Evening Digest: ಕರ್ನಾಟಕದಾದ್ಯಂತ ‘ಅಪ್ಪು’ ಹಬ್ಬ: ದುಪ್ಪಟ್ಟಾವನ್ನು ತಲೆ ಮೇಲೆ ಹಾಕೊಂಡ್ರೆ ತಪ್ಪೇನು ಎಂದ HDK: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ದುಪ್ಪಟ್ಟಾವನ್ನು ತಲೆ ಮೇಲೆ ಹಾಕೊಂಡ್ರೆ ತಪ್ಪೇನು ಎಂದ HDK : ಹಿಜಾಬ್ (Hijab) ವಿಚಾರವಾಗಿ ಹೈಕೋರ್ಟ್ (High court) ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿ ಮುಸ್ಲಿಂ ಸಂಘಟನೆಗಳಿಂದ ಕರ್ನಾಟಕ ಬಂದ್ ಕರೆ ಕೊಟ್ಟಿದೆ. ಈ ವಿಚಾರ ವಿಧಾನಸಭೆಯಲ್ಲೂ ಗದ್ದಲಕ್ಕೆ ಕಾರಣವಾಗಿದೆ. ಇನ್ನು ಹಿಜಾಬ್ ವಿಚಾರದ ಬಗ್ಗೆ ವಿಧಾನಸೌಧದಲ್ಲಿ ನಿಲುವಳಿ ಮಂಡನೆ ಮಾಡೋದಾಗಿ ಹೇಳಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (H.D Kumaraswamy),  ಸರ್ಕಾರ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದ ಹೊರಗೆ ಮಾತಾಡಿದ ಅವ್ರು ಮತಕ್ಕಾಗಿ ಶಾಲೆ (School) ಹಾಗೂ ಮಕ್ಕಳ ವಿಚಾರವನ್ನ ಬಳಸಿಕೊಳ್ಳಬೇಡಿ ಎಂದ್ರು. ದುಪ್ಪಟ್ಟವನ್ನು ಮಕ್ಕಳು ಹಲವು ರೀತಿ ಹಾಕಿ ಹಾಕಿಕೊಳ್ತಾರೆ. ಹೆಗಲಿಗೆ ಹಾಕಿಕೊಳ್ತಾರೆ ಕೆಲವರು ಸೊಂಟಕ್ಕೆ ಕಟ್ಟುತ್ತಾರೆ ಇವರು ತಲೆ ಮೇಲೆ ಹಾಕಿಕೊಂಡು ಬರ್ತಾರೆ ಇದ್ದಕ್ಕೆ ಅನುಮತಿ ಕೊಟ್ರೆ ಆಯ್ತು ಎಂದು ಕುಮಾರಸ್ವಾಮಿ ಹೇಳಿದ್ದು ಹಲವು ಚರ್ಚೆಗಳಿಗೆ ಕಾರಣವಾಗ್ತಿದೆ.

ಪಂಜಾಬ್​​ ಸಿಎಂ ಖಡಕ್​ ಸ್ಟೈಲ್​

ಅಭೂತಪೂರ್ವ ಗೆಲುವಿನೊಂದಿಗೆ ನಿನ್ನೆಯಷ್ಟೇ ಭಗವಂತ್​ ಮಾನ್​​ ಪಂಜಾಬ್​​ನ ನೂತನ ಮುಖ್ಯಮಂತ್ರಿಯಾಗಿ (Punjab CM Bhagwant Mann) ಪ್ರಮಾಣವಚನ ಸ್ವೀಕರಿಸಿದರು. ಸಿಎಂ ಆದ ಬಳಿಕ ಅಧಿಕಾರಿಗಳೊಂದಿಗೆ ಚೊಚ್ಚಲ ಸಭೆಯನ್ನು (Mann chairs first meeting as CM) ಉದ್ದೇಶಿಸಿ ಮಾತನಾಡಿದ ಮಾನ್, ರಾಜ್ಯದ ನಾಗರಿಕ ಮತ್ತು ಪೊಲೀಸ್ ಆಡಳಿತದ ಉನ್ನತ ಅಧಿಕಾರಿಗಳು ಸಾರ್ವಜನಿಕ ಸೇವಕರಾಗಿ ತಮ್ಮ ಕರ್ತವ್ಯಗಳನ್ನು ಆತ್ಮದಿಂದ ಮಾಡುವಂತೆ ಸೂಚಿಸಿದರು. ಭಾರತ ಕ್ರಿಕೆಟ್ ತಂಡದ ಉದಾಹರಣೆಯನ್ನು ನೀಡುತ್ತಾ, ಹೊಸದಾಗಿ ಆಯ್ಕೆಯಾದ ಮುಖ್ಯಮಂತ್ರಿ, ಪಂದ್ಯಗಳನ್ನು ಗೆಲ್ಲುವುದು ಅಥವಾ ಸೋಲುವುದು ಮುಖ್ಯವಲ್ಲ. ತಂಡದ ಮನೋಭಾವವು ಮುಖ್ಯವಾಗಿದೆ. ನಮ್ಮ ರಾಜ್ಯವನ್ನು ನಿಜವಾದ ಪಂಜಾಬ್ ಆಗಿ ಮಾಡುವುದು ನಮ್ಮ ಪ್ರಧಾನ ಆದ್ಯತೆ ಆಗಬೇಕೇ ಹೊರತು ಲಂಡನ್, ಕ್ಯಾಲಿಫೋರ್ನಿಯಾ, ಪ್ಯಾರಿಸ್ ಅಲ್ಲ ಎಂದು ಖಡಕ್​ ಹೇಳಿಕೆ ನೀಡಿದ್ದಾರೆ.

ವರ್ಷಕ್ಕೆ ₹ 2.50 ಲಕ್ಷಕ್ಕಿಂತ ಹೆಚ್ಚು PF ಕಟ್ ಆಗುತ್ತಿದ್ದರೆ ಇನ್ಮುಂದೆ ತೆರಿಗೆ!

ಉದ್ಯೋಗಿಗಳ ಭವಿಷ್ಯ ನಿಧಿ (EPF) ವಾರ್ಷಿಕ ₹ 2.50 ಲಕ್ಷಕ್ಕಿಂತ ಹೆಚ್ಚಿನ ಕೊಡುಗೆಗಳಿಗೆ ತೆರಿಗೆ ವಿಧಿಸಲು ಕೇಂದ್ರ ನಿರ್ಧರಿಸಿದೆ. ಸರ್ಕಾರಿ ನೌಕರರಿಗೆ ಗರಿಷ್ಠ ₹ 5 ಲಕ್ಷಕ್ಕೆ ಮಿತಿ ನಿಗದಿಪಡಿಸಲಾಗಿದೆ. ಹೊಸ ಆದಾಯ ತೆರಿಗೆ (IT) ನಿಯಮಗಳ ಅಡಿಯಲ್ಲಿ, ಅಸ್ತಿತ್ವದಲ್ಲಿರುವ PF ಖಾತೆಗಳನ್ನು ಎರಡು ಭಾಗಗಳಾಗಿ ವಿಂಗಡಿಸುವ ಸಾಧ್ಯತೆಯಿದೆ. ಏಪ್ರಿಲ್ 1, 2022 ರಿಂದ ತೆರಿಗೆ ಮತ್ತು ತೆರಿಗೆಗೆ ಒಳಪಡದ ಕೊಡುಗೆ ಖಾತೆಗಳು ಎಂದು ವಿಂಗಡಿಸಬಹುದು ಎಂದು ಹೇಳಲಾಗ್ತಿದೆ. ಉದಾಹರಣೆಗೆ, ಸರ್ಕಾರೇತರ ಉದ್ಯೋಗಿಯು PF ಖಾತೆಯಲ್ಲಿ ₹ 5 ಲಕ್ಷವನ್ನು ಹಾಕಿದರೆ, ₹ 2.50 ಲಕ್ಷ ತೆರಿಗೆಗೆ ಒಳಪಟ್ಟಿರುತ್ತದೆ. ಸರ್ಕಾರಿ ನೌಕರರು ₹ 6 ಲಕ್ಷವನ್ನು ಪಿಎಫ್‌ನಲ್ಲಿ ಹಾಕಿದರೆ ₹ 1 ಲಕ್ಷ ತೆರಿಗೆಗೆ ಒಳಪಡುತ್ತದೆ. ಸರ್ಕಾರಿ ನೌಕರರು ಸಾಮಾನ್ಯ PF ಅಥವಾ GPF ಗೆ ಕೊಡುಗೆ ನೀಡುತ್ತಾರೆ.

ಯುವರತ್ನನಿಲ್ಲದ ಮೊದಲ ಹುಟ್ಟುಹಬ್ಬ!

ಅಕ್ಟೋಬರ್​ 29ರಂದು ಇಡೀ ಕರುನಾಡಿಗೆ ಬರ ಸಿಡಿಲು ಬಡಿದಿತ್ತು. ಯಾರೂ ಊಹಿಸಿರದಂತ ಘಟನೆ ನಡೆದು ಹೋಗಿತ್ತು. ದೊಡ್ಮನೆಯ ಕೊನೆಯ ಕುಡಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ಯಾರಿಗೂ ಹೇಳದೇ ಕೇಳದೇ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಇಂದು ಅವರು ಇದ್ದಿದ್ದರೆ ಅದರ ಸಂಭ್ರಮವೇ ಬೇರೆ. ನಿನ್ನೆ ತಡರಾತ್ರಿಯಿಂದಲೇ ಅಪ್ಪು ಮನೆ ಮುಂದೆ ಜನಸಾಗರ ಸೇರುತ್ತಿತ್ತು. ಆದರೆ, ದೈವ ಇಚ್ಛೆಯೇ ಬೇರೆಯಾಗಿತ್ತು. ಇಂದು ಅಪ್ಪು ನಮ್ಮ ಜೊತೆ ದೈಹಿಕವಾಗಿ ಇರದೇ ಹೋದರು, ನಮ್ಮ ಜೊತೆ ಇದ್ದೆ ಇರುತ್ತಾರೆ. ಇಂದು ಅಪ್ಪು ಇದ್ದಿದ್ದರೆ 47ನೇ ವರ್ಷ. ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರು ನಮ್ಮಿಂದ ದೂರಾಗಿದ್ದರೂ, ಇಂದು ನಮ್ಮನ್ನೆಲ್ಲ ರಂಜಿಸುತ್ತಿದ್ದಾರೆ. ಜೇಮ್ಸ್​ ಸಿನಿಮಾದ ಮೂಲಕ ಇಂದು ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿರುವ ಅಪ್ಪು ನೋಡಿ ಎಲ್ಲರೂ ಮತ್ತೆ ಕಣ್ಣೀರಿಡುತ್ತಿದ್ದಾರೆ. ಅಪ್ಪು ಅವರ ಅಭಿನಯ, ಡ್ಯಾನ್ಸ್, ಫೈಟ್​ ಎಲ್ಲವೂ ಜೇಮ್ಸ್​ ಸಿನಿಮಾದಲ್ಲಿ ಅದ್ಭುತವಾಗಿದೆ. ಅದನ್ನೆಲ್ಲ ಕಂಡು ಅಪ್ಪು ಅಭಿಮಾನಿಗಳು ಚಿತ್ರಮಂದಿರದಲ್ಲೇ ಕೊರಗುತ್ತಿದ್ದಾರೆ. ಅಪ್ಪು ಪ್ಲೀಸ್​​ ವಾಪಸ್​ ಬಂದು ಬಿಡಿ ಅಂತ ಬೆಳ್ಳೆ ಪರದೆ ಬಳಿ ಕಿರುಚಾಡುತ್ತಿದ್ದಾರೆ.ಕಾಲಿಡುತ್ತಿದ್ದರು. ಅಪ್ಪು ಇಲ್ಲದೇ ಮೊದಲ ಹುಟ್ಟುಹಬ್ಬವನ್ನು ಆಚರಿಸುತ್ತಾ, ದೇವರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಅಭಿಮಾನಿಗಳು.

ಶೀಘ್ರದಲ್ಲೇ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ

ತಮ್ಮ ಆದರ್ಶ ಪ್ರಾಯ ಜೀವನದ ಮೂಲಕವೇ ಎಲ್ಲರಿಗೂ ಮಾದರಿಯಾಗಿರುವ ಪುನೀತ್​ ರಾಜ್​ ಕುಮಾರ್​​ಗೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಪುನೀತ್​ ರಾಜ್​ಕುಮಾರ್​ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದಾರೆ. ಆದರೆ, ಪ್ರಶಸ್ತಿ ಪ್ರದಾನ ಸಮಾರಂಭ ಕುರಿತು ಇನ್ನೂ ಅಂತಿಮ ತೀರ್ಮಾನ ಮಾಡಿಲ್ಲ. ಈ ಸಂಬಂಧ ಇಂದು ಮಾತನಾಡಿದ ಸಿಎಂ, ಪುನೀತ್ ಅವರಿಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಪ್ರದಾನ ಮಾಡಲು ಆದಷ್ಟು ತೀರ್ಮಾನ ಮಾಡಲಾಗುವುದು. ಶೀಘ್ರವಾಗಿ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ದಿನಾಂಕ ನಿಗದಿ ಮಾಡಲಾಗುವುದು. ಪುನೀತ್ ಹಾಗೂ ಡಾ. ರಾಜ್ ಕುಮಾರ್ ಅವರಿಗೆ ಗೌರವ ಬರುವ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಿಸಲು ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದ್ದಾರೆ.
Published by:Kavya V
First published: