Evening Digest: ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿಯೇ ಬಿಡ್ತು; ಬೆಂಗಳೂರಲ್ಲಿ 3 ದಿನ ಮದ್ಯ ಸಿಗಲ್ಲ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿಯೇ ಬಿಡ್ತು: ಉತ್ತರ ಪ್ರದೇಶದ ಬನಾರಸ್‌ನ (Banaras) ಜ್ಞಾನವ್ಯಾಪಿ ಮಸೀದಿಯಲ್ಲಿ (Gyanvapi Masjid) ಸರ್ವೇ ವೇಳೆ ಶಿವಲಿಂಗ (Shivling) ಪತ್ತೆಯಾಗಿದ್ದು, ಇಡೀ ಪ್ರದೇಶವನ್ನು ಸೀಲ್​ ಮಾಡುವಂತೆ ಕೋರ್ಟ್​​ (Varanasi court) ಆದೇಶಿಸಿದೆ. ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಮೂರು ದಿನಗಳ ವಿಡಿಯೋ ಸಮೀಕ್ಷೆಯಲ್ಲಿ ಶಿವಲಿಂಗ ಪತ್ತೆಯಾದ ಕಾಶಿ ವಿಶ್ವನಾಥ ದೇವಸ್ಥಾನದ ಸಮೀಪವಿರುವ ಜ್ಞಾನವಾಪಿ ಮಸೀದಿಯ ಒಳಗಿನ ಪ್ರದೇಶವನ್ನು ಸೀಲ್ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಿದೆ. ಜ್ಞಾನವಾಪಿ ಮಸೀದಿ ಸಂಕೀರ್ಣದ ವಿಡಿಯೋಗ್ರಫಿ ಸಮೀಕ್ಷೆ ಸೋಮವಾರ ಪೂರ್ಣಗೊಂಡಿದ್ದು, ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರ ವಕೀಲರು ಪ್ರತಿಪಾದಿಸಿದರು. ಶಿವಲಿಂಗದ ರಕ್ಷಣೆ ಕೋರಿ ವಕೀಲ ವಿಷ್ಣು ಜೈನ್ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು.

ಪೂರ್ತಿ ಓದಿ ಓದಲು ಇಲ್ಲಿ ಕ್ಲಿಕ್​​ ಮಾಡಿ: Shivling found in Gyanvapi: ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿಯೇ ಬಿಡ್ತು, ಇಡೀ ಪ್ರದೇಶ ಸೀಲ್​​ಗೆ ಕೋರ್ಟ್ ಆದೇಶ

ಬೆಂಗಳೂರಲ್ಲಿ 3 ದಿನ ಮದ್ಯ ಸಿಗಲ್ಲ

ಸರ್ಕಾರದ ಇ-ಇಂಡೆಎಂಟ್ ವಿರುದ್ಧ ಮದ್ಯದಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಾಜ್ಯದ ಹಲವೆಡೆ ಜಿಲ್ಲಾವಾರು ವಿಭಾಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಒಂದೊಂದು ದಿನ ಮದ್ಯ ಮಾರಾಟವನ್ನು ನಿಲ್ಲಿಸಲಾಗಿತ್ತು.ಇದೀಗ ಬೆಂಗಳೂರಿನ ಸರದಿ ಬಂದಿದ್ದು, ಇನ್ನೂ 3 ದಿನಗಳ ಕಾಲ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಮದ್ಯಪಾನ (Liquor) ಖರೀದಿ ಮಾಡದಿರಲು ನಿರ್ಧಾರ ಮಾಡಿದ್ದಾರೆ. ಮದ್ಯಪ್ರಿಯರಿಗೆ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ನಾಳೆಯಿಂದ 3 ದಿನ ಬೆಂಗಳೂರಿನಲ್ಲಿ ಕೆಎಸ್ ಬಿಎಲ್ ನಿಂದ ಮದ್ಯ ಖರೀದಿಸದಿರಲು ಮದ್ಯದಂಗಡಿ ಮಾಲೀಕರು ನಿರ್ಧಾರ ಮಾಡಿದ್ದಾರೆ.

ಪೂರ್ತಿ ಓದಿ ಓದಲು ಇಲ್ಲಿ ಕ್ಲಿಕ್​​ ಮಾಡಿ: Liquor Ban: ಮದ್ಯ ಪ್ರಿಯರಿಗೆ ಶಾಕ್; ನಾಳೆಯಿಂದ 3 ದಿನ ಬೆಂಗಳೂರಲ್ಲಿ ಸಿಗಲ್ಲ ಎಣ್ಣೆ

ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ

ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ್ ಹೊರಟ್ಟಿ (Basavaraj Horatti)  ರಾಜೀನಾಮೆ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿ (Press Meet) ನಡೆಸಿದ ಮಾತಾಡಿದ ಬಸವರಾಜ್​ ಹೊರಟ್ಟಿ, ರಾಜೀನಾಮೆ ಕುರಿತು ಅಧಿಕೃತ ಘೋಷಣೆ ಮಾಡಿದ್ದಾರೆ. ಜೆಡಿಎಸ್​ಗೆ ಗುಡ್​ ಬಾಯ್​ (Good Bye)  ಹೇಳಿರೋ ಹೊರಟ್ಟಿ ಮಂಗಳವಾರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ (BJP Join). ಸಭಾಪತಿಯಾಗಿ 30 ಸಭೆ ಮಾಡಿದ್ದೀನಿ, ಏನು ಸಭೆ ಮಾಡಿದ್ದೀನಿ, ಅದರ ಪ್ರತಿಫಲ ಏನು ಅನ್ನೋದ್ರ ಪುಸ್ತಕ ಮಾಡಿದ್ದೀವಿ. ಸದನವನ್ನ ಈ ಬಾರಿ ಏನು ಅಜೆಂಡಾ ಇತ್ತು 95% ಪೂರ್ಣ ಮಾಡಿದ್ದೇನೆ. ಕೆಲವೊಮ್ಮೆ ಪ್ರತಿಭಟನೆ (Protest) ಸಂದರ್ಭದಲ್ಲಿ ಮಾತ್ರ ಮುಂದೂಡಿದ್ದೇವೆ ಎಂದು ಇದೇ ವೇಳೆ ಹೊರಟ್ಟಿ ಹೇಳಿದ್ದಾರೆ.

ಗೋಧಿ ಬೆಲೆ ಏರಿಕೆ

ರಫ್ತುಗಳನ್ನು ನಿಷೇಧಿಸಲು ಭಾರತ ನಿರ್ಧರಿಸಿದ (India decided to ban Exports) ನಂತರ ಸೋಮವಾರ ಗೋಧಿ ಬೆಲೆಗಳು (Wheat Prices) ದಾಖಲೆಯ ಏರಿಕೆ ಕಂಡಿದೆ. ಪ್ರಮುಖ ಗೋಧಿ ರಫ್ತುದಾರ ಉಕ್ರೇನ್‌ನ (Ukraine) ಮೇಲೆ ರಷ್ಯಾದ (Russia) ಆಕ್ರಮಣದ ಹಿನ್ನೆಲೆಯಲ್ಲಿ ಈಗಾಗಲೇ ಹೆಚ್ಚಿದ್ದ ಬೆಲೆ  ಯುರೋಪಿಯನ್ ಮಾರುಕಟ್ಟೆಯು ತೆರೆದಂತೆ ಪ್ರತಿ ಟನ್‌ಗೆ 435 ಯುರೋಗಳಿಗೆ ($453) ಜಿಗಿದಿದೆ. ಬಿಸಿ ಗಾಳಿ ಹಿನ್ನೆಲೆಯಲ್ಲಿ ಸರಕುಗಳ ರಫ್ತುಗಳನ್ನು ನಿಷೇಧಿಸಲು ಭಾರತ ನಿರ್ಧರಿಸಿದ ನಂತರ ಸೋಮವಾರ ಗೋಧಿ ಬೆಲೆಗಳು ದಾಖಲೆಯ ಎತ್ತರಕ್ಕೆ ಏರಿತು. ಮೇ 13 ರ ಅಧಿಸೂಚನೆಯ ಪ್ರಕಾರ ಸರ್ಕಾರವು ತನ್ನ ಆಹಾರ ಭದ್ರತೆಯನ್ನು ನಿರ್ವಹಿಸಲು ಸಾಗರೋತ್ತರ ಮಾರಾಟವನ್ನು ಸ್ಥಗಿತಗೊಳಿಸುತ್ತದೆ. ಇದು ಏಳು ರಾಷ್ಟ್ರಗಳ ಗುಂಪಿನ ಕೃಷಿ ಮಂತ್ರಿಗಳಿಂದ ಟೀಕೆಗೆ ಗುರಿಯಾಯಿತು, ಅಂತಹ ಕ್ರಮಗಳು ವಿಶ್ವದ ಬಿಕ್ಕಟ್ಟನ್ನು ಇನ್ನಷ್ಟು ಹದಗೆಡಿಸುತ್ತವೆ ಎಂದು ಟೀಕಿಸಿದ್ದರು.

ರೊಮ್ಯಾಂಟಿಕ್​ ಚಿತ್ರದಲ್ಲಿ ಸಮಂತಾ - ವಿಜಯ್​ ದೇವರಕೊಂಡ

ರೌಡಿ ಸ್ಟಾರ್ ಎಂದೇ ಖ್ಯಾತರಾಗಿರುವ ಟಾಲಿವುಡ್ ಹೀರೋ ವಿಜಯ್ ದೇವರಕೊಂಡ (Vijay Devarakonda)  ತಮ್ಮ ಮುಂದಿನ ಸಿನಿಮಾ ಟೈಟಲ್ ಅನೌನ್ಸ್ ಮಾಡಿದ್ದಾರೆ. ಹೆಸರು ‘ಖುಶಿ (Kushi)’. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಸುಂದರಿ ಸಮಂತಾ (Samantha) ನಟಿಸುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಮತ್ತು ಸಮಂತಾ ಮೊದಲ ಬಾರಿಗೆ ಸಿನಿಮಾವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಖುಷಿ'ಯಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದು ಇಬ್ಬರ ಅಭಿಮಾನಿಗಳಿಗೆ (Fans) ಬಹಳ ಸಂತವನ್ನು ಉಂಟು ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಈ ಚಿತ್ರ ಡಿಸೆಂಬರ್ 23 ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಈ ಜೋಡಿ ಬೆಳ್ಳಿತೆರೆಯಲ್ಲಿ ಸದ್ದು ಮಾಡಲು ರೆಡಿಯಾಗುತ್ತಿದೆ. ಸೋಮವಾರ ಚಿತ್ರತಂಡ ‘ಖುಷಿ’ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ (Motion Poster) ಬಿಡುಗಡೆ ಮಾಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
Published by:Kavya V
First published: