Evening Digest: ಪವರ್ ಕಟ್ ಆದ್ರೆ ಈ ನಂಬರ್​​ಗೆ ಕರೆ ಮಾಡಿ; KGF-2 ಎಡಿಟರ್ ವಯಸ್ಸು ಜಸ್ಟ್ 19: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಪವರ್​ ಕಟ್​​​ ಆದ್ರೆ ಈ ನಂಬರ್​​ಗೆ ಕರೆ ಮಾಡಿ: ಒಮ್ಮೆ ಕರೆಂಟ್ ಹೋದರೆ ಸಾಕು, ಮತ್ತೆ ಯಾವಾಗ ಬರುತ್ತೆ ಗೊತ್ತಾಗೋದೇ ಇಲ್ಲ..ಹಣೆಬರಹ. ಮನೆಯೆಲ್ಲ ಕತ್ತಲು, ಕಿಟಕಿ ತೆಗೆಯೋಣ ಅಂದ್ರೆ ಸೊಳ್ಳೆಗಳು ಒಳಗೆ ನುಸುಳುತ್ತವೆ. ವರ್ಕ್ ಫ್ರಂ ಹೋಂ ಬೇರೆ, ಕೆಲಸ ಇನ್ನೂ ಹಾಗೇ ಇದೆ.. ಬೆಂಗಳೂರಿನ ನಿವಾಸಿಗಳು ಕರೆಂಟ್ ಹೋದರೆ ಸಾಕು, ಆಡುವ ಮಾತಿದು. ಮನೆಯಲ್ಲಿ ಯುಪಿಎಸ್ ಇದ್ದರೆ ಅಡ್ಡಿಲ್ಲ, ಆದರೆ ಬಹುತೇಕರ ಮನೆಗಳಲ್ಲಿ ಯುಪಿಎಸ್ ಸೌಲಭ್ಯ ಇರಲ್ಲ. ಒಮ್ಮೊಮ್ಮೆ ನಿಮ್ಮ ಏರಿಯಾದಲ್ಲೇ, ಮನೆಯಲ್ಲೇ ಕರೆಂಟ್ ಕೈಕೊಟ್ಟಿರುತ್ತದೆ. ಬೆಂಗಳೂರು ನಗರಕ್ಕೆ ವಿದ್ಯುತ್ ಸೌಲಭ್ಯ ಒದಗಿಸುವುದು ಸಂಸ್ಥೆಯ ಹೆಸರು ಬೆಸ್ಕಾಂ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ. ನಿಮ್ಮ ಏರಿಯಾದಲ್ಲಿ ಅಥವಾ ಮನೆಯಲ್ಲಿ ಕರೆಂಟ್ ಬಗ್ಗೆ ಏನೇ ಇದ್ದರೂ ನೀವು ಬೆಸ್ಕಾಂ ಅನ್ನು ಸಂಪರ್ಕಿಸಬೇಕು. ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912. ಈ ಸಂಖ್ಯೆಯನ್ನು ದಿನದ 24 ಗಂಟೆಗಳ ಕಾಲವೂ ನೀವು ಸಂಪರ್ಕಿಸಬಹುದು. ಅದೇ ರೀತಿ ವಾಟ್ಸ್ಆ್ಯಪ್ ಮೂಲಕವೂ ನೀವು ಬೆಸ್ಕಾಂನಿಂದ ಒಂದೇ ಒಂದು ಮೆಸೆಜ್​ನಲ್ಲಿ ವಿದ್ಯುತ್ ನಿಲುಗಡೆ ಬಗ್ಗೆ ಮಾಹಿತಿ ಪಡೆಯಬಹುದು. ವಾಟ್ಸ್ಆ್ಯಪ್ ಸಂಖ್ಯೆ ಹೀಗಿದೆ: 9449844640

KGF-2 ಎಡಿಟರ್​ ವಯಸ್ಸು ಜಸ್ಟ್​ 19

ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿಷಯವೂ ಪ್ರೇಕ್ಷಕರಲ್ಲಿ ಚರ್ಚೆಯ ವಿಷಯವಾಗಿದೆ. ಇದೀಗ ಈ ಸಿನಿಮಾದ ಬಗ್ಗೆ ವಿಶೇಷ ಮಾಹಿತಿ ತಿಳಿದುಬಂದೊದೆ ಇದನ್ನು ತಿಳಿದ ಸೂಪರ್‌ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ. ಸೂಪರ್ ಸ್ಟಾರ್ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ 2 ಎಡಿಟಿಂಗ್ ಮಾಡಲು 19 ವರ್ಷದ ಹುಡುಗನನ್ನು ಆಯ್ಕೆ ಮಾಡಿದ್ದಾರೆ. ಆತನ ಮೇಲೆ ನಂಬಿಕೆ ಇಟ್ಟು ಇಷ್ಟು ದೊಡ್ಡ ಜವಾಬ್ದಾರಿಯನ್ನು ನೀಡಿದ್ದರು. ಅದನ್ನು ಇವರು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ: KGF Chapter 2 ಎಡಿಟರ್​ ವಯಸ್ಸು ಜಸ್ಟ್​ 19, ಟ್ಯಾಲೆಂಟ್​ ಮಾತ್ರ ನೆಕ್ಸ್ಟ್​​ ಲೆವೆಲ್​ ಬಾಸ್​!

ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಪೋಷಕರ ಗೋಳಾಟ

ಪ್ರಚೋದನಕಾರಿ ಪೋಸ್ಟ್​ (Provocative Post) ​ ವಿರೋಧಿಸಿ ಹುಬ್ಬಳ್ಳಿಯಲ್ಲಿ(Hubballi)  ನಡೆದ ಪ್ರತಿಭಟನೆಯಲ್ಲಿ ನಡೆದ ಕಲ್ಲು ತೂರಾಟದಲ್ಲಿ ಒಟ್ಟು 12 ಮಂದಿ ಪೊಲೀಸರು (Police) ಗಾಯಗೊಂಡಿದ್ದು, ಪ್ರಕರಣ ಸಂಬಂಧ 100 ಮಂದಿಯನ್ನು ಪೊಲೀಸರು ವಶಕ್ಕೆ (100 People Arrests) ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರ  ಸಂಖ್ಯೆ ನೂರರ ಗಡಿ ದಾಟಿದ್ದು, ಬಂಧಿತರಲ್ಲಿ ಮೂವರು ಬಾಲಾಪರಾಧಿಗಳಿದ್ದಾರೆ.  ಈ ಸಂಬಂಧ ಇದುವರೆಗೆ ಒಟ್ಟು 8 ಪ್ರತ್ಯೇಕ FIR ದಾಖಲಾಗಿದೆ. ಬಂಧಿತರನ್ನು ಕಲಬುರಗಿ ಅಥವಾ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಪೊಲೀಸರ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸ್ಥಳೀಯ ಜೈಲಿಗೆ (Jail) ಕಳಿಸಿದ್ರೆ, ಸಂಬಂಧಿಕರ ಭೇಟಿ, ಊಟ ಅಂತ ಸಲುಗೆ ಸಿಗಲಿದೆ‌. ಹೀಗಾಗಿ ಬಂಧಿತರನ್ನ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗ್ತಿದೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ:Hubballi Riots: 100ಕ್ಕೂ ಹೆಚ್ಚು ಮಂದಿಯ ಬಂಧನ: ನಮ್ಮ ಮಕ್ಕಳನ್ನು ಬಿಟ್ಟುಬಿಡಿ ಎಂದು ಪೋಷಕರ ಗೋಳಾಟ

Covidನಿಂದ ಭಾರತದಲ್ಲಿ ಐದಲ್ಲ, ಬರೋಬ್ಬರಿ 40 ಲಕ್ಷ ಜನ ಸತ್ತಿದ್ದಾರೆ

‘ಸರ್ಕಾರದ ನಿರ್ಲಕ್ಷ್ಯ’ದಿಂದ ಭಾರತದಲ್ಲಿ ಕನಿಷ್ಠ 40 ಲಕ್ಷ ಜನರು ಕೋವಿಡ್ -19 ಗೆ ಬಲಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು. ಜೊತೆಗೆ ಪ್ರತಿ ಸಂತ್ರಸ್ತರ ಕುಟುಂಬಕ್ಕೆ ₹ 4 ಲಕ್ಷ ಪರಿಹಾರವನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೋವಿಡ್ -19 ಸಾವಿನ ಸಂಖ್ಯೆಯನ್ನು ಸಾರ್ವಜನಿಕಗೊಳಿಸಲು ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಯತ್ನಗಳನ್ನು ಭಾರತ ತಡೆಯುತ್ತಿದೆ ಎಂದು ಹೇಳುವ ನ್ಯೂಯಾರ್ಕ್ ಟೈಮ್ಸ್ ವರದಿಯ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡ ಕಾಂಗ್ರೆಸ್ ನಾಯಕ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಮೋದಿಜಿ ಸ್ವತಃ ಸತ್ಯವನ್ನು ಹೇಳುವುದಿಲ್ಲ. ಕನಿಷ್ಟ ಬೇರೆಯವರಿಗೆ ಅದನ್ನು ಮಾತನಾಡಲು ಅವಕಾಶ ಮಾಡಿಕೊಡಿ. ಆಮ್ಲಜನಕದ ಕೊರತೆಯಿಂದ ಯಾರೂ ಸತ್ತಿಲ್ಲ ಎಂದು ಅವರು ಇನ್ನೂ ಸುಳ್ಳು ಹೇಳುತ್ತಾರೆ ಎಂದು ಕಿಡಿಕಾರಿ ಟ್ವೀಟ್ ಮಾಡಿದ್ದಾರೆ.

ಕಿರುತೆರೆಗೆ ಎಂಟ್ರಿ ಕೊಟ್ಟ ಶ್ರುತಿ ಹರಿಹರನ್​!

ಮೀಟೂ ಪ್ರಕರಣ ಇತ್ತೀಚೆಗೆ ಕೋರ್ಟ್​ನಲ್ಲಿ ಅಂತ್ಯಗೊಂಡಿತ್ತು. ಅರ್ಜುನ್​ ಸರ್ಜಾ ವಿರುದ್ಧ ಯಾವುದೇ ಸಾಕ್ಷ್ಯ ಸಾಬೀತಾಗದ ಕಾರಣ ಕೇಸ್​ ಖುಲಾಸೆಯಾಗಿತ್ತು. ಈ ಮೀಟೂ ಪ್ರಕರಣದ ಆದ ಬಳಿಕ ಶ್ರುತಿ ಹರಿಹರನ್​ ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಂಡಿದ್ದರು. ಮಧ್ಯೆ ಒಂದು ವೆಬ್ ಸಿರೀಸ್‌ನಲ್ಲಿ ಶ್ರುತಿ ಹರಿಹರನ್​ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಮಧ್ಯೆ ಕಿರುತೆರೆಗೂ ಶ್ರುತಿ ಹರಿಹರನ್ ಎಂಟ್ರಿ ಕೊಟ್ಟಿದ್ದಾರೆ. 'ಕಾಮಿಡಿ ಗ್ಯಾಂಗ್' ರಿಯಾಲಿಟಿ ಶೋನಲ್ಲಿ ಜಡ್ಜ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್​ 16ರಿಂದ ಸ್ಟಾರ್​ ಸುವರ್ಣದಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿದೆ.
Published by:Kavya V
First published: