Evening Digest: ತಿರುಪತಿ ಸಾಮಾನ್ಯ ದರ್ಶನ ಮತ್ತಷ್ಟು ಸರಾಗ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರ ಸಾವು: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ತಿರುಪತಿ ಸಾಮಾನ್ಯ ದರ್ಶನ ಮತ್ತಷ್ಟು ಸರಾಗ : ಕಳೆದೊಂದು ವಾರದಿಂದ ತಿರುಮಲದಲ್ಲಿ ಭಕ್ತರ ದಂಡೇ ಇತ್ತು. ತಿಮ್ಮಪ್ಪನ ದರ್ಶನಕ್ಕೆ ಎರಡ್ಮೂರು ದಿನ ಬೇಕಾಗುವುದರಿಂದ ಭಕ್ತರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಶುಭ ಸುದ್ದಿ ನೀಡಿದೆ. ಭಕ್ತ ಸಮೂಹಕ್ಕೆ ಅನುಕೂಲವಾಗುವಂತೆ ತಿರುಮಲದಲ್ಲಿ ಸಕಲ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಟಿಟಿಡಿ ಹೆಚ್ಚುವರಿ ಇವಿ ಎವಿ ಧರ್ಮರೆಡ್ಡಿ ತಿಳಿಸಿದ್ದಾರೆ. ಶ್ರೀಗಳ ದರ್ಶನಕ್ಕೆ ಸಾಮಾನ್ಯ ಭಕ್ತರು ಯಾವುದೇ ಸಂಕೋಚವಿಲ್ಲದೆ ತಿರುಮಲ ಯಾತ್ರೆಗೆ ಬರಬಹುದು ಎಂದು ಸ್ಪಷ್ಟಪಡಿಸಿದರು. ಶ್ರೀವಾರಿ ಸರ್ವದರ್ಶನಕ್ಕೆ ಸುಮಾರು 7 ರಿಂದ 8 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ:TTD Update: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್: ಇನ್ಮುಂದೆ ಸಾಮಾನ್ಯ ದರ್ಶನ ಮತ್ತಷ್ಟು ಸರಾಗ

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರ ಸಾವು
ಪ್ರವಾಸದ (Trip) ವೇಳೆ ಈ ಸೆಲ್ಫಿ (Selfie) ಹುಚ್ಚಾಟ ಅನೇಕರನ್ನು ಬಲಿ ಪಡೆದಿದೆ. ಅಪಾಯ ಎಂದು ಗೊತ್ತಿದ್ರು ಅನೇಕರು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿದ್ದಾರೆ. ಇಂತಹದ್ದೆ ಘಟನೆಯೊಂದು ಮಲ್ಪೆ ಬೀಚ್ (Malpe Beach) ಸಮೀಪ ನಡೆದಿದೆ. ಸೈಂಟ್ ಮೇರಿಸ್ (Saint Marys) ದ್ವೀಪದಲ್ಲಿ ಸೆಲ್ಫಿ ತೆಗೆಯಲು ಹೋಗಿ ಯುವಕರಿಬ್ಬರು ನೀರುಪಾಲಾಗಿದ್ದಾರೆ. ಬೆಂಗಳೂರಿನ GKVK ಕೃಷಿ ಕಾಲೇಜು ವಿದ್ಯಾರ್ಥಿಗಳು (College Student) ಪ್ರವಾಸಕ್ಕೆ ಬಂದಿದ್ದ ವೇಳೆ ದುರ್ಘಟನೆ ಸಂಭವಿಸಿದೆ. GKVK ಕೃಷಿ ಕಾಲೇಜಿನ 68 ವಿದ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ರು.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ:GKVK Students: ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಇಬ್ಬರು ಯುವಕರು ನೀರುಪಾಲು

ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಹೊರಟ್ಟಿದ್ದಾರೆ
ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಯತ್ನಿಸಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (HD Kumarswamy) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಕಳಸ ಸಮೀಪದ ಭದ್ರ ನದಿಯ ತಟದಲ್ಲಿ ವಿಶೇಷ ಪೂಜೆ ಮೂಲಕ ಜನತಾ ಜಲಧಾರೆಗೆ (Janata Jaladhare) ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಪ್ರಸ್ತುತ ಬೆಳವಣಿಗೆ ಕುರಿತು ಮಾತನಾಡಿದ ಅವರು, ಕತ್ತಿ ಕಟ್ಕೊಂಡು ರಾಜಕಾರಣ ಮಾಡುವುದಲ್ಲ. ರಾಮ ಏನು ಸಂದೇಶ ನೀಡಿದ್ದೇನು ಎಂಬುದನ್ನು ಅರಿಯಿರಿ. ಮಾನವೀಯತೆ ಸಂದೇಶ ಸಾರುವ ಮೂಲಕ ರಾಮನ (Rama) ಆದರ್ಶ ಪಾಲಿಸಿ. ನಾವು ಯಾವುದೇ ಒಂದು ವರ್ಗದ ಪರವಾಗಿ ನಿಂತಿಲ್ಲ. ಕುವೆಂಪು ಅವರ ಸಂದೇಶ ಚಿರಸ್ಥಾಯಿಯಾಗಿರಲು ಜನತಾದಳ ಇರುವುದು. ಸಮಾಜ ಹಾಳು ಮಾಡಲು ಹೊರಟಿರುವ ಬಿಜೆಪಿ ವಿರುದ್ಧ ನಾವಿರುವುದು. ನಮಗೆ ಉತ್ತರಪ್ರದೇಶ, ಗುಜರಾತ್ (Gujarat) ಆಡಳಿತ ಬೇಕಿಲ್ಲ. ವಿಶ್ವಕ್ಕೆ ಮಾದರಿಯಾದ ಕರ್ನಾಟಕದ ಆಡಳಿತ ಕೊಡಿ ಎಂದು ಮನವಿ ಮಾಡಿದರು.

‘India ಇಸ್ಲಾಮಿಕ್ ರಾಷ್ಟ್ರವಾಗುವುದನ್ನು ತಪ್ಪಿಸಲು ಹೆಚ್ಚು ಮಕ್ಕಳಿಗೆ ಜನ್ಮ ನೀಡಿ’
ಭಾರತವು (India) ಇಸ್ಲಾಮಿಕ್ ರಾಷ್ಟ್ರವಾಗುವುದನ್ನು (Islamic Nation) ತಪ್ಪಿಸಲು ಹಿಂದೂ ದಂಪತಿಗಳು ಹೆಚ್ಚು ಮಕ್ಕಳಿಗೆ ಜನ್ಮ ನೀಡುವಂತೆ ವಿವಾದಿತ ಅರ್ಚಕ ಯತಿ ಸತ್ಯದೇವ ಸರಸ್ವತಿ (Yati Satyadevanand Saraswati) ಕರೆ ನೀಡಿದ್ದಾರೆ. ಈಗಾಗಲೇ ಹರಿದ್ವಾರದ ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಅರ್ಚಕರು, ತಮ್ಮ ವಿವಾದಿತ ಹೇಳಿಕೆ ಮೂಲಕವೇ ಗಮನ ಸೆಳೆದಿದ್ದಾರೆ. ಇದಕ್ಕೆ ಮುನ್ನ ಮಥುರಾದಲ್ಲಿ ಮಾತನಾಡಿದ್ದ ಅವರು, ಹಿಂದೂ ಸಮಾಜ ನಿರಂತರವಾಗಿ ಅವನತಿಯ ಅಂಚಿನಲ್ಲಿದೆ. ಮುಂದಿನ ದಶಕಗಳಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುವುದನ್ನು ತಪ್ಪಿಸಲು ಹಿಂದೂಗಳು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದರು.

Karisma Kapoorಗೆ ಎರಡನೇ ಮದುವೆ ಯೋಗ?
ಬಾಲಿವುಡ್ನ ಲವ್ಬರ್ಡ್ಸ್ ಆಗಿದ್ದ ಆಲಿಯಾ ಭಟ್ (Alia Bhatt) ಮತ್ತು ರಣ್ಬೀರ್ ಕಪೂರ್ (Ranbir Kapoor) ಈಗ ಸತಿಪತಿಯಾಗಿದ್ದಾರೆ. ಏಪ್ರಿಲ್ 14 ರಂದು ಕುಟುಂಬದ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಅವರ ಮದುವೆ ನಡೆಯಿತು. ಈ ಮದುವೆಯಲ್ಲಿ, ಅವರ ಸ್ನೇಹಿತರ ಮತ್ತು ಸಹೋದರ ಸಹೋದರಿಯರ ಉತ್ಸಾಹ ಮುಗಿಲೇರಿತ್ತು. ಅದರಲ್ಲೂ, ನಟಿ ಕರೀಷ್ಮಾ ಕಪೂರ್ (Karisma Kapoor) ಸಂತೋಷಕ್ಕೆ ಪಾರವೇ ಇರಲ್ಲಿಲ್ಲ. ಕರಿಷ್ಮಾ ಕಪೂರ್, ರಣ್ಬೀರ್ ಕಪೂರ್ ಅವರ ದೊಡ್ಡಪ್ಪನ ಮಗಳು. ಸಹೋದರನ ಮದುವೆ ಎಂದರೆ, ಸಂತೋಷ ಸಹಜವೇ. ಆದರೆ ಇಲ್ಲಿ ಕರೀಷ್ಮಾರ ಸಂತೋಷ ದುಪ್ಪಟ್ಟಾಗಲು ಇನ್ನೊಂದು ಕಾರಣವಿತ್ತು. ಯಾಕಂತೀರಾ? ವಧುವಿನ ಕಲೀರಾ (Kaleera) ಕರೀಷ್ಮಾ ಮೇಲೆ ಬಿತ್ತಂತೆ. ಕರೀಷ್ಮಾಗಂತೂ ಇದರಿಂದ ಖುಷಿಯೋ ಖುಷಿ. ಅವರು ಶನಿವಾರ ಈ ಮದುವೆಯ ಕೆಲವೊಂದು ಸಂತಸದ ಕ್ಷಣಗಳ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅವರು ತನ್ನ ಮಗ ಕಿಯಾನ್ ಜೊತೆ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.
Published by:Kavya V
First published: