‘ಹೋಟೆಲ್ನಲ್ಲಿ ರಾಸಲೀಲೆ ಆಡ್ತಿದ್ದ ಕುಮಾರಸ್ವಾಮಿ’: ಚನ್ನಪಟ್ಟಣದಲ್ಲಿ (Channapattana) ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ವಿಧಾನ ಪರಿಷತ್ ಸದಸ್ಯ ಯೋಗೇಶ್ವರ್ (C.P Yogeshwar) ನಡುವಿನ ಪೈಪೋಟಿ ತಾರಕ್ಕೇರುತ್ತಿದೆ. ನಿತ್ಯ ಒಬ್ಬರಾದ ಮೇಲೆ ಒಬ್ಬರಂತೆ ವಾಗ್ದಾಳಿ ಶುರು ಮಾಡ್ತಿದ್ದಾರೆ. ಜಿಲ್ಲೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ವಿರುದ್ಧ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಆಗಿದ್ದಾಗ 14 ತಿಂಗಳು ನಮ್ಮ ತಾಲೂಕಿಗೆ ಬರಲಿಲ್ಲ, ಮತ್ತೆ ಇನ್ನೇನು ಕೆಲಸ ಮಾಡ್ತಾನೆ. ಕೇವಲ ಒಂದು ಗಂಟೆ ಸಮಯ ಕೊಟ್ಟಿದ್ರೆ ತಾಲೂಕಿನ ಹಾಗೂ ಜಿಲ್ಲೆಯ ಸಮಸ್ಯೆ (Problem) ಬಗೆಹರಿಯುತ್ತಿತ್ತು. ಆಗ ರಾಸಲೀಲೆ ಮಾಡಿಕೊಂಡು ಈಗ ಜನರ ಮುಂದೆ ಕಣ್ಣೆರೊಸೋದು ಶೋಭೆ ಅಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ:HDK v/s Yogeshwar: ‘ಹೋಟೆಲ್ನಲ್ಲಿ ರಾಸಲೀಲೆ ಆಡ್ತಿದ್ದ ಕುಮಾರಸ್ವಾಮಿ’, ಏಕವಚನದಲ್ಲೇ ಯೋಗೇಶ್ವರ್ ವಾಗ್ದಾಳಿ
ರಾಧೆಶ್ಯಾಮ್ ಸಿನಿಮಾ ಸೋತಿದ್ದಕ್ಕೆ ಆತ್ಮಹತ್ಯೆ
‘ರಾಧೆ-ಶ್ಯಾಮ್’ ಸಿನಿಮಾದ ಬಗ್ಗೆ ಕೆಟ್ಟ ವಿಮರ್ಶೆಗಳು ಬಂದಿವೆಯೆಂದು, ಸಿನಿಮಾ ಚೆನ್ನಾಗಿಲ್ಲವೆಂದು ಚರ್ಚೆಯಾಗುತ್ತಿದೆ ಎಂದು ಬೇಸರಗೊಂಡ ಪ್ರಭಾಸ್ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೌದು, ಆಂಧ್ರ ಪ್ರದೇಶದ ಕರ್ನೂಲಿನಲ್ಲಿ ರವಿ ತೇಜ ಎಂಬ ಪ್ರಭಾಸ್ ಅಭಿಮಾನಿಯೊಬ್ಬ, ‘ರಾಧೆ-ಶ್ಯಾಮ್’ ಸಿನಿಮಾ ಚೆನ್ನಾಗಿಲ್ಲವೆಂದು ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ನಂಬಲು ಕಷ್ಟ, ಆದರೂ ಇದು ಸತ್ಯ. ರವಿ ತೇಜ ಈ ಸಿನಿಮಾ ಮೇಲೆ ಭಾರಿ ನೀರಿಕ್ಷೆಗಳನ್ನು ಇಟ್ಟಕೊಂಡಿದ್ದ. ಆದರೆ, ಸಿನಿಮಾದ ಮೇಲಿದ್ದ ತನ್ನ ನಿರೀಕ್ಷೆಗಳು ಹುಸಿಯಾದುವೆಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ: Breaking: ಮಕಾಡೆ ಮಲಗಿದ ರಾಧೆ-ಶ್ಯಾಮ್ ಸಿನಿಮಾ.. ಇದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ರವಿ ತೇಜ
ವಿಧಾನಸಭೆಯಲ್ಲಿ ಹಿಜಾಬ್ ವಿವಾದದ ಗದ್ದಲ
ಸಮವಸ್ತ್ರ ವಿವಾದದಿಂದ ಶಿಕ್ಷಣ ಕ್ಷೇತ್ರದ ಮೇಲೆ ಆಗಿರುವ ಪರಿಣಾಮದ ಬಗ್ಗೆ ಚರ್ಚಿಸಲು ಅವಕಾಶ ಕೋರಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ (H.D Kumaraswamy) ಅವರು ನಿಲುವಳಿ ಸೂಚನೆ ಮಂಡಿಸಿದ ವೇಳೆ ವಿಧಾನಸಭೆಯಲ್ಲಿ (Assembly) ವಾಗ್ವಾದವೇ ನಡೆದು ಹೋಗಿದೆ. ಶಾಸಕ ಜಮೀರ್ ಅಹ್ಮದ್ ಖಾನ್, ಕುಮಾರಸ್ವಾಮಿ ಅವರು ಹಿಜಾಬ್, ಗಿಜಾಬ್ ಏನೂ ಬೇಡ ಎನ್ನುತ್ತಿದ್ದರು. ಒಂದೂವರೆ ತಿಂಗಳ ನಂತರ ಈಗ ದಿಢೀರನೇ ಪ್ರಸ್ತಾಪ ಮಾಡುತ್ತಿದ್ದಾರೆ ಎಂದರು. ಆಗ ಜೆಡಿಎಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಜಮೀರ್ ಮತ್ತು ಜೆಡಿಎಸ್ ಶಾಸಕರ ನಡುವೆ ಮಾತಿನ ವಾಗ್ವಾದ ನಡೆಯಿತು.ಮತ್ತೆ ಮಾತು ಮುಂದುವರೆಸಿದ ಕುಮಾರಸ್ವಾಮಿ, ಜಂಟಿ ಅಧಿವೇಶನದ ಸಂದರ್ಭದಲ್ಲಿ ನಿಲುವಳಿ ಸೂಚನೆ ಕೊಟ್ಟಿದ್ದೆವು. ಆಗ ಅವಕಾಶ ಸಿಗಲಿಲ್ಲ. ಇದು ಸೂಕ್ಷ್ಮ ವಿಚಾರ. ರಾಜ್ಯದಲ್ಲಿ ಸಾಮರಸ್ಯವಿರಬೇಕು. ಕಳೆದ ಎರಡು ತಿಂಗಳಿನಿಂದ ಶಿಕ್ಷಣ ಕ್ಷೇತ್ರದ ಮೇಲೆ ಹಲವು ರೀತಿಯ ದುಷ್ಪರಿಣಾಮವಾಗಿದೆ ಎಂದರು.
ಸಂಸತ್ ನಲ್ಲಿ ಮೋದಿಗೆ ಭರ್ಜರಿ ಸ್ವಾಗತ
ಇತ್ತೀಚೆಗಷ್ಟೇ ಚುನಾವಣೆ (Assembly Election Result) ನಡೆದ ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ (BJP) ಜಯಭೇರಿ ಬಾರಿಸಿದ್ದು, ಇಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಬಿಜೆಪಿ ನೇತೃತ್ವದ ಸಂಸದರು ಅದ್ದೂರಿ ಸ್ವಾಗತ ಕೋರಿದರು. ಬಜೆಟ್ ಅಧಿವೇಶನದ ಎರಡನೇ ಭಾಗದ ಮೊದಲ ದಿನ ಸಂಸದರು ಸದನದೊಳಗೆ 'ಮೋದಿ, ಮೋದಿ' ಎಂದು ಘೋಷಣೆ ಕೂಗಿದರು. ಈ ವೇಳೆ ಪ್ರಧಾನಿ ಮೋದಿ ಸದನದಲ್ಲಿ ಹಾಜರಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರು ಕೂಡ ಸದನದಲ್ಲಿ ಉಪಸ್ಥಿತರಿದ್ದರು. ಬಿಜೆಪಿಗೆ ಸೇರಿದ ಸಂಸದರು ಸದನದಲ್ಲಿ ಪ್ರಧಾನಿ ಮೋದಿಯವರಿಗೆ ಚಪ್ಪಾಳೆ ತಟ್ಟಿದರು, ಡೆಸ್ಕ್ಗಳನ್ನು ಬಡಿದರು ಸಂಭ್ರಮಿಸಿದರು. ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಎಲ್ಲ ಕೇಂದ್ರ ಸಚಿವರು ಆಡಳಿತ ಪಕ್ಷದ ಸಂಸದರೊಂದಿಗೆ ಸೇರಿ ಪ್ರಧಾನಿಯನ್ನು ಸದನಕ್ಕೆ ಸ್ವಾಗತಿಸಿದರು.
ಸಿನಿಮಾ ನೋಡಲು ಪೊಲೀಸರಿಗೆ ರಜೆ ಕೊಟ್ಟ ಸರ್ಕಾರ!
'ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾ ವೀಕ್ಷಿಸಲು ಅನುಕೂಲವಾಗುವಂತೆ ಮಧ್ಯ ಪ್ರದೇಶ ಪೊಲೀಸರಿಗೆ ರಜೆ ಘೋಷಿಸಲಾಗುತ್ತದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭಾನುವಾರ 'ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಿದ್ದಾರೆ. ಜತೆಗೆ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ಪೊಲೀಸರಿಗೆ 'ದಿ ಕಾಶ್ಮೀರ್ ಫೈಲ್ಸ್‘ ಸಿನಿಮಾ ವೀಕ್ಷಿಸಲು ರಜೆ ನೀಡುತ್ತಿದ್ದೇವೆ. ಈ ಕುರಿತು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.ಝೀ ಸ್ಟುಡಿಯೊ ನಿರ್ಮಾಣದ 'ದಿ ಕಾಶ್ಮೀರ್ ಫೈಲ್ಸ್‘ ಚಿತ್ರವನ್ನು ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ್ದು, ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದಿರುವ ದೌರ್ಜನ್ಯವನ್ನು ಸಿನಿಮಾ ತೆರೆಯ ಮೇಲೆ ಪ್ರದರ್ಶಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ