Evening Digest: ಉಯ್ಯಾಲೆ ತಂತಿಗೆ ಸಿಲುಕಿ ಬಾಲಕಿ ಸಾವು; KGF-2 ಎರಡನೇ ದಿನದ ಕಲೆಕ್ಷನ್ ಎಷ್ಟು ನೋಡಿ: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಉಯ್ಯಾಲೆ ತಂತಿಗೆ ಸಿಲುಕಿ ಬಾಲಕಿ ಸಾವು : ಮನೆಯಲ್ಲೇ ಮಕ್ಕಳನ್ನು (Children) ಒಬ್ಬಂಟಿಯಾಗಿ ಆಟವಾಡಲು (Playing Game) ಬಿಡುವ ಮುನ್ನ ಎಚ್ಚರವಾಗಿರಿ. ಉಯ್ಯಾಲೆಯ ತಂತಿಗೆ ಸಿಲುಕಿಕೊಂಡು 11 ವರ್ಷದ ಬಾಲಕಿಯೊಬ್ಬಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮಾಗಡಿ ರಸ್ತೆಯ ಕೆಂಚನಹಳ್ಳಿಯಲ್ಲಿ ನಡೆದಿದೆ. 11 ವರ್ಷದ ಭಾವನಾ ದೀಕ್ಷಿತ್ (Bhavana Dixit) ಮೃತಪಟ್ಟ ಬಾಲಕಿಯಾಗಿದ್ದಾಳೆ. ಡ್ಯೂಪ್ಲೆಕ್ಸ್ ಮನೆಯ (Home) ಮೊದಲ ಮಹಡಿಯಲ್ಲಿ (First Floor) ಭಾವನಾ ಆಟವಾಡುತ್ತಿದ್ದಳು, ಅವ್ರ ಪೋಷಕರು ನೆಲಮಹಡಿಯಲ್ಲಿದ್ರು. ಮಗಳು ಆಟವಾಡ್ತಿದ್ದಾಳೆ ಎಂದು ಪೊಷಕರು ತಿಳಿದು ಸುಮ್ಮನಾಗಿದ್ರು ಗಂಟೆಗಳಾದ್ರೂ ಭಾವನಾ ದೀಕ್ಷಿತ್ ಕೆಳಗೆ ಬರಲಿಲ್ಲ. ಗಾಬರಿಯಾಗಿ ಹೋಗಿ ನೋಡಿದಾಗ ಉಯ್ಯಾಲೆಯಲ್ಲಿ ಸಿಲುಕಿರೋದು ಗೊತ್ತಾಗಿದೆ.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ:Bengaluru: ಮಕ್ಕಳನ್ನು ಆಟವಾಡಲು ಬಿಡುವ ಮುನ್ನ ಎಚ್ಚರ; ಉಯ್ಯಾಲೆ ತಂತಿಗೆ ಸಿಲುಕಿ ಬಾಲಕಿ ಸಾವು

KGF-2 ಎರಡನೇ ದಿನದ ಕಲೆಕ್ಷನ್ ಎಷ್ಟು ನೋಡಿ
ಶ್ವದ ಮೂಲೆ ಮೂಲೆಯಲ್ಲೂ ಕೆಜಿಎಫ್ 2(KGF 2) ಅಬ್ಬರ ಜೋರಾಗಿದೆ. ಬಾಕ್ಸ್ ಆಫೀಸ್(Box Office)ನಲ್ಲಿ ರಾಕಿ ಭಾಯ್ ಧೂಳೆಬ್ಬಿಸುತ್ತಿದ್ದಾರೆ. ಯಾರೂ ಊಹಿಸಿರದ ರೀತಿಯಲ್ಲಿ ಕಮಾಲ್ ಮಾಡುತ್ತಿದೆ. ಮೊದಲ ದಿನವೇ 160ಕ್ಕೂ ಹೆಚ್ಚು ಕೋಟಿ ಕಲೆಕ್ಷನ್(Collection) ಮಾಡಿದ್ದ ಕೆಜಿಎಫ್ 2, ಎರಡನೇ ದಿನವೂ ತನ್ನ ಓಟ ಮುಂದುವರೆಸಿದೆ. ರಾಕಿಂಗ್ ಸ್ಟಾರ್ ಯಶ್(Rocking Star Yash) ಅಭಿನಯದ ‘ಕೆಜಿಎಫ್: ಚಾಪ್ಟರ್ 2’(KGF Chapter 2) ಸಿನಿಮಾ ಬಾಕ್ಸ್ ಆಫೀಸ್ ದಾಖಲೆ(Record)ಗಳ ಪಟ್ಟಿಯಲ್ಲಿ ಇತರೆ ಚಿತ್ರಗಳೆದುರು ತೊಡೆ ತಟ್ಟಿ ನಿಂತಿದೆ. ಕಲೆಕ್ಷನ್ ಲೆಕ್ಕಾಚಾರದಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮುನ್ನುಗ್ಗುತ್ತಿದೆ. ‘ಕೆಜಿಎಫ್: ಚಾಪ್ಟರ್ 2’ ಚಿತ್ರ ಎರಡು ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ? ಈ ದಾಖಲೆಯನ್ನು ಟಚ್ ಮಾಡುವುದರಲಿ, ಈ ದಾಖಲೆಯತ್ತರ ಬರೋದಕ್ಕೂ ಮತ್ತೆ ರಾಕಿನೇ ಬರಬೇಕು ಅಂತಿದ್ದಾರೆ ಸಿನಿಪಂಡಿತರು. ಒಂದು ಕನ್ನಡ ಸಿನಿಮಾ ಈ ಮಟ್ಟಕ್ಕೆ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವುದು ಕನ್ನಡಿಗರ ಹೆಮ್ಮೆ ಎಂದರೆ ತಪ್ಪಾಗಲಾರದು.

ಪೂರ್ತಿ ಸುದ್ದಿ ಓದಲು ಕ್ಲಿಕ್ ಮಾಡಿ: KGF Chapter 2: ಟಚ್​ ಮಾಡೋದಿರ್ಲಿ, ಹತ್ತಿರ ಬರಕ್ಕೂ ಆಗಲ್ಲ! 2ನೇ ದಿನದ ಕಲೆಕ್ಷನ್​ ಕಂಡು ಬೆಚ್ಚಿಬಿದ್ದ ಸಿನಿ ಇಂಡಸ್ಟ್ರಿ

ಮಾಜಿ ಸಚಿವ ಈಶ್ವರಪ್ಪ ಮನೆಗೆ ಮಠಾಧೀಶರ ಭೇಟಿ
ಗುತ್ತಿಗೆದಾರ ಸಂತೋಷ ಪಾಟೀಲ್ (Santhosh Patil) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಎಸ್.ಈಶ್ವರಪ್ಪ (K.S Eshwarappa) ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆ ಇಂದು ಕೆ.ಎಸ್.ಈಶ್ವರಪ್ಪ ನಿವಾಸಕ್ಕೆ ವಿವಿಧ ಸ್ವಾಮೀಜಿಗಳು (Swamiji) ಭೇಟಿ ನೀಡಿದ್ದಾರೆ. ಮಾದಾರ ಚೆನ್ನಯ್ಯ ಸ್ವಾಮೀಜಿ (Madara Chennayya Swamiji), ಕಾಗಿನೆಲೆಯ ನಿರಂಜನಾಂದಪುರಿ ಸ್ವಾಮೀಜಿ, ಪುರುಷೋತ್ತಮನಂದಪುರಿ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ ಸ್ವಾಮೀಜಿ ಸೇರಿದಂತೆ ಒಟ್ಟು ಹತ್ತಕ್ಕೂ ಹೆಚ್ಚು ಸ್ವಾಮೀಜಿಗಳು ಭೇಟಿ ನೀಡಿ ಈಶ್ವರಪ್ಪ ಜತೆ ಮಾತುಕತೆ ನಡೆಸಿದರು. ಅಲ್ಲದೇ, ಪ್ರಸ್ತುತ ಬೆಳವಣಿಗೆ (Current Development) ಬಗ್ಗೆ ಈಶ್ವರಪ್ಪ ಜತೆ ಚರ್ಚೆ ನಡೆಸಿ ಅವರಿಗೆ ವಿಚಲಿತರಾಗದಂತೆ ಧೈರ್ಯ ತುಂಬಿದ್ದಾರೆ.

ಉಪ ಚುನಾವಣೆಯಲ್ಲಿ TMC, RJDಗೆ ಗೆಲುವು
ಐದು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳ (Five Bypolls) ಕದನದ ಫಲಿತಾಂಶವು (Bypoll Results) ಹೊರ ಬಿದ್ದಿದೆ. ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (TMC) ಅಸನ್ಸೋಲ್ ಮತ್ತು ಬ್ಯಾಲಿಗುಂಜ್ ಕ್ಷೇತ್ರಗಳಲ್ಲಿ ದೊಡ್ಡ ಗೆಲುವು ಸಾಧಿಸಿದೆ. ಅಸನ್ಸೋಲ್ನ ಟಿಎಂಸಿ ಅಭ್ಯರ್ಥಿ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಪಕ್ಷದ ಮೊದಲ ಚುನಾವಣಾ ವಿಜಯವನ್ನು ದಾಖಲಿಸಿದ್ದಾರೆ. ಬ್ಯಾಲಿಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದ ಬಾಬುಲ್ ಸುಪ್ರಿಯೋ ವಿಜಯಿಯಾಗಿದ್ದಾರೆ. ಬಿಜೆಪಿಯಿಂದ ಟಿಎಂಸಿಗೆ ಬಂದು ಗೆಲುವು ದಾಖಲಿಸಿದ್ದಾರೆ.

ಸಿನಿಮಾ ನೋಡಿ ಹತ್ತನೇ ತರಗತಿ ಪರೀಕ್ಷೆ ಬರೆದ 20 ಕೈದಿಗಳು!
ಅಭಿಷೇಕ್ ಬಚ್ಚನ್ ಅಭಿನಯದ ಹೊಸ ಸಿನಿಮಾ ದಸ್ವಿ (Dasvi ) ಏಪ್ರಿಲ್ 7 ರಂದು ನೆಟ್ಫ್ಲಿಕ್ಸ್ (Netflix) ಮತ್ತು ಜಿಯೋ ಸಿನಿಮಾದಲ್ಲಿ (Jio Films) ಬಿಡುಗಡೆಯಾಗಿದ್ದು, ವೀಕ್ಷಕರಿಂದ ಅತ್ಯುತ್ತಮ ವಿಮರ್ಶೆ ಮತ್ತು ಮೆಚ್ಚುಗೆಗಳನ್ನು ಬಾಚಿಕೊಳ್ಳುತ್ತಿದೆ. ಅನಕ್ಷರಸ್ಥ, ಭ್ರಷ್ಟಾಚಾರಿ ರಾಜಕಾರಣಿಯೊಬ್ಬ ಜೈಲು ಸೇರುವುದು ಮತ್ತು ತನ್ನ 10 ನೇ ತರಗತಿಯನ್ನು ಮುಗಿಸಲು ನಿರ್ಧರಿಸುವ ಕಥಾ ವಸ್ತುವುಳ್ಳ ಸಿನಿಮಾವಿದು. ಅಭಿಷೇಕ್ ಬಚ್ಚನ್ (Abhishek Bachchan) ಈ ಸಿನಿಮಾದಲ್ಲಿ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಿನ ಸಿನಿಮಾಗಳು ಜನರ ಮೇಲೆ, ಅದರಲ್ಲೂ ಯುವ ಜನರ ಮೇಲೆ ಸಣ್ಣ ಮಟ್ಟದಲ್ಲಾದರೂ, ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಕೆಲವೊಂದು ಸಿನಿಮಾಗಳನ್ನು ಸ್ಫೂರ್ತಿ ನೀಡುತ್ತವೆ. ದಸ್ವಿ ಸಿನಿಮಾವನ್ನು ಅಂತಹ ಸಿನಿಮಾಗಳ ಸಾಲಿಗೆ ಸೇರಿಸಲು ಅಡ್ಡಿಯಿಲ್ಲ. ಕಾರಣ, ಈ ಸಿನಿಮಾ ಆಗ್ರಾ ಜೈಲಿನ 20 ಕೈದಿಗಳಿಗೆ 10 ನೇ ತರಗತಿಯ ಪರೀಕ್ಷೆ ಬರೆಯಲು ಪ್ರೇರಣೆ ನೀಡಿದೆಯಂತೆ. ಇತ್ತೀಚೆಗೆ ನಡೆದ ಮಾತುಕತೆ ಒಂದರಲ್ಲಿ ಸ್ವತಃ ಅಭಿಷೇಕ್ ಬಚ್ಚನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಇತರ ನಟ ನಟಿಯರು, ಆ ಜೈಲಿನಲ್ಲಿ ನಡೆದ ಕೆಲವು ಭಾಗಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
Published by:Kavya V
First published: