Evening Digest: ಹಿಜಾಬ್​​ಗಾಗಿ ಸುಪ್ರೀಂ ಮೆಟ್ಟಿಲೇರಲು ನಿರ್ಧಾರ: ರಷ್ಯಾದಿಂದ ಭಾರತಕ್ಕೆ ಭರ್ಜರಿ ಆಫರ್: ಇಂದಿನ ಪ್ರಮುಖ ಸುದ್ದಿಗಳು

Kannada News Today: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಂಜೆ ಸುದ್ದಿ

ಸಂಜೆ ಸುದ್ದಿ

  • Share this:
ಹಿಜಾಬ್ ಗಾಗಿ ಸುಪ್ರೀಂ ಮೆಟ್ಟಿಲೇರಲು ನಿರ್ಧಾರ : ಹಿಜಾಬ್ ಪ್ರಕರಣದ (Hijab Case) ಕುರಿತು ಹೈಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದೆ. ಹಿಜಾಬ್ ಧರಿಸೋದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ತನ್ನ ಅಭಿಪ್ರಾಯ ತಿಳಿಸಿದ್ದು, ಸಮವಸ್ತ್ರ (Uniform) ಕಡ್ಡಾಯಗೊಳಿಸಿ ಸರ್ಕಾರ ನೀಡಿದ್ದ ಆದೇಶವನ್ನ ಕರ್ನಾಟಕ ಹೈಕೋರ್ಟ್ (Karnataka High court) ಎತ್ತಿಹಿಡಿದಿದೆ. ಹಿಜಾಬ್ ಗಾಗಿ ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಹೈಕೋರ್ಟ್ವಜಾಗೊಳಿಸಿದೆ. ಸಮವಸ್ತ್ರದ ಜೊತೆ ಹಿಜಾಬ್ಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯರು (Students) ಹೈಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಉಡುಪಿಯಲ್ಲಿ (Udupi) ಸುದ್ದಿಗೋಷ್ಠಿ ನಡೆಸಿದ 6 ಮಂದಿ ವಿದ್ಯಾರ್ಥಿನಿಯರು, ನಮಗೆ ನ್ಯಾಯ ಸಿಗುತ್ತೆ ಅನ್ನೋ ಭರವಸೆ ಇತ್ತು ಆದ್ರೆ ಕೋರ್ಟ್ನಿಂದ ನಮಗೆ ನ್ಯಾಯ ಸಿಕ್ಕಿಲ್ಲ ಎಂದಿದ್ದಾರೆ. ನ್ಯಾಯ ಸಿಗೋವರೆಗೂ ಕಾಲೇಜಿಗೆ ಹಿಜಾಬ್ ಇಲ್ಲದೆ ಹೋಗಲ್ಲ ಅಂತ ಹೇಳಿದ್ದಾರೆ. ಕುರಾನ್ ನಲ್ಲಿ ಹೇಳಿರೋದ್ರಿಂದ ನಾವು ಹಿಜಾಬ್ ಗಾಗಿ ಹೋರಾಟ ಮಾಡುತ್ತಿದ್ದೇವೆ. ನಾವು ಮುಂದೆ ಕೂಡ ನ್ಯಾಯಕ್ಕಾಗಿ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Hijab Verdict: ‘ಹಿಜಾಬ್ ತೆಗೆದು ಕ್ಲಾಸ್ ಒಳಗೆ ಕಾಲಿಡಲ್ಲ’, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ವಿದ್ಯಾರ್ಥಿನಿಯರ ತೀರ್ಮಾನ

ಹಿಜಾಬ್ ಕೇಸ್ ಬಗ್ಗೆ ಹೈಕೋರ್ಟ್ ತೀರ್ಪು
ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರ ಪೂರ್ಣ ಪೀಠ ತೀರ್ಪು ನೀಡಿದೆ. ಹಿಜಾಬ್ (Hijab) ಧರಿಸೋದು ಇಸ್ಲಾಂನ ಅತ್ಯಗತ್ಯ ಭಾಗವೂ ಅಲ್ಲ. ಸಮವಸ್ತ್ರ (Uniform) ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ (Karnataka High court) ಎತ್ತಿ ಹಿಡಿದಿದೆ. ಸಮವಸ್ತ್ರ ಕಡ್ಡಾಯವಾಗಿರುವ ಕಾಲೇಜುಗಳಲ್ಲಿ ಹಿಜಾಬ್ ಗೆ ಅವಕಾಶ ಇಲ್ಲ. ಹಿಜಾಬ್ ಪರವಾಗಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಸರ್ಕಾರ ನೀಡಿದ ಆದೇಶ ಕಾನೂನುಬದ್ಧವಾಗಿದೆ ಎಂದು ಹೇಳಿದೆ.

ರಷ್ಯಾದಿಂದ ಭಾರತಕ್ಕೆ ಭರ್ಜರಿ ಆಫರ್
ರಷ್ಯಾ-ಉಕ್ರೇನ್ ಯುದ್ಧದನ (Russia Ukraine War) ನಡುವೆ ಅಮೆರಿಕ (USA) ರಷ್ಯಾದ ಮೇಲೆ ಆರ್ಥಿಕ ನಿರ್ಬಂಧನೆಗಳನ್ನು ವಿಧಿಸುತ್ತಿದ್ದು ಇದರ ನಡುವೆ ಭಾರತ ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ (crude oil) ಮತ್ತು ಇತರ ಸರಕುಗಳನ್ನು ಖರೀಸುವ ಸಾಧತ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಕ್ರೇನ್ ಮೇಲೆ ದಾಳಿ ನಿಲ್ಲಿಸದ ರಷ್ಯಾಗೆ ಪಾಠ ಕಲಿಸುವ ಸಲುವಾಗಿ ಅಮರಿಕ ಅಧ್ಯಕ್ಷ ಜೋ ಬೈಡೆನ್ (America President Joe Biden) ರಷ್ಯಾದ ತೈಲ ಆಮದುಗಳ ಮೇಲೆ ನಿರ್ಬಂಧ ಘೋಷಿಸಿದ್ದಾರೆ. ಆರ್ಥಿಕ ನಿರ್ಬಂಧದ ಬಳಿಕ ಮತ್ತೊಂದು ರಷ್ಯಾಗೆ ಪೆಟ್ಟು ಬಿದ್ದಂತಾಗಿದೆ. ಹೀಗಾಗಿ ರಷ್ಯಾ ಭಾರತಕ್ಕೆ ಹೆಚ್ಚಿನ ತೈಲ ರಪ್ತು ಮಾಡುವ ಆಫರ್ ಅನ್ನು ನೀಡಿತ್ತು. ಪ್ರಸ್ತುತ ಕಚ್ಚಾ ತೈಲ ಮತ್ತು ಇತರ ಸರಕುಗಳನ್ನು ರಿಯಾಯಿತಿಯಲ್ಲಿ ಖರೀದಿಸುವ ರಷ್ಯಾದ ಪ್ರಸ್ತಾಪವನ್ನು ಭಾರತ ತೆಗೆದುಕೊಳ್ಳಬಹುದು ಎಂದು ಇಬ್ಬರು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.

ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:Russiaದಿಂದ ಭಾರತಕ್ಕೆ ಭರ್ಜರಿ ಆಫರ್: ದೇಶದಲ್ಲಿ ಅಗ್ಗವಾಗಲಿದೆಯಾ ಪೆಟ್ರೋಲ್, ಡಿಸೇಲ್?

ಮ್ಯಾಗಿ, ಕಾಫಿ, ಟೀ ಪುಡಿ ರೇಟ್ ಹೆಚ್ಚಳ..
ನಸಾಮಾನ್ಯರಿಗೆ ಸಾಲು ಸಾಲು ಬೆಲೆ ಏರಿಕೆ ಶಾಕ್ ಗಳು ಎದುರಾಗುತ್ತಲೇ ಇವೆ. ಇತ್ತೀಚೆಗಷ್ಟೇ ಸೋಪು ಮತ್ತು ಸರ್ಫ್ ಬೆಲೆಯನ್ನು ಹೆಚ್ಚಿಸಿದ್ದ ಕಂಪನಿ ಈಗ ನೂಡಲ್ಸ್, ಟೀ, ಕಾಫಿ ಬೆಲೆಯನ್ನು ಹೆಚ್ಚಿಸಿದೆ. ಬ್ರೂ ಕಾಫಿ ಪೌಡರ್ ನ ಎಲ್ಲಾ ಪ್ಯಾಕೆಟ್ಗಳ ಬೆಲೆಯನ್ನು ಶೇಕಡಾ 3 ರಿಂದ 7 ರಷ್ಟು ಹೆಚ್ಚಿಸಿದೆ. ಬ್ರೂ ಗೋಲ್ಡ್ ಕಾಫಿ ಜಾರ್ ಗಳು ಶೇ.3ರಿಂದ 4ರಷ್ಟು ಮತ್ತು ಇನ್ ಸ್ಟಂಟ್ ಕಾಫಿ ಪೌಚ್ ಗಳು ಶೇ.3ರಿಂದ 6.66ರಷ್ಟು ಹೆಚ್ಚಾಗಲಿವೆ. ತಾಜ್ ಮಹಲ್ ಚಹಾದ ಎಲ್ಲಾ ಪ್ಯಾಕೆಟ್ಗಳ ಬೆಲೆಗಳು, ಎಲ್ಲಾ ವೈರೆಟಿಗಳು ಶೇ.3.7 ರಿಂದ 5.8 ರಷ್ಟು ಬೆಲೆ ಏರಿಕೆಯಾಗಿದೆ. 3 ರೋಸಸ್ ಟೀ ಪುಡಿ ಶೇ.1.5 ಮತ್ತು 14ರಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ. ತಮ್ಮ ಉತ್ಪನ್ನಗಳ ಮೇಲೆ ಹಣದುಬ್ಬರದ ಒತ್ತಡದಿಂದಾಗಿ HUL ಬೆಲೆ ಏರಿಕೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆ ಸೋಪ್, ಡಿಟರ್ಜೆಂಟ್, ಡಿಶ್ ವಾಶರ್ ಮತ್ತಿತರ ಉತ್ಪನ್ನಗಳ ಬೆಲೆಯನ್ನು ಶೇ.3ರಿಂದ 10ರಷ್ಟು ಹೆಚ್ಚಿಸಿದೆ ಎಂದು ವರದಿಯಾಗಿತ್ತು. ಸರ್ಫ್ ಎಕ್ಸೆಲ್ ಈಸಿ ವಾಶ್, ಸರ್ಫ್ ಎಕ್ಸೆಲ್ ಕ್ವಿಕ್ ವಾಶ್, ವಿಮ್ ಬಾರ್, ವಿಮ್ ಲಿಕ್ವಿಡ್, ಲಕ್ಸ್ ಸೋಪ್, ರೆಕ್ಸೋನಾ ಸೋಪ್, ಪಾಂಡ್ಸ್ ಟಾಲ್ಕಂ ಪೌಡರ್ ಮುಂತಾದ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ.

ನೀನೇ ರಾಜಕುಮಾರ ಎಂದ ಕಿಚ್ಚ ಸುದೀಪ್!
ಅತೀ ನಿರೀಕ್ಷಿತ ಪುನೀತ್ ರಾಜ್ ಕುಮಾರ್ ಅವರ ಬಯೋಗ್ರಫಿ ‘ನೀನೇ ರಾಜಕುಮಾರ್’ ಕೃತಿಯನ್ನು ಹೆಸರಾಂತ ನಟ ಕಿಚ್ಚ ಸುದೀಪ್ ಇಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು. ಪತ್ರಕರ್ತ ಡಾ. ಶರಣು ಹುಲ್ಲೂರು ಬರೆದಿರುವ ಈ ಕೃತಿ ಈಗಾಗಲೇ ಬಿಡುಗಡೆಗೂ ಮುನ್ನ ಎರಡನೇ ಮುದ್ರಣ ಕಂಡಿದೆ. ಕೃತಿಯ ಬಿಡುಗಡೆ ನಂತರ ಮಾತನಾಡಿದ ಸುದೀಪ್, ‘ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ’ ಎಂದಿದ್ದಾರೆ.
Published by:Kavya V
First published: