೇರರಿವಾಳನ್ ಅವರ ಬಿಡುಗಡೆಗೆ ಆದೇಶ ನೀಡಿದೆ.

  ಬೆತ್ತಲೆ ಫೋಟೋ ಕಳಿಸಿ ಕಿರುಕುಳ!

  ಈಗೆಲ್ಲ ಕೊರೋನ (Corona) ಬಂದ ಮೇಲೆ ವರ್ಕ್ ಫ್ರಂ ಹೋಂ (Work from Home) ಸೌಲಭ್ಯಗಳು ಹೆಚ್ಚಾಯ್ತು. ಆಗ ಆಫೀಸ್‌ ಮೀಟಿಂಗ್ (Office Meeting) ಇತ್ಯಾದಿಗಳು ಆನ್‌ಲೈನ್‌ನಲ್ಲೆ (Online) ಹೆಚ್ಚು ಹೆಚ್ಚು ನಡೆದವು. ಮುಖ್ಯವಾಗಿ ಗೂಗಲ್ ಮೀಟ್ (Google Meet), ಝೂಮ್ (Zoom) ಇತ್ಯಾದಿ ಆ್ಯಪ್‌ಗಳಲ್ಲಿ (App) ಆನ್‌ ಲೈನ್ ಮೀಟಿಂಗ್ ನಡೆಯೋದು ಕಾಮನ್ ಆಯ್ತು. ಆದರೆ ಇದನ್ನೂ ಕಾಮುಕರು ತಮ್ಮ ಚಪಲ ತೀರಿಸಿಕೊಳ್ಳಲು ಬಳಸಿಕೊಂಡ್ರು ಅಂದ್ರೆ ನಂಬುತ್ತೀರಾ? ನಂಬಲೇ ಬೇಕು, ಯಾಕೆಂದ್ರೆ ಮೈಸೂರಿನಲ್ಲಿ (Mysuru) ಇಂಥದ್ದೊಂದು ಪ್ರಕರಣ (Case) ಬೆಳಕಿಗೆ ಬಂದಿದೆ. ಕಾಮುಕನೊಬ್ಬ ಆನ್‌ಲೈನ್‌ ಮೀಟಿಂಗ್‌ನಲ್ಲಿ ಯುವತಿಯರಿಗೆ (Ladies) ಗಾಳ ಹಾಕಿ, ಬಳಿಕ ಬೆತ್ತಲೆ ಫೋಟೋ (Photos) ಕಳಿಸಿ ಕಿರುಕುಳ ಕೊಡುತ್ತಿದ್ದನಂತೆ. ಇದೀಗ ಆ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

  ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Harassment: ಆನ್‌ಲೈನ್ ಮೀಟಿಂಗ್‌ನಲ್ಲೇ ಗಾಳ, ಬೆತ್ತಲೆ ಫೋಟೋ ಕಳಿಸಿ ಕಿರುಕುಳ! ಕೊನೆಗೂ ಖಾಕಿ ಬಲೆಗೆ ಬಿದ್ದ ಕಾಮುಕ

  6.5 ವರ್ಷದ ಬಳಿಕ ಇಂದ್ರಾಣಿಗೆ ಜಾಮೀನು

  ತನ್ನ ಮಗಳು ಶೀನಾ ಬೋರಾ ಪ್ರಕರಣದಲ್ಲಿ (Sheena Bora Case) ಜೈಲು ಪಾಲಾಗಿರುವ ಮಾಜಿ ಮಾಧ್ಯಮ ಕಾರ್ಯನಿರ್ವಾಹಕಿ ಇಂದ್ರಾಣಿ ಮುಖರ್ಜಿ (Indrani Mukerjea) ಜಾಮೀನಿನ (Bail) ಮೇಲೆ ಬಿಡುಗಡೆಯಾಗಲಿದ್ದಾರೆ. ನಾವು ಇಂದ್ರಾಣಿ ಮುಖರ್ಜಿ ಅವರಿಗೆ ಜಾಮೀನು ನೀಡುತ್ತಿದ್ದೇವೆ. 6.5 ವರ್ಷಗಳ ದೀರ್ಘ ಕಾಲ ಅವರು ಜೈಲಿನಲ್ಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪು ನೀಡಿದೆ. ಇಂದ್ರಾಣಿ ಮುಖರ್ಜಿಯವರು 2012 ರಲ್ಲಿ 25 ವರ್ಷದ ಶೀನಾ ಬೋರಾ ಅವರ ಕೊಲೆಯಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ಈ ಕೊಲೆ ಕೇಸ್​ ಅನೇಕ ತಿರುವುಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. 2015 ರಲ್ಲಿ ಆಕೆಯ ಚಾಲಕ ಶ್ಯಾಮ್ವರ್ ರೈ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಅವರ ಸಹಾಯದಿಂದ ಮೊದಲ ಮದುವೆಯ ಮಗಳು ಶೀನಾ ಬೋರಾಳನ್ನು ಕೊಲೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿತ್ತು.

  ಲಿಂಗ ತಾರತಮ್ಯದ ವಿರುದ್ದ ರಮ್ಯಾ ಗರಂ

  ಸಿನೆಮಾ ರಂಗದಲ್ಲಿನ ಲಿಂಗ ತಾರತಮ್ಯದ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ನಟಿ, ಇಲ್ಲಿ ನಟರಿಗೆ ಇರುವ ಒಂದು ಪ್ರಾಮುಖ್ಯತೆ ನಟಿಯರಿಗೆ ಕೊಡುವುದಿಲ್ಲ ಎನ್ನುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.   ಇನ್ನು ಈ ಕುರಿತು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಬರೆದುಕೊಂಡಿರುವ ನಟಿ ರಮ್ಯಾ, ಸಿನಿಮಾರಂಗ ಹೇಗಿದೆ? ಇಲ್ಲಿ ನಟಿಯರನ್ನು ಯಾವ ರೀತಿ ಅಳೆಯಲಾಗುತ್ತೆ? ಎಂಬ ವಿಚಾರಗಳ ಬಗ್ಗೆ ಮಾತನಾಡಿದ್ದು, ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ ಯುವನಟಿ ಚೇತನಾ ರಾಜ್ (22) ನಿಧನರಾಗಿದ್ದು ನೋವಿನ ಸಂಗತಿ ಎಂದಿದ್ದಾರೆ. ಪುರುಷನಾದವನು ಡೊಳ್ಳುಹೊಟ್ಟೆ ಇಟ್ಟುಕೊಂಡು, ತಲೆಕೂದಲು ಉದುರಿ ಹೋಗಿ ವಿಗ್ ಹಾಕಿಕೊಂಡರೂ ಹೀರೋ ಅಂತ ಆತನನ್ನ ಅಟ್ಟಕ್ಕೆ ಏರಿಸಲಾಗುತ್ತದೆ. ಮುಖದಲ್ಲಿ ಒಂದೊಂದು ಕೆನ್ನೆಯೂ 5 ಕೆಜಿ ಇದ್ದರೂ ಸಮಸ್ಯೆಯಿರುವುದಿಲ್ಲ. ಅಲ್ಲದೇ, 65 ವರ್ಷವಾದರೂ ಅವರನ್ನು ಹೀರೋ ಎಂದು ಹೇಳುತ್ತಾರೆ.
  Published by:Kavya V
  First published: